Date: 12-05-2024
Location: ಬೆಂಗಳೂರು
"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ್ಲಿ ಒಂದು ಪ್ರಾಕ್ರುತ ಕನ್ನಡದೊಂದಿಗೆ ಹೆಚ್ಚು ಸಂಬಂದವನ್ನು ಬೆಳೆಸಿಕೊಂಡಿದ್ದಿತೊ ಇಲ್ಲವೆ ಒಂದಕ್ಕಿಂತ ಹೆಚ್ಚಿನ ಪ್ರಾಕ್ರುತಗಳು ನಂಟು ಬೆಳೆಸಿಕೊಂಡಿದ್ದವೆ ಎಂಬುದು ಗೊತ್ತಿಲ್ಲ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ’ ಕುರಿತು ಬರೆದಿರುವ ಲೇಖನ.
ಇಲ್ಲಿ ಮುಕ್ಯವಾಗಿ ಅಸೋಕನ ಬರಹಗಳನ್ನು ಕುರಿತು ಮಾತನಾಡಲೇಬೇಕು. ಅಸೋಕನು ಬರಹಗಳನ್ನು ಮೊದಲ ಬಾರಿಗೆ ಈ ದೇಶದಲ್ಲಿ ಮಾಡಿಸಿ ಬರೆಸಿದನೆಂಬ ತಿಳುವಳಿಕೆ ಇದೆ. ಅವನು ಬಳಸಿದ ಬಾಶೆಯನ್ನು ಪಾಲಿ ಎಂದು ಹೇಳಲಾಗುತ್ತದೆ. ಬುದ್ದ ಬಳಸಿದ ಮಾತಿನ ಬಗೆ ಪಾಲಿ ಎಂಬ ಹೆಸರಿನದಾಗಿದ್ದಿತು. ಅದೆ ಬಾಶೆಯನ್ನು ಅಸೋಕನೂ ಬಳಸಿದ್ದರಿಂದ ಪಾಲಿ ಎಂಬ ಹೆಸರು ಮುಂದುವರೆಯಿತು. ಆದರೆ, ಅಸೋಕನಿಗಿಂತ ಮುಂಚೆಯೆ ಕನ್ನಡಕ್ಕೆ ಪಾಗದದ ಸಂಬಂದ ಒದಗಿತ್ತು ಎಂಬುದನ್ನು ಈ ಹಿಂದಿನ ಬರವಣಿಗೆಯಲ್ಲಿ ನೋಡಲಾಗಿತ್ತು. ಹೀಗೆ ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ್ಲಿ ಒಂದು ಪ್ರಾಕ್ರುತ ಕನ್ನಡದೊಂದಿಗೆ ಹೆಚ್ಚು ಸಂಬಂದವನ್ನು ಬೆಳೆಸಿಕೊಂಡಿದ್ದಿತೊ ಇಲ್ಲವೆ ಒಂದಕ್ಕಿಂತ ಹೆಚ್ಚಿನ ಪ್ರಾಕ್ರುತಗಳು ನಂಟು ಬೆಳೆಸಿಕೊಂಡಿದ್ದವೆ ಎಂಬುದು ಗೊತ್ತಿಲ್ಲ.
ಪಾಲಿ ಅಸೋಕನ ಕಲ್ಬರಿಗೆಗಳಿಂದ ಸಹಜವಾಗಿ ಹೆಚ್ಚು ಕಾಲಕ್ಕೆ ಉಳಿಯುವುದು ನಿಜ. ಆದರೆ, ಒಂದೆವೇಳೆ ಈ ಪಾಲಿ ಅಸೋಕನ ಬರಹಗಳಿಗಿಂತ ಮೊದಲು ಕನ್ನಡದ ಸಂರ‍್ಕಕ್ಕೆ ಬಂದಿಲ್ಲದೆ ಇದ್ದರೆ, ಅಸೋಕನ ಬರಹದ ಪಾಲಿ ಕನ್ನಡದ ಜೊತೆಗೆ ಅಶ್ಟಾಗಿ ನಂಟು ಬೆಳೆಸಿಕೊಂಡಿರುವುದಕ್ಕೆ ಸಾದ್ಯತೆ ತುಂಬಾ ಕಡಿಮೆ. ಇದಕ್ಕೆ ಕಾರಣ, ಬರಹವು ಬದುಕಿನಲ್ಲಿ ಯಾವುದೆ ಪಾತ್ರವನ್ನು ಹೊಂದಿಲ್ಲದ ಕಾಲದಲ್ಲಿ ಬರಹದ ಮೂಲಕ ಬಂದ ಬಾಶೆಯೊಂದು ಸಮಾಜದಲ್ಲಿ ಪ್ರಬಾವ ಬೀರುವುದಕ್ಕೆ ಸಾದ್ಯವೆ ಇಲ್ಲ. ಹೀಗಾಗಿಯೆ ಅಸೋಕನ ರಾಜ್ಯರಚನೆಯನ್ನೂ, ಮತಪಂತ ನಿಶ್ಟೆಯನ್ನೂ ಬಹುತೇಕ ಅನುಸರಿಸಿದ ದಕ್ಶಿಣದ ಶಾತವಾಹನ ಮನೆತನದವರು ಪಾಲಿಯನ್ನು ಮಾತ್ರ ಅನುಸರಿಸಲಿಲ್ಲ. ಮೂಲಬೂತವಾಗಿ ಅದನ್ನು ಅನುಸರಿಸಲು ಆಗುವುದಿಲ್ಲ ಕೂಡ. ಯಾಕೆಂದರೆ ಪಾಲಿಯ ಬಳಕೆಯ ಪರಿಚಯ ಇರುವವರು ಅಂದಿಗೆ ದಕ್ಶಿಣದಲ್ಲಿ ಇದ್ದಿರಲು ಸಾದ್ಯವಿರಲಿಲ್ಲ. ಹಾಗಾಗಿ ಶಾತವಾಹನರು ಪ್ರಾಕ್ರುತವನ್ನು, ಅಂದರೆ ಅದಾಗಲೆ ಕನ್ನಡಕ್ಕೆ ಒದಗಿದ ಪಾಗದವನ್ನೆ ಬಳಸುವುದಕ್ಕೆ ಮೊದಲು ಮಾಡುತ್ತಾರೆ. ಇದು ಕನಗನ ಹಳ್ಳಿಯಲ್ಲಿ ದೊರೆತಿರುವ ಸುಮಾರು ಎರಡನೂರಾ ಅಯವತ್ತರಶ್ಟು ಇರುವ ಸಣ್ಣ ಸಣ್ಣ ಬರಹದ ಕಲ್ಬರಹಗಳಲ್ಲಿ ಸಾಕಶ್ಟು ದಾಕಲೆಗಳು ದೊರಕುತ್ತವೆ.
ಅಸೋಕನ ಬರಹದ ಚಟುವಟಿಕೆಗಳನ್ನು ಮತ್ತು ದರ‍್ಮಿಕ ಮೊದಲಾಗಿ ಇನ್ನಿತರ ವಲಯಗಳಲ್ಲಿನ ವಿದ್ವತ್ತಿನ ಮುಂದುವರಿಕೆಯನ್ನೂ ಶಾತವಾಹನರ ಕಾಲದಲ್ಲಿ ನಾವು ನೋಡುತ್ತೇವೆ. ಹಾಗಾಗಿ ಕನಗನ ಹಳ್ಳಿಯಲ್ಲಿ ಈ ಕಾಲಕ್ಕೆ ಬಹುದೊಡ್ಡ ಸ್ತೂಪವೊಂದು ಏಳುತ್ತದೆ. ಈ ನೆಲದ ವಿದ್ವಾಂಸರು ಈ ಕೆಲಸದಲ್ಲಿ ತೊಡಗಿಕೊಂಡಿದ್ದರು ಎನ್ನುವುದರಲ್ಲಿ ಅನುಮಾನವಿಲ್ಲ. ಕನಗನ ಹಳ್ಳಿಯ ಕಲ್ಬರಹಗಳಲ್ಲಿ ದೊರಕಿರುವ ಹಲವಾರು ವ್ಯಕ್ತಿನಾಮಗಳು ಅಲ್ಲದೆ ಕೆಲವು ಸ್ತಳನಾಮಗಳು ಸ್ತಳೀಯವಾಗಿವೆ ಎಂಬುದನ್ನು ವಿದ್ವಾಂಸರು ತೋರಿಸಿದ್ದಾರೆ. ಈ ಸ್ತಳೀಯರು ಸಹಜವಾಗಿಯೆ ಈ ನೆಲದಲ್ಲಿ ಬಳಕೆಯಲ್ಲಿದ್ದ ಪ್ರಾಕ್ರುತವನ್ನು ಬಳಸುತ್ತಿದ್ದರು ಎನ್ನುವುದು ಸರಿ ಎನಿಸುತ್ತದೆ. ಇದಕ್ಕೆ ಪೂರಕವಾಗಿ ಕೆಲವು ಬಾಶಾ ಸಂರ‍್ಕವನ್ನು ರ‍್ತ ಮಾಡಿಕೊಳ್ಳುವುದಕ್ಕೆ ಸಾದ್ಯವಿರುವ ವಿಚಾರವನ್ನು ಇಲ್ಲಿ ಮಾತನಾಡಬಹುದು.
