ಇಂಗ್ಲೀಶು ಕನ್ನಡ ಬದುಕಿನೊಳಗೆ

Date: 01-07-2024

Location: ಬೆಂಗಳೂರು


"ಇಂಗ್ಲೀಶು ಕನ್ನಡದೊಳಗೆ ಪಸರಿಸಿಕೊಂಡ ಬಗೆ ವ್ಯಾಪಕತೆಯನ್ನೂ ಹಲವು ಆಯಾಮಗಳನ್ನೂ ಪಡೆದುಕೊಂಡಿದೆ. ಹಿಂದೆ ಸಂಸ್ಕೃತ-ಪ್ರಾಕ್ರುತ ಮತ್ತು ಅರಾಬಿಕ್-ಪರ‍್ಶಿಯನ್ ಬಾಶೆಗಳೂ ಹೀಗೆಯೆ ಕನ್ನಡ ಬದುಕಿನೊಳಗೆ ಪಸರಿಸಿಕೊಂಡಿವೆ. ಆಯಾಮಗಳು ಬಿನ್ನವಾಗಿದ್ದರೂ ಪಸರಿಸಿಕೊಳ್ಳುವ ಬಗೆಯನ್ನು ಒಟ್ಟಿಗೆ ನೋಡಲು ಸಾದ್ಯವಿದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಇಂಗ್ಲೀಶು ಕನ್ನಡ ಬದುಕಿನೊಳಗೆ’ ಕುರಿತು ಬರೆದಿರುವ ಲೇಖನ.

ಇಂಗ್ಲೀಶು ಕನ್ನಡ ಬದುಕಿನೊಳಗೆ, ಕನ್ನಡ ಸಮಾಜದೊಳಗೆ ಹಗುರವಾಗಿ ಪಸರಿಸಿಕೊಳ್ಳುತ್ತಾ ಬೆಳೆಯಿತು. ಈ ಪಸರಿಸಿಕೊಳ್ಳುವಿಕೆ ಪ್ರಕ್ರಿಯೆ ಇನ್ನೂ ನಡೆದಿದೆ. ಇಂಗ್ಲೀಶು ಕನ್ನಡದೊಳಗೆ ಪಸರಿಸಿಕೊಂಡ ಬಗೆ ವ್ಯಾಪಕತೆಯನ್ನೂ ಹಲವು ಆಯಾಮಗಳನ್ನೂ ಪಡೆದುಕೊಂಡಿದೆ. ಹಿಂದೆ ಸಂಸ್ಕೃತ-ಪ್ರಾಕ್ರುತ ಮತ್ತು ಅರಾಬಿಕ್-ಪರ‍್ಶಿಯನ್ ಬಾಶೆಗಳೂ ಹೀಗೆಯೆ ಕನ್ನಡ ಬದುಕಿನೊಳಗೆ ಪಸರಿಸಿಕೊಂಡಿವೆ. ಆಯಾಮಗಳು ಬಿನ್ನವಾಗಿದ್ದರೂ ಪಸರಿಸಿಕೊಳ್ಳುವ ಬಗೆಯನ್ನು ಒಟ್ಟಿಗೆ ನೋಡಲು ಸಾದ್ಯವಿದೆ. ಆದರೆ, ಇಂಗ್ಲೀಶಿನ ಪಸರಿಕೆ ಇನ್ನೂ ನಮ್ಮ ಕಣ್ಣ ಮುಂದೆ ನಡೆಯುತ್ತಿರುವುದರಿಂದ ಇದನ್ನು ತುಸು ವಿಬಿನ್ನ ಮತ್ತು ವಿಸ್ತಾರವಾಗಿ ಮಾತನಾಡಬಹುದು. ಇದನ್ನು ಎರಡು ಬಾಶೆಗಳ ನಡುವಿನ ಸಂಬಂದಗಳನ್ನು ಅರಿಯುವುದಕ್ಕೆ ಪೂರಕವಾಗಿ ನೋಡುವುದಕ್ಕೆ ಅನುಕೂಲವಾಗುವಂತೆಯೂ ಬೆಳೆಸಬಹುದು. ಕನ್ನಡದ ಸಂರ‍್ಬದಲ್ಲಿ ಸಂಸ್ಕುçತ-ಪ್ರಾಕ್ರುತ ಮತ್ತು ಅರಾಬಿಕ್-ಪರ‍್ಶಿಯನ್ ಇವುಗಳ ಹೇಗೆಲ್ಲ ಆಯಾಮಗಳನ್ನು ಹೊಂದಿ ಬಂದಿರಬಹುದೆಂಬ ಆಲೋಚನೆಗೆ ಇದು ಸಹಾಯ ಮಾಡಬಹುದು.

