ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

Date: 14-04-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಲಂಡನ್ ನ ಕಂಟೆಂಪೊರರಿ ಆರ್ಟ್ ಕಲಾವಿದ ಸ್ಟೀವನ್ ರೋಡ್ನಿ ಮೆಕ್ವೀನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಸ್ಟೀವನ್ ರೋಡ್ನಿ ಮೆಕ್ವೀನ್ (Steve Rodney McQueen)
ಜನನ: 09 ಅಕ್ಟೋಬರ್, 1969
ಶಿಕ್ಷಣ: ಗೋಲ್ಡ್‌ಸ್ಮಿಥ್ಸ್ ಕಾಲೇಜ್, ಯೂನಿವರ್ಸಿಟಿ ಆಫ್ ಲಂಡನ್
ವಾಸ: ಲಂಡನ್ (ಇಂಗ್ಲಂಡ್); ಆಮ್‌ಸ್ಟರ್‌ಡಾಮ್ (ಹಾಲಂಡ್)
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ವೀಡಿಯೊ ಆರ್ಟ್, ಸಿನಿಮಾ

ಸ್ಟೀವ್ ಮೆಕ್ವೀನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಾನು ಕಲಿತ ಶಾಲೆಗೆ ಹದಿನೈದು ವರ್ಷಗಳ ಬಳಿಕ ತನ್ನ ಸಾಧನೆಗಳನ್ನು ತೋರಿಸಲು ತೆರಳಿದ ಸರ್ ಸ್ಟೀವನ್ ರೋಡ್ನಿ ಮೆಕ್ವೀನ್ (CBE= ಬ್ರಿಟಿಷ್ ಆರ್ಡರ್ ಆಫ್ ಷಿವಾಲರಿ) ಅವರಿಗೆ ಅವರ ಶಾಲೆ ಬಾಲ್ಯದಲ್ಲಿ ಸಾಂಸ್ಥಿಕವಾಗಿ ವರ್ಣಭೇದ ತೋರಿಸಿದ್ದನ್ನು ಒಪ್ಪಿಕೊಳ್ಳುತ್ತದೆ. 13ವರ್ಷ ಪ್ರಾಯದ ಸ್ಟೀವನ್ ಮೆಕ್ವೀನ್ ಕಲಿಕೆಯಲ್ಲಿ ಮುಂದಿರಲಿಲ್ಲ, ಡಿಸ್‌ಲೆಕ್ಸಿಯಾ ಇತ್ತು ಮತ್ತು ಸೋಮಾರಿ ಕಣ್ಣಿನ ತೊಂದರೆ ಹೊಂದಿದ್ದುದರಿಂದ ಒಂದು ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳಬೇಕಾಗಿತ್ತು. ಅಂತಹ ಹುಡುಗನನ್ನು 3C1ತರಗತಿಗೆ (ಕಲಿಕೆಯಲ್ಲಿ ಮುಂದಿರುವ ಮಕ್ಕಳ ತರಗತಿ) ಹಾಕುವ ಬದಲು ಶಾಲೆ 3C2 ತರಗತಿಗೆ (ಕೂಲಿ, ಪ್ಲಂಬರ್, ಫಿಟ್ಟರ್, ಕಟ್ಟಡಕಾರ್ಮಿಕರಂತಹ ಶ್ರಮದ ಕೌಶಲ ಕಲಿಯಲು ತರಗತಿ) ಸೇರಿಸಿಕೊಂಡಿತ್ತು. ಅದನ್ನವರು 2014ರಲ್ಲಿ ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶದಲ್ಲಿ ಹೀಗೆ ನೆನಪು ಮಾಡಿಕೊಳ್ಳುತ್ತಾರೆ: “"I don't know why. Maybe I deserved to be…. That inequality – I fucking loathe it with a passion. It's all bullshit, man. It really upsets me. It was horrible. It was disgusting, the system, it was absolutely disgusting. It's divisive and it was hurtful. It was awful. School was painful because I just think that loads of people, so many beautiful people, didn't achieve what they could achieve because no one believed in them, or gave them a chance, or invested any time in them. A lot of beautiful boys, talented people, were put by the wayside. School was scary for me because no one cared, and I wasn't good at it because no one cared. At 13 years old, you are marked, you are dead, that's your future."

