ಹಾಡನ್ನೇ ಬದುಕಾಗಿಸಿದ ದಂಪತಿ ತಂಬೂರಿ ಜವರಯ್ಯ ಮತ್ತು ಬೋರಮ್ಮ

Date: 30-07-2023

Location: ಬೆಂಗಳೂರು


''ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಸರಿಯಾದ ಪ್ರತಿಭಾಮನ್ನಣೆಗೆ ಕೊರತೆಯಿದೆ. ವಯಸಿದ್ದಾಗ ಕಲಾ ಸೇವೆ ಮಾಡಿಕೊಂಡು ಹೇಗೋ ಜೀವನ ನಡೆಸುತ್ತಾರೆ. ವಯಸ್ಸು ಮಾಗಿದಾಗ ಆಸರೆಯಿಲ್ಲದಿದ್ದರೆ ಬದುಕಿಗಿಂತ ಸಾವೇ ಒಳಿತು ಎನಿಸುತ್ತದೆ ಅಷ್ಟು ಹೀನವಾಗಿರುತ್ತದೆ ಜೀವನ. ಅಂತಹ ಬಡದಂಪತಿಗಳಿಬ್ಬರ ಬದುಕಿನ ಪಯಣ ಇವತ್ತಿನ ಅಂಕಣದಲ್ಲಿ''. ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ತಂಬೂರಿ ಜವರಯ್ಯ ಮತ್ತು ಬೋರಮ್ಮ”ಕುರಿತು ಕಟ್ಟಿಕೊಟ್ಟಿದ್ದಾರೆ.

ಇಂಪಾದ ಹಾಡುಗಳು ನಮ್ಮ ಮೈಮನ ತಣಿಸುತ್ತವೆ. ಅದರಲ್ಲೂ ತತ್ವಪದಗಳು, ಜಾನಪದ ಹಾಡುಗಳು ನಮ್ಮ ಹಳ್ಳಿಗಳ ಕಲಾ ಪ್ರತೀಕವಾಗಿವೆ. ಆದರೆ ಇತ್ತೀಚೆಗೆ ಅಂತಹ ಹಳ್ಳಿ ಹಾಡುಗಾರರು ತೆರೆಮರೆಗೆ ಸರಿಯುತ್ತಿದ್ದಾರೆ. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಸರಿಯಾದ ಪ್ರತಿಭಾಮನ್ನಣೆಗೆ ಕೊರತೆಯಿದೆ. ವಯಸಿದ್ದಾಗ ಕಲಾ ಸೇವೆ ಮಾಡಿಕೊಂಡು ಹೇಗೋ ಜೀವನ ನಡೆಸುತ್ತಾರೆ. ವಯಸ್ಸು ಮಾಗಿದಾಗ ಆಸರೆಯಿಲ್ಲದಿದ್ದರೆ ಬದುಕಿಗಿಂತ ಸಾವೇ ಒಳಿತು ಎನಿಸುತ್ತದೆ ಅಷ್ಟು ಹೀನವಾಗಿರುತ್ತದೆ ಜೀವನ. ಅಂತಹ ಬಡದಂಪತಿಗಳಿಬ್ಬರ ಬದುಕಿನ ಪಯಣ ಇವತ್ತಿನ ಅಂಕಣದಲ್ಲಿ. ಇವರು ತಂಬೂರಿ ಜವರಯ್ಯ ಮತ್ತು ಬೋರಮ್ಮ. ಈ ದಂಪತಿಗಳಿಗೆ ಹಾಡೇ ಬದುಕು. ತತ್ವಪದಗಳೆ ಇವರ ಬದುಕಿನ ಕೊಂಡಿಯಾಗಿ ಬೆಸೆದಿದೆ. ಎಂಭತ್ಮೂರು ವಯಸ್ಸಿನ ಜವರಯ್ಯ ಎಪ್ಪತ್ತೆಂಟು ವರ್ಷದ ಬೋರಮ್ಮ ದಂಪತಿಗಳು ಇರುವುದು ಮಂಡ್ಯ ಜಿಲ್ಲೆಯ ಬಸ್ರಾಳು ಗ್ರಾಮದಲ್ಲಿ. ಜವರಯ್ಯರನವರು ನಮ್ಮೊಂದಿಗೆ ಅವರ ಕಲಾ ಸೇವೆ ಮತ್ತು ಈಗಿನ ಬದುಕಿನ ಬಗ್ಗೆ ಮಾತಿಗಿಳಿದರು.

