ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್

Date: 22-06-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ನ್ಯೂಯಾರ್ಕ್ ಮೂಲದ ಪೇಂಟಿಂಗ್ ಹಾಗೂ ಗ್ರಾಫಿಕ್ಸ್ ಕಲಾವಿದ ಮಿಲ್ಟನ್ ಅರ್ನೆಸ್ಟ್ ರಾಷನ್‌ಬರ್ಗ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಮಿಲ್ಟನ್ ಅರ್ನೆಸ್ಟ್ ರಾಷನ್‌ಬರ್ಗ್  (Milton Ernest Rauschenberg) 
ಜನನ: 22 ಅಕ್ಟೋಬರ್, 1925 
ಮರಣ: 12 ಮೇ 2008 
ಶಿಕ್ಷಣ: ಜೂಲಿಯಾನ್ ಅಕಾಡೆಮಿ, ಫ್ರಾನ್ಸ್; ಬ್ಲ್ಯಾಕ್ ಮೌಂಟೇನ್ ಕಾಲೇಜ್, ನಾರ್ಥ್ ಕೆರೊಲಿನಾ; ಆರ್ಟ್ ಸ್ಟುಡೆಂಟ್ಸ್ ಲೀಗ್, ನ್ಯೂಯಾರ್ಕ್  
ವಾಸ: ನ್ಯೂಯಾರ್ಕ್; ಕ್ಯಾಪ್ಟಿವಾ ಐಲಂಡ್, ಫ್ಲೋರಿಡಾ 
ಕವಲು: ನಿಯೊ-ದಾದಾಯಿಸಂ 
ವ್ಯವಸಾಯ: ಅಸ್ಸೆಂಬ್ಲೇಜ್; ಪೇಂಟಿಂಗ್; ಗ್ರಾಫಿಕ್ಸ್

ರಾಬರ್ಟ್ ರಾಷನ್‌ಬರ್ಗ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ರಾಬರ್ಟ್ ರಾಷನ್‌ಬರ್ಗ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:  

ಆಬ್‌ಸ್ಟ್ರಾಕ್ಟ್ ಎಕ್ಸ್‌ಪ್ರೆಷನಿಸಂ ಉತ್ತುಂಗದಲ್ಲಿದ್ದ ಕಾಲದಲ್ಲಿ ಕಲೆ ಮತ್ತು ಕಲೆಯಲ್ಲಿ ಕಲಾವಿದನ ಪಾತ್ರದ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಿ, ಸಾಂಪ್ರದಾಯಿಕ ಪೇಂಟಿಂಗ್‌ಗಳಿಗೂ ದೈನಂದಿನ ಬಳಕೆಯ ಜನಪ್ರಿಯ ವಸ್ತುಗಳಿಗೂ ನಡುವೆ ಸಂಬಂಧ ಕಲ್ಪಿಸಿದ್ದಲ್ಲದೆ ಕಲೆ-ಬದುಕಿನ ನಡುವೆ ಸಂಚಾರೀ ಭಾವವನ್ನು ನೋಡುಗರಲ್ಲೂ ರೂಪಿಸಿದ ಸಾಧನೆ ರಾಷನ್‌ಬರ್ಗ್ ಅವರದು. ಕಲೆಯ ವಸ್ತುಗಳು ಮತ್ತು ವಿಧಾನಗಳಲ್ಲಿ ಮೂಲಭೂತ ಬದಲಾವಣೆಗಳನ್ನು ತಂದದ್ದಕ್ಕಾಗಿ ಅವರು ಅಮೆರಿಕದ ಅತ್ಯಂತ ಪ್ರಭಾವೀ ಕಲಾವಿದರಲ್ಲೊಬ್ಬರು ಎಂದು ಪರಿಗಣಿತರಾಗಿದ್ದಾರೆ. 

ಕಲಾಕೃತಿಗಳ ಅರ್ಥಗೃಹಿಕೆಯನ್ನು ಸಂಪೂರ್ಣವಾಗಿ ನೋಡುಗರಿಗೆ ಬಿಟ್ಟು, ಸಿದ್ಧ-ಚಿರಪರಿಚಿತ ವಸ್ತುಗಳು ಮತ್ತು ಚಿತ್ರಗಳ ಜೋಡಣೆಯ ಮೂಲಕವೇ ಕಲಾಕೃತಿಗಳನ್ನು ರಚಿಸಿ, ಆ ಜೋಡಣೆಗಳಿಗೆ ಪೂರ್ವನಿರ್ಧರಿತ ಸ್ವರೂಪವನ್ನೂ ಇರಿಸದೆ ಅವುಗಳ ಮೂಲಕವೇ ಕಲಾಕೃತಿಯನ್ನು ಧ್ವನಿಪೂರ್ಣಗೊಳಿಸುವುದು ರಾಷನ್‌ಬರ್ಗ್ ಕಲಾಕೃತಿಗಳ ಹೆಚ್ಚುಗಾರಿಕೆ. 

