ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ 

Date: 01-06-2024

Location: ಬೆಂಗಳೂರು


"ರಾಶ್ಟ್ರಕೂಟರ ಕಾಲಕ್ಕೆ ಆಗಲೆ ಪರ‍್ಶಿಯನ್ ಮತ್ತು ಅರಾಬಿಕ್ ಈ ಎರಡು ಬಾಶೆಗಳು ಕನ್ನಡ ಸಮಾಜದ ಒಳಗೆ ಬಂದಿದ್ದವು ಎನ್ನುವುದಕ್ಕೆ ಆದಾರಗಳು ದೊರೆಯುತ್ತವೆ. ಕಲ್ಯಾಣ ಚಾಲುಕ್ಯರ ಕಾಲಕ್ಕೆ ಬಂದಾಗ ಅರಾಬಿಕ್-ಪರ‍್ಶಿಯನ್ ಬಾಶೆಗಳು ಕನ್ನಡ ಪರಿಸರದೊಳಗೆ, ಕನ್ನಡ ಸಮಾಜದೊಳಗೆ ಪಸರಿಸಿಕೊಂಡಿರುವುದಕ್ಕೆ ಹಲವು ಆದಾರಗಳು ದೊರಕುತ್ತವೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ’ ಕುರಿತು ಬರೆದಿರುವ ಲೇಖನ.

ಈ ಹಿಂದೆ ಪಾಗದ-ಸಕ್ಕದಗಳ ಬಗೆಗೆ ಮಾತನಾಡುವಾಗ ಅವು ಹೇಗೆ ಬಂದಿದ್ದವು ಎನ್ನುವುದನ್ನು ವಿಶೇಶವಾಗಿ ಮಾತನಾಡಲಾಗಿದ್ದಿತು. ಅರಾಬಿಕ್-ರ‍್ಶಿಯನ್ ಬಾಶೆಗಳು ಕನ್ನಡ ಸಮಾಜಕ್ಕೆ ಹೇಗೆ ಬಂದಿರಬಹುದು ಎಂಬುದನ್ನು ಮೊದಲಿಗೆ ಇಲ್ಲಿ ಮಾತನಾಡಬಹುದು.

