Date: 27-07-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಇನ್ಸ್ಟಾಲೇಷನ್, ಪೇಂಟಿಂಗ್ ಹಾಗೂ ಪ್ರಿಂಟ್ ಮೇಕಿಂಗ್ ಕಲಾವಿದ ಅರ್ಮಾಂದ್ ಪಿಯೆರ್ ಫೆರ್ನಾಂಡೆಸ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಅರ್ಮಾಂದ್ ಪಿಯೆರ್ ಫೆರ್ನಾಂಡೆಸ್ (Armand Pierre Fernandez)
ಜನನ: 17 ನವೆಂಬರ್, 1928
ಮರಣ: 22 ಅಕ್ಟೋಬರ್, 2005
ಶಿಕ್ಷಣ: ನ್ಯಾಷನಲ್ ಡೆಕೊರೆಟಿವ್ ಆರ್ಟ್ ಸ್ಕೂಲ್, ನೀಸ್, ಫ್ರಾನ್ಸ್
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಪಾಪ್ ಆರ್ಟ್, ನ್ಯೂ ರಿಯಲಿಸಂ
ವ್ಯವಸಾಯ: ಇನ್ಸ್ಟಾಲೇಷನ್, ಪೇಂಟಿಂಗ್, ಪ್ರಿಂಟ್ ಮೇಕಿಂಗ್
ಅರ್ಮಾನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಅರ್ಮಾನ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
60-70ರ ದಶಕಗಳ ಅವಧಿಯಲ್ಲಿ ಅಮೆರಿಕದಲ್ಲಿ ತುರೀಯದಲ್ಲಿದ್ದ “ಪಾಪ್‌ಆರ್ಟ್” ಚಳವಳಿಗೆ ಸಂವಾದಿಯಾಗಿ ಯುರೋಪಿನಲ್ಲಿ “ನ್ಯೂ ರಿಯಲಿಸಂ” ಚಳುವಳಿಯನ್ನು ಕಟ್ಟಿಬೆಳೆಸಿದ ಅರ್ಮಾನ್, ಅವೆರಡು ಚಳುವಳಿಗಳ ನಡುವಿನ ಸೇತುವೆಯಾಗಿ ಕಲಾಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಆಧುನೀಕರಣ ಮತ್ತು ಕೊಳ್ಳುಬಾಕತನಗಳನ್ನು ತಿರಸ್ಕರಿಸುತ್ತಾ, ಅವುಗಳಿಂದ ಸಂಭವಿಸುವ ವಿನಾಶವನ್ನು ಚಿತ್ರಿಸುವ ಶಕ್ತಿಶಾಲಿ ಕಲಾಕೃತಿಗಳನ್ನು ಅರ್ಮಾನ್ ಕಟ್ಟಿಕೊಟ್ಟಿದ್ದಾರೆ. ಕೈಗಾರಿಕಾ ಸಗಟು ಉತ್ಪಾದನೆಗಳು ಬಳಕೆಯಾದ ಬಳಿಕ ಉಂಟುಮಾಡುವ ಕಸ ಮತ್ತು ಅವು ತಂದೊಡ್ಡಬಹುದಾದ ವಿನಾಶದತ್ತ ಮುಂಗೋಳಿಯಾಗಿ ಜಗತ್ತಿನ ಗಮನ ಸೆಳೆದ ಕಲಾವಿದರಲ್ಲಿ ಅರ್ಮಾನ್ ಪ್ರಮುಖರು.