ಟೆಕ್ಸಾಸ್‌ನ ರಿಫೈನರಿ ನಗರ ಪೋರ್ಟ್ ಅರ್ಥರ್‌ನಲ್ಲಿ ತೈಲ ರಿಫೈನರಿ ಉದ್ಯೋಗಿ ತಂದೆ-ತಾಯಿಯರ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಾಷನ್‌ಬರ್ಗ್ ಅವರ ಅಸ್ಸೆಂಬ್ಲೇಜ್‌ಗೆ ಮೂಲ ಪ್ರೇರಣೆ ಅವರ ತಾಯಿ ಮಾಡುತ್ತಿದ್ದ ಕತ್ತರಿಸಲಾದ ಬಟ್ಟೆ ಪೀಸ್‌ಗಳನ್ನು ಜೋಡಿಸಿ ಮಾಡಿದ ಉಡುಪುಗಳು. ಬಾಲ್ಯದಲ್ಲೇ ಗೆರೆಗಳ ಮೇಲೆ ಒಳ್ಳೆಯ ಹಿಡಿತ ಇದ್ದ ರಾಷನ್‌ಬರ್ಗ್ ಮೊದಲ ಆಸಕ್ತಿ ಇದ್ದುದು ಇಗರ್ಜಿಯಲ್ಲಿ ಕೆಲಸ ಮಾಡುವ ಬಗ್ಗೆ. ಆದರೆ ಅಲ್ಲಿ ನೃತ್ಯಕ್ಕೆ ಪ್ರೋತ್ಸಾಹ ಇಲ್ಲದಿದ್ದುದರಿಂದ ರಾಷನ್‌ಬರ್ಗ್‌ಗೆ ನಿರಾಸೆ ಆಯಿತು. ಅಲ್ಲಿಂದ ಫಾರ್ಮಕಾಲಜಿ ಕಲಿಯಲು ಹೋದದ್ದೂ ವಿಫಲವಾಯಿತು. ಅಂತಿಮವಾಗಿ ಕಾನ್ಸಾಸ್‌ನಲ್ಲಿ ಕಲಾ ಅಭ್ಯಾಸ ಆರಂಭಿಸಿದ ರಾಷನ್‌ಬರ್ಗ್, ಹೆಚ್ಚುವರಿ ಅಭ್ಯಾಸಕ್ಕಾಗಿ ಫ್ರಾನ್ಸಿನ ಜೂಲಿಯಾನ್ ಅಕಾಡೆಮಿಗೆ ತೆರಳುತ್ತಾರೆ. ಅಲ್ಲಿಂದ ಹಿಂದಿರುಗಿದ ಬಳಿಕ, ವೃತ್ತಿಪರ ಕಲಾಭ್ಯಾಸ ಆರಂಭಿಸಿದ ರಾಷನ್‌ಬರ್ಗ್, ಪ್ಯಾರಿಸ್‌ನಲ್ಲಿ ಪರಿಚಿತರಾದ ಸೂಸನ್ ವೇಲ್ ಅವರೊಂದಿಗೆ ಮದುವೆ ಆಗುತ್ತಾರೆ. ಆದರೆ ಮೂರೇ ವರ್ಷಗಳಲ್ಲಿ ವಿಚ್ಛೇದನ ಪಡೆಯುತ್ತಾರೆ. ರಾಷನ್‌ಬರ್ಗ್ ಗೆ ಸಹಕಲಾವಿದರಾದ ಸೈ ತೋಂಬ್ಲಿ, ಜಸ್ಪರ್ ಜೋನ್ಸ್, ಮೊದಲಾದವರೊಂದಿಗೆ ಸಲಿಂಗ ಸಂಬಂಧಗಳಿದ್ದವು. 

1953ರಲ್ಲಿ ಅವರ White Paintings ಸರಣಿ ಮೊದಲ ಬಾರಿಗೆ ಸಾರ್ವಜನಿಕರ ಗಮನ ಸೆಳೆಯಿತು. ವಿವಾಹ ವಿಚ್ಛೇದನದ ಬಳಿಕ ಸಾಕಷ್ಟು ಪ್ರವಾಸ ಮಾಡಿದ ರಾಷನ್‌ಬರ್ಗ್, ಆ ಬಳಿಕ 1953ರಲ್ಲಿ ಮೊದಲ ಬಾರಿಗೆ Red series ಸರಣಿಯಲ್ಲಿ ಲಭ್ಯ-ಜನಪ್ರಿಯ ವಸ್ತುಗಳನ್ನು ಬಳಸಿದರು. ಈ ನಡುವೆ ಜಸ್ಪರ್ ಜೋನ್ಸ್ ಜೊತೆ ವಿರಸದ ಬಳಿಕ 60ರ ದಶಕದಲ್ಲಿ ರಾಷನ್‌ಬರ್ಗ್ ತನಗೆ ನೃತ್ಯದಲ್ಲಿ ಆಸಕ್ತಿ ಇದ್ದುದರಿಂದ, ಸಂಗೀತ-ನಾಟಕ ಸಂಸ್ಥೆಗಳ ಜೊತೆಗೂ, ಪ್ರಿಂಟ್ ಸ್ಟುಡಿಯೊಗಳ ಜೊತೆಗೂ ಸಕ್ರಿಯವಗಿದ್ದರು. ಆದರೆ, ಈ ವೇಳೆಗೆ ಕಲಾವಿದರಾಗಿ ಅವರನ್ನೂ ಪ್ರಸಿದ್ಧಿ ಅರಸಿ ಬಂದಿತ್ತು. Canyon (1959), Monogram(1959), A Modern Inferno (1965), Stoned Moon (1969-70), Spreads (1975-82), Scales series (1977-81), 1/4 Mile or 2 Furlong Piece (1981-98) ಅವರ ಪ್ರಮುಖ ಕಲಾಕೃತಿಗಳು. 

