Date: 11-06-2023
Location: ಬೆಂಗಳೂರು
''ಕವಿಯೂ ಹೌದು ಕಲಾವಿದರೂ ಹೌದು. ಚುಕ್ಕಿ ಎಂದರೆ ಈ ಕಲಾವಿದನಿಗೆ ಹೇಳಲಾರದ ಪ್ರೀತಿ. ಚುಕ್ಕಿಯಿಂದ ಹಲವಾರು ಮಹನೀಯರ ಚಿತ್ರವನ್ನು ಬಿಡಿಸಿರುವ ಇವರು ಹಿರೇಕೆರೂರು ತಾಲ್ಲೂಕಿನ ಪದ್ಮ ಶ್ರೀ ಸರದಾರ ವೀರನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆ, ಕಚವಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಮೂವತ್ತೇಳು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ,'' ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಸುನಿಲ್ ಕುಮಾರ್ ಜನಾರ್ಧನ್ ಚಿತ್ರಗಾರ್’ ಕಲಾ ಜೀವನವನ್ನು ತೆರೆದಿಟ್ಟಿದ್ದಾರೆ.
ಚಿತ್ರಕಲೆ ಒಂದು ಆಧ್ಯಾತ್ಮ. ಅದರಲ್ಲೂ ಚುಕ್ಕಿಗಳಿಂದ ಚಿತ್ರ ಬಿಡಿಸಲು ಅಪಾರ ಶ್ರದ್ಧೆ, ತಾಳ್ಮೆ ಬೇಕು. ತಮ್ಮ ಚಿತ್ರಕಲೆಯನ್ನು ಧ್ಯಾನದಂತೆ ಮೈಗೂಡಿಸಿಕೊಂಡು ಬಂದಿರುವ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಸುನಿಲ್ ಕುಮಾರ್ ಜನಾರ್ಧನ್ ಚಿತ್ರಗಾರ್ ರವರು ತಿಳುವಳ್ಳಿ ಗ್ರಾಮದವರು. ಕವಿ, ಕಲಾವಿದ ಹಾಗೂ ಶಿಕ್ಷಕರಾಗಿರುವ ಇವರು ಇವರಿಗೆ ಚುಕ್ಕಿ ಇಡುವುದು ಎಂದರೆ ಪ್ರಾಣ. ಇವರು ಇಟ್ಟ ಸಾವಿರಾರು ಚುಕ್ಕಿಗಳು ಕೊನೆಗೆ ಒಂದು ಅದ್ಭುತ ಕಲಾಕೃತಿಯಾಗುವುದಂತೂ ಸಂಭ್ರಮವೇ ಸರಿ ಅನ್ನಿ. ಬನ್ನಿ ಅವರ ಮಾತುಗಳಲ್ಲಿ ಅವರ ಚುಕ್ಕಿಗಳೊಂದಿಗೆ ಪ್ರಯಾಣಿಸೋಣ...
'ನಮ್ಮ ತಂದೆ ಜಗನ್ನಾಥ ರಾವ್, ತಾಯಿ ಪದ್ಮಾವತಿ. ನಾವು ಚಿತ್ರಗಾರ ಮನೆತನದವರು. ಹಾಗಾಗಿ ಕಲೆ ಎನ್ನುವುದು ನಮಗೆ ತಲೆತಲಾಂತರದಿಂದ ಬಂದ ಬಳುವಳಿ. ನನ್ನ ಹುಟ್ಟೂರು ಹಾವೇರಿ ಜಿಲ್ಲೆಯ ಸವಣೂರು. ಕಿನ್ನಾಳ್ ಮನೆತನದ ಪರಂಪರೆಯಿಂದ ಬಂದ ನಾವು ಮಣ್ಣಿನಿಂದ ಗೌರಿ ಗಣಪ, ಕೃಷ್ಣ ಬಲರಾಮ, ಶಾಮ ಇಂತಹ ಹಲವಾರು ಮೂರ್ತಿಗಳನ್ನು ತಯಾರಿ ಮಾಡುತ್ತೇವೆ. ಸಂಪೂರ್ಣವಾಗಿ ನಮ್ಮ ಮನೆತನವೇ ಚಿತ್ರಗಾರ್ ಮನೆತನ. ಆದ್ದರಿಂದ ಸವಣೂರಿನ ನವಾಬ ನಮಗೆ 'ಚಿತ್ರಗಾರ್' ಎನ್ನುವ ನಾಮಧೇಯವನ್ನು ಕೊಟ್ಟ ಎನ್ನುವುದು ನಮ್ಮ ಪುರಾತನರಿಂದ ಬಂದ ಪ್ರತೀತಿ. ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಬಹಳ ಬಡತನವಿತ್ತು. ಸವಣೂರಿನಲ್ಲಿದ್ದ ನಾನು ಪ್ರಾಥಮಿಕ ಶಿಕ್ಷಣವನ್ನು ಅಲ್ಲಿ ಮುಗಿಸಿ ಹುಬ್ಬಳ್ಳಿಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದೆ. ಶಾಲಾದಿನಗಳಲ್ಲಿ ಚಿತ್ರ ಪತ್ರ ಅಂತ ಕರ್ಮವೀರಕ್ಕೆ ನಾನು ಬಿಡಿಸಿದ ಚಿತ್ರಗಳನ್ನು ಕಳಿಸುತ್ತಿದ್ದೆ. ಆಗ ಅಮ್ಮ ನೋಡು ಸುನೀಲ ಪುಸ್ತಕದಲ್ಲಿ ನಿನ್ನ ಚಿತ್ರ ಬಂದಿದೆ ಅಂತ ಸಂಭ್ರಮಪಡುತ್ತಿದ್ದಳು. ನನ್ನವ್ವ ನನ್ನ ಚಿತ್ರಗಳನ್ನು ಬಹಳ ಪ್ರೀತಿಸುತ್ತಿದ್ದಳು. ಎಸ್.ಎಸ್.ಎಲ್.ಸಿ. ನಂತರ ಮುಂದೇನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಹುಬ್ಬಳ್ಳಿಯಲ್ಲಿ ಪೇಪರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಕೆಲಸ ಮಾಡುವಾಗ ಅಂಚೆ ವ್ಯವಹಾರ, ಬ್ಯಾಂಕಿಂಗ್ ವ್ಯವಹಾರ, ಸಾರಿಗೆ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುತ್ತಾ ಬಂದೆ. ಆ ಪೇಪರ್ ಅಂಗಡಿಯಲ್ಲೇ ಕೂತು ಅಲ್ಲಿ ಕುಳಿತವರ ಭಂಗಿಗಳು, ಪ್ರಾಣಿ, ಪಕ್ಷಿ, ಪ್ರಕೃತಿ ಚಿತ್ರಗಳನ್ನು ಬಿಡಿಸುತ್ತಿದ್ದೆ. ಹಾಗಾಗಿ ಎರಡು ವರ್ಷದ DMC (Drawing Master Course) ಗೆ ಸೇರಿಕೊಂಡೆ. ಲಲಿತಕಲಾ ಅಕಾಡೆಮಿಯಿಂದ ಎರಡು ವರ್ಷ ಸ್ಕಾಲರ್ಷಿಪ್ ಬಂತು'.
'ಒಮ್ಮೆ 1983ರಲ್ಲಿ ಚುಕ್ಕಿ ಚಿತ್ರದ ಕಲಾ ಪ್ರದರ್ಶನ ನೋಡಿದ್ದೆ. 1984, 1985ರ ಹೊತ್ತಿಗೆ ನಾನು ಮೊದಲ ಬಾರಿಗೆ ಗಾಂಧೀಜಿಯವರ ಚುಕ್ಕಿ ಚಿತ್ರವನ್ನು ಬಿಡಿಸಿದ್ದೆ. ಅದು ಮೊದಲ ಬಾರಿಗೆ ವೃತ್ತಪತ್ರಿಕೆಯಲ್ಲಿ ಬಂತು. ಆಗ ಪ್ರಾರಂಭವಾದ ಚುಕ್ಕಿ ಚಿತ್ರಗಳ ಪ್ರಯಾಣ ಕರ್ನಾಟಕ ರಾಜ್ಯಾದ್ಯಂತ ನನ್ನನ್ನು ಕರೆದೊಯ್ಯಿತು. ಹಲವಾರು ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಅವರಿಗೆ ನಾನು ಮಾಡಿದ ಚುಕ್ಕಿ ಚಿತ್ರವನ್ನು ಕೊಟ್ಟು ಸಂಭ್ರಮಿಸುವಂತಾಯಿತು. ನಾನೀಗ ರಾಜ್ಯದ ಎಪ್ಪತ್ತೆರಡು ಕವಿಗಳನ್ನು ಭೇಟಿ ಮಾಡಿದ್ದೇನೆ. ವೀರೇಂದ್ರ ಹೆಗ್ಗಡೆ, ಗಂಗೂಬಾಯಿ ಹಾನಗಲ್, ಯು. ಆರ್. ಅನಂತಮೂರ್ತಿ, ಶಿವರಾಮ ಕಾರಂತ, ನಿಸಾರ್ ಅಹಮದ್, ಡಾ. ಸಿದ್ದಲಿಂಗಯ್ಯ, ಅಮೇರಿಕದ ಮಾಜಿ ಅಧ್ಯಕ್ಷ ಬರಾಕ್ ಓಬಾಮ, ಅಬ್ದುಲ್ ಕಲಾಂ, ಸಿದ್ದಗಂಗಾ ಸ್ವಾಮೀಜಿ ಹೀಗೆ ಸಾಕಷ್ಟು ಗಣ್ಯರ ಚುಕ್ಕಿ ಚಿತ್ರಗಳನ್ನು ಬಿಡಿಸಿದ್ದೇನೆ. ನನ್ನ ಈ ಚಿತ್ರಗಳ ಮೂಲಕ ಕೆಲವು ಗಣ್ಯರನ್ನು ಭೇಟಿಯಾಗಿದ್ದೇನೆ. ಒಮ್ಮೆ ಗಂಗೂಬಾಯಿ ಹಾನಗಲ್ ಅವರ ಚಿತ್ರವನ್ನು ಬಿಡಿಸಿದ್ದೆ. ಅದರಲ್ಲಿ ಅವರಿಗೆ ಶೃಂಗೇರಿ ಶಾರದಾದೇವಿಗೆ ತೊಡಿಸುವಂತ ಕಿರೀಟ ತೊಡಿಸಿದ್ದೆ. ಅವರು ಚಿತ್ರದಲ್ಲಿದ್ದ ಆ ಕಿರೀಟವನ್ನು ನೋಡಿ "ನನಗ್ಯಾಕೆ ಕಿರೀಟ ತೊಡಿಸಿದ್ದೀಯಪ್ಪ, ತೊಡಿಸಬಾರದಿತ್ತು" ಅಂದಿದ್ರು ಅಜ್ಜಿ. ನಿಮಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯವರು ಬೆಳ್ಳಿ ಕಿರೀಟ ತೊಡಿಸಬೇಕು ಅಂದಿದ್ರಲ್ಲ ಅವರು ತೊಡಿಸಲಿಲ್ಲ ನಾನು ನನ್ನ ಚಿತ್ರದಲ್ಲಿ ತೊಡಿಸಿದ್ದೇನೆ ಎಂದಾಗ ಅವರು ಭಾವಪರವಶರಾದರ ಆ ಕ್ಷಣ ಮರೆಯಲಾಗದ್ದು. ಇನ್ನು ಒಂದು ವರ್ಷ ಸೇವೆಯ ನಂತರ ನಾನು ನಿವೃತ್ತಿ ಆದಮೇಲೆ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಅವರಿಗೆ ನನ್ನ ಸೇವೆಯನ್ನು ಸಲ್ಲಿಸಬೇಕು. ಆ ಮಕ್ಕಳಿಗೆ ನನ್ನಲ್ಲಿರುವ ಕಲೆಯನ್ನು ಹೇಳಿಕೊಡಬೇಕು. ಕತೆ, ಕಾದಂಬರಿ, ಕವನಗಳಿಗೆ ಅಂದದ ರೇಖಾ ಚಿತ್ರಗಳನ್ನು ಬಿಡಿಸಬಹುದು. ಕಲೆ ಎನ್ನುವುದು ಸಮುದ್ರದ ಹಾಗೆ ಎಷ್ಟು ವಿಸ್ತರಿಸಿದರೂ ಮುಗಿಯುವುದಿಲ್ಲ. ಬಣ್ಣ, ಆಕಾರ, ಅಭಿವ್ಯಕ್ತಿ, ಪ್ರಯತ್ನ, ಸೂಕ್ಷ್ಮಸಂವೇದನೆಯ ಮನಸ್ಸು ಸೇರಿದಾಗ ಒಂದು ಉತ್ತಮ ಚಿತ್ರವಾಗುತ್ತದೆ. ಈ ಎಲ್ಲ ಕೆಲಸಗಳಿಗೂ ನನ್ನ ಶ್ರೀಮತಿ ಮಮತಾ, ಮಗ ವಿನಾಯಕ್ ಚಿತ್ರಗಾರ್ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಪರಿಸರ ಸಂರಕ್ಷಣೆಯ ಚಿತ್ರಕ್ಕೆ ನಾಗೇಶ್ ಹೆಗ್ಗಡೆ, ಸುರೇಶ್ ಹೆಬ್ಳಿಕರ್ ನೇತೃತ್ವದಲ್ಲಿ ರಾಜ್ಯ ಪ್ರಶಸ್ತಿ ಬಂತು. ಜಿಲ್ಲೆ, ತಾಲ್ಲೂಕು ಮಟ್ಟದ ಹಲವಾರು ಸನ್ಮಾನ, ಪ್ರಶಸ್ತಿಗಳು ಬಂದಿವೆ. ಇಂದಿಗೂ 30-35 ವರ್ಷದ ಹಿಂದಿನ ಕಲಾಕೃತಿಗಳನ್ನು ಜೋಪಾನ ಮಾಡಿದ್ದೇನೆ' ಎಂದು ತಮ್ಮ ನೆನಪಿನ ಬುತ್ತಿಯಿಂದ ನೆನಪುಗಳನ್ನು ಹೆಕ್ಕಿ ತೆಗೆದರು.
