Date: 24-01-2023
Location: ಬೆಂಗಳೂರು
''ಕನ್ನಡಕ್ಕೆ ಸಂಸ್ಕ್ರುತ ಹೆಚ್ಚಿನ ಪದಗಳನ್ನು ಕೊಟ್ಟಿದೆ ಎಂಬ ಸಾಮಾನ್ಯ ತಿಳುವಳಿಕೆ ಇದೆ. ಆದರೆ, ಪ್ರಾಚೀನ ಕಾಲದಲ್ಲಿ ಕನ್ನಡಕ್ಕೆ ಹೆಚ್ಚು ಹೆಚ್ಚು ಪದಗಳನ್ನು ಕೊಟ್ಟಿರುವುದು ಪ್ರಾಕ್ರುತ. ಕನ್ನಡದೊಂದಿಗೆ ಬಹುಕಾಲ ಬಹುಮುಕ ನಂಟನ್ನು ಹೊಂದಿದ್ದ ಬಾಶೆ ಪ್ರಾಕ್ರುತ'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಬೇರೆ ಬಾಶೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ’ ವಿಚಾರದ ಕುರಿತು ಬರೆದಿದ್ದಾರೆ.
ಯಾವುದೆ ಬಾಶೆಯ ಪದಕೋಶದ ಬೆಳವಣಿಗೆಯಲ್ಲಿ ಬೇರೆ ಬಾಶೆಯಿಂದ ಪದಗಳನ್ನು ಪಡೆದುಕೊಳ್ಳುವುದು ಮಹತ್ವದ ಪ್ರಕ್ರಿಯೆ. ಇದರಿಂದ ಬಾಶೆಯ ಪದಕೋಶ ದೊಡ್ಡಪ್ರಮಾಣದಲ್ಲಿ ಹಿಗ್ಗುತ್ತದೆ. ಜಗತ್ತಿನಲ್ಲಿ ಬರಹದ ಮತ್ತು ಸಾಮಾಜಿಕ-ರಾಜಕೀಯ ಬೆಳವಣಿಗೆಯನ್ನು ದಾಕಲಿಸಿದ ಬಹುತೇಕ ಬಾಶೆಗಳ ಪದಕೋಶದಲ್ಲಿ ಬೇರೆ ಬಾಶೆಗಳಿಂದ ಬಂದ ಪದಗಳು ದೊಡ್ಡ ಸಂಕೆಯಲ್ಲಿ ಕಂಡುಬರುತ್ತವೆ. ಇದಕ್ಕೆ ಕನ್ನಡ, ಇಂಗ್ಲೀಶು ಮೊದಲಾದ ಹಲವಾರು ಬಾಶೆಗಳು ಉದಾಹರಣೆ. ಒಂದು ಬಾಶೆ ಹೆಚ್ಚು ಹೆಚ್ಚು ಪದಗಳನ್ನು ಬೇರೆ ಬಾಶೆಗಳಿಂದ ತೆಗೆದುಕೊಂಡಿದ್ದರೆ ಅಶ್ಟು ಮಟ್ಟಿಗೆ ಆ ಬಾಶೆ ಸಮಾಜದ ವಿವಿದ ವಲಯಗಳಲ್ಲಿ ವಿಬಿನ್ನ ಬಾಶೆಗಳ ನಂಟಿನಲ್ಲಿ ಬೆಳವಣಿಗೆಯನ್ನು ಸಾದಿಸಿದೆ ಎಂದು ಹೇಳಬಹುದು. ಇದನ್ನು ಕನ್ನಡ ಮತ್ತು ಕನ್ನಡದೊಂದಿಗೆ ಕಮ್ಮಿ ಎಂದರೂ ನಾಲ್ಕಯ್ದು ಸಾವಿರ ವರುಶಗಳಿಂದ ಬದುಕಿರುವ ಕುಳು ಇಲ್ಲವೆ ಕೊರಚ ಬಾಶೆಯ ಪದಕೋಶವನ್ನು ಹೋಲಿಸಿದಾಗ ತಿಳಿಯುತ್ತದೆ. ಕುಳು, ಕೊರಚ ಇಂತ ಬುಡಕಟ್ಟು ಬಾಶೆಗಳಲ್ಲಿ ಮೂರ‍್ನಾಲ್ಕು ಸಾವಿರ ಪದಗಳಿವೆ ಆದರೆ ಕನ್ನಡದಲ್ಲಿ ಹತ್ತನ್ನೆರಡು ಲಕ್ಶ ಪದಗಳು ಇವೆ. ಇಲ್ಲಿ ಬೇರೆ ಬಾಶೆಗಳಿಂದ ಪದಗಳನ್ನು ಪಡೆದು ಕನ್ನಡ ಪದಕೋಶ ಬೆಳೆದಿರುವ ಸ್ವರೂಪವನ್ನು ಮಾತನಾಡಬಹುದು.