ಇಂಗ್ಲೀಶು ಕನ್ನಡಕ್ಕೆ, ಬಾರತಕ್ಕೂ, ಒದಗಿ ಬಂದದ್ದು ಮೊದಲು ವ್ಯಾಪಾರದ ಮೂಲಕ. ಅಂದರೆ ಆರ‍್ತವಲಯದ ಮೂಲಕ. ಸಹಜವಾಗಿ ಅರ‍್ತ ಸಮಾಜದಲ್ಲಿ ಕಂಡಿತವಾಗಿಯೂ ಹಿಡಿತವನ್ನು ಹೊಂದಿರುತ್ತದೆ. ಆದರೆ, ಬೇಗನೆ ಇಂಗ್ಲೀಶು ಅದಿಕಾರದ ಬಾಶೆಯಾಗಿಯೂ ಬೆಳೆಯಿತು. ರಾಜಕೀಯ ಮತ್ತು ಆರ‍್ತಿಕ ಈ ಎರಡೂ ವಲಯಗಳನ್ನು ಪಡೆದುಕೊಂಡ ಬಾಶೆಯೊಂದು ಸಹಜವಾಗಿ ಸಾಮಾಜಿಕ ಪ್ರತಿಶ್ಟೆಯನ್ನು ಪಡೆದುಕೊಳ್ಳುತ್ತದೆ. ಹೀಗೆ ಇಂಗ್ಲೀಶು ಸಾಮಾಜಿಕ ಪ್ರತಿಶ್ಟೆಯನ್ನು ಪಡೆದುಕೊಳ್ಳುತ್ತದೆ. ಇಂಗ್ಲೀಶು ಮಾತನಾಡುವುದು ಅಲ್ಲ, ಇಂಗ್ಲೀಶಿನ ಪದಗಳನ್ನು ಬಳಸುವುದೂ ಸಾಮಾಜಿಕ ಪ್ರತಿಶ್ಟೆಯಾಗಿ ಬೆಳೆಯಿತು. ಇದನ್ನು ಇಂದಿಗೂ ಗಮನಿಸಬಹುದು.

ಮುಂದುವರೆದು ಇಂಗ್ಲೀಶು ಬ್ರಿಟೀಶರು ಪರಿಚಯಿಸಿದ ಆದುನಿಕ ಶಿಕ್ಶಣ ಪದ್ದತಿಯ ವಾಹಿನಿಯಾಗಿ ಬಂದಿತು. ಮುಂದುವರೆದು ಸಂಶೋದನೆ, ಆನಂತರ ಇನ್ನೂ ಮುಂದುವರೆದು ವಿಗ್ನಾನ, ತಂತ್ರಗ್ನಾನ ಮೊದಲಾದ ವಲಯಗಳಲ್ಲಿ ಇಡಿಯಾಗಿ ಆವರಿಸಿಕೊಂಡಿರುವುದರಿಂದ ಇಂಗ್ಲೀಶು ಕನ್ನಡಕ್ಕೆ ಇನ್ನಶ್ಟು ಹತ್ತಿರವಾಯಿತು. ಇಂಗ್ಲೀಶಿನ ಬಳಕೆಯನ್ನು ಎರಡು ರೀತಿಯಲ್ಲಿ ಗಮನಿಸಬಹುದು. ಒಂದು ಇಂಗ್ಲೀಶಿನ ಪದಕೋಶವನ್ನು ಬಳಸುವುದು, ಇನ್ನೊಂದು ಇಂಗ್ಲೀಶಿನಿಂದ ಕನ್ನಡ ವ್ಯಾಕರಣದಲ್ಲಿ, ಅಂದರೆ ಕನ್ನಡ ವಾಕ್ಯರಚನೆಯಲ್ಲಿ ಮತ್ತು ಮುಕ್ಯವಾಗಿ ಬರವಣಿಗೆಯಲ್ಲಿ ಆಗಿರುವ ಬದಲಾವಣೆಗಳನ್ನು.

