ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ

Date: 18-05-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಚೀನಾ ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದ ಗು ವೆಂಡಾ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಗು ವೆಂಡಾ  (Gu Wenda) 
ಜನನ: 1955 
ಶಿಕ್ಷಣ:  ಚೀನಾ ಅಕಾಡೆಮಿ ಆಫ್ ಆರ್ಟ್, ಹಾಂಗ್‌ಚೋ 
ವಾಸ: ಬ್ರೂಕ್ಲಿನ್ ಹೈಟ್ಸ್, ನ್ಯೂಯಾರ್ಕ್; ಷಾಂಘೈ, ಚೀನಾ 
ಕವಲು: ಕಂಟೆಂಪೊರರಿ ಆರ್ಟ್ 

ವ್ಯವಸಾಯ: ಕ್ಯಾಲಿಗ್ರಫಿ, ಇನ್ಸ್ಟಾಲೇಷನ್‌ಗಳು 

ಗು ವೆಂಡಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಗು ವೆಂಡಾ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 ಸಾಂಪ್ರದಾಯಿಕ ಚೀನೀ ಅಕ್ಷರಗಳನ್ನು ತಪ್ಪಾಗಿ ಬರೆದು ಅಥವಾ ಬದಲಾಯಿಸಿ ಬರೆದು, ಹೊಸ ಮತ್ತು ಅರ್ಥವಿಲ್ಲದ ಅಕ್ಷರಗಳನ್ನು ಸೃಷ್ಟಿಸುವ ಮೂಲಕ, ಅಕ್ಷರಗಳನ್ನು ಶಬ್ದಗಳಿಂದಾಚೆಗೆ ಕೊಂಡೊಯ್ದು, ಅಭಿವ್ಯಕ್ತಿಯ ಸಂಪ್ರದಾಯದ ಚೌಕಟ್ಟನ್ನು ಮೀರುವ ಜೊತೆಗೇ ಜಾಗತಿಕ ಬಾಂಧವ್ಯದ ಹೊಸ ಹೊಳಹುಗಳನ್ನು ನೀಡಿದ್ದು ಗು-ವೆಂಡಾ ಕಲಾಕೃತಿಗಳ ಹೆಚ್ಚುಗಾರಿಕೆ. ಸಂಪ್ರದಾಯದ ವಿರುದ್ಧ ಬಂಡೆದ್ದು ಮುರಿಯಲು ಮೊದಲು ಅದನ್ನು ಚೆನ್ನಾಗಿ ಅರಿತಿರಬೇಕೆಂಬುದು ಅವರ ನಿಲುವು. ಜಗತ್ತಿನಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಯ ತಲೆಕೂದಲುಗಳನ್ನು ಒಂದೆಡೆ ಸೇರಿಸಿ ಅದನ್ನೊಂದು ಕಲಾಕೃತಿಯಾಗಿ ರೂಪಿಸುವ ಮತ್ತು ಜಗತ್ತಿನ ಎಲ್ಲೆಡೆ ಅದನ್ನು ಪ್ರದರ್ಶಿಸುವ ವಿಶ್ವಸಂಸ್ಥೆಯ ಯೋಜನೆಯೊಂದರ ಭಾಗವಾಗಿ ಅವರು ಪ್ರಸಿದ್ಧರು. 

ಷಾಂಘೈನಲ್ಲಿ ಕಲಾವಿದರ ಕುಟುಂಬದಲ್ಲಿ (ಅಜ್ಜ ಖ್ಯಾತ ಸಿನಿಮಾ ನಟರು) ಜನಿಸಿದ ಗು-ವೆಂಡಾ ಕುಟುಂಬ ಮಾವೊ ಅವರ ಸಾಂಸ್ಕೃತಿಕ ಕ್ರಾಂತಿಯ ಭಾಗವಾಗಿ “ಮರುಕಲಿಕೆ ಶಿಬಿರಕ್ಕೆ” ಹೋಗಬೇಕಾಯಿತು. ಎಳವೆಯಲ್ಲಿ ಮಾವೊ ಅವರ ರೆಡ್ ಗಾರ್ಡ್ ಪಡೆ ಸೇರುವ ಆಸಕ್ತಿ ಹೊಂದಿದ್ದ ವೆಂಡಾ, ಅದರಲ್ಲಿ ಯಶಸ್ವಿಯೂ ಆಗುತ್ತಾರೆ ಮತ್ತು ಅಲ್ಲಿ, ಚೀನೀ ಭಾಷೆಯನ್ನು ಸರಳೀಕರಿಸುವ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಾರೆ. ಸಾಂಪ್ರದಾಯಿಕ ಚೀನೀ ಕ್ಯಾಲಿಗ್ರಾಫಿಯಲ್ಲಿ ಅವರ ಆಸಕ್ತಿ ಮೂಡಿದ್ದು ಆ ಸಮಯದಲ್ಲೇ. ಇದರ ಜೊತೆ ಮರದ ಕೆತ್ತನೆಯಲ್ಲೂ ಅವರಿಗೆ ಆಸಕ್ತಿ ಇತ್ತು.  ಮುಂದೆ, ಚೀನಾ ಅಕಾಡೆಮಿ ಆಫ್ ಆರ್ಟ್‌ನಲ್ಲಿ ಕಲಾಶಿಕ್ಷಣ ಪಡೆದ ಬಳಿಕ ಅವರು 80ರ ದಶಕದಲ್ಲಿ ತನ್ನ ಕ್ಯಾಲಿಗ್ರಾಫಿ ಪ್ರಯೋಗಗಳನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಪ್ರಭುತ್ವ , ಇವರ ಅರ್ಥವಿಲ್ಲದ ಅಕ್ಷರಗಳನ್ನು ಏನೋ ಗೂಢ ಲಿಪಿ ಎಂದು ತಿಳಿದು, ಪ್ರದರ್ಶಗಳಿಗೆ ಅಡ್ಡಿ ಮಾಡಿದ್ದೂ ಇದೆ. 1986ರಲ್ಲಿ ಕ್ಸಿಯಾನ್‌ನಲ್ಲಿ ನಡೆದ ಪ್ರದರ್ಶನಕ್ಕೆ ಚೀನೀ ಆಡಳಿತ ಅನುಮತಿ ನಿರಾಕರಿಸಿತ್ತು. 