ಕನ್ನಡ ಪರಿಸರ ಶಿಲಾಯುಗದ ಕಾಲದಿಂದಲೂ ಅರಬ್ ಬಾಶಿಕ ಪರಿಸರದೊಡನೆ ವಿವಿದ ರೀತಿಯ ಸಂರ‍್ಕ, ಸಂಬಂದಗಳನ್ನು ಹೊಂದಿದ್ದಿತು. ರಾಜ್ಯರಚನೆಯ ಜೊತೆಜೊತೆಗೆ ಈ ಸಂಬಂದಗಳು ವಿಬಿನ್ನವಾಗಿ ಬೆಳೆಯುತ್ತಿದ್ದವು. ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ಅರಬ್ ರಾಜಮನೆತನಗಳ ಜೊತೆಗಿನ ಸಂಬಂದಗಳು ಇದ್ದದ್ದು ನಮಗೆ ತಿಳಿಯುತ್ತದೆ. ಅಂದರೆ, ಸುಮಾರು ಅಯ್ದಾರನೆ ಶತಮಾನದಿಂದ ಕನ್ನಡ ಮಾತಾಡುವ ಪರಿಸರ ಅರಬ್ ಪರಿಸರದೊಂದಿಗೆ ರಾಜಸಂಬಂದವನ್ನೂ ಹೊಂದಿದ್ದಿತು. ಆದರೆ, ಅದು ಎಶ್ಟುಮಟ್ಟಿಗೆ ಇತ್ತು? ಹೊರಗಿನ ಸಂಬಂದ ಮಾತ್ರವೆ ಆಗಿದ್ದಿತೆ ಇಲ್ಲವೆ ಕನ್ನಡದೊಳಗೆ ಬಂದಿದ್ದಿತೆ ಎಂಬುದು ಅಸ್ಪಶ್ಟ. ಆದರೆ, ದೊಡ್ಡಪ್ರಮಾಣದ ವ್ಯಾಪಾರ ಸಂಬಂದಗಳು, ಸಮುದ್ರ ವ್ಯಾಪಾರದ ಸಂಬಂದಗಳು ಇದ್ದದ್ದು ಸ್ಪಶ್ಟವಾಗಿ ತಿಳಿಯುತ್ತದೆ. ಈ ಸಂಬಂದಗಳು ಕ್ರಮೇಣ ಬೆಳೆಯುತ್ತ ವ್ಯಾಪಕತೆಯನ್ನೂ ಪಡೆದುಕೊಂಡಿವೆ. ರಾಶ್ಟ್ರಕೂಟರ ಕಾಲಕ್ಕೆ ಈ ಸಂಬಂದಗಳು ದೊಡ್ಡ ಪ್ರಮಾಣದಲ್ಲಿ ಇದ್ದುದಕ್ಕೆ ಬೇಕಾದಶ್ಟು ದಾಕಲೆಗಳು ದೊರೆಯುತ್ತವೆ. ಸುಲೇಮಾನ್ ಎಂಬ ಅರಬ್ ಪ್ರವಾಸಿ ರಾಶ್ಟ್ರಕೂಟರ ರಾಜದಾನಿಗೆ ಬಂದು ಹೋಗಿದ್ದು ಒಂದು ಮಹತ್ವದ ಅಂಶ. ರಾಶ್ಟ್ರಕೂಟರ ಕಾಲಕ್ಕೆ ಆಗಲೆ ಪರ‍್ಶಿಯನ್ ಮತ್ತು ಅರಾಬಿಕ್ ಈ ಎರಡು ಬಾಶೆಗಳು ಕನ್ನಡ ಸಮಾಜದ ಒಳಗೆ ಬಂದಿದ್ದವು ಎನ್ನುವುದಕ್ಕೆ ಆದಾರಗಳು ದೊರೆಯುತ್ತವೆ. ಕಲ್ಯಾಣ ಚಾಲುಕ್ಯರ ಕಾಲಕ್ಕೆ ಬಂದಾಗ ಅರಾಬಿಕ್-ಪರ‍್ಶಿಯನ್ ಬಾಶೆಗಳು ಕನ್ನಡ ಪರಿಸರದೊಳಗೆ, ಕನ್ನಡ ಸಮಾಜದೊಳಗೆ ಪಸರಿಸಿಕೊಂಡಿರುವುದಕ್ಕೆ ಹಲವು ಆದಾರಗಳು ದೊರಕುತ್ತವೆ.

ಅಂದರೆ, ಅರಾಬಿಕ್-ರ‍್ಶಿಯನ್ ಬಾಶೆಗಳು ಈ ಮೊದಲಿನಿಂದ ಇದ್ದ ವ್ಯಾಪಾರ ಸಂಬಂದಗಳು, ಅದರೊಟ್ಟಿಗೆ ಬೆಳೆದ ರಾಜಸಂಬಂದಗಳು ಮತ್ತು ಇವೆಲ್ಲಕ್ಕಿಂದ ಮುಕ್ಯವಾಗಿ ಮತಪಂತಗಳ ಸಂಬಂದ. ಇವುಗಳನ್ನು ಇಲ್ಲಿ ತುಸು ಮಾತಾಡಬೇಕು.