ಆದುನಿಕ ಆಡಳಿತ ಪದ್ದತಿ, ನ್ಯಾಯಾಂಗ, ಶಿಕ್ಶಣ ಮೊದಲ್ಗೊಂಡು ಬಹುತೇಕ ವಲಯಗಳಲ್ಲಿ ಇಂಗ್ಲೀಶಿನ ಪದಗಳ ಬಳಕೆ ವ್ಯಾಪಕವಾಗಿದೆ. ಕೆಲವು ನೂರು ವರುಶಗಳ ಹಿಂದೆಯಶ್ಟೆ ಕನ್ನಡದ ಸಂರ‍್ಕಕ್ಕೆ ಬಂದಿರುವ ಇಂಗ್ಲೀಶು ಬಾಶೆಯ ಕೆಲವು ಪದಗಳು ಕನ್ನಡದ್ದೆ ಎನ್ನವಶ್ಟು ಸಹಜವಾಗಿ ಬಳಕೆಯಾಗುತ್ತವೆ. ಆದುನಿಕತೆ ಕಾರಣದಿಂದ ಇಂಗ್ಲೀಶು ಬಹುವಾಗಿ ಕನ್ನಡವನ್ನು ಆವರಿಸಿಕೊಳ್ಳುತ್ತಿರುವುದು ಸ್ಪಶ್ಟ. ಈ ಕೆಳಗಿನ ವಾಕ್ಯವನ್ನು ಗಮನಿಸಿ. ‘ನಾನು ಎವ್ರಿಡೆ ಇವ್ನಿಂಗ್ ಈ ಪರ‍್ಕಲ್ಲಿ ವಾಕ್ ಮಾಡ್ತಿನಿ’. ಈ ಬಗೆಯ ವಾಕ್ಯಗಳನ್ನು ಶಿಕ್ಶಿತ ಮತ್ತು ಮುಕ್ಯವಾಗಿ ನಗರ ಪ್ರದೇಶದ ಕನ್ನಡದಲ್ಲಿ ಸಹಜವಾಗಿ ಕೇಳುತ್ತೇವೆ. ಇಲ್ಲಿ ವಾಕ್ಯದ ಬಹುತೇಕ ಪದಗಳು ಇಂಗ್ಲೀಶಿನವೆ ಆಗಿವೆ. ಆದರೆ, ಕರ್‍ತ್ರು ಮತ್ತು ಕ್ರಿಯಾಪದಗಳು ಕನ್ನಡದವೆ ಆಗಿವೆ, ಮತ್ತು ಮುಕ್ಯವಾಗಿ ವಾಕ್ಯರಚನೆ ಕನ್ನಡದ್ದಾಗಿದೆ. ಹೀಗೆ ಕನ್ನಡ ವಾಕ್ಯ ರಚನೆಯನ್ನು ಇಶ್ಟುಮಟ್ಟಿಗೆ ಇಂಗ್ಲೀಶು ಪ್ರಬಾವಿಸಿದೆ.

