Date: 29-10-2020
Location: ಬೆಂಗಳೂರು
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಆಯೋಜಿಸಿದ್ದ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಸಣ್ಣಕತಾ ಸ್ಪರ್ಧೆಯಲ್ಲಿ ಪತ್ರಕರ್ತ ರಘುನಾಥ ಚ. ಹ. ಅವರ ‘ಗೋರಿ’ ಕತೆಗೆ ಮೊದಲ ಬಹುಮಾನ ಸಂದಿದ್ದು ಪ್ರಶಸ್ತಿಯು 5000 ರೂ. ನಗದು, ಸ್ವರ್ಣ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಬರಹಗಾರ್ತಿ ರೇಣುಕಾ ರಮಾನಂದ ಅವರ ‘ಬಾಳಪಯಣ’ ಕತೆಗೆ ಎರಡನೇ (ಬೆಳ್ಳಿ ಪದಕ) ಬಹುಮಾನ, ಉಪನ್ಯಾಸಕ ಕನಕರಾಜ್ ಆರನಕಟ್ಟೆ ಅವರ ‘ಸ್ಟಾಚ್ಯೂ ಆಫ್ ಲಿಬರ್ಟಿ’ ಕತೆಗೆ ಮೂರನೇ (ಕಂಚಿನ ಪದಕ) ಬಹುಮಾನ ಸಂದಿದೆ. ಪ್ರಶಸ್ತಿಯೂ ಕ್ರಮವಾಗಿ 3,000 ರೂ. ನಗದು ಹಾಗೂ 2,000 ರೂ. ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಇದೇ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಪುಸ್ತಕ ಬಹುಮಾನ, ಸೃಜನೇತರ ಲೇಖಕರ ಕೃತಿಗಳಿಗೆ, ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರ ಸ್ಪರ್ಧೆ ಆಯೋಜಿಸಿದ್ದ ವಿಜೇತರ ಪಟ್ಟಿ ಹೀಗಿದೆ
ಸೃಜನಶೀಲ ವಿಭಾಗ
1. ಯಾಕ ಚಿಂತಿ ಮಾಡತಿದಿ ಎಲೆ ಮನವೇ:ಡಾ. ಲಕ್ಷ್ಮಣ ಕೌಂಟೆ
2. ಪುಲ್ವಾಮಾ : ಶ್ರೀ ಸುಬ್ರಾವ ಕುಲಕರ್ಣಿ, ಕಲಬುರಗಿ
3. ಬೌದ್ಧ ನಾಟಕಗಳು-2 : ಶ್ರೀ ಈಶ್ವರ ಎಂ. ಇಂಗನ್
4. ಮೌನದೊಳಗಿನ ಮಾತು : ಡಾ. ಬಸವರಾಜ ಪೂಜಾರ
5. ಶಾಹಿರಿ ಮತ್ತು ಗಜಲ್‍ಗಳು : ಶ್ರೀ ಭೀಮಶೇನ ಎಂ. ಗಾಯಕವಾಡ
6. ಹಾಣಾದಿ : ಶ್ರೀ ಕಪಿಲ ಪಿ. ಹುಮನಾಬಾದೆ
7. ನೆನಪಿನ ಪಡಸಾಲೆ : ಶ್ರೀ ವಿಜಯಭಾಸ್ಕರ್ ಸೇಡಂ
8. ದಿವ್ಯಾಂಗ ದೀಪ್ತಿ : ಡಾ. ಶಿವರಾಜ ಶಾಸ್ತ್ರಿ ಹೇರೂರು
ಸೃಜನೇತರ
1. ಯಡ್ರಾಮಿ ಸೀಮೆ ಕಥನಗಳು : ಮಲ್ಲಿಕಾರ್ಜುನ ಕಡಕೋಳ
2. ಮೂರು ದೇಶ ನೂರೊಂದು ಅನುಭವ : ಸಿದ್ಧರಾಮ ಹೊನ್ಕಲ್
3. ಪಯಣ : ಶ್ರೀ ವಾದಿರಾಜ ವ್ಯಾಸಮುದ್ರ
ಜಾನಪದ
1. ಜಾನಪದ ದರ್ಪಣ : ಡಾ. ಚಿ.ಸಿ. ನಿಂಗಣ್ಣ
ಜೀವನ ಕಥನ
1. ಬಸವಶ್ರೀ ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ : ಡಾ. ಗಾಂಧೀಜಿ ಸಿ. ಮೊಳಕೇರಿ
2. ಶ್ರೀದತ್ತ ಭಾಗವತ : ಶ್ರೀ ಹಣಮಂತಪ್ಪ ವಲ್ಲೇಪುರೆ
ವಚನ ಸಾಹಿತ್ಯ
1. ಅರಿವೇ ಪ್ರಮಾಣು ಅಕ್ಕನಾಗಮ್ಮ ಜೀವನ ಕಾವ್ಯ : ಮಹಾಂತಪ್ಪ ನಂದೂರ
ವಿಜೇತರಿಗೆ ನವೆಂಬರ್ ಕೊನೆಯ ವಾರದಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ಕಾರ್ಯಸೌಧದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭದಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ 5000/- 3,000/- ಹಾಗೂ 2,000/- ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.
ರಾಜ್ಯಮಟ್ಟದ ವಿಜ್ಞಾನ ಪುಸ್ತಕಕ್ಕೆ ಗೌರವಧನದ ಜೊತೆಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಗುವುದು ಎಂದು ಕಲಬುರಗಿ ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕರಾದ ಎಚ್.ಟಿ. ಪೋತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸ...
ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಧಾರವಾಡ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಕುರ್ತಕೋಟಿ ...
ಲಂಡನ್: ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಕಿರುಪಟ್ಟಿ ಪ್ರಕಟವಾಗಿದ್ದು, ಕನ್ನಡದ ಸಾಹಿತಿ ಬಾನು ಮುಸ್ತಾಕ್...
©2025 Book Brahma Private Limited.