Date: 18-12-2024
Location: ಬೆಂಗಳೂರು
ನವದೆಹಲಿ: 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣ ಅವರು ಆಯ್ಕೆಯಾಗಿದ್ದಾರೆ.
ಅವರ `ನುಡಿಗಳ ಅಳಿವು' ಬೇರೆ ದಿಕ್ಕಿನ ನೋಟ ಕೃತಿಗೆ ಪ್ರಶಸ್ತಿ ಲಭಿಸಿರುತ್ತದೆ. ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ, ಹಾಗೂ ಗೌರವ ಪರಿಕರಗಳನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ನವದೆಹಲಿಯ ಕಮನಿ ಆಡಿಟೋರಿಯಂನಲ್ಲಿ 2025 ಮಾರ್ಚ್ 08 ಶನಿವಾರದಂದು ನಡೆಯಲಿದೆ.
ಕೆ. ವಿ. ನಾರಾಯಣ ಸೇರಿದಂತೆ ಭಾರತೀಯ 21 ಭಾಷೆಗಳ ಲೇಖಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, 8 ಕವನಸಂಕಲನಗಳು, 3 ಕಾದಂಬರಿಗಳು, 3 ಸಣ್ಣ ಕಥಾ ಸಂಕಲನ, 3 ಪ್ರಬಂಧಗಳು, 3 ವಿಮರ್ಶಾ ಸಾಹಿತ್ಯ, 1 ನಾಟಕ ಹಾಗೂ 1 ಅಧ್ಯಯನ ಕೃತಿಯು ಈ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಾಹಿತ್ಯ ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕೆ.ವಿ. ನಾರಾಯಣ ಅವರ ಲೇಖಕರ ಪರಿಚಯ ಹಾಗೂ ಕೃತಿಗಳ ಕುರಿತು ಮಾಹಿತಿಯನ್ನು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಉತ್ಸವದ ಅಂಗವಾಗಿ ವಿವ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಅಖಿಲ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ಡಿ. 20, 21, 22 ರಂದು ನಡೆಯುತ್ತಿರುವ ಮೂರನೇ ವರ್ಷದ 87ನ...
©2024 Book Brahma Private Limited.