ಬಹುಮುಕ್ಯವಾಗಿ ಪಂಪನ ಕಾವ್ಯದಲ್ಲಿ ಅರಾಬಿಕ್ ಶಬ್ದವಾದ ಚಾಕಣ ಎನ್ನುವುದು ಬಳಕೆಯಾಗಿರುವುದು. ಚಾಕಣ ಎಂದರೆ ಹೆಂಡದೊಂದಿಗೆ ತಿನ್ನುವ ಹುರಿದ ಒಣಗಿದ ಮಾಂಸದ ತುಂಡುಗಳು. ಈ ಶಬ್ದ ಮತ್ತು ಈ ಆಹಾರ ಇವು ಅರಾಬಿಕ್ ಜಗತ್ತಿನಿಂದ ಬಂದವು ಎಂಬುದನ್ನು ವಿದ್ವಾಂಸರು ತೋರಿಸಿದ್ದಾರೆ. ಇದೆ ಕಾಲಕ್ಕೆ ಸೇರುವ, ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಲ್ಲಿ ಪರ‍್ಶಿಯನ್-ಅರಾಬಿಕ್ ಶಬ್ದಗಳು ಹೆಚ್ಚು ಹೆಚ್ಚು ಬಳಕೆಯಾಗಿರುವುದು ಕಾಣಿಸುತ್ತದೆ. ಒಂದೆರಡು ಎತ್ತುಗೆಗಳನ್ನು ತೆಗೆದುಕೊಂಡು ಮಾತುಕತೆಯನ್ನು ಮುಂದುವರೆಸಬಹುದು. ಅಡುಗೆಯಲ್ಲಿ ಬಳಸುವ ಸೊಂಟಿ/ಸುಂಟಿ/ಶುಂಟಿ ಇದನ್ನು ಒಣಗಿದ ನಂತರ ಬಳಸುವುದೂ ಇದೆ. ಇದಕ್ಕೆ ಅಲ್ಲ ಎಂಬ ಹೆಸರು ಕನ್ನಡದಲ್ಲಿ ಪ್ರಚಲಿತದಲ್ಲಿದೆ. ಇದಕ್ಕೆ ಕನ್ನಡದಲ್ಲಿ ಒಣಸೊಂಟಿ ಎಂಬ ಇನ್ನೊಂದು ಹೆಸರು ಇದೆ. ಇದಕ್ಕೆ ಕನ್ನಡದಲ್ಲಿ ಬೇರೊಂದು ಪದ ಇಲ್ಲ, ಬದಲಿಗೆ ಪರ‍್ಶಿಯನ್ನಿಂದ ಬಂದ ಅಲ್ಲ ಎಂಬ ಶಬ್ದ ಬಳಕೆಯಲ್ಲಿದೆ. ನಮಗಿಲ್ಲಿ ಮುಕ್ಯವಾದ ವಿಚಾರವೆಂದರೆ ಅಲ್ಲ ಎಂಬ ಈ ಶಬ್ದ ಕಲ್ಯಾಣಿ ಚಾಲುಕ್ಯರ ಹತ್ತನೆ ಶತಮಾನದ ಶಾಸನದಲ್ಲಿ ವ್ಯಾಪಾರದ ವಸ್ತುವಾಗಿ ಬಳಕೆಯಾಗಿದೆ. ಅಂದರೆ, ದಿನಜೀವನದ ಬಾಗವಾದ ಒಂದು ವಸ್ತುವಿನ ಹೆಸರು ಅಂದಿಗೆ ಸಹಜವಾಗಿ ಬಳಕೆಯಲ್ಲಿದ್ದದ್ದು ಗೊತ್ತಾಗುತ್ತದೆ. ಅಲ್ಲದೆ, ಈ ಶಬ್ದವು ಇತರ ವ್ಯಾಪಾರಿ ವಸ್ತುಗಳ ಪಟ್ಟಿಯಲ್ಲಿ ಬರುವುದು ಇದರ ಬಳಕೆಯನ್ನು ಇನ್ನಶ್ಟು ಸ್ಪಶ್ಟಪಡಿಸುತ್ತದೆ.

