ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್

Date: 11-05-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜರ್ಮನಿಯ ಚಿತ್ರ ಕಲಾವಿದ ನಿಯೊ ಆವ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ನಿಯೊ ಆವ್ (Neo Rauch) 
ಜನನ: 18 ಏಪ್ರಿಲ್, 1960 
ಶಿಕ್ಷಣ: ಲೀಪ್‌ಜಿಗ್ ಗ್ರಾಫಿಕ್ಸ್ ಮತ್ತು ಕಲಾ ವಿಶ್ವವಿದ್ಯಾನಿಲಯ, ಲೀಪ್‌ಜಿಗ್, ಜರ್ಮನಿ 
ವಾಸ: ಲೀಪ್‌ಜಿಗ್, ಜರ್ಮನಿ 
ಕವಲು: ನ್ಯೂ ಲೀಪ್‌ಜಿಗ್ ಸ್ಕೂಲ್ ಆಫ್ ಆರ್ಟ್ (ಜರ್ಮನ ರೆನಿಸಾನ್ಸ್) 
ವ್ಯವಸಾಯ:  ಪೇಂಟಿಂಗ್‌ಗಳು 

ನಿಯೊ ಆವ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಅತ್ತ ಪೂರ್ವ ಜರ್ಮನಿಯ ಸಾಮಾಜಿಕ ವಾಸ್ತವವಾದಕ್ಕೂ ಹತ್ತಿರವಿರದ ಇತ್ತ ಪಶ್ಚಿಮದ ನವ ಅಭಿವ್ಯಕ್ತಿವಾದಕ್ಕಿಂತಲೂ ಭಿನ್ನವಾದ –ಶುದ್ಧ ಕಾವ್ಯಾತ್ಮಕವಾದ ಆವ್ ಅವರ ಕಲಾಕೃತಿಗಳು ಜರ್ಮನಿಯ ಎಲ್ಲ ಕಲಾ ಚಳುವಳಿಗಳು ಮತ್ತು ಚರಿತ್ರೆಗಳನ್ನು ಮೀರಿ ನಿಲ್ಲಬಲ್ಲವು. ಆವ್ ಕಲಾಕೃತಿಗಳೆಂದರೆ ರೆನಿಸಾನ್ಸ್, ಸರ್ರೆಯಲಿಸಂ ಮತ್ತು ರಿಯಲಿಸಂಗಳ ಹದವಾದ ಮಿಶ್ರಣ. ಅವರು ಪ್ರತಿನಿಧಿಸುವ ನ್ಯೂ ಲೀಪ್‌ಜಿಗ್ ಸ್ಕೂಲ್ ಕಲಾ ಚಳುವಳಿ ಫಿಗರೇಟಿವ್ ಕಲಾಕೃತಿಗಳನ್ನು ಮತ್ತೆ ಕಲಾಪ್ರಪಂಚದಲ್ಲಿ ಮುಂಚೂಣಿಗೆ ತಂದ ಚಳುವಳಿಯಾಗಿದ್ದು, ಆವ್ ಅದರ ದೃಷ್ಟಾರರೆಂದೇ ಹೆಸರಾಗಿದ್ದಾರೆ. 

ಮನುಷ್ಯನ ಭಯ, ಹಿಂಜರಿಕೆ, ಆತ್ಮವಿಮರ್ಶೆಗಳನ್ನು ಒಬ್ಬ ಮಾಂತ್ರಿಕ ಕತೆಗಾರನಂತೆ ಕ್ಯಾನ್‌ವಾಸಿಗಿಳಿಸುವ ಆವ್, ತನ್ನ ಕಲಾಕೃತಿಗಳಿಗೆ ಅವುಗಳದೇ ಆದ ಬದುಕಿದೆ, ಅಲ್ಲಿನ ಪಾತ್ರಗಳು ಬೆಳೆಯುತ್ತವೆ ಎಂದು ನಂಬಿದ್ದಾರೆ. “The artist should not only paint what he sees before him, but also what he sees within him. If, however, he sees nothing within him, then he should also omit to paint that which he sees before him.” ಎನ್ನುತ್ತಾರವರು (ಕಾನ್ಸೆಪ್ಚುವಲ್ ಫೈನ್ ಆರ್ಟ್ ಮ್ಯಾಗಝೀನಿಗೆ ನೀಡಿದ ಸಂದರ್ಶನದಲ್ಲಿ ನವೆಂಬರ್, 2019). 

ನಾಲ್ಕು ತಿಂಗಳ ಮಗುವಾಗಿದ್ದಾಗಲೇ ತನ್ನ ಕಲಾವಿದ ತಂದೆ ತಾಯಿಯರನ್ನು ಅವರ ಎಳವೆಯಲ್ಲೇ ರೈಲು ಅಪಘಾತವೊಂದರಲ್ಲಿ ಕಳೆದುಕೊಂಡ ಆವ್ ಬೆಳೆದದ್ದು ಅಜ್ಜನ ಮನೆಯಲ್ಲಿ. ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ ಆವ್, ತನ್ನ ಬಾಲ್ಯದ ಸಹಪಾಠಿಗಳು ಆಟದಲ್ಲಿ ತೊಡಗಿದ್ದಾಗ ಏಕಾಂಗಿಯಾಗಿ ಚಿತ್ರಗಳನ್ನು ಧ್ಯಾನಿಸುತ್ತಿದ್ದರು. 12ನೇ ವರ್ಷದಲ್ಲಿ ಅವರು ಅಜ್ಜನ ಮೇಜಿನ ಮೇಲೆ ಕಂಡ ಸಾಲ್ವದೋರ್ ಡಾಲಿಯ ಚಿತ್ರಗಳ ಪುಸ್ತಕವೊಂದು ಅವರ ಮೇಲೆ ಬಹಳ ಪ್ರಭಾವ ಬೀರಿತ್ತು. 

ತನ್ನ ಕಲಾಕೃತಿಗಳಲ್ಲಿ ತಾನು ಮಾಧ್ಯಮ ಮಾತ್ರ. ನಾನೊಬ್ಬ ಮೆದುಳು ಮಾರ್ಗದರ್ಶನ ಮಾಡಿಸಿಕೊಳ್ಳುವ ಕಲಾವಿದ ಅಲ್ಲ ನನ್ನ ಕಲಾಕೃತಿಗಳು ಹೇಗೆ ಮೂಡುತ್ತವೆಂಬುದು ನನಗೇ ಅರಿವಿರುವುದಿಲ್ಲ. I’m a painter, not an artist. ಎನ್ನುತ್ತಾರವರು. 81-86ರ ನಡುವೆ ಲೀಪ್‌ಜಿಗ್ ವಿವಿಯಲ್ಲಿ ಕಲಿಯುವ ವೇಳೆ ತನ್ನ ಗುರು ಆರ್ನೊ ರಿಂಕ್ ಅವರಿಂದ ಪ್ರಭಾವಿತರಾದ  ಆವ್, 1985ರಲ್ಲಿ ಸಹಕಲಾವಿದೆ ರೋಸಾ ಲಾಯ್ ಅವರನ್ನು ಮದುವೆ ಆಗುತ್ತಾರೆ. 1990ರ ಹೊತ್ತಿಗೆ ಕಲೆಯಲ್ಲಿ ಸ್ನಾತಕ ಪದವಿಯ ಬಳಿಕ, ಇಬ್ಬರೂ ಕಲಾ ವ್ಯವಸಾಯದಲ್ಲಿ ತೊಡಗಿಕೊಳ್ಳುತ್ತಾರೆ. 

