Date: 25-04-2025
Location: ಬೆಂಗಳೂರು
ಬೆಂಗಳೂರು: ಸಾಹಿತ್ಯ ಅಕಾದೆಮಿ ವತಿಯಿಂದ ಜಿ.ಎಸ್ ಅಮೂರ ಅವರ ಬದುಕು-ಬರಹ ಹಾಗೂ ಜನ್ಮ ಶತಮಾನೋತ್ಸವ ವಿಚಾರ ಸಂಕಿರಣ ಕಾರ್ಯಕ್ರಮವು 2025 ಏ.25 ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾದೆಮಿಯ ಕಾರ್ಯದರ್ಶಿ ಕೆ. ಶ್ರೀನಿವಾಸರಾವ್ ಅವರು ಸ್ವಾಗತ ನುಡಿಗಳನ್ನಾಡಿದರು.
ಪ್ರಾಸ್ತಾವಿಕವಾಗಿ ಸಾಹಿತ್ಯ ಅಕಾದೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯ ವಿಜಯಕುಮಾರ ಕಟಗಿಹಳ್ಳಿಮಠ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೇಖಕ, ವಿಮರ್ಶಕ ಎಸ್. ದಿವಾಕರ ಮಾತನಾಡಿ, "ಕನ್ನಡದ ಪ್ರಸಿದ್ಧ ಲೇಖಕರನ್ನು ವಿಮರ್ಶೆಗೆ ಒಳಪಡಿಸಿದವರು ಜಿ.ಎಸ್. ಆಮೂರ. ಆ ಮೂಲಕ ಅವರು ನಮ್ಮ ಬದುಕಿನ ಬಗ್ಗೆ, ಒಳಿತು ಕೆಡುಕಿನ ಬಗ್ಗೆ, ನೈತಿಕ ಆಯ್ಕೆಯನ್ನೊಳಗೊಂಡ ನಮ್ಮ ಇಂಬಂಧಿತನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. 20ನೇ ಶತಮಾನದ ಪ್ರಾರಂಭದಿಂದ ಹಿಡಿದು ಇವತ್ತಿನವರೆಗೆ ಕನ್ನಡ ಸಾಹಿತ್ಯದಲ್ಲಿ ಏನೇನಲ್ಲ ಇರಬಹುದು ಎಂದು ಕಾಣಬಯಸುವವರು ಒಮ್ಮೆ ಅಮೂರರ ಕೃತಿಗಳನ್ನು ಓದಲೇಬೇಕು," ಎಂದು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಲೇಖಕ ಬಸವರಾಜ ಕಲ್ಗುಡಿ ಮಾತನಾಡಿ, "ನಾನು ನೇರವಾಗಿ ಅವರ ಶಿಷ್ಯನಲ್ಲ ಅಂತಹ ಭಾಗ್ಯ ನನಗೆ ಸಿಗಲಿಲ್ಲ. ಆದರೆ ಅವರ ವಿಮರ್ಶೆಗಳನ್ನೆಲ್ಲ ಓದಿ ಅವರ ವಿಮರ್ಶಾತ್ಮಕ ಶಿಷ್ಯತ್ವವನ್ನು ಪಡೆದೆ," ಎಂದರು.
ಗೌರವ ಅತಿಥಿಯಾಗಿ ವೇದಿಕೆಯಲ್ಲಿ ಜಿ.ಎಸ್. ಆಮೂರ ಅವರ ಮಗ ರವಿ ಆಮೂರ ಅವರು ಉಪಸ್ಥಿತರಿದ್ದರು.
ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಲ್ಲತ್ತಹಳ್ಳಿ ಬಾಲ ಗಂಗಾಧರ ನಗರದ &ls...
ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...
ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...
©2025 Book Brahma Private Limited.