ಜವರಯ್ಯನವರು ಹೇಳುತ್ತಾರೆ "ನಮ್ಮದು ಬಹಳ ಬಡತನದ ಕುಟುಂಬ. ನಾನು ಐದನೇ ತರಗತಿಯವರೆಗೆ ಓದಿದ್ದೇನೆ. ಐದನೇ ತರಗತಿಯವರೆಗೆ ಹತ್ತು ವರ್ಷ ಹೋಗಿದ್ದೇನೆ. ನಾನು ಇಷ್ಟು ಕಲಿತದ್ದೇ ಆ ದಿನಗಳಿಗೆ ಹೆಚ್ಚಾಗಿತ್ತು. ನಾನು ಓದುತ್ತಿದ್ದಾಗ ಮರಳು ಗುಡ್ಡೆ ಹಾಕಿ ಬಿಡುತ್ತಿದ್ದರು. ಅದರಲ್ಲಿ ಅ ಆ ಇ ಈ ಬರೆಯುತ್ತಿದ್ದೆವು, ನಮಗೆ ಸ್ಲೇಟು ಬಳಪ ಅಂತೆಲ್ಲ ಇರಲಿಲ್ಲ, ಮರಳಿನಲ್ಲಿ ನಮ್ಮ ಅಕ್ಷರಾಭ್ಯಾಸ ನಡೆಯುತ್ತಿತ್ತು. ಆಗ ಮೇಷ್ಟ್ರು ನೋಡಿಕೊಂಡು ಹೋಗುತ್ತಿದ್ದರು. ಹೀಗೆ ಬಾಲ್ಯದ ದಿನಗಳು ಕಳೆದವು. ನಂತರ ನಮ್ಮ ತಂದೆಯವರು ಇವಳನ್ನು ನೋಡಿ ಮದುವೆ ಮಾಡಿದರು. ನನ್ನ ಮದುವೆ ಒಂದು ವೈಚಿತ್ರ್ಯ. ನನ್ನ ಗಂಡ ಹೆಂಗವನೆ ಅಂತ ಆಯಮ್ಮ ನೋಡಿರಲಿಲ್ಲ. ನನ್ನ ಹೆಂಡ್ತಿ ಹೇಗಿದ್ದಾಳೆ ಅಂತ ನಾನು ನೋಡಿರಲಿಲ್ಲ. ಆ ಕಾಲದಲ್ಲಿ ಅಪ್ಪ ನನಗೆ ಹೆಣ್ಣು ನೋಡೋಕೆ ಹೋದಾಗ ಮಜ್ಜಿಗೆ ಕುಡಿ ಬಾರಣ್ಣ ಅಂತ ಯಾವುದೋ ಹೆಂಗಸು ಕರೆದರಂತೆ. ತಾಯಿ ಕರೇತಿದೆ ಅಂತ ಅಪ್ಪ ಹೋದಾಗ ಅವರು ಎಲ್ಲಿಗೆ ಹೋಗಿದ್ರಿ ಅಣ್ಣ ಅಂತ ಕೇಳಿದ್ರಂತೆ. ನನ್ನ ಮಗನಿಗೆ ಒಂದು ಹೆಣ್ಣು ಬೇಕಾಗಿತ್ತು ನೋಡೋಕೆ ಹೋಗಿದ್ವಿ ಅಂತ ನಮ್ಮಪ್ಪ ಅಂದಾಗ ಇವರ ತಾಯಿ ನಮ್ಮನೇಲೇ ಒಂದು ಹೆಣ್ಣು ಇದೆ ನೋಡಿ ಅಂತ ಬೋರಮ್ಮನನ್ನು ತೋರಿಸಿದರಂತೆ. ಅಪ್ಪ ಒಪ್ಪಿ ನನಗೆ ಇವಳನ್ನು ಮದುವೆ ಮಾಡಿದರು" ಹೀಗೆ ಅವರ ಮದುವೆಯ ದಿನಗಳನ್ನು ನೆನಪಿಸಿಕೊಂಡು ದಂಪತಿಗಳಿಬ್ಬರು ಮುಗುಳ್ನಗೆ ಬೀರುತ್ತಾರೆ. "ನಮಗೆ ಏಳು ಜನರು ಮಕ್ಕಳು ಹುಟ್ಟಿದರು. ಅದರಲ್ಲಿ ಐದು ಜನರು ಚಿಕ್ಕವರಿದ್ದಾಗಲೇ ತೀರಿಕೊಂಡರು. ಉಳಿದುಕೊಂಡದ್ದು ಇಬ್ಬರು ಹೆಣ್ಣುಮಕ್ಕಳು. ಅದಾದ ಸ್ವಲ್ಪ ದಿನಗಳ ನಂತರ ಗಂಡ ಹೆಂಡತಿ ಇಬ್ಬರೂ ಹೊಳೆನರಸೀಪುರ ತಾಲ್ಲೂಕಿನ ಬಂಡೀಶೆಟ್ಟಿಹಳ್ಳಿ ಗ್ರಾಮದ ಕೊಡುಗಲ್ಲು ಮಠದ ಶ್ರೀ ರುದ್ರಮುನಿ ಸ್ವಾಮಿಗಳಿಂದ 1970ರಲ್ಲಿ ದೀಕ್ಷೆಯನ್ನು ಪಡೆದುಕೊಂಡು ಅವರಿಂದ ತತ್ವಪದಗಳು, ಜಾನಪದ ಗಾಯನವನ್ನು ಕಲಿತೆವು. ಯಾರಾದರೂ ಸತ್ತು ಹೋದರೆ, ತಿಥಿ ಕಾರ್ಯಗಳಲ್ಲಿ, ದೇವಸ್ಥಾನಗಳಲ್ಲಿ ಎಲ್ಲೆಲ್ಲಿ ಕಾರ್ಯಕ್ರಮಗಳು ನಡೆಯುತ್ತವೆಯೋ ನಾವು ಅಲ್ಲಿಗೆಲ್ಲ ಹೋಗಿ ಕಾರ್ಯಕ್ರಮಗಳನ್ನು ಕೊಟ್ಟು ಬರುತ್ತಿದ್ದೆವು. ಹೀಗೆ ಮನೆ ಮನೆಗೂ ಹೋಗಿ ಭಿಕ್ಷಾಟನೆ ಮಾಡುತ್ತಿದ್ದೆವು. ನಾವು ಭಿಕ್ಷೆಗೆ ಹೋದಾಗ ಜನರು ಕೊಟ್ಟ ದವಸ ಧಾನ್ಯಗಳಿಂದ ಸಂಸಾರ ಸಾಗಿಸುತ್ತಿದ್ದೆವು. ಜವರಯ್ಯ ಆಗಿದ್ದ ನಾನು ಹಾಡುತ್ತ ಊರೂರು ತಿರುಗುತ್ತ ನಾನು ಹೀಗೆ ತಂಬೂರಿ ಜವರಯ್ಯನಾದೆ" ಎಂದು ಮೆಲಕು ಹಾಕಿದರು.