ಇದಕ್ಕಿಂತ ಅತಿ ಮುಕ್ಯವಾದ ಅಂಶವೊಂದನ್ನು ಇಲ್ಲಿಗೆ ತಂದು ಮಾತನಾಡೋಣ. ಕನ್ನಡದಲ್ಲಿ ಅಲ್ಲಮ ಎಂಬ ಹೆಸರು ಹೆಚ್ಚು ಹೆಸರಾದುದು. ಹನ್ನೆರಡನೆ ಶತಮಾನಕ್ಕೆ ಸೇರಿರಬಹುದಾದ ತತ್ವಗ್ನಾನಿ, ಬರಹಗಾರ ಅಲ್ಲಮಪ್ರಬು ನಮಗೆ ತಿಳಿದ ವ್ಯಕ್ತಿ. ಅಲ್ಲಮ ಎಂಬ ಹೆಸರಿನ ಬಗೆಗೆ ಬಹಳಶ್ಟು ಪ್ರಯತ್ನ ಮಾಡಿಯೂ ಪರ‍್ಶಿಯನ್-ಅರಾಬಿಕ್ ಅಲ್ಲದ ಯಾವುದೆ ಬಾರತೀಯ ಬಾಶೆಗಳಲ್ಲಿ ಅದರ ದಾತು ರೂಪವನ್ನು ಕಂಡುಕೊಳ್ಳುವುದಕ್ಕೆ ಕಶ್ಟವಾಗಿದೆ. ಈ ಪದವು ಅರಾಬಿಕ್ ಮೂಲದ್ದು ಎಂಬುದು ವಿದ್ವಾಂಸರ ವಾದ. ಇಲ್ಲಿ ಮುಕ್ಯವಾದ ವಿಚಾರವೆಂದಲೆ ಹತ್ತನೆ ಮತ್ತು ಹನ್ನೊಂದನೆ ಶತಮಾನಗಳಲ್ಲಿ ಕಲ್ಯಾಣ ಚಾಲುಕ್ಯರ ಸಾಮಂತ ದೊರೆಗಳಾಗಿದ್ದ ಅಹಿಹಯ ಮನೆತನದಲ್ಲಿ ಮೂರು ಮಂದಿ ಅಲ್ಲಮ ಎಂಬ ರಾಜರು ಆಗಿಹೋಗಿದ್ದಾರೆ. ಒಂದು ವೇಳೆ ಅಲ್ಲಮ ಎನ್ನುವ ಪದ ಅರಾಬಿಕ್ ಆಗಿದ್ದರೆ, ಅರಾಬಿಕ್ ಬಾಶೆಯ ಹೆಸರೊಂದನ್ನು ವ್ಯಕ್ತಿಗಳು ಹತ್ತನೆಯ ಶತಮಾನದಲ್ಲಿಯೆ ತಮ್ಮ ಹೆಸರನ್ನಾಗಿ ಇಟ್ಟುಕೊಳ್ಳುತ್ತಿದ್ದರು ಎನ್ನುವುದಾದರೆ ಅರಾಬಿಕ್ ಅಶ್ಟು ದೊಡ್ಡ ಪ್ರಮಾಣದಲ್ಲಿ ಕನ್ನಡ ಸಮಾಜದೊಳಗೆ ಬೆರೆತುಕೊಂಡಿದ್ದಿತು ಎಂಬುದು ಸ್ಪಶ್ಟವಾಗುತ್ತದೆ. ಆ ಕಾಲಕ್ಕಿಂತ ಹಿಂದಿನಿಂದಲೆ ಅರಾಬಿಕ್ ಸಂಬಂದ ದೊಡ್ಡದಾಗಿ ಬೆಳೆದಿರಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು.