ಇನ್ನೊಂದೆಡೆ ಇಂಗ್ಲೀಶಿನ ಕ್ರಿಯಾಪದಗಳನ್ನು ಕನ್ನಡದಲ್ಲಿ ಬಳಸುವ ಕ್ರಮವನ್ನು ಗಮನಿಸಬಹುದು. ಇದು ಕನ್ನಡ ವ್ಯಾಕರಣವನ್ನು ಮುರಿದು ಕಟ್ಟುವ ಪ್ರಕ್ರಿಯೆಯ ಹಾಗೆ ಕಾಣಿಸುತ್ತದೆ. ಈ ಬಳಕೆಯನ್ನು ಗಮನಿಸಿ, ‘ನಾನು ಮೇಲ್ ಸೆಂಡ್ ಮಾಡಿದೆ’. ಈ ವಾಕ್ಯದಲ್ಲಿ ಸೆಂಡ್ ಎನ್ನುವುದು ಇಂಗ್ಲೀಶಿನ ಪದ. ಇಂಗ್ಲೀಶಿನಲ್ಲಿ ಇದು ಕ್ರಿಯಾಪದ. ಸಾಮಾನ್ಯವಾಗಿ ಎರಡು ಬಾಶೆಗಳ ನಡುವಿನ ಸಂಬಂದದಲ್ಲಿ ಪ್ರಬಾವಿಯಾದ ಬಾಶೆಯಿಂದ ಪ್ರಬಾವಕ್ಕೊಳಗಾದ ಬಾಶೆ ಪದಗಳನ್ನು ತೆಗೆದುಕೊಳ್ಳುತ್ತದೆ. ಹೀಗೆ ತೆಗೆದುಕೊಳ್ಳುವ ಪದಗಳಲ್ಲಿ ಹೆಚ್ಚಾಗಿ ನಾಮಪದಗಳು ಇರುತ್ತವೆ. ಸಾಮಾನ್ಯವಾಗಿ ಕ್ರಿಯಾಪದಗಳನ್ನು ತೆಗೆದುಕೊಳ್ಳುವುದಿಲ್ಲ, ಇಲ್ಲವೆ ತುಂಬಾ ಕಡಿಮೆ ಪ್ರಮಾಣದಲ್ಲಿ ಕ್ರಿಯಾಪದಗಳನ್ನು ತೆಗೆದುಕೊಳ್ಳಬಹುದು. ಹೀಗೆ ಇಲ್ಲಿ, ಇಂಗ್ಲೀಶಿನಿಂದ ಕನ್ನಡವು ಕ್ರಿಯಾಪದಗಳನ್ನು ಪಡೆದುಕೊಂಡಿದೆ. ಆದರೆ, ಅವುಗಳನ್ನು ಬಳಸುವ ಕ್ರಮ ವಿಶೇಶವೂ ವಿಚಿತ್ರವೂ ಆಗಿದೆ. ವಾಸ್ತವದಲ್ಲಿ ಈ ವಿಚಿತ್ರ ಮತ್ತು ವಿಶೇಶ ಬಳಕೆ ಕನ್ನಡ ವ್ಯಾಕರಣವೂ ಅಲ್ಲದ ಇಂಗ್ಲೀಶು ವ್ಯಾಕರಣವೂ ಅಲ್ಲದ ಒಂದು ಬೆಳವಣಿಗೆ. ಗಮನಿಸಿ. ಇದೆ ವಾಕ್ಯವನ್ನು ಕನ್ನಡದಲ್ಲಿ ‘ನಾನು ಮೇಲ್ ಕಳಿಸಿದೆ’ ಎನ್ನಬಹುದು. ಈ ರೀತಿ ವಾಕ್ಯವನ್ನು ಮಾಡಿದಾಗ ಇಲ್ಲಿ ಮೇಲ್ ಎನ್ನುವುದು ಒಂದು ನಾಮಪದವಾಗಿ ಬಂದಿದೆ. ಮೇಲ್ ಎನ್ನುವುದು ಇಂಗ್ಲೀಶಿನಲ್ಲಿ ಕ್ರಿಯಾಪದವೂ ಹವುದು ಮತ್ತು ನಾಮಪದವೂ ಹವುದು. ಹಾಗಾಗಿ ಈ ವಾಕ್ಯದಲ್ಲಿ ಮೇಲ್ ಎನ್ನುವ ನಾಮಪದವನ್ನು ಬಳಸಿದೆ ಎಂದೆನ್ನಬಹುದು. ಈ ಮೇಲಿನ ವಾಕ್ಯದಲ್ಲಿ ಮೇಲ್ ಎನ್ನುವುದರ ಜೊತೆಗೆ ಇನ್ನೊಂದು ಪದ ಬಳಕೆಯಾಗಿದೆ. ಆ ವಾಕ್ಯವನ್ನು ಮತ್ತೊಮ್ಮೆ ಇಲ್ಲಿ ಗಮನಿಸಿ, ‘ನಾನು ಮೇಲ್ ಸೆಂಡ್ ಮಾಡಿದೆ’. ಇದರ ಸಂವಾದಿ ಇಂಗ್ಲೀಶಿನ ವಾಕ್ಯ ಬಹುಶಾ ‘ಅಯ್ ಸೆಂಟ್ ಅ ಮೇಲ್’ ಎಂದಾಗಬಹುದು. ಇದನ್ನು ನೇರವಾಗಿ ಕನ್ನಡದಲ್ಲಿ ಈ ಮೇಲೆ ಉಲ್ಲೇಕಿಸಿದ ‘ನಾನು ಮೇಲ್ ಕಳಿಸಿದೆ’ ಎಂಬ ವಾಕ್ಯ ಸರಿಯಾಗಿ ಕನ್ನಡಿಸುತ್ತದೆ. ಆದರೆ, ಯಾಕೆ ಕನ್ನಡದಲ್ಲಿ ಈ ವಾಕ್ಯವನ್ನು ‘ನಾನು ಮೇಲ್ ಸೆಂಡ್ ಮಾಡಿದೆ’ ಎಂದು ಬಳಸಲಾಗುತ್ತದೆ ಎನ್ನುವುದು ಬಹು ಕುತೂಹಲ. ಇದರಲ್ಲಿ ಸೆಂಡ್ ಎನ್ನುವ ಕ್ರಿಯಾಪದವನ್ನು ಕನ್ನಡ ವಾಕ್ಯದಲ್ಲಿ ಕ್ರಿಯಾಪದವಾಗಿ ಬಳಸಲು ಆಗುವುದಿಲ್ಲ. ಅದಕ್ಕೆ ಆ ಕ್ರಿಯಾಪದಕ್ಕೆ ಇನ್ನೊಂದು ಮಾಡು ಎಂಬ ಕನ್ನಡದ ಕ್ರಿಯಾಪದವೊಂದನ್ನು ಅಂಟಿಸಿ ಬಳಸಲಾಗುತ್ತಿದೆ. ಅದರಿಂದಾಗಿ ಕ್ರಿಯಾಪದವನ್ನು ತೆಗೆದುಕೊಂಡೂ ಕ್ರಿಯಾಪದವಾಗಿ ಬಳಸದೆ ಕನ್ನಡದ ಮತ್ತೊಂದು ಕ್ರಿಯಾಪದಕ್ಕೆ ಅದೀನವಾಗಿ ಬಳಸುತ್ತಿದೆ. ಹಾಗಾದರೆ, ಸೆಂಡ್ ಎನ್ನುವುದು ಈಗ ಕನ್ನಡದ ವಾಕ್ಯದಲ್ಲಿ ಯಾವ ಬಗೆಯ ಪದವಾಗಿ ಬಳಕೆಯಾಗುತ್ತಿದೆ. ಇದು ಈಗ ನಾಮಪದವೊ, ಕ್ರಿಯಾಪದವೊ, ವಿಶೇಶಣವೊ ಎಂಬ ಅನುಮಾನ ಬರಲು ಸಾದ್ಯ. ಕುತೂಹಲವೆಂದರೆ ಇದನ್ನು ನಿರ‍್ದಿಶ್ಟವಾಗಿ ಇಂತದೆ ಪದರ‍್ಗವಾಗಿ ಬಳಕೆಯಾಗುತ್ತಿದೆ ಎಂದು ಹೇಳುವುದು ತುಸು ಕಶ್ಟದ ಕೆಲಸ. ಹೀಗೆ ಕನ್ನಡ ವಾಕ್ಯ ರಚನೆಯಲ್ಲಿ ಹಲವು ಬಗೆಯ ಬದಲಾವಣೆಗಳಿಗೆ ಇಂಗ್ಲೀಶು ಕಾರಣವಾಗಿದೆ.