ಕನ್ನಡಕ್ಕೆ ಸಂಸ್ಕ್ರುತ ಹೆಚ್ಚಿನ ಪದಗಳನ್ನು ಕೊಟ್ಟಿದೆ ಎಂಬ ಸಾಮಾನ್ಯ ತಿಳುವಳಿಕೆ ಇದೆ. ಆದರೆ, ಪ್ರಾಚೀನ ಕಾಲದಲ್ಲಿ ಕನ್ನಡಕ್ಕೆ ಹೆಚ್ಚು ಹೆಚ್ಚು ಪದಗಳನ್ನು ಕೊಟ್ಟಿರುವುದು ಪ್ರಾಕ್ರುತ. ಕನ್ನಡದೊಂದಿಗೆ ಬಹುಕಾಲ ಬಹುಮುಕ ನಂಟನ್ನು ಹೊಂದಿದ್ದ ಬಾಶೆ ಪ್ರಾಕ್ರುತ. ಪ್ರಾಕ್ರುತದಿಂದ ಬಂದ ಹಲವಾರು ಇಲ್ಲವೆ ಎಲ್ಲ ಪದಗಳನ್ನು ಆದುನಿಕ ಕಾಲದಲ್ಲಿ ಸಂಸ್ಕ್ರುತದಿಂದ ಬಂದವು ಎಂದು ಕರೆಯುವ ರೂಡಿ ಬೆಳೆದಿದೆ. ಪ್ರಾಕ್ರುತವು ಬದಕಿನ ಮತ್ತು ಸಮಾಜದ ಹಲವು ಆಯಾಮಗಳಲ್ಲಿ ಪದಗಳನ್ನು ಕೊಟ್ಟಿದೆ. ಪ್ರಾಕ್ರುತವು ನಮಗೀಗ ತಿಳಿದಿರುವಂತೆ ಕ್ರಿಸ್ತಪೂರ‍್ವ ಅಯ್ದಾರನೆ ಶತಮಾನದಿಂದ ಕ್ರಿಸ್ತಶಕ ನಾಲ್ಕಯ್ದನೆ ಶತಮಾನದವರೆಗೆ ಕನ್ನಡದ ಜಗತ್ತನ್ನು ಆವರಿಸಿತ್ತು. ಜಯ್ನ, ಬವುದ್ದ ಮೊದಲಾದ ಹಲವು ಮತಪಂತ ಸಂಬಂದಿ, ಸಾಹಿತ್ಯ, ಶಾಸ್ತ್ರ, ಆಡಳಿತ ಮೊದಲಾದ ಹಲವು ವಲಯಗಳಲ್ಲಿ ಪ್ರಾಕ್ರುತದ ಪದಗಳು ಎಗ್ಗಿಲ್ಲದೆ ಕನ್ನಡಕ್ಕೆ ಹರಿದು ಬಂದಿವೆ. ಸಂಸ್ಕ್ರುತಕ್ಕೆ ಸಂಬಂದಿಸಿದ ಬಾಶೆಗಳಾದರೂ ವಿವಿದ ಪ್ರಾಕ್ರುತಗಳು ಸಂಸ್ಕ್ರುತೇತರ ಬಾಶೆಗಳ ಪ್ರಬಾವದಲ್ಲಿಯೆ ರೂಪುಗೊಂಡಿರುವುದರಿಂದ ಇವು ಸಂಸ್ಕ್ರುತದ ಹೊರತಾದ ವಿವಿದ ದೇಶಬಾಶೆಗಳೊಂದಿಗೆ ಹೆಚ್ಚಿನ ನಂಟನ್ನು ತೋರಿಸುತ್ತವೆ.
ಪ್ರಾಕ್ರುತದ ನಂತರ ಕನ್ನಡ ಜಗತ್ತನ್ನು ಸಂಸ್ಕ್ರುತ ಕನ್ನಡವನ್ನು ಆವರಿಸುತ್ತದೆ. ನಮಗೀಗ ತಿಳಿದಿರುವ ಸಾಹಿತ್ಯ, ಶಾಸ್ತ್ರ ಮೊದಲಾದ ವಲಯಗಳನ್ನು ಒಳಗೊಂಡು ಇನ್ನೂ ಹಲವು ವಲಯಗಳಲ್ಲಿ ಸಂಸ್ಕ್ರುತ ಕನ್ನಡದ ಬದುಕಿನಲ್ಲಿ ಮತ್ತು ಸಮಾಜದಲ್ಲಿ ಸೇರಿರುವುದನ್ನು ಕಾಣಬಹುದು. ಬಹುಶಾ ಸಂಸ್ಕ್ರುತದ ತೆಗೆದುಕೊಳ್ಳುವಿಕೆ ಅಯ್ದಾರನೆ ಶತಮಾನಗಳಿಂದ ಹೆಚ್ಚಾಗಿರುವಂತಿದೆ. ಪ್ರಾಕ್ರುತದ ಪದಗಳನ್ನು ಪಡೆದುಕೊಳ್ಳುವಿಕೆಗೆ ಒಗ್ಗಿದ್ದ ಸಮಾಜದಲ್ಲಿ ಸಂಸ್ಕ್ರುತದ ಪದಗಳು ಮೇಲಿನ ಸ್ತರದಿಂದ ಬರಲು ಶುರುವಾದಾಗ ಅದಕ್ಕೆ ವಿರೋದ ವ್ಯಕ್ತವಾಗುತ್ತದೆ. ಮತಪಂತಗಳು, ರಾಜಕೀಯ, ಸಾಮಾಜಿಕ, ಶಾಸ್ತ್ರ, ಸಾಹಿತ್ಯ ಹೀಗೆ ಹತ್ತು ಹಲವು ವಲಯಗಳಲ್ಲಿ ಸಂಸ್ಕ್ರುತದ ಪದಗಳು ಕನ್ನಡದೊಳಗೆ ಸೇರಿಕೊಂಡಿವೆ. ಕ್ರಿಸ್ತಶಕ ಅಯ್ದಾರನೆ ಶತಮಾನದಿಂದ ಬಹುತೇಕ ಹದಿನಾಲ್ಕು-ಹದಿನಯ್ದನೆ ಶತಮಾನಗಳವರೆಗೆ ಸಂಸ್ಕ್ರುತ ದೊಡ್ಡ ಸಂಕೆಯ ಪದಗಳನ್ನು ಕನ್ನಡಕ್ಕೆ ಕೊಟ್ಟಿದೆ. ಆನಂತರ ಆದುನಿಕ ಕಾಲದಲ್ಲಿ
ಮುಕ್ಯವಾಗಿ ಇಪ್ಪತ್ತನೆ ಶತಮಾನದ ನಂತರದಿಂದ ಮತ್ತೊಮ್ಮೆ ಸಂಸ್ಕ್ರುತವು ಕನ್ನಡ ಪದಕೋಶವನ್ನು ತೀವ್ರವಾಗಿ ಬಾದಿಸುವ ಬಾಶೆಯಾಗಿ ಬೆಳೆಯಿತು. ಇಂದಿಗೂ ಹಲವು ವಿದ್ವಾಂಸರು ಕನ್ನಡದಲ್ಲಿ ಹೊಸಪದಗಳನ್ನು ಹುಟ್ಟಿಸುವ ಅವಶ್ಯಕತೆ ಬಂದಾಗ ಸಂಸ್ಕ್ರುತದ ಪದಗಳನ್ನು ಬಳಸುತ್ತಾರೆ ಇಲ್ಲವೆ ಸಂಸ್ಕ್ರುತದ ಪದಗಳನ್ನು ಹುಟ್ಟಿಸುತ್ತಾರೆ. ಇಂದು ಸಾಂಪ್ರದಾಯಿಕ, ದಾರ‍್ಮಿಕ ಮತ್ತು ಹಲವು ಕಾರಣಕ್ಕೆ ಸಂಸ್ಕ್ರುತ ಪ್ರತಿಶ್ಟೆಯ ಬಾಶೆಯಾಗಿ ಕಂಡುಬರುತ್ತದೆ.
