Date: 16-02-2021
Location: .
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜರ್ಮನಿಯ ದೃಶ್ಯ ಕಲಾವಿದೆ ರೆಬೆಕಾ ಹಾರ್ನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದೆ: ರೆಬೆಕಾ ಹಾರ್ನ್ (Rebecca Horn)
ಜನನ: 24 ಮಾರ್ಚ್, 1944
ಶಿಕ್ಷಣ: ಯೂನಿವರ್ಸಿಟಿ ಆಫ್ ಫೈನ್ ಆರ್ಟ್ಸ್, ಹಾಂಬರ್ಗ್
ವಾಸ: ಬರ್ಲಿನ್, ಜರ್ಮನಿ; ಪ್ಯಾರಿಸ್, ಫ್ರಾನ್ಸ್.
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಬಾಡಿ ಇನ್ಸ್ಟ್ರುಮೆಂಟ್ಸ್, ಸಿನಿಮಾ, ಚಿತ್ರಗಳು, ಕವನ, ಕೈನೆಟಿಕ್ ಶಿಲ್ಪಗಳು, ಸ್ಥಳ ನಿರ್ದಿಷ್ಟ ಇನ್ಸ್ಟಾಲೇಷನ್‌ಗಳು
ರೆಬೆಕಾ ಹಾರ್ನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ರೆಬೆಕಾ ಹಾರ್ನ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಮನುಷ್ಯನ ಭಾವನೆಗಳು, ಬಯಕೆಗಳು ಮತ್ತು ಭಯಗಳನ್ನು ವ್ಯಕ್ತಿಗತ ಮತ್ತು ಸಮಷ್ಟಿಯ ನೆಲೆಗಳಿಂದ ನೋಡುವ ರೆಬೆಕಾ ಹಾರ್ನ್, ದೇಹದ ಪರಿಧಿಗಳಿಗೂ ಮತ್ತು ಸುತ್ತಲಿನ ಅವಕಾಶಕ್ಕೂ ನಡುವೆ ಸಂತುಲನದ ಅನ್ವೇಷಣೆಯಲ್ಲಿ ತಮ್ಮ ಕಲಾಕೃತಿಗಳನ್ನು ತೊಡಗಿಸುತ್ತಾರೆ. ಒಂದು ಸಮಸ್ಯೆ ಎದುರಾದಾಗ, ಅದಕ್ಕೊಂದು ಚಿಕ್ಕ ತೂತು ಕೊರೆದು, ಅದು ಹೊರಬರುವಂತೆ ಮಾಡುವುದು ಮತ್ತು ಅದು ಚರ್ಚೆಗೊಳಗಾಗುವಂತೆ ಮಾಡುವುದು ತನ್ನ ಉದ್ದೇಶ; ಹೆಚ್ಚಿನವರು ತಮ್ಮ ಮನಸ್ಸಿನ ಬಂಧಿಗಳು ಎನ್ನುತ್ತಾರೆ ಆಕೆ. ಮನುಷ್ಯನ ಏಕಾಕಿತನ ಮತ್ತು ಅದೇ ಮನುಷ್ಯರು ಸಮೂಹವಾಗಿ ಸಂವಹನದ ಸಾಧ್ಯತೆಗಳನ್ನು ಅರಸುವ ಬಗ್ಗೆ ಕುತೂಹಲ ರೆಬೆಕಾ ಅವರ ಕಲಾಕೃತಿಗಳ ಮೂಲ ಸೆಲೆ.
ಎರಡನೇ ಮಹಾಯುದ್ಧ ಕಾಲದ ಜರ್ಮನಿಯಲ್ಲಿ ಜನಿಸಿದ ರೆಬೆಕಾ ಅವರ ತಂದೆ ಕೈಗಾರಿಕೋದ್ಯಮಿ. ಯುದ್ಧದ ಬಳಿಕ ದ್ವೇಷಕ್ಕೀಡಾದ ಜರ್ಮನಿಯ ದುಗುಡ ಮತ್ತು ತನ್ನ ತಂದೆ ಹೇಳುತ್ತಿದ್ದ ಫ್ಯಾಂಟಸಿಯ ಕತೆಗಳಿಂದ ಅತಿ ಪ್ರಭಾವಿತರಾಗಿದ್ದರು. ಬಾಲ್ಯದ ಅವರ ಈ ಏಕಾಕಿತನಕ್ಕೆ ಒದಗಿದ್ದು ಅವರನ್ನು ಮನೆಯಲ್ಲಿ ನೋಡಿಕೊಳ್ಳುತ್ತಿದ್ದ ರೊಮಾನಿಯಾದ ಹೆಂಗಸು. ಆಕೆ ರೆಬೆಕಾಗೆ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದರು; ಆಕೆಯ ಬದುಕು ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಲಿಕೆಯ ವೇಳೆ, ಇಕನಾಮಿಕ್ಸ್ ಕಲಿಯಲೆಂದು ಕಾಲೇಜಿಗೆ ಸೇರಿದರೂ, ಅದನ್ನು ಬಿಟ್ಟು ಕಲೆಯಲ್ಲಿ ಆಸಕ್ತಿ ತಳೆದ ರೆಬೆಕಾ, 1963ರಲ್ಲಿ ಕಲಾ ಕಾಲೇಜು ಸೇರಿದರು ಆದರೆ ಅವರ ಬದುಕಿನಲ್ಲಿ ಅನಿರೀಕ್ಷಿತ ಘಟನೆಯೊಂದು ಘಟಿಸಿಹೋಯಿತು.