ಅವರ ಆರಂಭಿಕ ಕಲಾಕೃತಿಗಳಲ್ಲಿ ಅವರು ಒಂದು ನಿರ್ದಿಷ್ಟ ಕೈಗಾರಿಕಾ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಅಸೆಂಬ್ಲಿ ಮಾಡಿ, ಆ ಮೂಲಕ ಆ ಉತ್ಪನ್ನಗಳ ಮೂಲ ಉದ್ದೇಶದಿಂದ ನೋಡುಗರ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಆ ಪುನರಾವರ್ತನೆಗಳು ಬೊಟ್ಟುಮಾಡುವ ಆಧುನೀಕರಣದ ಪ್ರಕ್ರಿಯೆಯತ್ತ ವೀಕ್ಷಕರನ್ನು ಆಳವಾದ ಚಿಂತನೆಗೆ ಒಡ್ಡುವ ಪ್ರಯೋಗಗಳನ್ನು ಮಾಡಿದ್ದರು. ಅವರು ತನ್ನ ಈ ಪ್ರಯೋಗಗಳ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ: “I maintain that the expression of junk and objects has an intrinsic value, and I see no need to look for aesthetic forms in them and to adapt them to the colours of the palette,”
ಆಂಟಿಕ್‌ಗಳು ಮತ್ತು ಪೀಠೋಪಕರಣಗಳ ಮಾರಾಟಗಾರ ಆಂಟನ್ ಫೆರ್ನಾಂಡೆಸ್ ಮತ್ತು ಮೇರಿ ಜಾಕೆತ್ ಅವರ ಮಗ ಅರ್ಮಾನ್, ಜನಿಸಿದಾಗ ತಾಯಿಗೆ ಮದುವೆ ಆಗಿರಲಿಲ್ಲ. ಅರ್ಮಾನ್‌ಗೆ ಐದು ವರ್ಷ ಆಗುವ ಹೊತ್ತಿಗೆ ತಂದೆ ಮನೆಗೆ ಬಂದದ್ದು. ಬಾಲ್ಯದಲ್ಲಿ ಏಕಾಂಗಿಯಾಗಿ ಅಂತರ್ಮುಖಿ ಆಗಿದ್ದ ಬಾಲಕ ಅರ್ಮಾನ್, ತಂದೆಯ ಕಲಾಭಿರುಚಿಯ ಕಾರಣಕ್ಕೆ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಶಿಕ್ಷಣ ಪಡೆದದ್ದು ತತ್ವಶಾಸ್ತ್ರ ಮತ್ತು ಗಣಿತದಲ್ಲಿ. ಜುಡೊ ಕಲಿತು ಅದರ ತರಗತಿಗಳನ್ನು ನಡೆಸುತ್ತಿದ್ದರು. ಮಧ್ಯದಲ್ಲಿ ಸ್ವಲ್ಪ ಸಮಯ ಫ್ರಾನ್ಸಿನ ನೀಸ್‌ನಲ್ಲಿ ನ್ಯಾಷನಲ್ ಡೆಕೊರೇಟಿವ್ ಆರ್ಟ್ ಸ್ಕೂಲ್‌ನಲ್ಲಿ ಸೇರಿಕೊಂಡರೂ ಅಲ್ಲಿನ ಪಠ್ಯ ವಿಧಾನ ಅವರಿಗೆ ಇಷ್ಟ ಆಗದೇ ಅದನ್ನು ಬಿಟ್ಟರು. ಜುಡೊ ಕಲಿಯುತ್ತಿದ್ದಾಗ ಜೊತೆಯಾದ ಗೆಳೆಯ ಕಲಾವಿದ ಯೀವ್ಸ್ ಕ್ಲೇನ್ ಅವರ ಜೊತೆ ನಿಯೊ ರಿಯಲಿಸಂ ಚಳುವಳಿಯನ್ನು ಹುಟ್ಟುಹಾಕಿದ ಅರ್ಮಾನ್‌ಗೆ ಹಿಂದೂಯಿಸಂ, ರೋಸಿಕ್ರೂಸಿಯನಿಸಂ, ಝೆನ್ ಬುದ್ಧಿಸಂಗಳಲ್ಲಿ ಆಸಕ್ತಿ ಇತ್ತು.
ದೈಹಿಕ ಜಖಂ ಕಾರಣಕ್ಕೆ ಜೂಡೊ ತರಗತಿ ಬಿಟ್ಟ ಬಳಿಕ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅರ್ಮಾನ್, ಅಮೆರಿಕದಲ್ಲಿ ಕಲಾವೃತ್ತಿ ಮುಂದುವರಿಸಿದರು. 1954ರಲ್ಲಿ ರಬ್ಬರ್ ಸ್ಟಾಂಪ್ ಮುದ್ರೆಗಳನ್ನು ಬಳಸಿಕೊಂಡು ಅವರು ಮೊದಲ ಕಲಾಕೃತಿಗಳನ್ನು (cachets 1954) ರಚಿಸಿದರು. ಬಳಿಕ allures d'objets, coleres ಕಲಾಕೃತಿ ಸರಣಿಗಳು ಬಂದವು. 1960 ರಲ್ಲಿ, ತನ್ನ ಗೆಳೆಯ ಕ್ಲೇನ್ ಅವರ Le Vide (Empty) ಕಲಾಪ್ರದರ್ಶನಕ್ಕೆ ಪ್ರತಿಕ್ರಿಯೆಯಾಗಿ, ಅವರು ರಚಿಸಿದ ಕಲಾಪ್ರದರ್ಶನ Le Plein (Full-up) ಅವರಿಗೆ ಗುರುತಿಸುವಿಕೆಯನ್ನು ತಂದುಕೊಟ್ಟಿತು. ಆ ಕಲಾಕೃತಿಯಲ್ಲಿ ಇಡಿಯ ಗ್ಯಾಲರಿಯನ್ನು ಕಸದಿಂದ ತುಂಬಿ, ಅದನ್ನು ಹೊರಗಿನಿಂದಲೇ ಇಣುಕಿ ನೋಡಬೇಕಿತ್ತು. Long Term Parking (1982) and Hope for Peace (1976) ಅವರ ಇತರ ಪ್ರಮುಖ ಕಲಾಕೃತಿಗಳು. ಮಾನವ ಹಕ್ಕುಗಳ ಬಗ್ಗೆ ಬಲವಾದ ದೃಷ್ಟಿಕೋನ ಹೊಂದಿದ್ದ ಅರ್ಮಾನ್, ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ನ್ಯೂಯಾರ್ಕ್ ಚಾಪ್ಟರ್‌ನ ಅಧ್ಯಕ್ಷರಾಗಿ ಐದು ವರ್ಷ ಸೇವೆ ಸಲ್ಲಿಸಿದ್ದರು. ಅವರು 2005ರಲ್ಲಿ ಕ್ಯಾನ್ಸರ್‌ಗೆ ಬಲಿಯಾದರು.