ಇನ್ನೊಂದು ಉದಾಹರಣೆಯನ್ನು ಗಮನಿಸುವುದಾದರೆ, ಕನ್ನಡದಲ್ಲಿ ಬಹುತೇಕ ಎಲ್ಲ ನಾಮಪದಗಳು ವಿಶೇಶಣಗಳಾಗಿ ಬಳಕೆಯಾಗಬಲ್ಲವು. ಬಾಗಿಲು ಎನ್ನುವ ನಾಮಪದ ಬಾಗಿಲ ಮನೆ ಎಂಬ ಬಳಕೆಯಲ್ಲಿ ಮನೆ ಎಂಬ ನಾಮಪದಕ್ಕೆ ವಿಶೇಶಣವಾಗಿ ಬಳಕೆಯಾಗುತ್ತಿದೆ. ಅದರಂತೆಯೆ ಇಂಗ್ಲೀಶಿನಿಂದ ಕನ್ನಡವು ತೆಗೆದುಕೊಂಡ ನಾಮಪದಗಳನ್ನು ಕನ್ನಡದ ಲಕ್ಶಣದ ಹಾಗೆ ವಿಶೇಶಣವಾಗಿ ಬಳಸಲಾಗುತ್ತದೆ. ಇದನ್ನು ಗಮನಿಸಿ, ಗೇಟ್ ಬಾಗಿಲು, ಗೇಟಿನ ಮನೆ. ಇಲ್ಲೆಲ್ಲ ಬಾಗಿಲು, ಮನೆ ಎಂಬ ನಾಮಪದಗಳಿಗೆ ವಿಶೇಶಣವಾಗಿ ಗೇಟು ಎನ್ನುವ ಪದ ಬಳಕೆಯಾಗುತ್ತಿದೆ.

