ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

Date: 30-03-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಇಂಗ್ಲೆಂಡ್ ನ ಕಂಟೆಂಪೊರರಿ ಆರ್ಟ್ ಕಲಾವಿದೆ ರೀಚಲ್ ವೈಟ್‌ರೀಡ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ರೀಚಲ್ ವೈಟ್‌ರೀಡ್ (Rachel Whiteread)
ಜನನ: 20 ಏಪ್ರಿಲ್, 1963
ಶಿಕ್ಷಣ: ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್, ಲಂಡನ್ ವಿವಿ; ಸೈಪ್ರಸ್ ಸ್ಕೂಲ್ ಆಫ್ ಆರ್ಟ್, ಬ್ರೈಟನ್ ವಿವಿ.
ವಾಸ: ಇಂಗ್ಲೆಂಡ್
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಕಂಟೆಂಪೊರರಿ ಸ್ಕಲ್ಪ್‌ಚರ್ಸ್

ರೀಚಲ್ ವೈಟ್‌ರೀಡ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ರೀಚಲ್ ವೈಟ್‌ರೀಡ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಅಸ್ಥಿತ್ವದಲ್ಲಿರುವ ಒಂದು ಘನವಾದ ವಸ್ತುವಿನ ಒಳಗಿರುವ ಖಾಲಿತನವನ್ನು (ಬೇಕಾದರೆ ಅವಕಾಶ - ಸ್ಪೇಸ್ ಎಂದು ಕರೆಯಿರಿ) ವ್ಯಕ್ತಗೊಳಿಸುವುದಕ್ಕೆ ತನ್ನ ಶಿಲ್ಪರಚನಾ ತಂತ್ರವನ್ನು ವಿಸ್ತರಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ಎರಕಶಿಲ್ಪಗಳ ದಿಕ್ಕನ್ನೇ ಬದಲಾಯಿಸಿದ ರೀಚಲ್ ವೈಟ್‌ರೀಡ್ ಮಹಿಳೆಯರಲ್ಲಿ ಮೊದಲ ಪ್ರತಿಷ್ಠಿತ ಟರ್ನರ್ ಪ್ರೈಸ್ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ. ಸಾಮಾನ್ಯವಾಗಿ ಒಂದು ನೆಗೆಟಿವ್ ಅಚ್ಚಿನೊಳಗೆ ಎರಕ ಹಾಕಿ ಗಟ್ಟಿಯಾಗಿಸಿದ ಬಳಿಕ ಅಚ್ಚನ್ನು ಬಿಚ್ಚಿತೆಗೆದು ಶಿಲ್ಪ ಸಿದ್ಧಗೊಳ್ಳುವುದು ಸಾಂಪ್ರದಾಯಿಕ ವಿಧಾನವಾದರೆ, ರೀಚೆಲ್ ತನ್ನ ಶಿಲ್ಪಗಳಲ್ಲಿ ನೇರವಾಗಿ ಅಸ್ಥಿತ್ವದಲ್ಲಿರುವ ವಸ್ತುವನ್ನೇ ನೆಗೆಟಿವ್ ಅಚ್ಚೆಂದು ಪರಿಗಣಿಸಿ, ಅದರೊಳಗೆ ಎರಕ ಹಾಕಿ ಆ ವಸ್ತುವಿನ ಒಳಗಿರುವ ಖಾಲಿ ಜಾಗದ (ಅವಕಾಶದ/ಸ್ಪೇಸ್‌ನ) ಶಿಲ್ಪವನ್ನು ರಚಿಸುತ್ತಾರೆ.