ಕನ್ನಡ ಮಾತುಗರ ಬದುಕು ಮತ್ತು ಸಮಾಜವನ್ನು ಪ್ರಾಕ್ರುತ-ಸಂಸ್ಕ್ರುತಗಳ ನಂತರ ಪರ‍್ಶಿಯನ್ ದೊಡ್ಡಪ್ರಮಾಣದಲ್ಲಿ ಪ್ರಬಾವಿಸಿದೆ. ಇದರೊಟ್ಟಿಗೆ ಅರಾಬಿಕ್. ಅರಾಬಿಕ್ ಬಾಶೆ ದಾರ‍್ಮಿಕ, ಸಾಹಿತ್ಯ, ಶಿಕ್ಶಣ, ಆಡಳಿತ ಮೊದಲಾದ ಹಲವು ವಲಯಗಳಲ್ಲಿ ದೊಡ್ಡ ಸಂಕೆಯ ಪದಗಳನ್ನು ಕೊಟ್ಟಿದೆ. ಇದರೊಟ್ಟಿಗೆ ಪರ‍್ಶಿಯನ್ ಕೂಡ. ಆಡಳಿತ, ನ್ಯಾಯಾಂಗ ಒಳಗೊಂಡು ಕನ್ನಡಿಗರ ಬದುಕಿನ ಮತ್ತು ಸಮಾಜದ ಬಹುತೇಕ ವಲಯಗಳನ್ನು ವ್ಯಾಪಕವಾಗಿ ಪರ‍್ಶಿಯನ್ ಪದಗಳು ತುಂಬಿಕೊಂಡಿವೆ. ಒಂದು ಕುತೂಹಲದ ವಿಚಾರವೆಂದರೆ ಅರಾಬಿಕ್ ಮತ್ತು ಪರ‍್ಶಿಯನ್ ಇವು ಬರಹದ ಕನ್ನಡದಲ್ಲಿ ಕಡಿಮೆ ಕಂಡುಬರುತ್ತವೆ. ಸಂಸ್ಕ್ರುತ ಪದಗಳು ಬರಹದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಆದುನಿಕ ಕಾಲದಲ್ಲಿ ಇಂಗ್ಲೀಶು ಕನ್ನಡದ ಪದಕೋಶವನ್ನು ದೊಡ್ಡಪ್ರಮಾಣದಲ್ಲಿ ಆವರಿಸಿರುವ ಇನ್ನೊಂದು ಬಾಶೆ. ಇಂಗ್ಲೀಶು ಆದುನಿಕತೆ ಕಾಲದಲ್ಲಿ ಬದುಕಿನ ಮತ್ತು ಸಮಾಜದ ಬಹುತೇಕ ವಲಯಗಳನ್ನು ಆವರಿಸಿಕೊಂಡಿದೆ. ಆದುನಿಕತೆಯ ಜೊತೆಜೊತೆಗೆನೆ ಇಂಗ್ಲೀಶು ಬಂದದ್ದರಿಂದ ಆದುನಿಕತೆಯ ಎಲ್ಲ ವಲಯಗಳಲ್ಲಿ ಇಂಗ್ಲೀಶಿನ ಪದಗಳು ಒಡನೆಯೆ ಕನ್ನಡಕ್ಕೆ ಸೇರಿಕೊಂಡಿವೆ. ಶಿಕ್ಶಣ, ಆಡಳಿತ, ತಂತ್ರಗ್ನಾನ ಮೊದಲಾಗಿ ಹಲವು ವಲಯಗಳಲ್ಲಿ ಇಂಗ್ಲೀಶು ವ್ಯಾಪಕವಾಗಿ ಪದಗಳನ್ನು ಕೊಟ್ಟಿದೆ. ಈ ಮೊದಲು ಕನ್ನಡ ಪದಕೋಶವನ್ನು ಬಹುದೊಡ್ಡ ಪ್ರಮಾಣದಲ್ಲಿ ಪ್ರಬಾವಿಸಿದ ಪ್ರಾಕ್ರುತ-ಸಂಸ್ಕ್ರುತ ಮತ್ತು ಅರಾಬಿಕ್-ಪರ‍್ಶಿಯನ್ ಬಾಶೆಗಳಿಗೆ ಬಿನ್ನವಾಗಿ ಇಂಗ್ಲೀಶು ಪದಗಳು ಬರಹದಲ್ಲಿ ಮತ್ತು ಬಳಕೆಯಲ್ಲಿ ಸಮಸಮನಾಗಿ ಸೇರಿಕೊಂಡಿವೆ.