ವಸ್ತುಗಳ ಅಸೆಂಬ್ಲೇಜ್‌ನಲ್ಲಿರುವ ವಿಕ್ಷಿಪ್ತತೆಯನ್ನು ಎತ್ತಿತೋರಿಸಿದ ಅರ್ಮಾನ್ ಅವರ ಮೂಲ ಹೆಸರು ಅರ್ಮಾಂಡ್ ಪಿಯೆರ್ ಫೆರ್ನಾಂಡೆಸ್. ಅದು ಅರ್ಮಾನ್ ಎಂದು ಬದಲಾದದ್ದೂ ಕುತೂಹಲಕರ ಘಟನೆಯಲ್ಲಿ. 1958ರಲ್ಲಿ ಗ್ಯಾಲರಿ ಐರಿಸ್ ಕ್ಲರ್ಟ್‌ನಲ್ಲಿ ನಡೆದ ಅವರ ಕಲಾಪ್ರದರ್ಶನದ ವೇಳೆ ಹೊರಬಂದ ಕೆಟಲಾಗ್‌ನಲ್ಲಿ ಅವರ ಹೆಸರನ್ನು ಅರ್ಮಾಂಡ್ ಬದಲು ತಪ್ಪಾಗಿ ಅರ್ಮಾನ್ ಎಂದು ದಾಖಲಿಸಲಾಗಿತ್ತು. ಅರ್ಮಾಂಡ್ ಆ ಹೊಸ ಹೆಸರನ್ನೇ ಒಪ್ಪಿಕೊಂಡು, ಜೀವನ ಪರ್ಯಂತ ಅರ್ಮಾನ್ ಆಗಿಯೇ ಉಳಿದರು.
ಅರ್ಮಾನ್ ಅವರ ಪರಿಚಯಾತ್ಮಕ ಫ್ರೆಂಚ್ ಚಿತ್ರ:
ಚಿತ್ರ ಶೀರ್ಷಿಕೆಗಳು
ಅರ್ಮಾನ್ ಅವರ Allure d'Objet, 1960
ಅರ್ಮಾನ್ ಅವರ Cachet Oeil de Tigre, 1959
ಅರ್ಮಾನ್ ಅವರ Ecole de Nice I, 1967
ಅರ್ಮಾನ್ ಅವರ Long Term Parking, 1982
ಅರ್ಮಾನ್ ಅವರ Mamma Mia!, 1961
ಅರ್ಮಾನ್ ಅವರ O'clock, 1998
ಅರ್ಮಾನ್ ಅವರ Permanent Press, 1977
ಅರ್ಮಾನ್ ಅವರ Piranhas II, 1981
ಅರ್ಮಾನ್ ಅವರ Pompei's Syndrome, 1984
ಅರ್ಮಾನ್ ಅವರ Poubelle des Enfants, 1960
ಅರ್ಮಾನ್ ಅವರ The Big Sax, 1976
ಅರ್ಮಾನ್ ಅವರ The Fourth of July, 1986
ಅರ್ಮಾನ್ ಅವರ Untitled, 1994
ಅರ್ಮಾನ್ ಅವರ Venus, Dressed in Flesh, 1986
ಈ ಅಂಕಣದ ಹಿಂದಿನ ಬರೆಹಗಳು:
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.