ಒಳ್ಳೆಯ ಸಾಹಿತ್ಯ, ಗಾಯನವನ್ನು ಒಳಗೊಂಡ ತತ್ವಪದಗಳು ಒಂದು ಕಾಲಕ್ಕೆ ಹಳ್ಳಿಬದುಕಿನಲ್ಲಿ ಹಾಸುಹೊಕ್ಕಾಗಿದ್ದವು. ಅದರಲ್ಲಿನ ಮೌಲ್ಯಗಳಿಂದ ಜನ ಸರಿತಪ್ಪುಗಳನ್ನು ತಿದ್ದಿಕೊಳ್ಳುತಿದ್ದರು. ಆದರೆ ಈಗೆಲ್ಲ ಆಧುನಿಕ ಸಾಹಿತ್ಯಕ್ಕೆ ಮಾರುಹೋಗಿ ನಾವೆಲ್ಲ ಅಂತಹ ಒಳ್ಳೆಯ ಸಾಹಿತ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಅವುಗಳು ಹೇಳುತ್ತಿದ್ದ ಜೀವನಪಾಠವನ್ನು ಕಳೆದುಕೊಂಡಿದ್ದೇವೆ. ಸುಮಾರು ನಲವತ್ತೈದು ವರ್ಷಗಳಿಂದಲೂ ನಮ್ಮ ಪರಂಪರೆಯ ಕಲೆಯಾದ ತತ್ವಪದಗಳು, ಜಾನಪದ ಹಾಡುಗಳನ್ನು ಹಾಡುತ್ತಲೇ ಬಂದಿದ್ದಾರೆ. ಕರ್ನಾಟಕದಾದ್ಯಂತ ಕಾರ್ಯಕ್ರಮಗಳನ್ನು ಕೊಟ್ಟ ಹೆಮ್ಮೆ ಇವರದ್ದು. ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾನಿಲಯ, ಕ್ರೈಸ್ತ ಪದವಿ ಪೂರ್ವ ಕಾಲೇಜು, ನಯನ ಮಂದಿರ, ಬೆಂಗಳೂರು, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ, ಬಳ್ಳಾರಿ ಹೀಗೆ ಹಲವಾರು ಜಿಲ್ಲೆಗಳಲ್ಲಿ, ಗಡಿನಾಡ ಉತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಮಾಜಿಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳು ಇವರ ಕಲಾ ಪ್ರತಿಭೆಯನ್ನು ಮೆಚ್ಚಿ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಪ್ರಯಾಣ ಮಾಡಿ ತತ್ವಪದಗಳ ಸಾರವನ್ನು ಎಲ್ಲೆಡೆಯು ಪಸರಿಸಿ ಹಂಚಿರುವ ಈ ದಂಪತಿಗಳಿಗೆ ಮೈಸೂರು ದಸರಾ, ನಾಡೋಜ, ಕಲಾ ಬಂಗಾರ ಪ್ರಶಸ್ತಿಗಳು ಲಭಿಸಿವೆ. ಕಲೆಯಿಂದಲೇ ಜೀವನ ನಡೆಸುತ್ತಿರುವ ಇವರಿಗೆ ಇಂದು ಈ ಪ್ರಶಸ್ತಿಯ ಕಿರೀಟಗಳು ಹೊಟ್ಟೆಯ ಹಸಿವನ್ನು ನೀಗಿಸುತ್ತಿಲ್ಲ. ಎಂಭತ್ಮೂರರ ಇಳಿವಯಸ್ಸಿನಲ್ಲೂ ಹಾಡಿನಿಂದಲೇ ಅವರ ಬದುಕು ಸಾಗಬೇಕಿದೆ. ತೀವ್ರಗತಿಯ ಅನಾರೋಗ್ಯ ಬಾಧಿಸುತ್ತಿರುವುದರಿಂದ ಎದ್ದು ಕೂತು ಹಾಡುವುದು ಕಷ್ಟ. ದಂಪತಿಗಳಿಬ್ಬರೂ ಎದ್ದರೆ ಕೂರದ ಸ್ಥಿತಿಯಲ್ಲಿ ಇರುವುದನ್ನು ಕಂಡರೆ ಜೀವ ಹಿಂಡಿದಂತಾಗುತ್ತದೆ. ಇಂತಹ ನಮ್ಮ ಕಲೆಯನ್ನು, ನಮ್ಮ ಕಲಾವಿದರನ್ನು, ಗ್ರಾಮೀಣ ಪ್ರತಿಭೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕಿದೆ. ಈ ದಂಪತಿಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು ನಿತ್ಯದ ಜೀವನ ನಡೆಸಲು ಕಷ್ಟ ಪಡುವಂತಾಗಿದೆ. ನಾಡಿನೆಲ್ಲೆಡೆ ತತ್ವಪದಗಳ ಗಂಧವನ್ನು ಹಬ್ಬಿಸಿರುವ, ಸೇವೆ ಸಲ್ಲಿಸಿರುವ ಈ ವೃದ್ಧದಂಪತಿಗಳನ್ನು ನೋಡಿಕೊಳ್ಳುವವರಿಲ್ಲದೆ ಇವರು ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ. ಇಂತವರ ಜೊತೆ ನಿಲ್ಲುವುದು ನಮ್ಮ ನಿಮ್ಮ ಜವಾಬ್ದಾರಿಯೂ ಕೂಡ. ಇವರಿಗೆ ಸಹಾಯ ಮಾಡ ಬಯಸುವವರು ಈ ಕೆಳಗಿನ ಅವರ ಅಕೌಂಟನ್ನು ಸಂಪರ್ಕಿಸಲು ವಿನಂತಿಸಿಕೊಳ್ಳುತ್ತೇವೆ. ನಮ್ಮ ನಿಮ್ಮ ಚಿಕ್ಕ ಸಹಾಯವು ಈ ಬಡದಂಪತಿಗಳ ಹಸಿವು ನೀಗಿಸಿದರೆ ಅದು ಬಹುದೊಡ್ಡ ಉಪಕಾರವಾಗುತ್ತದೆ.

Account No: 1297101002521
Name : JAVARIAHA
CANARABANK
IFSC CODE: CNRB0001297
MICR CODE : 571015549

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಬರಹಗಳು:
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ

ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...