ಕನಗನ ಹಳ್ಳಿಯ ಶಾಸನಗಳಲ್ಲಿ ರಾಜ ಎನ್ನುವ ಶಬ್ದವು ಕನಿಶ್ಟ ಮೂರು ರೂಪಗಳಲ್ಲಿ ಬಳಕೆಯಾಗಿದೆ, ರಾಯೊ, ರಾಸೊ, ರಾಜ ಮೊದಲಾದವು ಈ ರೂಪಗಳು. ಈ ವಿಬಿನ್ನ ರೂಪಗಳು ಬೆಳೆಯುವುದಕ್ಕೆ ಮತ್ತು ಇಲ್ಲಿ ಕಂಡುಬರುವ ನರ‍್ದಿಶ್ಟ ದ್ವನಿ ಬದಲಾವಣೆಗೆ ಕನ್ನಡದ ಸಂರ‍್ಕವೆ ಕಾರಣವಾಗಿದೆ. ಇದರ ಜೊತೆಗೆ ಹಳಗನ್ನಡದಲ್ಲಿ ಬಳಕೆಯಲ್ಲಿದ್ದ ೞ್ ದ್ವನಿಯು ಕ್ರಿಸ್ತಶಕ 2ನೆ ಶತಮಾನದ ಶಾತವಾಹನರ ಶಾಸನದಲ್ಲಿ ಬಳಕೆಯಾಗಿದೆ. ಈ ಲಿಪಿ ಅಸೋಕ ಪಾಲಿಗೆ ಲಿಪಿಯನ್ನು ಸಂಯೋಜಿಸಿದಾಗ ಇರಲಿಲ್ಲ. ಈ ದ್ವನಿ ಕನ್ನಡ ಬಾಶೆಯಲ್ಲಿ ಬಳಕೆಯಲ್ಲಿದ್ದ ಕಾರಣಕ್ಕೆ ಲಿಪಿಯನ್ನು ಪಡೆದುಕೊಂಡಿತು ಮತ್ತು ಬರಹಕ್ಕೆ ಬಂದಿತು. ಇಲ್ಲಿ ಮುಕ್ಯವಾದ ವಿಚಾರವೆಂದರೆ ಈ ಲಿಪಿ ಬರಹದಲ್ಲಿ ಬಳಕೆಗೆ ಬಂದದ್ದು ಪ್ರಾಕ್ರುತ ಶಾಸನದಲ್ಲಿ. ಅಂದರೆ, ಅಂದು ಬಳಕೆಯಲ್ಲಿದ್ದ ಪ್ರಾಕ್ರುತ ಇಶ್ಟುಮಟ್ಟಿಗೆ ಕನ್ನಡದ ಅಂಶಗಳನ್ನು ಒಳಗೊಂಡಿದ್ದಿತು ಎಂದು ಹೇಳಬಹುದು. ಇದರೊಂದಿಗೆ ಶಾತವಾಹನ ದೊರೆಯಾಗಿದ್ದ ಹಾಲ ಎಂಬುವನು ಬರೆದಿರುವ ಗಾಆಸತ್ತಸಇ (ಗಾತಾಸಪ್ತಸತಿ) ಕ್ರುತಿಯಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆ ಎಂಬುದನ್ನು ವಿದ್ವಾಂಸರು ತೋರಿಸಿದ್ದಾರೆ ಮತ್ತು ಇದು ಹೆಚ್ಚು ಜನರ ನಡುವೆ ಹರಿದಾಡುತ್ತದೆ. ತೆಲುಗಿನ ಕೆಲವು ಶಬ್ದಗಳೂ ಹೀಗೆ ಇದೆ ಕ್ರುತಿಯಲ್ಲಿ ಇವೆ ಎಂಬುದನ್ನೂ ವಿದ್ವಾಂಸರು ತೋರಿಸಿದ್ದಾರೆ. ಈ ಎಲ್ಲ ಅಂಶಗಳಿಂದ ಗೊತ್ತಾಗುವ ಅಂಶವೆಂದರೆ ಕನ್ನಡ ಮತ್ತು ಪ್ರಾಕ್ರುತಗಳು ಆ ಕಾಲಕ್ಕೆ ಅಶ್ಟುಮಟ್ಟಿಗೆ ಸಂಬಂದವನ್ನು ಹೊಂದಿದ್ದವು ಎಂಬುದು. ಇದು ಮಾತ್ರವಲ್ಲದೆ ಕನ್ನಡದ್ದೆನ್ನಬಹುದಾದ ಇಲ್ಲವೆ ತೆಲುಗೂ ಆಗಿರಬಹುದಾದ ಕೆಲವು ವ್ಯಾಕರಣ ರೂಪಗಳೂ ಈ ಶಾಸನಗಳಲ್ಲಿ ಬಳಕೆಯಾಗಿರುವಂತಿವೆ. ಆದರೆ, ಈ ಕಲ್ಬರಹಗಳನ್ನು ಈ ಹಿನ್ನೆಲೆಯಲ್ಲಿ ಆಳವಾದ ಅದ್ಯಯನಕ್ಕೆ ಒಳಪಡಿಸಬೇಕಾದ ಅವಶ್ಯಕತೆ ಇದೆ. ಇದರಿಂದ ಕನ್ನಡ ಮತ್ತು ಪಾಗದಗಳ ನಡುವಿನ ಸಂಬಂದದ ಬಗೆಗೆ ಹೆಚ್ಚು ಸ್ಪಶ್ಟನೆ ಸಿಗಬಹುದು. ಇದಕ್ಕೆ ಪೂರಕವಾಗಿ ಕನ್ನಡ ನೆಲದಲ್ಲಿ ಬವುದ್ದ ಸಂಬಂದಿತ ವಿದ್ವತ್ ಕೆಲಸಗಳು ಇದೆ ಪ್ರಾಕ್ರುತದಲ್ಲಿ ನಡೆದಿರುವುದನ್ನೂ ಹೇಳಬೇಕು. ಮುಕ್ಯವಾಗಿ ನಾಗರ‍್ಜುನನಂತ ದೊಡ್ಡ ವಿದ್ವಾಂಸನ ಅತ್ಯಂತ ಮಹತ್ವದ ಬರವಣಿಗೆಯಾದ ಮದ್ಯಮ ಕಾರಿಕೆಯೂ ಇಲ್ಲಿಯೆ ಬರಹಕ್ಕಿಳಿದಿರಬಹುದಾದ ಸಾದ್ಯತೆ ಇದೆ. ಈ ಕ್ರುತಿ ಪ್ರಾಕ್ರುತದಲ್ಲಿ ಸಿಕ್ಕಿಲ್ಲದೆ ಅದರ ಟಿಬೆಟಿಯನ್ ಅನುವಾದದಲ್ಲಿ ದೊರಕಿದೆ ಮತ್ತು ಟಿಬೆಟಿಯನ್ ಹಸ್ತಪ್ರತಿಯಲ್ಲಿ ಪಾತಾಳ ಚಯಿತ್ಯಾಲಯದ ಉಲ್ಲೇಕವಿದೆಯಂತೆ. ಕನಗನ ಹಳ್ಳಿಯ ಸ್ತೂಪವು ಪಾತಾಳ ಚಯಿತ್ಯಾಲಯವಾಗಿದೆ. ಹೀಗೆ ಇವೆಲ್ಲವೂ ಕನ್ನಡ-ಪ್ರಾಕ್ರುತಗಳ ಸಂಬಂದ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ.
ಇಲ್ಲಿಂದ ಮುಕ್ಯವಾಗಿ ರ‍್ಚೆಯನ್ನು ಇನ್ನಶ್ಟು ಮುಂದಕ್ಕೆ ತೆಗೆದುಕೊಂಡು ಬರಬೇಕು. ಇದ್ದ ಹಲವು ಪ್ರಾಕ್ರುತಗಳಲ್ಲಿ ದಕ್ಶಿಣದಲ್ಲಿ ಬಳಕೆಯಲ್ಲಿದ್ದ ಬಗೆಯು ಹೆಚ್ಚಿನ ಮಾನ್ಯತೆಯನ್ನು ಪಡೆದುಕೊಂಡಿದ್ದಿತು. ಇದಕ್ಕೆ ಸಹಜವಾಗಿಯೆ ಅಂದಿನ ಸಾಮಾಜಿಕ ಕಾರಣಗಳೆ ಇರುತ್ತವೆ. ಬಾಶೆಯೊಂದರ ಹಲವು ಬಗೆಗಳಲ್ಲಿ ಒಂದು ಬಗೆ ಸಾಮಾಜಿಕ ಪ್ರತಿಶ್ಟೆ ಪಡೆದುಕೊಳ್ಳುವುದಕ್ಕೆ ಬಾಶಿಕವಾದ ಯಾವ ಕಾರಣವೂ ಇರುವುದಿಲ್ಲ, ಬದಲಿಗೆ ಅದು ಸಾಮಾಜಿಕ, ರಾಜಕೀಯ ಹೀಗೆ ಬೇರೆ ಬೇರೆ ಕಾರಣಗಳು ಇರುತ್ತವೆ. ಕನ್ನಡದ ಜೊತೆಗೆ ಸಂರ‍್ಕವನ್ನು