Date: 24-12-2024
Location: ಬೆಂಗಳೂರು
ಬೆಂಗಳೂರು: “ಹೊರಗೆ ತುಂಬಿ ತುಳುಕಾಡುತ್ತಿದ್ದ ಗದ್ದೆಯ ಹಸಿರು, ಹುಲ್ಲು, ಮರ, ಗಿಡ, ಬಂಡೆ, ಹಳ್ಳ- ಕೊಳ್ಳಗಳನೆಲ್ಲ ಮೀರಿ ರೈಲು ವೇಗವಾಗಿ ಓಡಿ ಅವುಗಳೆಲ್ಲವು ಹಿಂದೆ ಹಿಂದೆ ಸರಿದಂತೆ ಕಾಣುತ್ತಿದ್ದವು. ನಿಂತ ನೀರಿನ, ಬೆಳೆದ ಪೈರಿನ ಬಯಲಿನಿಂದ ಬೀಸಿ ಬರುತ್ತಿದ್ದ ಹಿತವಾದ ಗಾಳಿಯ ಗಮ್ಮನೆ ವಾಸನೆ ಹೀರುತ್ತ ಅವಳು ನಿಂತಿದ್ದ ತನ್ನೆರಡು ಮಕ್ಕಳ ಸಂಧಿಯಿಂದ ತಾನು ಮುಖ ತೂರಿ ನೋಡತೊಡಗಿದಳು” ಎಂದು ಇಂದು ಡಿ. 24 ರಂದು ನಗರದ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ನೆಡೆದ ಕಥಾಸಂಧಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕನ್ನಡ ಲೇಖಕರಾದ ಕಾ. ತ. ಚಿಕ್ಕಣ್ಣ ಅವರು ತಮ್ಮ ಕಥೆಯನ್ನು ವಾಚಿಸಿ ಸಭಿಕರೊಂದಿಗೆ ಚರ್ಚಿಸಿದರು.
ಕಥಾ ವಾಚನ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಕಥಾ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಅಕಾಡೆಮಿ ಉಸ್ತುವಾರಿ ಅಧಿಕಾರಿಗಳಾದ ಎಲ್. ಸುರೇಶ್ ಕುಮಾರ್ ಸ್ವಾಗತವನ್ನು, ಚಂದ್ರಶೇಖರ್ ಅವರು ವಂದನಾರ್ಪಣೆಯನ್ನು ನೆರವೇರಿಸಿದರು.
ದೆಹಲಿ: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲ...
ಬೆಂಗಳೂರು: ಸಮಾಜಮುಖಿ ವಾರ್ಷಿಕ ಕಥಾಪುರಸ್ಕಾರ-2024ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಐದು ಬಹುಮಾನಿತ ಕಥೆಗಳಿಗೆ ತಲಾ ...
"ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನ...
©2024 Book Brahma Private Limited.