80ರಲ್ಲಿ ಗ್ಯಾಲರಿಸ್ಟ್ ಜುಡಿ ಲೈಕ್ ಅವರನ್ನು ಭೇಟಿ ಆದ ಬಳಿಕ, ಕಲಾ ಮಾರುಕಟ್ಟೆಯಲ್ಲೂ ಯಶಸ್ವೀ ಅನ್ನಿಸಿದ ಆವ್ 1999ರ ಆರ್ಮರಿ ಶೋ ಬಳಿಕ ಜಗತ್ತಿನಾದ್ಯಂತ ಹೆಸರು ಮಾಡುತ್ತಾರೆ. 2005-09ರ ನಡುವೆ ತಾನು ಕಲಿತ ಶಾಲೆಯಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ ಆವ್‌ಗೆ ಆ ಬಂಧನ ಹಿಡಿಸಲಿಲ್ಲ. ಲೀಪ್‌ಜಿಗ್ ಹೊರವಲಯದ ಪುಟ್ಟ ಊರಿನಲ್ಲಿ ಸ್ಟುಡಿಯೋ ಸ್ತಾಪಿಸಿ, ಅಲ್ಲಿಂದ ದಂಪತಿ ಕಲಾಕೃಷಿ ಆರಂಭಿಸುತ್ತಾರೆ. 

2012ರಲ್ಲಿ ತನ್ನ der Grafikstiftung Neo Rauch ಪ್ರತಿಷ್ಠಾನವನ್ನು ಆರಂಭಿಸಿದ ಆವ್ ದಂಪತಿ ಈಗ ಅಲ್ಲಿ ಕಲಾಕೃಷಿ ಮಾಡುತ್ತಿದ್ದಾರೆ. Unbearable Naturalism (1998), Waiting for the Barbarians (2007), The Blue Fish (2014), The Offering, Guardian of the night (2014) The Catch (2016) ಅವರ ಕೆಲವು ಕಲಾಕೃತಿಗಳು. ತನ್ನ ಕನಸಿನಂತಹ ವಿಚಿತ್ರ ಕಲಾಕೃತಿಗಳ ಬಗ್ಗೆ ಆವ್ ಹೇಳುವುದು – ನನ್ನ ತಲೆಯಂತೆಯೇ ನನ್ನ ಕ್ಯಾನ್‌ವಾಸ್ ಕೂಡ ಹುಚ್ಚುಕುದುರೆ, ಅಲ್ಲಿ ಎಲ್ಲವೂ ಸಾಧ್ಯ!  

ನಿಯೊ ಆವ್ ಅವರ ಕುರಿತ ಡಾಕ್ಯುಮೆಂಟರಿ:  

ನಿಯೊ ಆವ್ ಮತ್ತು ಪತ್ನಿ ರೋಸಾ ಲಾಯ್ ಅವರ ಜೊತೆ ಕ್ಯುರೇಟರ್ ಎಡ್ ಷಾಡ್ ಮಾತುಕತೆ:  

ಚಿತ್ರ ಶೀರ್ಷಿಕೆಗಳು 
ನಿಯೊ ಆವ್ ಅವರ Night gas station (2011) 

ನಿಯೊ ಆವ್ ಅವರ Stool (2020) 

ನಿಯೊ ಆವ್ ಅವರ The blind tower keeper (2019) 

ನಿಯೊ ಆವ್ ಅವರ The embroiderer (2008) 

ನಿಯೊ ಆವ್ ಅವರ The Guards (2019) 

ನಿಯೊ ಆವ್ ಅವರ The Store (2006) 

ನಿಯೊ ಆವ್ ಅವರ The Trap (2013) 

ನಿಯೊ ಆವ್ ಅವರ Treasure Trove (2011) 

ನಿಯೊ ಆವ್ ಅವರ Unfolding (2008) 

ನಿಯೊ ಆವ್ ಅವರ Waiting for Barbarians (2007) 

ಈ ಅಂಕಣದ ಹಿಂದಿನ ಬರೆಹಗಳು: 

ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್ 

‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...