ಈ ಪ್ರತಿ-ಶಿಲ್ಪಗಳು ಆ ಅವಕಾಶಗಳ ದೈಹಿಕ- ಮಾನಸಿಕ ರೂಪಗಳೊಂದಿಗೆ ಪ್ರಸ್ತುತಗೊಳ್ಳುವುದು ರೀಚಲ್ ಅವರ ವೈಶಿಷ್ಟ್ಯ. ಆ ಮೂಲ ಶಿಲ್ಪಗಳು ಇದ್ದ ಜಾಗದ ಹಿನ್ನೆಲೆ, ಚರಿತ್ರೆಗಳ ಕಾರಣಕ್ಕಾಗಿ ರೀಚೆಲ್ ಅವರ ಈ ಪ್ರತಿ-ಶಿಲ್ಪಗಳು ಸಾಮಾಜಿಕ-ರಾಜಕೀಯ ಪ್ರತಿಕ್ರಿಯೆಗಳೂ ಆಗಿ ರೂಪುಗೊಳ್ಳುತ್ತವೆ. ಆಕೆಯ ಪ್ರತಿಶಿಲ್ಪಗಳು ಪುನರಾವರ್ತನೆಗಳಾಗಿದ್ದರೂ, ಅವುಗಳಲ್ಲಿನ ಎರಕದ ಅನನ್ಯತೆಯ ಕಾರಣಕ್ಕಾಗಿ ಅವು ಅನನ್ಯವಾಗಿಯೇ ಉಳಿಯುತ್ತವೆ.

ಎಸೆಕ್ಸ್‌ನಲ್ಲಿ ಕಲಾ ಕುಟುಂಬವೊಂದರಲ್ಲಿ ಜನಿಸಿದ ರೀಚೆಲ್‌ಗೆ ಎಳವೆಯಿಂದಲೆ ಮನೆಯಲ್ಲಿ ಕಲೆಯ ವಾತಾವರಣ ಇತ್ತು. ಮನೆಯಲ್ಲಿ ತಾಯಿಯ ಕಲಾ ಸ್ಟುಡಿಯೊ ಇತ್ತು. ಪ್ರಾಥಮಿಕ ಶಿಕ್ಷಣದ ಬಳಿಕ ಪೇಂಟಿಂಗ್ ಕಲಿಯುವ ವೇಳೆ, ಅಲ್ಲಿ ಶಿಕ್ಷಕರಾಗಿದ್ದ ಬ್ರಿಟಿಷ್ ಶಿಲ್ಪ ಕಲಾವಿದ ರಿಚರ್ಡ್ ವಿಲ್ಸನ್ ಅವರಿಂದ ಎರಕ- ಅಚ್ಚು ಹೊಯ್ಯುವ ಕೌಶಲ ಕಲಿತ ಆಕೆ 1998ರಲ್ಲಿ ಕಲಾ ಶಿಕ್ಷಣ ಮುಗಿಸಿ ಹೊರಬರುವಾಗಲೇ ತನ್ನ ಪ್ರತಿ-ಶಿಲ್ಪ ತಂತ್ರಕ್ಕಾಗಿ ಹೆಸರು ಮಾಡಿದ್ದರು.