ಇನ್ನು ಕನ್ನಡ ಬರಹದಲ್ಲಿ ಇಲ್ಲದ ಚಿನ್ನೆಗಳನ್ನು ಇಂಗ್ಲೀಶಿನ ಪ್ರಬಾವದಿಂದ ತೆಗೆದುಕೊಳ್ಳಲಾಗಿದೆ. ಹೀಗೆ ಇಂಗ್ಲೀಶು ಮತ್ತು ಕನ್ನಡದ ಸಂಯೋಗ ಹಲವು ಬಗೆಯ ಬೆಳವಣಿಗೆಗಳಿಗೆ ಕಾರಣವಾಗಿದೆ. ಮುಂದಿನ ಬರಹದಲ್ಲಿ ಇಂಗ್ಲೀಶಿನ ಇನ್ನಶ್ಟು ಅವತಾರಗಳನ್ನು ಅವಲೋಕಿಸಬಹುದು.

ಈ ಅಂಕಣದ ಹಿಂದಿನ ಬರೆಹಗಳು:
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

 

MORE NEWS

ಬಾರತೀಯ ಇಂಗ್ಲೀಶು

07-07-2024 ಬೆಂಗಳೂರು

"ಹತ್ತೊಂಬತ್ತನೆ ಶತಮಾನದಲ್ಲಿ ಯುರೋಪಿಗೆ ಮತ್ತು ತುಸು ಕಾಲದ ನಂತರ ಅಮೆರಿಕಾಕ್ಕೆ ವಿದ್ಯಾಬ್ಯಾಸಕ್ಕೆ ಜಗತ್ತಿನ ವಿವಿ...

ತ್ರಿಕೋನಾಸನ ಹಾಗೂ ಪರಿವೃತ್ತ ತ್ರಿಕೋನಾಸನ

03-07-2024 ಬೆಂಗಳೂರು

"ತ್ರಿಕೋನಾಸನವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್...

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು

30-06-2024 ಬೆಂಗಳೂರು

"ಕೆ.ಪಿ.ಸಿ.ಸಿ. ಕಚೇರಿಯ ಈ ಸಭೆಯ ಕುರಿತು ಪತ್ರಿಕೆಗಳಲ‌್ಲಿ ಮರುದಿನ ಫೋಟೋ ಸಮೇತ ಸಂಕ್ಷಿಪ್ತ ಸುದ್ದಿ ಪ್ರಕಟವ...