ರಾಷ್ಟ್ರಪತಿಗಳು, ಮಾಜಿ ಪ್ರಧಾನ ಮಂತ್ರಿಗಳು, ವಾಜಪೇಯಿ, ಮನಮೋಹನ್ ಸಿಂಗ್, ಡಾ. ರಾಜ್ ಕುಮಾರ್ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ಸೇರಿದಂತೆ ಇವರು ಬಿಡಿಸಿರುವ ಚಿತ್ರಗಳು ಎಣಿಕೆಗೆ ಸಿಗಲಾರದಷ್ಟು ಅಗಣಿತವಾಗಿದೆ. ಅಷ್ಟೇ ಅಲ್ಲದೆ ಪರಿಸರ ಜಾಗೃತಿ, ಸ್ವಚ್ಛತಾ ಆಂದೋಲನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಇವರ ಚಿತ್ರಗಳು ಪ್ರದರ್ಶನವನ್ನು ಕಂಡಿವೆ. ಜೊತೆಗೆ ಎಲ್ಲೇ ಸಾಹಿತ್ಯ ಸಮ್ಮೇಳನಗಳು ಜರುಗಿದರೂ ಆ ಸಮ್ಮೇಳನದ ಅಧ್ಯಕ್ಷರ ಚಿತ್ರ ಬಿಡಿಸಿಕೊಂಡು ಅಲ್ಲಿಗೆ ಹಾಜರಿಯಾಗುತ್ತಾರೆ. ಇವರು ರಚಿಸಿದ ಚಿತ್ರಗಳ ಪಟ್ಟಿ ಮಾಡುತ್ತಾ ಹೋದರೆ ಲೆಕ್ಕಕ್ಕೆ ಸಿಗುವುದಿಲ್ಲ. ಇವರು ಕವಿಯೂ ಹೌದು ಕಲಾವಿದರೂ ಹೌದು. ಚುಕ್ಕಿ ಎಂದರೆ ಈ ಕಲಾವಿದನಿಗೆ ಹೇಳಲಾರದ ಪ್ರೀತಿ. ಚುಕ್ಕಿ ಚಿತ್ರ ಮಾತ್ರವಲ್ಲದೇ ತೈಲವರ್ಣ, ಜಲವರ್ಣ, ಮಿಕ್ಸ್ ಮೀಡಿಯಾ ಸೇರಿದಂತೆ ಹಲವು ಪ್ರಕಾರಗಳನ್ನು ಕರಗತ ಮಾಡಿಕೊಂಡಿದ್ದಾರೆ. ಚುಕ್ಕಿಯಿಂದ ಹಲವಾರು ಮಹನೀಯರ ಚಿತ್ರವನ್ನು ಬಿಡಿಸಿರುವ ಇವರು ಹಿರೇಕೆರೂರು ತಾಲ್ಲೂಕಿನ ಪದ್ಮ ಶ್ರೀ ಸರದಾರ ವೀರನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆ, ಕಚವಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಮೂವತ್ತೇಳು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಹಾಗೂ ನೂರಾರು ಮಕ್ಕಳಿಗೆ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಇವರ ಸಾಕಷ್ಟು ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ಐವತ್ತೊಂಭರ ಈ ಇಳಿ ವಯಸ್ಸಿನಲ್ಲೂ ಎಲ್ಲಿಲ್ಲದ ಉತ್ಸಾಹ, ಪಾದರಸದಂತ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ಚುಟುಕು ಸಾಹಿತ್ಯ, ಕವಿತೆಗಳಿಗೆ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಕರಾಗಿರುವಂತಹ ಹಿರಿಯ ಕಲಾವಿದರಾದ ಸುನಿಲ್ ಕುಮಾರ್ ಜೆ ಚಿತ್ರಗಾರ್ ಇವರ ಕಲೆಗೊಂದು ಹೃದಯಪೂರ್ವಕ ನಮನ. ಅವರಿಗೆ ಆ ಭಗವಂತ ಮತ್ತಷ್ಟು ಸೇವೆ ಸಲ್ಲಿಸಲು ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸೋಣ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.