ಕಾಲೇಜಿನಲ್ಲಿ ಒಂದು ವರ್ಷ ಕಳೆಯುವ ಹೊತ್ತಿಗೆ ದೊಡ್ಡ ಗಾತ್ರದ ಫೈಬರ್‌ಗ್ಲಾಸ್, ಪಾಲಿಯೆಸ್ಟರ್ ಸೂಕ್ಷ್ಮ ನಾರು ಬಳಸಿ ಶಿಲ್ಪಗಳನ್ನು ರಚಿಸುತ್ತಿದ್ದಾಗ, ಅದರ ವಿಷಾಂಶ ಆಕೆಯ ಶ್ವಾಸಕೋಶಗಳಿಗೆ ಸೇರಿ, ಆಕೆ ಮುಂದಿನ ಐದಾರು ವರ್ಷಗಳನ್ನು ಹಾಸಿಗೆಯಲ್ಲಿ, ಏಕಾಕಿಯಾಗಿ ಕಳೆಯಬೇಕಾಯಿತು. ಅಲ್ಲಿಂದ ಸುಧಾರಿಸಿಕೊಂಡು ಹೊರಬರುವ ವೇಳೆಗೆ, ಆಕೆಯ ಹೆತ್ತವರು ಗತಿಸಿಹೋದದ್ದರಿಂದ ಆಕೆ ಮತ್ತೆ ಏಕಾಕಿಯಾಗುವಂತಾಯಿತು.
ಆಸ್ಪತ್ರೆಯ ಹಾಸಿಗೆಯಲ್ಲಿ ಏಕಾಕಿತನ ಆಕೆಯಲ್ಲಿ ತನ್ನ ದೇಹದ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಕಲ್ಪನೆಯನ್ನು ಮೂಡಿಸಿತು. Arm Extensions (1968), Unicorn (1970-72) ಆ ಅವಧಿಯಲ್ಲಿ ಆಕೆಯ ಕಲಾಕೃತಿಗಳು. 1972ರಲ್ಲಿ ಡಾಕ್ಯುಮೆಂಟಾ ಕಲಾಪ್ರದರ್ಶನದ ಮೂಲಕ ಬೆಳಕಿಗೆ ಬಂದು ಜಗತ್ತಿನ ಗಮನ ಸೆಳೆದ ರೆಬೆಕಾ, ಅದಾದ ಬಳಿಕ ಅಮೆರಿಕದಲ್ಲಿ ಸ್ವಲ್ಪ ಕಾಲ ಇದ್ದರು. ತನ್ನ ಶಿಲ್ಪಗಳ ಜೊತೆಜೊತೆಗೆ ಅವನ್ನೆಲ್ಲ ಬಳಸಿಕೊಂಡು ಸಿನಿಮಾಗಳನ್ನೂ ಅವರು ನಿರ್ಮಿಸಿದರು. The Gigolo - Der Eintänzer (1978) , Buster's Bedroom (1991) ಆ ಅವಧಿಯಲ್ಲಿ ನಿರ್ಮಾಣಗೊಂಡವು. 60-70ರ ದಶಕಗಳಲ್ಲಿ ಫೆಮಿನಿಸಂನ ಎರಡನೇ ಅಲೆಯ ವೇಳೆ ದೇಹವನ್ನು ಅನ್ವೇಷಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಕೊಂಡ ಕಲಾವಿದರಲ್ಲಿ ರೆಬೆಕಾ ಗಮನಾರ್ಹರು.
