"ಕಾಡಿನ ಜನರಿಗೆ ನಾಡಿಗೆ ಬರೋದು ಅಧರ್ಮ, ಕೃಷಿ ಮಾಡುತ್ತಿದ್ದವರಿಗೆ ವ್ಯಾಪಾರ ಅಧರ್ಮ, ರಾಜಾಶ್ರಯ ಪಡೆದ ಭಿಕ್ಕುಗಳಿಗೆ ಸಮಾಜದ ಬದಲಾವಣೆಗೆ ಒಗ್ಗಿಕೊಳ್ಳೋದು ಅಧರ್ಮ, ಹೊಸತು ಯಾವತ್ತೂ ಕೆಟ್ಟದ್ದು ಅನ್ನೋ ಭಯದಲ್ಲೇ ಜನೆರೇಶನ್ ಗಳು ಕಳೆದಿವೆ!," ಎನ್ನುತ್ತಾರೆ ರಂಜನಿ ರಾಘವನ್. ಅವರು ವಸುಧೇಂದ್ರ ಅವರ ‘ರೇಷ್ಮೆ ಬಟ್ಟೆ’ ಕೃತಿ ಕುರಿತು ಬರೆದ ಅನಿಸಿಕೆ.
ನಾನು ನನ್ನ ಧರ್ಮವನ್ನ ಸರಿಯಾಗಿ ಪಾಲಿಸುತ್ತಿದ್ದೇನೊ ಇಲ್ಲವೋ, ಓಡುತ್ತಿರುವ ಪ್ರಪಂಚದ ಹಿಂದೆ ಹೋಗಬೇಕೋ ಹಿಂದಿನವರು ಹಾಕಿಕೊಟ್ಟ ಮಾರ್ಗದಲ್ಲಿ ಬದುಕಬೇಕೋ, ಸರ್ವೈವಲ್ ವರ್ಸಸ್ ಸೊಸೈಟಲ್ ನಾರ್ಮ್ಸ್, ಈ ಗೊಂದಲ ಮನುಷ್ಯನಿಗೆ ಹೊಸದಲ್ಲ ಎರಡನೇ ಶತಮಾನದಲ್ಲೇ ಇತ್ತು ಅನ್ನೋದು ನನಗೆ ರೇಷ್ಮೆ ಬಟ್ಟೆ ಕಾದಂಬರಿ ತಿಳಿಸಿಕೊಟ್ಟ ಮುಖ್ಯವಾದ ವಿಷಯ.
“ತೇಜೋ ತುಂಗಭದ್ರ” ನಂತರ ವಸುಧೇಂದ್ರ ಸರ್ ಅವರ ಅತ್ಯಂತ ಮಹತ್ವದ ಕಾದಂಬರಿ ರೇಷ್ಮೆ ಬಟ್ಟೆ. ಕಾದಂಬರಿಯು ಓದುಗರನ್ನು 1 ನೇ ಮತ್ತು 2 ನೇ ಶತಮಾನಗಳ CE ಗೆ ಸಾಗಿಸುತ್ತದೆ, ಪ್ರತಿ ಪುಟವೂ ಅದರ ಹಿಂದೆ ಇರೋ ವ್ಯಾಪಕವಾದ ಸಂಶೋಧನೆ ಮತ್ತು ಗಮನವನ್ನು ಪ್ರತಿಬಿಂಬಿಸುತ್ತದೆ. ಆ ಕಾಲದ ಬದುಕಿನ ಚಿತ್ರಣವನ್ನು ನೀಡುತ್ತಲೇ ಸಾರ್ವಕಾಲಿಕ ಸತ್ಯವೆನಿಸುವ ಧಾರ್ಮಿಕ ಹೊಳಹುಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ.
ಕಾಡಿನ ಜನರಿಗೆ ನಾಡಿಗೆ ಬರೋದು ಅಧರ್ಮ, ಕೃಷಿ ಮಾಡುತ್ತಿದ್ದವರಿಗೆ ವ್ಯಾಪಾರ ಅಧರ್ಮ, ರಾಜಾಶ್ರಯ ಪಡೆದ ಭಿಕ್ಕುಗಳಿಗೆ ಸಮಾಜದ ಬದಲಾವಣೆಗೆ ಒಗ್ಗಿಕೊಳ್ಳೋದು ಅಧರ್ಮ, ಹೊಸತು ಯಾವತ್ತೂ ಕೆಟ್ಟದ್ದು ಅನ್ನೋ ಭಯದಲ್ಲೇ ಜನೆರೇಶನ್ ಗಳು ಕಳೆದಿವೆ!