ಪೂರ್ವ ಲಂಡನ್‌ನಲ್ಲಿ ಕಲಾವಿದರ ಕಾಲನಿಯಲ್ಲೇ ಇದ್ದರೂ ಬಹುತೇಕ ಏಕಾಕಿಯಾಗಿಯೇ ಇದ್ದ ರೀಚಲ್, ಪ್ರಚಾರದಿಂದ ದೂರವೇ ಇದ್ದರು. ತನ್ನ 27ರ ಹರೆಯದಲ್ಲೇ ಲಂಡನ್‌ನ ಚಿಸನೇಲ್ ಗ್ಯಾಲರಿಗೆ ತನ್ನ ಮಾಸ್ಟರ್ ಪೀಸ್ “Ghost” ರಚಿಸಿದ ಆಕೆ ಟರ್ನರ್ ಬಹುಮಾನಕ್ಕೆ ನಾಮಿನೇಟ್ ಆದರು. ಅಲ್ಲಿಂದ ಯಂಗ್ ಬ್ರಿಟಿಷ್ ಆರ್ಟಿಸ್ಟ್ ಚಳುವಳಿಯ ಜೊತೆಯೂ ಹಲವಾರು ಪ್ರದರ್ಶನಗಳನ್ನು ನೀಡಿದರಾದರೂ, ಆ ಚಳುವಳಿಯ ಭಾಗವಾಗಿ ಉಳಿಯಲಿಲ್ಲ. ಪೂರ್ವ ಲಂಡನ್‌ನಲ್ಲಿ ಅಳಿಸಿಹಾಕಲು ಸಿದ್ಧವಾಗಿದ್ದ ಮನೆಯೊಂದರ ಒಳ ಅಚ್ಚು ತೆಗೆದ ಶಿಲ್ಪ Untitled (House) ಆಕೆಯ ಮಹತ್ವದ ಕಲಾಕೃತಿ ಎಂದು ಪರಿಗಣಿತವಾಗಿದೆ. ಮೊದಲ ಬಾರಿಗೆ ಅದು ಪ್ರದರ್ಶನಗೊಂಡಾಗ ಅದಕ್ಕೆ ಪರ-ವಿರೋಧ ಎರಡೂ ವಿಮರ್ಶೆಗಳು ಬಂದಿದ್ದವು. 20ನೇ ಶತಮಾನದ ಮಹತ್ವದ ಸಾರ್ವಜನಿಕ ಶಿಲ್ಪಗಳಲ್ಲಿ ಒಂದೆಂದು ಅದನ್ನು ಪರಿಗಣಿಸಲಾಗಿದೆ. ಆದರೆ, ಅದಕ್ಕಾಗಿ ಆಕೆಗೆ “ವರ್ಷದ ಕೆಟ್ಟ ಕಲಾವಿದೆ” ಪ್ರಶಸ್ತಿಯೂ ಬಂದಿತ್ತು. ಅಲ್ಲಿನ ನಗರಪಾಲಿಕೆ 1994ರಲ್ಲಿ ಅದನ್ನು ಕಾಂಕ್ರೀಟ್ ಮುದ್ದೆ ಎಂದು ಪರಿಗಣಿಸಿ ಅಳಿಸಿಹಾಕಿತ್ತು. ಬಳಿಕ ನಾಝಿ ನರಮೇಧ ನಡೆದ ವಿಯೆನ್ನಾದಲ್ಲಿ ಮನೆಯೊಂದರ ಅಚ್ಚು ತೆಗೆದು ಪ್ರತಿ-ಶಿಲ್ಪ ರಚಿಸಿದರು; ಲಂಡನ್ ಬಳಿ ಯಹೂದ್ಯ ಮಂದಿರವೊಂದರ ಪ್ರತಿ-ಶಿಲ್ಪವನ್ನೂ ಅವರು ರಚಿಸಿದರು. ಆಕೆಯ ಸಾರ್ವಜನಿಕ ಶಿಲ್ಪಗಳು ಬಹುತೇಕ ಎಲ್ಲವೂ ಕಲಾ ಚರಿತ್ರೆಯಲ್ಲಿ ಮಹತ್ವದವೆಂದು ಪರಿಗಣಿತವಾಗಿವೆ. ಆಕೆಯ ಪತಿ ಮಾರ್ಕಸ್ ಟೇಲರ್ ಕೂಡ ಶಿಲ್ಪಿ.