1987ರಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿ ನೆಲೆನಿಂತ ಗು ವೆಂಡಾ, ಅಲ್ಲಿ ಮನುಷ್ಯತ್ವ, ಗಡಿ, ಜನಾಂಗೀಯತೆಗಳನ್ನು ವಸ್ತುವಾಗಿರಿಸಿಕೊಂಡು ಕಲಾಕೃತಿಗಳನ್ನು ರಚಿಸುವಾಗ ಮಾನವ ದೇಹದ ಕೂದಲು, ವೀರ್ಯ, ಹೊಕ್ಕುಳಬಳ್ಳಿ, ಸ್ರಾವಗಳಂತಹ ಅಂಶಗಳನ್ನೇ ಕಲಾಕೃತಿಗಳಾಗಿ ಬಳಸಿಕೊಂಡರು. 60 ದೇಶಗಳ ಮಹಿಳೆಯರು ಬಳಸಿದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಸಂಗ್ರಹಿಸಿ ರಚಿಸಿದ ಕಲಾಕೃತಿಯ ಪ್ರದರ್ಶನಕ್ಕೆ ಜಗತ್ತಿನಾದ್ಯಂತ ಫೆಮಿನಿಸ್ಟ್ ಸಂಘಟನೆಗಳ ವಿರೋಧ ವ್ಯಕ್ತವಾಗಿದ್ದರೆ, ಪೋಲಂಡಿನಲ್ಲಿ ಅವರ ತಲೆಕೂದಲುಗಳ ಜೋಡಣೆಯಿರುವ ಕಲಾಕೃತಿಯು ಅಲ್ಲಿನ ನಾಝಿ ಶಿಬಿರಗಳ ನೆನಪನ್ನು ಮತ್ತೆ ಹಸಿಗೊಳಿಸಿದ ಕಾರಣಕ್ಕೆ ಆ ಪ್ರದರ್ಶನಕ್ಕೂ ಸಾಕಷ್ಟು ಸಮಸ್ಯೆಗಳಾಗಿದ್ದವು.  

1993ರಲ್ಲಿ ಅವರು ಆರಂಭಿಸಿದ ಹದಿನೈದು ವರ್ಷಗಳ ಜಾಗತಿಕ ಕಲಾ ಯೋಜನೆ ವಿಶ್ವಸಂಸ್ಥೆಯ ಸಹಯೋಗದಲ್ಲಿ ನಡೆದು, ಅವರಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಜಗತ್ತಿನಾದ್ಯಂತ ಹಲವೆಡೆ ಆ ಸರಣಿಯ ಕಲಾಪ್ರದರ್ಶನಗಳು ನಡೆದಿವೆ. ವಿವಿದ ದೇಶ ಜನಾಂಗಗಳ ಜನರ ತಲೆಕೂದಲುಗಳನ್ನು ಸಂಗ್ರಹಿಸಿ, ಅವುಗಳನ್ನು ಜೊತೆಸೇರಿಸಿ, ಆ ಮೂಲಕ ಜಗತ್ತಿಗೆ ಐಕ್ಯತೆಯ ಒಂದು ಹೊಸ ಜನಾಂಗೀಯ ಗುರುತು ನೀಡುವ ಈ ಕಲಾಕೃತಿಗಳು ರಾಷ್ಟ್ರೀಯ ಸ್ಮಾರಕಗಳು ಎಂದವರು ಕರೆಯುತ್ತಾರೆ. ಕಾವ್ಯಾಸಕ್ತರೂ ಆಗಿರುವ ಗು ವೆಂಡಾ, 50ಕಲ್ಲಿನ ಫಲಕಗಳ ಮೇಲೆ ಚೀನಾದ ತಾಂಗ್ ಕಾವ್ಯಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿ, ಅದರ ಆಧಾರದಲ್ಲಿ ಕೆತ್ತನೆ ಮಾಡಿದ್ದನ್ನು ಬದಲಾದ ಜಗತ್ತಿನಲ್ಲಿ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳ ಮೂಲಕ ಹೊಸ ಹಾದಿ ಕಂಡುಕೊಳ್ಳುವ ಪ್ರಯತ್ನ ಎಂದಿದ್ದರು.   