2001ರ ಬಳಿಕ ಸೊಂಟದ ಮೂಳೆ ಮುರಿತ ಮತ್ತು ಕರುಳಿನಲ್ಲಿ ತೊಂದರೆ, ಲಕ್ವಾ ಮೊದಲಾದ ತೊಂದರೆಗಳಿಂದ ಬಳಲಿದ ರಾಷನ್‌ಬರ್ಗ್, ಲಕ್ವಾದಿಂದ ಬಲಭಾಗ ಬಿದ್ದುಹೋಗಿದ್ದರೂ, ಎಡ ಕೈಯಿಂದ ಕಲಾಕೃತಿಗಳನ್ನು ರಚಿಸುತ್ತಿದ್ದರು. ಅವರ ಗೆಳೆಯ ಡಾರಿಲ್ ಪೊಟೊರ್ಫ್  ಅವರ ಕೊನೆಗಾಲದಲ್ಲಿ ಅವರನ್ನು ನೋಡಿಕೊಂಡರು. ಮಾರುಕಟ್ಟೆಯಲ್ಲಿ ಅವರು ಬಹಳ ಯಶಸ್ವೀ ಕಲಾವಿದರಾಗಿದ್ದುದರಿಂದ ಇಂದಿಗೂ ಅವರ ಇಪ್ಪತ್ತು ಎಕರೆ ಎಸ್ಟೇಟಿನಲ್ಲಿ ಕಲಾಚಟುವಟಿಕೆಗಳು, ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತಿದೆ. 

ತನ್ನ ಕಲಾ ಅಭ್ಯಾಸದ ಬಗ್ಗೆ ರಾಷನ್‌ಬರ್ಗ್ ಸಂದರ್ಶನವೊಂದರಲ್ಲಿ ಹೇಳಿದ್ದು ಹೀಗೆ: “I usually work in a direction until I know how to do it, then I stop, At the time that I am bored or understand — I use those words interchangeably — another appetite has formed. A lot of people try to think up ideas. I’m not one. I’d rather accept the irresistible possibilities of what I can’t ignore.” 

ರಾಬರ್ಟ್ ರಾಷನ್‌ಬರ್ಗ್ ಕುರಿತ ಬಿಬಿಸಿ ಚಿತ್ರ:  

ರಾಬರ್ಟ್ ರಾಷನ್‌ಬರ್ಗ್ ಸಂದರ್ಶನ :  

ಚಿತ್ರ ಶೀರ್ಷಿಕೆಗಳು: 

ರಾಬರ್ಟ್ ರಾಷನ್‌ಬರ್ಗ್ ಅವರ 4-Mile-or-2-Furlong-Piece 

ರಾಬರ್ಟ್ ರಾಷನ್‌ಬರ್ಗ್ ಅವರ Canyon-Robert-Rauschenberg-(1959) 

ರಾಬರ್ಟ್ ರಾಷನ್‌ಬರ್ಗ್ ಅವರ Catydid Express (Scenario), (2002) 

ರಾಬರ್ಟ್ ರಾಷನ್‌ಬರ್ಗ್ ಅವರ Currency (1958) 

ರಾಬರ್ಟ್ ರಾಷನ್‌ಬರ್ಗ್ ಅವರ Modern inferno (1965) 

ರಾಬರ್ಟ್ ರಾಷನ್‌ಬರ್ಗ್ ಅವರ Monogram(1959) 

ರಾಬರ್ಟ್ ರಾಷನ್‌ಬರ್ಗ್ ಅವರ Retroactive1 (1964) 

ರಾಬರ್ಟ್ ರಾಷನ್‌ಬರ್ಗ್ ಅವರ Spreads-4 (1980) 

ರಾಬರ್ಟ್ ರಾಷನ್‌ಬರ್ಗ್ ಅವರ scales series (1981) 

ರಾಬರ್ಟ್ ರಾಷನ್‌ಬರ್ಗ್ ಅವರ Sora Aqua (1973) 

ರಾಬರ್ಟ್ ರಾಷನ್‌ಬರ್ಗ್ ಅವರ stoned moon (1970) 

ರಾಬರ್ಟ್ ರಾಷನ್‌ಬರ್ಗ್ ಅವರ Tribute (anagram), (1995)  

ಈ ಅಂಕಣದ ಹಿಂದಿನ ಬರೆಹಗಳು: 
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್

ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್

ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್

ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್

‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...