Date: 22-03-2025
Location: ಬೆಂಗಳೂರು
ಬೆಂಗಳೂರು: ಮಹಿಳೆಯರಿಗೆ ಅಡ್ಡವಾಗಿರುವುದು ಸಮಾಜದ ವ್ಯವಸ್ಥೆಯೆ ಹೊರತು ಪುರುಷರಲ್ಲ. ಸ್ತ್ರೀವಾದ ಎಂದರೆ ಸ್ವತಂತ್ಯ್ರವಾಗಿ ಉಳಿಯುವುದು, ನಿನ್ನ ಬದುಕು ನಿನ್ನ ನಿರ್ದಾರ, ನಿನ್ನ ದಾರಿ, ನಿನ್ನನ್ನು ನೀನು ಕಂಡುಕೊಳ್ಳುವುದು ಎಂದರ್ಥ. ಎಂದು ಖ್ಯಾತ ಸ್ತ್ರೀವಾದಿ ಚಿಂತಕರಾದ ಡಾ. ಎಚ್. ಎಸ್. ಶ್ರೀಮತಿ ಅವರು ಹೇಳಿದರು.
'ಅರಿವೆಂಬುದು ಬಿಡುಗಡೆ' ಘೋಷವಾಕ್ಯದಡಿ ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು ಇವರ ಸಹಯೋಗದಲ್ಲಿ ನೆಡಯುತ್ತಿರುವ ‘8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ’ ದಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಖ್ಯಾತ ಸ್ತ್ರೀವಾದಿ ಚಿಂತಕರಾದ ಡಾ. ಎಚ್. ಎಸ್. ಶ್ರೀಮತಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕನ್ನಡದಲ್ಲಿ ಬರೆಯುತ್ತಿರುವವರೆಲ್ಲರೂ ಲೇಖಕಿಯರು. ಲೇಖಕಿಯರ ಸಂಘ ಎನ್ನುವುದು ಕೇವಲ ಸಾಹಿತ್ಯ ಬರವಣಿಗೆಗೆ ಮಾತ್ರ ಸೀಮೀತವಲ್ಲ, ವಿಜ್ಞಾನ ಅರ್ಥಶಾಸ್ತ್ರ, ಚರಿತ್ರೆ ಹೀಗೆ ಬೇರೆ ಬೇರೆ ವಲಯಗಳಲ್ಲಿ ಬೇರೆ ಬೇರೆ ರೀತಿಯ ಬರವಣಿಗೆಗಳನ್ನು ಒಳಗೊಂಡಿರುತ್ತದೆ. ಇವರೆಲ್ಲರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾ ಸಮಾಜದಲ್ಲಿ ಸ್ತ್ರೀ ವಾದದ ಬಗೆಗಿರು ಅಭಿಪ್ರಾಯ ಮತ್ತು ಸ್ತ್ರೀವಾದ ಎಂದರೆ ಏನು ಎನ್ನುದನ್ನು ಸಂಕ್ಷಿಪ್ತವಾಗಿ ವಿವರಿಸಿದರು.
47 ವರ್ಷ ಇತಿಹಾಸವುಳ್ಳ ಲೇಖಕಿಯರ ಸಂಘ ಹಲವಾರು ಅಧ್ಯಕ್ಷರನ್ನು ಕಂಡಿದೆ, ಟಿ. ಸುನಂದಮ್ಮ ಅವರಿಂದ ಹಿಡಿದು ಇವತ್ತಿನ ಡಾ. ಎಚ್.ಎಲ್. ಪುಷ್ಪವರೆಗೆ ಒಟ್ಟು 10 ಅಧ್ಯಕ್ಷರನ್ನು ಕಂಡಂತಹ ಸಂಸ್ಥೆ ಇದಾಗಿದೆ.
ಅಲ್ಲದೇ ಸಮ್ಮೇಳನದ ಪ್ರಯುಕ್ತವಾಗಿ ತಂದಂತಹ ಸ್ಮರಣ ಸಂಚಿಕೆ ‘ವಿಶೇಷ ಲೇಖಕಿ’, ಹಾಗೂ ಭಾರತಿ ಹೆಗಡೆಯವರು ಸಂಪಾದಿಸಿರುವ 10 ಲೇಖಕಿಯರ ಆತ್ಮಕತನವನ್ನೊಳಗೊಂಡ ‘ಲೇಖ ಲೋಕ - 0೯’, ಕೆ. ಎಮ್. ವಿಜಯಲಕ್ಷ್ಮೀ ಅವರ ‘ಕರ್ನಾಟಕ ಲೇಖಕಿಯರ ಸಂಘ ನಡೆದು ಬಂದ ದಾರಿ’, ಹಾಗೂ ಎಲ್. ವಿ. ಶಾಂತಕುಮಾರಿ ಅವರು ಅನುವಾದಿಸಿರುವ ‘ಊರ್ಮಿಳಾ’, ಕೃತಿಗಳು ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು.
ಕರ್ನಾಟಕರ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ, ಹಿರಿಯ ಚಿಂತಕರಾದ ರಾಜೇಂದ್ರ ಚೆನ್ನಿ, ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾದ ಡಾ. ಎಲ್. ಮಂಜುಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಕೆ.ಎಂ. ಗಾಯತ್ರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಬೆಂಗಳೂರು: "ಹಾಸಾಕೃ ನಾನು ಜೊತೆಯಲ್ಲೇ ಓದುತ್ತಿದ್ದರೂ, ಅವರ ಬಗ್ಗೆ ನನಗೇನೂ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ನನ್...
ಬೆಂಗಳೂರು: ಸಾಹಿತ್ಯ ಅಕಾದೆಮಿ ವತಿಯಿಂದ ಜಿ.ಎಸ್ ಅಮೂರ ಅವರ ಬದುಕು-ಬರಹ ಹಾಗೂ ಜನ್ಮ ಶತಮಾನೋತ್ಸವ ವಿಚಾರ ಸಂಕಿರಣ ಕಾರ್ಯಕ...
ಬಳ್ಳಾರಿ: ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ “ಸಂಗಂ ಸಂಸ್ಥೆ ಬಳ್ಳಾರಿ”ಯು 'ಸಂಗಂ ಸಾಹಿತ್ಯ ಪುರಸ್ಕಾ...
©2025 Book Brahma Private Limited.