ಇಂಕ್ ಆಲ್ಕೆಮಿ ಎಂಬ ಕಲಾಕೃತಿಗಳ ಸರಣಿಯಲ್ಲಿ ಅವರು ಉದ್ವಿಗ್ನತೆಗೆ ಚೀನೀ ಸಾಂಪ್ರದಾಯಿಕ ಔಷಧಿಯೆಂದು ಪರಿಗಣಿತವಾದ ತಲೆ ಕೂದಲಿನ ಪುಡಿಯಿಂದ ರಚಿತವಾದ ಶಾಯಿಯಿಂದ ಚಿತ್ರಗಳನ್ನು ಬರೆಯುವ ಮೂಲಕ ಅದು, ಸಾಂಸ್ಕೃತಿಕ ಉದ್ವಿಗ್ನತೆಯ ಶಮನದ ಪ್ರಯತ್ನ  ಎಂದಿದ್ದರು. ಅದೇರೀತಿ ಚಹಾ ಎಲೆಯ ಪುಡಿಯ ಶಾಯಿ ಬಳಸಿ ಟೀ ಆಲ್ಕೆಮಿ ಎಂಬ ಸರಣಿಯನ್ನೂ ಅವರು ರಚಿಸಿದ್ದಾರೆ. 

ತನ್ನ ಬದುಕಿನ ವೈರುಧ್ಯಗಳ ಬಗ್ಗೆ ಅವರು ಹೇಳುವುದು ಹೀಗೆ: ನನ್ನ ಜೀವನದ ಮೊದಲರ್ಧ ಭಾಗ ನಾನು ಸಾಂಪ್ರದಾಯಿಕ ಸಾಹಿತ್ಯದ ಮತ್ತು ಸೋಷಲಿಸ್ಟ್ ಸಂಸ್ಕೃತಿಯ ಭಾಗವಾಗಿದ್ದರೆ ಇನ್ನೊಂದರ್ಧದಲ್ಲಿ ಕ್ಯಾಪಿಟಲಿಸಂ ನ ಸವಾಲುಗಳನ್ನು ಅನುಭವಿಸುತ್ತಾ ನನ್ನ ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸಿಕೊಂಡೆ. ಈ ಎರಡು ವಿಭಿನ್ನ ಅನುಭವಗಳ ನಡುವೆ ನನ್ನ ಸ್ವತಂತ್ರ ವ್ಯಕ್ತಿತ್ವ, ಅರಿವು ಮತ್ತು ಸಂಪತ್ತನ್ನು ಸಂತುಲನದಲ್ಲಿರಿಸಿಕೊಳ್ಳುವುದು ತನ್ನ ಮುಂದಿರುವ ಮಹತ್ವದ ಸವಾಲು.  

ಗು ವೆಂಡಾ ಅವರ ಪರಿಚಯಾತ್ಮಕ ಸಂದರ್ಶನ:

ಗು ವೆಂಡಾ ಜೊತೆ ಮಾತುಕತೆ: 

ಚಿತ್ರ ಶೀರ್ಷಿಕೆಗಳು:  

ಗು ವೆಂಡಾ ಅವರ ‘I Evaluate Characters Written by Three Men and Three Women’, (1985) 

ಗು ವೆಂಡಾ ಅವರ  gwangju biennale special exhibition ctrl+n (2012) 

ಗು ವೆಂಡಾ ಅವರ genetics & metamorphosis – public contemporary art day series (2014) 

ಗು ವೆಂಡಾ ಅವರ Journey to the West”, (2016 –2017) 

ಗು ವೆಂಡಾ ಅವರ landscape class work series (1989) 

ಗು ವೆಂಡಾ ಅವರ mythos of lost dynasties a series (1983-86) 

ಗು ವೆಂಡಾ ಅವರ Mythos of Lost Dynasties Series—I Evaluate Characters Written by Three Men and Three Women (1985) 

ಗು ವೆಂಡಾ ಅವರ Temple of Heaven (1998) 

ಗು ವೆಂಡಾ ಅವರ The Great Wall of People’, (2004), human hair curtains. 

ಗು ವೆಂಡಾ ಅವರ united nations- american code, (1995–2019). Installation view, The Allure of Matter- Material Art from China, Los Angeles County Museum of Art. 

ಈ ಅಂಕಣದ ಹಿಂದಿನ ಬರೆಹಗಳು: 
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್

ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್ 

‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್

ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್

ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್

ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್

“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...