“ಎಲ್ಲೇ ಹೋದರೂ ಹಿಂದಿಂದೆ ಸುತ್ತಿ ಬರುವ ಚಂದ್ರನಂತೆ, ಕಳೆದುಹೋದ ಅಜ್ಜ ಊರುಗೋಲು ಹುಡುಕುವಂತೆ, ಇದೇ ಇರಬಹುದಾದ ಈ ಚೂರಾದ ವಸ್ತು ನಾನಿಲ್ಲದೇ ಇರೋ ವಸ್ತು,” ಎನ್ನುತ್ತಾರೆ ಆಲೂರು ದೊಡ್ಡನಿಂಗಪ್ಪ. ಅವರು ತಮ್ಮ “ಚಂದ್ರನ ಚೂರು” ಕೃತಿಗೆ ಬರೆದ ಲೇಖಕರ ಮಾತು.
ತುಂಬಾ ಗೊಂದಲಗಳನ್ನು ಅನುಭವಿಸುತ್ತಾ ಇದ್ದ ಆ ದಿನಗಳು... ಒಂದಷ್ಟು ಊರಿನ ಪಟಾಲಂಗಳು ಚಂದಾ ಎತ್ತಲು ಬಾಗಿಲಿಗೆ ಬಂದರು. ಅದು ಗಣಪತಿ ಕೂರಿಸಲು ತಗಲುವ ಖರ್ಚಿಗೆ ಪ್ರತಿ ಮನೆಗೆ 50 ರೂಪಾಯಿ ಅಥವಾ ಕೈಲಾದಷ್ಟು ಕೊಡಬೇಕು ಎಂದರು. ಐದಕ್ಕೋ ಹತ್ತಕ್ಕೋ ಕೂಲಿ ಮಾಡಿ ಬರುವ ಕಾರ್ಮಿಕ ನಾನು ಇವರು ಕೇಳುವ ಚಂದಾ ಕೊಡಲು ಸಾಧ್ಯವೆ? ಹತ್ತಾರು ಬಾರಿ ಈ ಪಟಾಲಂ ಹುರಿಯಾಳುಗಳು ಮನೆ ಬಾಗಿಲಿಗೆ ಆಗಾಗ ಎಡತಾಕಿ, ಮಾನಸಿಕವಾಗಿ ಕಿರಿಕಿರಿ ಉಂಟುಮಾಡಿ ಹೋಗುತ್ತಿದ್ದರು. ಹತ್ತಾರು ಜನ ಇದ್ದ ಈ ಗುಂಪು ಬಾಯಿಗೆ ಬಂದಂತೆ ಬೀದಿಯಲಿ ಮಾತನಾಡಿತ್ತು.
ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಹಣ ಮಾತ್ರ ಸಿಗಲೇ ಇಲ್ಲ. ಆ ಗುಂಪಿನಲ್ಲಿ ಒಬ್ಬ ಪಿತ್ತ ನೆತ್ತಿಗೇರಿಸಿಕೊಂಡು ಐವತ್ತು ರೂಪಾಯಿ ಕೊಡಕ್ಕೆ ಯೋಗ್ಯತೆ ಇಲ್ಲ, ಈ ಬೋಳಿಮಗ ಹೆಸರಿನ ಮುಂದೆ ಊರಿನ ಹೆಸರನ್ನೂ ಇರಿಸಿಕೊಂಡಿದ್ದಾನೆ. ಊರಿನ ಸಂಭ್ರಮ, ಸಡಗರಕ್ಕೆ ಕೊಡಲು ಕೈಯಲ್ಲಿ ಕಾಸಿಲ್ಲದಿದ್ದರೂ ಊರು ಮಾತ್ರ ಬೇಕು. ಆ ಮಾತಿಗೆ ಗುಂಪು ಗೊಳ್ಳೆಂದಿತ್ತು, ಅವಮಾನಿಸಿತು. ಮುಂದೆ ಏನೇನೋ ನಡೆದೇಹೋಯಿತು. ಕ್ಯಾಕರಿಸಿ ನೆಲಕ್ಕೆ ಉಗುಳಿದ ಗುಂಪಿನಲ್ಲಿದ್ದ ಮತ್ತೊಬ್ಬ, ಏನೋ ನೆನಪು ಮಾಡಿಕೊಂಡು ಧ್ವನಿ ಎತ್ತರಿಸಿ 'ನಾವೆಲ್ಲ ಹುಚ್ಚನಟ್ಟಲಿ ಹುಟ್ಟಿದವರು, ಈ ಬೋಸುಡಿ ಮಗ ಮಾತ್ರ ಊರಲ್ಲಿ ಹುಟ್ಟಿದವನು' ಎಂದು ಜೋರಾಗಿ ಕೂಗಿದ. ಬಹುಶಃ ಆಗ ನಾನು 20 ರಿಂದ 22 ವರ್ಷದವನಿರಬೇಕು. ಅವರ ಮಾತಿನಿಂದ ಘಾಸಿಗೊಂಡೆ. ನನಗ್ಯಾಕೋ ಊರು ಕೈ ಕೊಟ್ಟಿತು ಎಂದು ಒಳಗೊಳಗೆ ಅನಿಸಿತು. ಮೆಲ್ಲಗೆ ಊರು ಬಿಟ್ಟೆ.
ಹೊರ ಊರು, ಹೊರ ಜನರ ಸಂಪರ್ಕ ಬೆಳೆಯಿತು. ಆರಂಭದಲ್ಲಿ ಎಲ್ಲ ಚೆನ್ನಾಗಿಯೇ ಇತ್ತು. ಮುಂದೆ ಮುಂದೆ ಹೋದಂತೆ ಹೊಸದೊಂದು ವ್ಯವಸ್ಥೆಗೆ ಸಿಲುಕಿದೆ. ಎಷ್ಟೋ ಸಾರಿ ನಕ್ಕೆ, ಅತ್ತೆ, ನೊಂದೆ, ಬೆಂದೆ ಎಡತಾಕುತ್ತ ಮತ್ತೆ ನನ್ನೂರು ಬಂಧು-ಬಳಗ, ಹಸಿರು ಗಿಡಮರಗಳು, ಸೊಗಸಾಗಿ ಬೆಳೆದು ನಿಂತ ಪಚ್ಚೆ-ಪೈರು, ಗಾಳಿಗೆ ತೂಗುವ ತೆಂಗು, ಬಾಳೆ, ಹರಿವ ಹಳ್ಳ-ಕೊಳ್ಳಗಳು, ಬೆಟ್ಟ-ಗುಡ್ಡಗಳು, ಪ್ರಾಣಿ-ಪಕ್ಷಿಗಳು, ಜಡವಸ್ತುಗಳ ನೆನಪು ಪಕ್ಕೆಲುಬು ಮುರಿಯುತ್ತಲೇ ಊರಿನ ಸಾಕ್ಷಿ ನುಡಿದಿವೆ, ಎಲ್ಲೇ ಹೋದರೂ ಹಿಂದಿಂದೆ ಸುತ್ತಿ ಬರುವ ಚಂದ್ರನಂತೆ, ಕಳೆದುಹೋದ ಅಜ್ಜ ಊರುಗೋಲು ಹುಡುಕುವಂತೆ, ಇದೇ ಇರಬಹುದಾದ ಈ ಚೂರಾದ ವಸ್ತು ನಾನಿಲ್ಲದೇ ಇರೋ ವಸ್ತು.
"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...
"ಮೂಲತಃ ಸಂಶೋಧಕ ಪ್ರವೃತ್ತಿಯ ಕೃತಿಕಾರರು, ಒಂದು ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ಜೊತೆಗೆ ಒಂದು ಕೌಟ...
“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪ...
©2025 Book Brahma Private Limited.