ಇಸ್ಲಾಂ ಮತ್ತು ಸೂಪಿ ಸಂಬಂದಗಳು ಕನ್ನಡ ಪರಿಸರಕ್ಕೆ ಯಾವಾಗಿನಿಂದ ಒದಗಿದವು ಎಂಬುದು ಬಹಳ ಚರ‍್ಚಾಸ್ಪದ ವಿಚಾರ. ಹಲವರು ಉತ್ತರದ ರಾಜಸಂಬಂದಗಳ ಮೂಲಕ ಇಸ್ಲಾಂ ಮತ್ತು ಸೂಪಿ ಇವು ಹದಿಮೂರನೆ ಶತಮಾನದಲ್ಲಿ ಬಂದವು ಎಂಬ ತಿಳುವಳಿಕೆಯನ್ನು ಹೊಂದಿದ್ದಾರೆ. ಆದರೆ, ರಾಶ್ಟ್ರಕೂಟರ ಕಾಲದಲ್ಲಿಯೆ ಇಸ್ಲಾಂ ಮತ್ತು ಸೂಪಿ ಬಂದಿರಬಹುದೆಂಬ ಅನುಮಾನ ಇದೆ. ಇದಕ್ಕೆ ಪೂರಕವಾಗಿ ಹಲವು ಅಂಶಗಳು ದೊರೆಯಬಹುದಾದರೂ ಅದ್ಯಯನಗಳು ಹೆಚ್ಚು ಬೇಕು. ಆದರೆ, ಈ ವಾದಕ್ಕೆ ಈ ಮೇಲೆ ಮಾತಾಡಿದ ವಿಚಾರಗಳು ಮತ್ತು ಇಂತ ಹಲವು ಅಂಶಗಳು ಆದಾರವಾಗುತ್ತವೆ. ನಮಗೀಗ ಕನ್ನಡ ಪರಿಸರದಲ್ಲಿ ದೊರೆಯುವ ಇಸ್ಲಾಂ ಮತ್ತು ಸೂಪಿಗಳು ಯಾವಾಗಿನಿಂದ ಎಂಬುದು ಮುಕ್ಯ. ನಮಗೆ ದೊರೆಯುವ ಬಹುತೇಕ ಆದಾರಗಳು ಸೂಪಿಗಳು ಉತ್ತರದಿಂದ ಬಂದಿರುವುದನ್ನೆ ಹೇಳುತ್ತವೆ. ಆದರೆ, ಇದಕ್ಕಿಂತ ಮೊದಲು ಈ ಸಂಬಂದಗಳು ನೀರಿನ ಮೂಲಕ, ಅಂದರೆ ಸಾಗರದ ಮೂಲಕ ಬಂದಿರಬೇಕು.

ಇಲ್ಲಿ ಕುತೂಹಲದ ಮತ್ತು ಅತ್ಯಂತ ಮಹತ್ವದ ಒಂದು ವಿಚಾರವೆಂದರೆ ಕನ್ನಡ ಪರಿಸರದಲ್ಲಿ ಅರಾಬಿಕ್-ಪರ‍್ಶಿಯನ್ ಬಾಶೆಯ ಅತಿ ಹಳೆಯ ಬರಹದ ದಾಕಲೆ ಯಾವುದು ಎಂದು ಹುಡುಕಿದಾಗ ಕ್ರಿಸ್ತಶಕ 1005-06ಕ್ಕೆ ಸಂಬಂದಪಡುವ, ಅಂದರೆ ಹನ್ನೊಂದನೆ ಶತಮಾನಕ್ಕೆ ಸೇರುವ ಚಿಕ್ಕಮಗಳೂರಿನ ಬುಡನ್ ಗಿರಿ ಶಾಸನ. ಈ ಮೇಲೆ ಶಬ್ದಗಳ ಪ್ರಯೋಗವನ್ನು ಗಮನಿಸಿದೆವು. ಇಲ್ಲಿ ಇಡಿಯ ಶಾಸನ ಅರಾಬಿಕ್ ಬಾಶೆಯಲ್ಲಿ ಇರುವ ದಾಕಲೆಯನ್ನು ಮಾತಿಗೆ ತರುತ್ತಿದ್ದೇನೆ. ಇದರಿಂದ ಅರಾಬಿಕ್-ಪರ‍್ಶಿಯನ್ ಹತ್ತನೆಯ ಶತಮಾನದ ವೇಳೆಗೆ ಇಲ್ಲಿ ಬರಹಕ್ಕಿಳಿಯುವಶ್ಟುಮಟ್ಟಿಗೆ ಬೆಳೆದಿದ್ದಿತು ಎನ್ನುವುದು ಗಮನೀಯ ವಿಚಾರ. ಬಾಬಾ ಬುಡನ್ ಗಿರಿ ಒಂದು ರ‍್ನಾಟಕದ ಪ್ರಸಿದ್ದ ದರ‍್ಮಿಕ ಸ್ತಳ. ಇಲ್ಲಿ ಒಂಬತ್ತು ಹತ್ತನೆ ಶತಮಾನದಿಂದಲೆ ಸೂಪಿಗಳು ಬದುಕಿದ್ದರು ಎನ್ನುವುದಕ್ಕೆ ಇದು ದಾಕಲೆಯನ್ನು ಕೊಡುತ್ತದೆ.