ವೆಸ್ಟ್ ಇಂಡೀಸ್ ದ್ವೀಪಸಮೂಹದ ಗ್ರೆನೆಡಾ- ಟ್ರಿನಿಡಾಡ್ ಮೂಲದ ಬಡ ಕುಟುಂಬಕ್ಕೆ ಸೇರಿದ ಮೆಕ್ವೀನ್ ಕಲೆಯಲ್ಲಿ ಆಸಕ್ತಿಯಿಂದ ಲಂಡನ್ ವಿವಿಯಲ್ಲಿ ಗೋಲ್ಡ್‌ಸ್ಮಿಥ್ಸ್ ಕಾಲೇಜಿಗೆ ಸೇರ್ಪಡೆಗೊಂಡರೂ, ಬಳಿಕ ಸಿನಿಮಾ ಕುರಿತ ಆಸಕ್ತಿಯಿಂದಾಗಿ ನ್ಯೂಯಾರ್ಕಿನ ಟಿಷ್ ಸ್ಕೂಲ್ ಆಫ್ ಆರ್ಟ್‌ಗೆ ಸೇರುತ್ತಾರೆ. ಅಲ್ಲಿ ತನ್ನ ಪ್ರಯೋಗಶೀಲತೆಗೆ ಅವಕಾಶ ಸಿಗದಿದ್ದಾಗ “ಕ್ಯಾಮರಾ ಗಾಳಿಯಲ್ಲಿ ಹಾರಿಸಲು ಬಿಡುವುದಿಲ್ಲ” ಎಂದು ಅಲ್ಲಿಂದಲೂ ಹೊರಬೀಳುತ್ತಾರೆ.

ವಿದ್ಯಾರ್ಥಿಯಾಗಿದ್ದಾಗಲೇ ಅವರು ರಚಿಸಿದ Bear (1993), ಬಹಳ ಪ್ರಭಾವೀ ವೀಡಿಯೋ ಆರ್ಟ್ ಎಂದು ಪರಿಗಣಿತವಾಗಿದೆ. ಅದು ಲೂಪ್ ಆಗಿ ಮರುಕಳಿಸುವ ಪುಟ್ಟ ಚಿತ್ರವಾಗಿದ್ದು, ಇಬ್ಬರು ನಗ್ನ ಕರಿಯರು ಕುಸ್ತಿಗೆ ಸಜ್ಜಾಗಿರುವವರಂತೆ ಒಬ್ಬರನ್ನೊಬ್ಬರು ದಿಟ್ಟಿಸುತ್ತಾ ಸುತ್ತು ಸುತ್ತು ಬರುತ್ತಿರುತ್ತಾರೆ. ನಾಲ್ಕು ನಿಮಿಷಗಳ ಮೂಕಿ ವೀಡಿಯೊ ಆರ್ಟ್ Deadpan (1997), ಅವರಿಗೆ ಪ್ರತಿಷ್ಠಿತ ಟರ್ನರ್ ಪ್ರಶಸ್ತಿ ತಂದುಕೊಡುತ್ತದೆ. Deep (2002), ಹೆಸರಿನ ವೀಡಿಯೋ ಆರ್ಟ್ ಜಗತ್ತಿನ ಅತಿ ಆಳದ ಚಿನ್ನದ ಗಣಿಯಲ್ಲಿ ಕಾರ್ಮಿಕರ ಶ್ರಮವನ್ನು ತೋರಿಸುತ್ತದೆ. Queen and Country (2007), ಇರಾಕ್ ಯುದ್ಧದ ಕುರಿತಾದದ್ದು. ಬಹಳ ಆಳವಾದ ರಾಜಕೀಯ ಪ್ರಜ್ಞೆಯಿಂದ ರಚಿತವಾದವು ಎಂದು ಪರಿಗಣಿತವಾಗಿರುವ ಈ ಕಲಾಕೃತಿಗಳು ಸುಲಭ ಉತ್ತರಗಳ ಕಡೆಗೆ ಬೆರಳು ತೋರಿಸುವುದಿಲ್ಲ. ಬದಲಿಗೆ ನೋಡುಗರನ್ನು ಚಿಂತನೆಗೆ ಹಚ್ಚುತ್ತವೆ. ಹಾಗಾಗಿಯೇ ಅವರು ಕಳೆದ 25ವರ್ಷಗಳಲ್ಲಿ ಬ್ರಿಟನ್ ರೂಪಿಸಿದ ಮಹತ್ವದ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ.