2003ರಲ್ಲಿ ತನ್ನ ತಾಯಿ ತೀರಿಕೊಂಡಾಗ, ಅವರ ಸೊತ್ತುಗಳನ್ನು ಕಂಡು, ಅವುಗಳ ಪ್ರತಿಶಿಲ್ಪಗಳನ್ನು ರಚಿಸಿದ್ದು, 2005ರಲ್ಲಿ ಟೇಟ್ ಗ್ಯಾಲರಿಯಲ್ಲಿ Embankment ಹೆಸರಿನಲ್ಲಿ ಪ್ರದರ್ಶಿತವಾಯಿತು. ಅದು ಬಹು ಚರ್ಚಿತ ಕಲಾ ಪ್ರದರ್ಶಿನಿ. ಅಲ್ಲಿಂದೀಚೆಗೆ ಸಣ್ಣ ಗಾತ್ರದ ಶಿಲ್ಪಗಳನ್ನು ಹೆಚ್ಚಾಗಿ ರಚಿಸುತ್ತಿರುವ ರೀಚಲ್. ಲಂಡನ್, ನ್ಯೂಯಾರ್ಕ್, ನಾರ್ವೇ ಮೊದಲಾದೆಡೆ ಕಮಿಷನ್ಡ್ ಶಿಲ್ಪಗಳನ್ನೂ ರಚಿಸಿದ್ದಾರೆ. ಎರಕ ಶಿಲ್ಪಗಳಲ್ಲೇ ವೈವಿದ್ಯಕ್ಕೆ- ಪ್ರಯೋಗಶೀಲತೆಗೆ ಹೆಸರಾಗಿರುವ ಅವರು ತಮ್ಮ ಕಲಾಕೃತಿಗಳ ಬಗ್ಗೆ ಹೀಗೆ ಹೇಳುತ್ತಾರೆ: “My work is almost like trying to write a succinct poem. There is this visual aspect to my work but also cerebral or maybe literate aspects – there are other things going on.I hope it works with your senses and gives you a moment of pause and quiet. I hope it gives you a moment of reverie – just standing, dreaming and thinking.” (ದಿ ಗಾರ್ಡಿಯನ್ ಸಂದರ್ಶನ ಜೂನ್, 2016).

ಟೇಟ್ ಮಾಡರ್ನ್ ಗ್ಯಾಲರಿಯ್ ಕ್ಯುರೇಟರ್ ಆನ್ ಗಾಲಗರ್ ಜೊತೆ ರೀಚಲ್ ವೈಟ್‌ರೀಡ್ ಮಾತುಕತೆ:

ರೀಚಲ್ ವೈಟ್‌ರೀಡ್ ಅವರ ಮಹತ್ವದ ಕಲಾಕೃತಿ “ಹೌಸ್” ಬಗ್ಗೆ ಡಾಕ್ಯುಮೆಂಟರಿ:

ಚಿತ್ರ ಶೀರ್ಷಿಕೆಗಳು:

ರೀಚಲ್ ವೈಟ್‌ರೀಡ್ ಅವರ Ghost (1990)

ರೀಚಲ್ ವೈಟ್‌ರೀಡ್ ಅವರ Judenplatz Holocaust Memorial ©www.cambridge.org

ರೀಚಲ್ ವೈಟ್‌ರೀಡ್ ಅವರ Rachel Whiteread, Untitled (Pink Torso), 1995, pink dental plaster, Courtesy Rachel Whiteread et Gallery Gagosian, © Photo-Tate (Seraphina Neville and Mark Heathcote)

ರೀಚಲ್ ವೈಟ್‌ರೀಡ್ ಅವರ Rachel Whiteread's house view of Grove Road - pic by David Hoffman

ರೀಚಲ್ ವೈಟ್‌ರೀಡ್ ಅವರ Tree of life (2012) Bronze, permanent installation at Whichchapel Gallery, London.

ರೀಚಲ್ ವೈಟ್‌ರೀಡ್ ಅವರ UNIT, (2005), Plaster and wood

ರೀಚಲ್ ವೈಟ್‌ರೀಡ್ ಅವರ Untitled (One Hundred Spaces), 1995, resin, various dimensions, Pinault Collection.

ರೀಚಲ್ ವೈಟ್‌ರೀಡ್ ಅವರ Untitled (Paperbacks) 1997

ರೀಚಲ್ ವೈಟ್‌ರೀಡ್ ಅವರ Untitled (Stairs)(2001)

ರೀಚಲ್ ವೈಟ್‌ರೀಡ್ ಅವರ US Embassy (Flat pack house; 2013-1015) Rachel Whiteread. Courtesy Gagosian. Photo- Mike Bruce

ರೀಚಲ್ ವೈಟ್‌ರೀಡ್ ಅವರ Yellow edge (2007-08) Plaster, pigment and resin

ಈ ಅಂಕಣದ ಹಿಂದಿನ ಬರೆಹಗಳು:

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...