ಭಾರತದಲ್ಲಿ ಗ್ಲೋಬಲೈಸೇಶನ್ ಆಗಿದ್ದು 1991 ರಲ್ಲಿ ಅಂತ ಗೂಗಲ್ ಉತ್ತರಿಸಿದ್ರೂ, ಎರಡನೆಯ ಶತಮಾನದಲ್ಲಿ ದೊಡ್ಡದೊಂದು ಜಾಗತೀಕರಣಕ್ಕೆ ಏಷ್ಯಾಖಂಡದ ಜನರು ಸಾಕ್ಷಿಯಾಗಿದ್ದರು. ಕುಶಾನ ಸಾಮ್ರಾಜ್ಯದ ಕಾನಿಷ್ಕನು ವಾಯವ್ಯ ಭಾರತವನ್ನು ಆಳುತ್ತಿರುವ ಹೊತ್ತಿನಲ್ಲಿ, ಚೀನಾ ದೇಶದಿಂದ ರೋಮ್ ದೇಶದ ತನಕ ಕಾಲ್ನಡಿಗೆಯ ವ್ಯಾಪಾರದ ಹಲವು ದಾರಿಗಳು ಉದ್ಭವಿಸಿದವು. ಈ ಕಾಲದಲ್ಲಿ ಗೂಗಪ್ ಮ್ಯಾಪ್ ಬಳಸಿ ವಾಹನದಲ್ಲಿ ಆ ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಲು ಅಸಾಧ್ಯವಾಗಿದ್ದರೂ, ಹದಿನೆಂಟು ನೂರು ವರ್ಷಗಳ ಹಿಂದೆ ಭೂಪಟದ ಅರಿವಿಲ್ಲದ ನಮ್ಮ ಹಿರಿಯರು ವ್ಯಾಪಾರದ ದೆಸೆಯಿಂದ ಈ ಕ್ಲಿಷ್ಟದ ದಾರಿಯುದ್ದಕ್ಕೂ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಾವಿರಾರು ಮೈಲುಗಳ ಈ ದಾರಿ ಹಲವು ಪರ್ವತ, ಮರುಭೂಮಿ, ನದಿ, ಕೊಳ್ಳ, ಕಾಡು, ನಾಡುಗಳನ್ನು ಹಾದು ಹೋಗಿದೆ. ಇವತ್ತಿನ ಭೂಪಟದ ದೇಶಗಳಾದ ಚೀನಾ, ಕಝಕಿಸ್ತಾನ್, ಉಜ್ಬೆಕಿಸ್ತಾನ್, ಅಫಘನಿಸ್ತಾನ್, ಭಾರತ, ಪಾಕಿಸ್ತಾನ್, ಇರಾನ್, ಇರಾಕ್, ಟರ್ಕಿ - ಹೀಗೆ ಹಲವು ದೇಶಗಳನ್ನು ಹಾದು ಹೋಗುವ ಈ ದಾರಿಯು ವ್ಯಾಪಾರದ ಉದ್ದೇಶಕ್ಕಾಗಿ ಸಂಭವಿಸಿದರೂ ಅಷ್ಟಕ್ಕೇ ಸೀಮಿತವಾಗಿ ಉಳಿಯಲಿಲ್ಲ.
ಒನಪು ರೇಷ್ಮೆ ಇಡೀ ಪುಸ್ತಕದ ತುಂಬಾ ಸೊಗಸಾಗಿ ನೇಯ್ದುಕೊಂಡಿದೆ, ಒರಟು ದಾರಿಯಲ್ಲಿ ವ್ಯಾಪಾರಿಗಳ ಜೊತೆಗೆ ಧರ್ಮಗಳು, ಲಿಪಿಗಳು, ಕಥೆಗಳು, ಜೀವನಶೈಲಿ ಎಲ್ಲವೂ ಸಾಗಿ ಜಾಗತೀಕರಣಕ್ಕೆ ದಾರಿ ಮಾಡಿಕೊಟ್ಟ
ಯಾವ ನಿರ್ಧಾರವೂ ನಿಕೃಷ್ಟವಲ್ಲ ಎಲ್ಲದಕ್ಕೂ ಅದರದ್ದೇ ಆದ ಸಾಧಕ ಬಾಧಕಗಳಿರುತ್ತವೆ ಅನ್ನೋದು ಈ ಕಥೆಯಲ್ಲಿ ಬರೋ ಪ್ರತಿಯಿಂದು ಪಾತ್ರಕ್ಕೂ ಅನ್ವಯಿಸುತ್ತದೆ.