ಈ ಬಾಶೆಗಳ ಹೊರತಾಗಿ ಕನ್ನಡವನ್ನು ಪ್ರಾಕ್ರುತಿಕವಾಗಿ ಸುತ್ತುವರೆದಿರುವ, ಇತಿಹಾಸಿಕವಾಗಿ ನಂಟನ್ನು ಹೊಂದಿರುವ ಹಲವಾರು ಬಾಶೆಗಳು ಕನ್ನಡಕ್ಕೆ ಸಾಕಶ್ಟು ಪದಗಳನ್ನು ಕೊಟ್ಟಿವೆ. ಇದರಲ್ಲಿ ತಮಿಳು, ತೆಲುಗು ಇಂತ ಹಳೆಯ ಬಾಶೆಗಳು, ಮರಾಟಿ, ಉರ‍್ದು-ಹಿಂದಿ ಮೊದಲಾದ ಹೊಸ ಬಾಶೆಗಳು, ಆಡಳಿತ, ವ್ಯಾಪಾರ ಮೊದಲಾದ ಬಗೆಯ ಸಂಬಂದಗಳನ್ನು ಹೊಂದಿರುವ ಗ್ರೀಕು, ಪೋರ‍್ಚುಗೀಸು, ಪ್ರೆಂಚು ಮೊದಲಾದ ಹಲವಾರು ಬಾಶೆಗಳಿಂದಲೂ ಪದಗಳು ಕನ್ನಡಕ್ಕೆ ಬಂದು ಸೇರಿವೆ. ಸಣ್ಣ ಸಣ್ಣ ಬಾಶೆಗಳಿಂದ ಕನ್ನಡಕ್ಕೆ ಕಂಡಿತವಾಗಿಯೂ ಪದಗಳು ಬಂದಿರುವ ಸಾದ್ಯತೆ ಇದೆ. ಆದರೆ, ದೊಡ್ಡ ಬಾಶೆಗಳ ಕಡೆಗೆ ಅದ್ಯಯನದ ಗಮನ ಹರಿದಂತೆ ಸಣ್ಣ ಬಾಶೆಗಳೊಡನೆಯ ನಂಟನ್ನು ಇದುವರೆಗೆ ಅವಲೋಕಿಸಲು ಸಾದ್ಯವಾಗಿಲ್ಲ. ಹೀಗಾಗಿ ಸಣ್ಣ ಬಾಶೆಗಳಿಂದ ಬಂದಿರಬಹುದಾದ ಪದಗಳ ಬಗೆಗೆ ತಿಳುವಳಿಕೆ ಇಲ್ಲ.
ಹಲವು ಸಂದರ‍್ಬಗಳಲ್ಲಿ ಒಂದು ಬಾಶೆಯ ಪದ ಇನ್ನೊಂದು ಬಾಶೆಯ ಮೂಲಕ ಕನ್ನಡ ಪದಕೋಶವನ್ನು ಸೇರಿಕೊಂಡಿರಲೂಬಹುದು. ಹಲವು ಸಂಸ್ಕ್ರುತ ಪದಗಳು ಪ್ರಾಕ್ರುತದ ಮೂಲಕ, ಹಲವಾರು ಅರಾಬಿಕ್ ಮತ್ತು ಪರ‍್ಶಿಯನ್ ಪದಗಳು ಉರ‍್ದುವಿನ ಮೂಲಕ, ಯುರೂಪಿನ ಇತರ ಬಾಶೆಗಳ ಪದಗಳು ಇಂಗ್ಲೀಶಿನ ಮೂಲಕ ಕನ್ನಡಕ್ಕೆ ಹೀಗೆ ಬಂದಿವೆ.
ಈ ಬೇರೆ ಬಾಶೆಗಳಿಂದ ತೆಗೆದುಕೊಳ್ಳುವ ಪ್ರಕ್ರಿಯೆ ವಿವಿದ ಪ್ರದೇಶಗಳಲ್ಲಿ, ವಿವಿದ ಕಾಲಗಟ್ಟಗಳಲ್ಲಿ, ಬಾಶೆಯ ವಿವಿದ ವಲಯಗಳಲ್ಲಿ ಬಿನ್ನವಾಗಿ ನಡೆದಿದೆ. ಇದುವರೆಗೆ ಸ್ವೀಕರಣ ಹೆಸರಿನಲ್ಲಿ ಸಾಕಶ್ಟು ಅದ್ಯಯನ ಆಗಿದ್ದರೂ ವಾಸ್ತವದ ಅದ್ಯಯನಗಳು ಹಲವು ಆಯಾಮಗಳಲ್ಲಿ ಇನ್ನೂ ಆಗಬೇಕಿದೆ. ಆಗ ಇದು ಕನ್ನಡ ಮಾತುಗ ಜಗತ್ತಿನ
ವಾಸ್ತವ ಪರಿಚಯಕ್ಕೆ ದಾರಿ ಹಿಡಿಯಬಹುದು. ಪದಕೋಶದ ಸ್ವೀಕರಣ ಒಂದು ಬಾಶೆಯ ಮಾತುಗ ಸಮುದಾಯದ ಸಾಮಾಜಿಕ ಬೆಳವಣಿಗೆಯ ದಿಕ್ಕು ಮತ್ತು ವೇಗವನ್ನು ಅರಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.