ಆಳವಾಗಿ ಹೊಂದಿರುವ ಪ್ರಾಕ್ರುತವು ಇಡಿಯ ದಕ್ಶಿಣ ಏಸಿಯಾದಲ್ಲಿ ಮಾನ್ಯತೆ ಪಡೆದುಕೊಂಡಿದ್ದಿತು. ಇದು ನಡುಗಾಲದವರೆಗೆ ಇದ್ದಿತು. ಇದರ ಮುಂದಿನ ಕತೆ ಇನ್ನೊಂದು ಮಹತ್ವದ ತಿರುವಿನೊಂದಿಗೆ ಬೆಳವಣಿಗೆ ಆಗುತ್ತದೆ. ದಕ್ಶಿಣದ ಪ್ರಾಕ್ರುತವನ್ನು ಮಹಾರಾಶ್ಟ್ರ-ಪ್ರಾಕ್ರುತ ಎಂದು ಕರೆಯಲಾಗುತ್ತಿದ್ದಿತು. ನೆನಪಿರಲಿ, ಮಹಾರಾಶ್ಟ್ರ ಎಂಬ ಪದ ಮೂಲಬೂತವಾಗಿ ರಾಶ್ಟ್ರಕೂಟರ ರಾಜ್ಯರಚನೆಯೊಂದಿಗೆ ಸಂಬಂದವನ್ನು ಹೊಂದಿದೆ. ಅದನ್ನು ಕರ‍್ನಾಟಕ ಎಂಬ ಪ್ರದೇಶಕ್ಕೆ ಎಂಬ ಅರ‍್ತದಲ್ಲಿಯೂ ಪರಿಬಾವಿಸಿಕೊಳ್ಳಬಹುದು. ಹೀಗೆ ವಿವರಣೆಯನ್ನು ಕೊಡಬೇಕಾದ ಅವಶ್ಯಕತೆ ಎಂದರೆ ಇದು ಕನ್ನಡದೊಂದಿಗೆ ಹೊಂದಿರುವ ಸಂಬಂದವನ್ನು ನೆನಪಿಸಿಕೊಳ್ಳುವುದಕ್ಕೆ. ಮಹಾರಾಶ್ಟ್ರ ಪ್ರಾಕ್ರುತ ಇದನ್ನು ಮುಂದೆ ಮರಾಟಿ ಪ್ರಾಕ್ರುತ ಎಂದು ಕರೆಯುವುದಕ್ಕೆ ಶುರುವಾಯಿತು ಪ್ರಾಕ್ರುತ ಎಂಬ ಪದವು ಸಾಮಾಜಿಕ ಮನ್ನಣೆಯಿಂದ ಕುಸಿತಕ್ಕೊಳಗಾದ ನಂತರ ಮರಾಟಿ ಪ್ರಾಕ್ರುತ ಇದು ಮರಾಟಿ ಎಂದು ಹೆಸರಾಯಿತು. ಹೀಗೆ ಇಂದಿನ ಮರಾಟಿ ಬಾಶೆಯು ಬೆಳೆಯುತ್ತದೆ. ಅಂದರೆ ಕನ್ನಡ ಮತ್ತು ಪಾಗದಗಳ ನಡುವಿನ ಸಂರ‍್ಕದಲ್ಲಿ ಹುಟ್ಟುತ್ತದೆ. ಹೀಗಾಗಿ ಮರಾಟಿ ಬಾಶೆಯ ಹೆಚ್ಚಿನ ವ್ಯಾಕರಣ ಮತ್ತು ಪದಕೋಶ ಕನ್ನಡದೊಂದಿಗೆ ಸನಿಹದ ಸಂಬಂದವನ್ನು ತೋರಿಸುತ್ತದೆ, ಅದು ಇಂಡೊ-ರ‍್ಯನ್ ಬಾಶೆಯಾದರೂ ಕೂಡ.
ಮುಂದಿನ ಬರವಣಿಗೆಯಲ್ಲಿ ಸಂಸ್ಕುçತದ ಕನ್ನಡದ ಜೊತೆಗಿನ ನಂಟಿನ ಕುರಿತು ಮಾತನಾಡೋಣ. ಅದರಲ್ಲಿಯೂ ಪಾಗದವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಪೂರಕ ವಿಶಯಗಳು ಬರಬಹುದು.
ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.