ಇಂದಿನ ಯಾದಗಿರಿ ಜಿಲ್ಲೆಯ ಸಗರದ ಸರಮಸ್ತ ಎಂಬ ಸೂಪಿ ಬಹಮನಿಗಳಿಗಿಂತ ಮೊದಲು ಕನ್ನಡ ಪರಿಸರಕ್ಕೆ ಬಂದಿರುವನೆಂಬ ನಂಬಿಕೆ ಇದೆ. ಸಗರದಲ್ಲಿ ದೊರೆಯುವ ಪರ‍್ಶಿಯನ್ ಹಳೆಯ ಶಾಸನ ಹದಿನಾಲ್ಕನೆ ಶತಮಾನದ ಮೊದಲ ಬಾಗಕ್ಕೆ ಸಂಬಂದಿಸಿದ್ದಾಗಿದೆ. ಹದಿನಾಲ್ಕನೆ ಶತಮಾನದಲ್ಲಿ ಹಲವು ಕಡೆ ಹಲವು ಶಾಸನಗಳು ದೊರಕುತ್ತವೆ. ಇದೆ ಕಾಲಕ್ಕೆ ಕಲಬುರಗಿಯಲ್ಲಿ ಬಹಮನಿ ಸಂಸ್ತಾನ ಸ್ತಾಪನೆಯಾಗುವುದರ ಮೂಲಕ ಪರ‍್ಶಿಯನ್ ಅದಿಕಾರದ ಬಾಶೆಯಾಗಿ ಮಹತ್ವದ ಸ್ತಾನವನ್ನು ಪಡೆದುಕೊಳ್ಳುತ್ತದೆ. ಇದರೊಟ್ಟಿಗೆ ಅರಾಬಿಕ್ ಬಹಮನಿಗಳ ದರ‍್ಮಿಕ ಬಾಶೆಯಾಗಿ ಬೆಳೆಯುತ್ತದೆ. ಇದರಿಂದ ಅರಾಬಿಕ್-ಪರ‍್ಶಿಯನ್ ಇವು ಕನ್ನಡ ಪರಿಸರದಲ್ಲಿ ಇನ್ನಶ್ಟು ವ್ಯಾಪಕವಾಗಿ ಪಸರಿಸಿಕೊಳ್ಳುತ್ತವೆ ಮತ್ತು ಆಳಕ್ಕೆ ಇಳಿಯುತ್ತವೆ.

ಇಲ್ಲಿ ಅರಾಬಿಕ್-ಪರ‍್ಶಿಯನ್ ಇವೆರಡನ್ನೂ ಒಟ್ಟೊಟ್ಟಿಗೆ ಉಲ್ಲೇಕಿಸಿ ಮಾತನಾಡುವುದಕ್ಕೆ ಕಾರಣ ಅದ್ಯಯನಗಳು ಇಲ್ಲದಿರುವುದರಿಂದ ಇವೆರಡರಲ್ಲಿ ಯಾವ ಬಾಶೆಯ ಸಂಬಂದ ಎಲ್ಲಿ ಎಶ್ಟು ಎಂಬುದನ್ನು ಸರಿಯಾಗಿ ಮಾತನಾಡಲು ಆಗುವುದಿಲ್ಲ. ಈ ಹಿಂದೆ ಪ್ರಾಕ್ರುತ-ಸಂಸ್ಕೃತ ಇವುಗಳ ನಡುವೆಯೂ ಇಂತ ಸಮಸ್ಯೆ ಇರುವುದನ್ನು ಮಾತನಾಡಲಾಗಿದ್ದಿತು.

ಈ ಅಂಕಣದ ಹಿಂದಿನ ಬರೆಹಗಳು:
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

02-10-2024 ಬೆಂಗಳೂರು

"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...

ತಾಯ್ಮಾತು-ತಾಯಿ ಮಾತು-ಗುರ‍್ತಿಕೆ  

28-09-2024 ಬೆಂಗಳೂರು

"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ...

ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು

26-09-2024 ಬೆಂಗಳೂರು

"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್...