Date: 24-04-2025
Location: ಬೆಂಗಳೂರು
ಬಳ್ಳಾರಿ: ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ “ಸಂಗಂ ಸಂಸ್ಥೆ ಬಳ್ಳಾರಿ”ಯು 'ಸಂಗಂ ಸಾಹಿತ್ಯ ಪುರಸ್ಕಾರ'ವನ್ನು ನೀಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸಂಗಂ ಸಾಹಿತ್ಯ ಪುರಸ್ಕಾರ- 2024ಕ್ಕೆ ಕಾದಂಬರಿಗಳನ್ನ ಆಹ್ವಾನಿಸಿದೆ.
ಬಳ್ಳಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ 'ಅರಿವು' ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಐತಿಹಾಸಿಕ 'ಸಂಗಂ ವಿಶ್ವಕವಿ ಸಮ್ಮೇಳನ'ವನ್ನು ಬಳ್ಳಾರಿಯಲ್ಲಿ ಸಂಘಟಿಸಲಾಗಿದೆ.
ಈ ಸಲದ ಪುರಸ್ಕಾರವು 2022-24 ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕಾದಂಬರಿ ಪ್ರಕಾರಕ್ಕೆ ಮೀಸಲಿರಿಸಲಾಗಿದ್ದು, ಪುರಸ್ಕಾರಕ್ಕೆ ಆಗಮಿಸಿದ 73 ಕಾದಂಬರಿಗಳಲ್ಲಿ ಮೊದಲ ಹಂತಕ್ಕೆ 21 ಕಾದಂಬರಿಕಾರರ ಕಾದಂಬರಿಗಳು ಆಯ್ಕೆಗೊಂಡಿವೆ.
ಆಯ್ಕೆಗೊಂಡ ಕಾದಂಬರಿಕಾರರ ಹೆಸರು: ಧರಣೇಂದ್ರ ಕುರಕರಿ, ಪಿ. ಚಂದ್ರಿಕಾ, ತುಂಬಾಡಿ ರಾಮಯ್ಯ, ಇಂದ್ರಕುಮಾರ್ ಹೆಚ್.ಬಿ, ಲತಾ ಗುತ್ತಿ, ಆಲೂರು ದೊಡ್ಡ ನಿಂಗಪ್ಪ, ಎಸ್. ಗಂಗಾಧರಯ್ಯ, ರಾಜಶೇಖರ ಹಳೆಮನೆ, ಗುರುಪ್ರಸಾದ ಕಾಗಿನೆಲೆ, ಹೆಚ್.ಟಿ. ಪೋತೆ, ಕುಸುಮ ಆಯಾರಳ್ಳಿ, ಪೂರ್ಣಿಮಾ ಮಾಳಗಿಮನಿ, ಶ್ರೇಯಸ್ ಹೆಚ್.ಸಿ, ಡಿ.ಎಸ್. ಚೌಗಲೆ, ಕಾರ್ತೀಕಾದಿತ್ಯ ಬೆಳಗೋಡು, ಸುನಂದಾ ಕಡಮೆ, ಚೀಮನಹಳ್ಳಿ ರಮೇಶ ಬಾಬು, ಜಯರಾಮಾಚಾರಿ, ಶ್ರೀದೇವಿ ಕಳಸದ, ಗುರುಪ್ರಸಾದ ಕಂಟಲಗೆರೆ, ಲಕ್ಷ್ಮ ವಿ.ಎ
ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಲ್ಲತ್ತಹಳ್ಳಿ ಬಾಲ ಗಂಗಾಧರ ನಗರದ &ls...
ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...
ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...
©2025 Book Brahma Private Limited.