2008ರ ಹೊತ್ತಿಗೆ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಮೆಕ್ವೀನ್ ಅವರ ಮೊದಲ ಎರಡೂ ಚಿತ್ರಗಳು ಐರಿಷ್ ಉಪವಾಸ ಸತ್ಯಾಗ್ರಹದ ಕುರಿತಾದ Hunger (2008), ಮತ್ತು ನ್ಯೂಯಾರ್ಕಿನ ಲೈಂಗಿಕ ಗೀಳಿನ ವ್ಯಕ್ತಿಯ ಕುರಿತಾದ Shame (2011). ಮೆಕ್ವೀನ್ ಪ್ರಸಿದ್ಧಿಗೆ ಬಂದದ್ದು, 12 Years a Slave (2013) ಸಿನಿಮಾಗೆ ಅತ್ಯುತ್ತಮ ಚಿತ್ರ ಎಂಬ ಆಸ್ಕರ್ ಅವಾರ್ಡ್ (2014)ಬಂದ ಬಳಿಕ. Widows (2018) ಅವರ ಇತ್ತೀಚೆಗಿನ ಚಿತ್ರ.

ಮೆಕ್ವೀನ್ ವ್ಯಕ್ತಿತ್ವಕ್ಕೆ ಬೆಳಕು ಚೆಲ್ಲಬಲ್ಲ ಒಂದು ಘಟನೆ ಎಂದರೆ ಬ್ರಿಟಿಷ್ ಸರಕಾರವು ಲಂಡನ್ ಇಂಪೀರಿಯಲ್ ವಾರ್ ಮ್ಯೂಸಿಯಂಗೆ ಬಸ್ರಾದಲ್ಲಿ (ಇರಾಕ್ ಯುದ್ಧ) ಇರುವ ಬ್ರಿಟಿಷ್ ಸೇನೆಯ ಕುರಿತಾಗಿ ಕಲಾಕೃತಿ ರಚಿಸಿಕೊಡಬೇಕೆಂದು ಆಹ್ವಾನಿಸಿತು. ಆದರೆ, ಕಠಿಣ ನಿಯಮಗಳ ಕಾರಣದಿಂದಾಗಿ ಚಿತ್ರೀಕರಣ ಸಾಧ್ಯವಾಗಲಿಲ್ಲ. ಆಗ ಮೆಕ್ವೀನ್ ಯುದ್ಧದಲ್ಲಿ ಮಡಿದ ಬ್ರಿಟಿಷ್ ಸೈನಿಕರ ಕುಟುಂಬಗಳಿಗೆ ಪತ್ರ ಬರೆದು, ಅವರಿಂದಲೇ ಚಿತ್ರಗಳನ್ನು ಆಯ್ಕೆ ಮಾಡಿಸಿ, ಮೃತ ಸೈನಿಕರ ಚಿತ್ರಗಳಿರುವ ಅಂಚೆಚೀಟಿಗಳ ಸರಣಿಯೊಂದನ್ನು ಸರಕಾರಕ್ಕೆ ರಚಿಸಿಕೊಡುತ್ತಾರೆ. ಜನ ಈ ಅಂಚೆಚೀಟಿಗಳನ್ನು ಹಚ್ಚಿ ಪತ್ರಗಳನ್ನು ವಿನಿಮಯ ಮಾಡಿಕೊಂಡಾಗ ತನ್ನ ಕಲಾಕೃತಿ ಪೂರ್ಣಗೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯ.

ಸ್ಟೀವ್ ಮೆಕ್ವೀನ್ ಅವರ ಒಂದು ಸಂದರ್ಶನ ಇಲ್ಲಿದೆ:

ಬೋಸ್ಟನ್‌ನ ICAಯಲ್ಲಿ ಹಂಜಾ ವಾಕರ್ ಅವರ ಜೊತೆ ಸ್ಟೀವ್ ಮೆಕ್ವೀನ್ ಮಾತುಕತೆ:

ಎಸ್ಕ್ವೈರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೆಕ್ವೀನ್ ಅವರು ಜಾರ್ಜ್ ಫ್ಲಾಯ್ಡ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವುದು:

ಚಿತ್ರ ಶೀರ್ಷಿಕೆಗಳು:

ಸ್ಟೀವ್ ಮೆಕ್ವೀನ್ ಅವರ Queen and Country (2007)

ಸ್ಟೀವ್ ಮೆಕ್ವೀನ್ ಅವರ still from 12 years a slave (2013)

ಸ್ಟೀವ್ ಮೆಕ್ವೀನ್ ಅವರ Still from Deadpan (1997)

ಸ್ಟೀವ್ ಮೆಕ್ವೀನ್ ಅವರ still from deep (2002)

ಸ್ಟೀವ್ ಮೆಕ್ವೀನ್ ಅವರ still from Hunger (2008)

ಸ್ಟೀವ್ ಮೆಕ್ವೀನ್ ಅವರ still from bear (1993)

ಈ ಅಂಕಣದ ಹಿಂದಿನ ಬರೆಹಗಳು:

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...