80ರ ದಶಕದಲ್ಲಿ ಮತ್ತೆ ಯುರೋಪಿಗೆ ಹಿಂದಿರುಗಿದ ರೆಬೆಕಾ, ಆ ಬಳಿಕ ಸ್ಥಳ ನಿರ್ದಿಷ್ಟ ಇನ್ಸ್ಟಾಲೇಷನ್‌ಗಳು ಮತ್ತು ಯಂತ್ರಗಳನ್ನೊಳಗೊಂಡ ಇನ್ಸ್ಟಾಲೇಷನ್‌ಗಳನ್ನು ರಚಿಸಿದರು. ಆಕೆಯ ಇನ್ಸ್ಟಾಲೇಷನ್ ಗಳು ತಮ್ಮ ಪುನರಾವರ್ತನೆಯ ಚಲನೆಗೆ ತಂತ್ರಜ್ಞಾನದ ನಿಖರತೆಯನ್ನು ಬಳಸುತ್ತವೆ. ಬುದ್ಧಿವಂತ ಯಂತ್ರಗಳು ಮನುಷ್ಯರನ್ನು ಆಳುವುದು ಸಂಭಾವ್ಯ ಎನ್ನುವ ಸಂದರ್ಭದಲ್ಲಿ ರೆಬೆಕಾ ಅವರ ಯಂತ್ರಗಳು ಮಾನವ ಕೇಂದ್ರಿತ, ಆತ್ಮ ಸಹಿತ ಅನ್ನಿಸುತ್ತವೆ. “My machines are not washing machines or cars. They have a human quality and they must change. They get nervous and must stop sometimes. If a machine stops, it doesn’t mean it’s broken. It’s just tired. The tragic or melancholic aspect of machines is very important to me. I don’t want them to run forever. It’s part of their life that they must stop and faint.” – (Rebecca Horn, "The Bastille Interviews II, Paris 1993) ಅವು ಆಟಿಕೆಗಳಲ್ಲ, ಬದಲಾಗಿ ಮನುಷ್ಯನ ಒಳಗನ್ನು ಅನ್ವೇಷಿಸುತ್ತವೆ. ಇವುಗಳಲ್ಲಿ ಹಲವು ಕಲಾಕೃತಿಗಳು ತಮ್ಮ ರೂಪ ಮತ್ತು ಸ್ಥಾನಗಳ (ಅಂದರೆ ಪ್ರತಿಷ್ಠಾಪನೆಗೊಂಡ ಸ್ಥಳದ ನೆಲೆಯಲ್ಲಿ) ಕಾರಣದಿಂದಾಗಿ ನಾಜಿ ಜರ್ಮನಿಗೆ ಅವರ ಪ್ರತಿಕ್ರಿಯೆಯ ರೂಪದಲ್ಲಿದ್ದುದರಿಂದ ಸಾಮಾಜಿಕವಾಗಿ-ರಾಜಕೀಯ ನೆಲೆಯಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿವೆ.
ಹಾಲೊಕಾಸ್ಟ್‌ಗೆ ಪ್ರತಿಕ್ರಿಯಿಸಿದ ಜರ್ಮನ್ ಕಲಾವಿದರಾದ ಜೋಸೆಫ್ ಬಾಯ್ಸ್, ಅನ್ಸೆಲ್ಮ್ ಕೀಫರ್ ಅವರ ಸಾಲಿನಲ್ಲಿ ಮಹತ್ವದ ಕಲಾವಿದೆಯಾಗಿ ರೆಬೆಕಾ ಪರಿಗಣಿತರಾಗುತ್ತಾರೆ.
ರೆಬೆಕಾ ಹಾರ್ನ್ ಕುರಿತ ಬಿಬಿಸಿ ಚಿತ್ರ:
ನೇಪಲ್ಸ್‌ನಲ್ಲಿ ರೆಬೆಕಾ ಹಾರ್ನ್:
ರೆಬೆಕಾ ಹಾರ್ನ್ ಅವರ Concert for Anarchy (1990)
ರೆಬೆಕಾ ಹಾರ್ನ್ ಅವರ El Rio de la luna, (2019), Installation view at Tinguely Museum, Basel
ರೆಬೆಕಾ ಹಾರ್ನ್ ಅವರ High Moon (1991)
ರೆಬೆಕಾ ಹಾರ್ನ್ ಅವರ 'Light imprisoned in the belly of whale' (2002)
ರೆಬೆಕಾ ಹಾರ್ನ್ ಅವರ Messkasten, (1970) Photograph, Staatsgalerie Stuttgart.
ರೆಬೆಕಾ ಹಾರ್ನ್ ಅವರ Überströmer, (1970) Tate Collection, London.
ರೆಬೆಕಾ ಹಾರ್ನ್ ಅವರ Overflowing blood machine, (1970) Tate Collection, London.
ರೆಬೆಕಾ ಹಾರ್ನ್ ಅವರ Rebecca Horn, Weisser Körperfächer, (1972)
ರೆಬೆಕಾ ಹಾರ್ನ್ ಅವರ Rebecca-Horn-Butterfly-Sculpture (2000)
ರೆಬೆಕಾ ಹಾರ್ನ್ ಅವರ Spiriti di Madreperla, temporary art installation in Piazza del Plebiscito in Naples (2002)
ರೆಬೆಕಾ ಹಾರ್ನ್ ಅವರ Tower of the nameless (1994)
ರೆಬೆಕಾ ಹಾರ್ನ್ ಅವರ Unicorn (1970-72)
ಈ ಅಂಕಣದ ಹಿಂದಿನ ಬರೆಹಗಳು:
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.