ಬುದ್ದ ಭಿಕ್ಕುಗಳು ಪೂರ್ತಿಯಾಗಿ ಕೂದಲನ್ನ ತೆಗೆಸುವಾಗ ಬುಧ್ಧನ ಮೂರ್ತಿಗಳಿಗೇಕೆ ಗುಂಗುರು ಕೂದಲುಗಳಿವೆ? ರೇಶ್ಮೆ ಉದ್ಯಮ ಚೀನಾ ದೇಶದಲ್ಲಿ ಮೊದಲು ಹುಟ್ಟಿದ್ದು ಹೇಗೆ? ಇಂತಹ ಹಲವಾರು ವಿಚಾರಗಳಿಗೆ ಸ್ವಾರಸ್ಯಕರವಾದ ಉತ್ತರ ಸಿಗುತ್ತದೆ. ಇನ್ನು ಚೀನಾ ದೇಶದ ಬಗ್ಗೆ ಓದುವಾಗ ಪ್ರಭುತ್ವದ ಪರೀಕ್ಷೆಯಿಂದ ಹಿಡಿದು ಮೇಕಪ್ ಲಿಪ್ಸ್ ಸ್ಟಿಕ್ ತನಕ ಏನೆಲ್ಲಾ ವಿಚಾರಗಳಲ್ಲಿ ಆಗಲೇ ಮುಂದಿದ್ದರು ಅನ್ನೋದು ಸೋಜಿಗ ಹುಟ್ಟಿಸಿತು. ಏನೆಲ್ಲಾ ಡೆವೆಲಪ್ಮೆಂಟ್ ಇದ್ದರೂ ಅದು ಗಂಡು ಸಮಾಜಕ್ಕೆ ಮಾತ್ರ ಸೀಮಿತ ಅನ್ನೋ ವಿಚಾರ ಶೋಚನೀಯ.
ನನಗೆ ಬಹಳ ಇಷ್ಟವಾದ ಪಾತ್ರ ಸಗನೇಮಿ ಎನ್ನುವ ಕಾಡಿನ ಹೆಣ್ಣು. ಆಕೆಯ ಜೀವನಸ್ಪೂರ್ತಿ, ದಿಟ್ಟತನ, ತನ್ನ ಕುಟುಂಬಕ್ಕೆ ಮಾತ್ರವಲ್ಲದೇ ಭಿಕ್ಕು ಒಬ್ಬನ ಜೀವನದಲ್ಲಿ ಆಕೆ ಹೇಗೆ ಮಹತ್ವದ ಪಾತ್ರವಾಗುತ್ತಾಳೆ ಅನ್ನೋದು ಹೆಣ್ಣಿಗಿರೋ ಅಪರಿಮಿತ ಸಾಧ್ಯತೆಯನ್ನ ತೋರಿಸುತ್ತದೆ. ತುಷಾರ ಜನಾಂಗದ ವಿಶಾಲವಾದ ದೃಷ್ಟಿಕೋನ, ಜ್ಞಾನಸೇನರ ಧರ್ಮಪಾಲನೆ, ಬುದ್ಧಮಿತ್ರನ ತಳಮಳ, ಮಿತ್ರವಂತಕ-ಮಧುಮಾಯಾಳ ಪ್ರೇಮ ಕಥೆ ಎಲ್ಲವೂ ಡೀಪ್ ಎಂಡ್ ಇಂಟೆನ್ಸ್.
ಕಥೆಗಾರರು ಹಡಗಿನಲ್ಲಿ ತುಂಬಿಕೊಂಡು ಬಂದ ವಿಚಾರವನ್ನ ಚಂದದ ದೋಣಿಯಲ್ಲಿ ಮಡಿಚಿ ಅಚ್ಚುಕಟ್ಟಾಗಿ ಜೋಡಿಸಿರೋದು ಹರಸಾಹಸವೇ ಸರಿ. ಈ ಕಾದಂಬರಿ ಓದಿ ಮುಗಿಸಿದಾಗ ರೇಷ್ಮೆ ನೂಲಿನಂತೆ ಬೆಸೆದುಕೊಂಡ ಪಾತ್ರಗಳ ನೆನೆಪು ಹಿತವೆನಿಸಿದರೆ ಸಿಲ್ಕ್ ರೂಟ್ ನಲ್ಲಿ ರೇಷ್ಮೆ ಹುಳುಗಳಂತೆ ಸತ್ತವರ ಸಾವಿಗೆ ಎದೆ ಝಲ್ಲೆನ್ನುತ್ತದೆ.
“ಹಾದಿ ತಪ್ಪಿದ ದಾರಿಯ ಬಗ್ಗೆ ಕೊರಗದೇ ಸಾಗುವ ಪಯಣದಲ್ಲಿ ಹೊಸದೊಂದು ಗೆಲುವನ್ನು ಕಾಣುವುದು ಯಶಸ್ವಿ ಸಾಧಕನ ಲಕ್ಷಣ,...
“ಎಲ್ಲೇ ಹೋದರೂ ಹಿಂದಿಂದೆ ಸುತ್ತಿ ಬರುವ ಚಂದ್ರನಂತೆ, ಕಳೆದುಹೋದ ಅಜ್ಜ ಊರುಗೋಲು ಹುಡುಕುವಂತೆ, ಇದೇ ಇರಬಹುದಾದ ಈ ...
“ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಹಾಗೂ ಬಾಂಗ್ಲಾದೇಶ ಚೀನಾ ಮಯನ್ಮಾರ್ ಮತ್ತು ಭೂತಾನ ದೇಶಗಳೊಡನೆ ಗಡಿಗಳನ್ನು ಹೊ...
©2025 Book Brahma Private Limited.