Date: 09-07-2023
Location: ಬೆಂಗಳೂರು
“ನಾವು ಮಾತನಾಡುವ ಭಾಷೆಗಿಂತಲೂ ಹೆಚ್ಚು ಕನ್ನಡವನ್ನು ಪ್ರೀತಿಸುತ್ತೇವೆ. ನಾವು ಕನ್ನಡ ಅಭಿಮಾನಿಗಳು. ರಾಜ್ ಕುಮಾರ್ ಕುಟುಂಬವೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ನಾವು ಅವರ ಅಭಿನಯದ ಸಿನೆಮಾಗಳನ್ನು ಹೆಚ್ಚು ನೋಡುತ್ತೇವೆ. ಲಾಕ್ ಡೌನ್ ಸಮಯದಲ್ಲಂತೂ ಬದುಕು ತುಂಬ ಶೋಚನೀಯವಾಗಿತ್ತು,” ಎನ್ನುತ್ತಾರೆ ಅಬ್ದುಲ್. ಅಂಕಣಕಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಅಬ್ದುಲ್ ಅವರ ಬದುಕಿನ ಏಳುಬೀಳು’ ಕಟ್ಟಿಕೊಟ್ಟಿದ್ದಾರೆ.
ನಾಗರಬಾವಿ ಸಮೀಪ ಬ್ಲಡ್ ಡೊನೇಟ್ ಕ್ಯಾಂಪಿಗೆ ಹೋಗುವಾಗ ಮಾರ್ಗಮಧ್ಯೆ ಕಂಠೀರವ ಸ್ಟುಡಿಯೋ ಎದುರು ಕೂತು ಅಷ್ಟು ಗಾಡಿಗಳ ಆಸಾಧಾರಣ ಶಬ್ಧದಲ್ಲೂ ಮನಸೂರೆಗೊಂಡದ್ದು 'ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ' ಎನ್ನುವ ಅಪ್ಪು ಅಭಿನಯದ ಗೀತೆಯನ್ನು ಪಿಟೀಲಿನಲ್ಲಿ ನುಡಿಸುತ್ತಿದ್ದ ಅಬ್ದುಲ್ ರವರ ಗಾನ. ಆ ಉರಿವ ಬಿಸಿಲಲ್ಲಿ ಅವರು ನುಡಿಸುತ್ತಿದ್ದ ಪಿಟೀಲಿನ ರಾಗ ನಮ್ಮೆದೆಗೆ ತಂಪೆರೆದ ರೀತಿ ಅದ್ಭುತವಾಗಿತ್ತು. ಆ ಪಿಟೀಲು ಸಹ ಸರಳವಾಗಿ ಆಕರ್ಷಣೀಯವಾಗಿತ್ತು. ಈ ಕುರಿತು ಅಬ್ದುಲ್ ಅವರು ನಮ್ಮೊಂದಿಗೆ ಮಾತಿಗಿಳಿದಾಗ ತೆರೆದಿಟ್ಟ ಅವರ ಬದುಕಿನ ಏಳುಬೀಳು.
ಲಕ್ಷ್ಮಿದೇವಿ ನಗರ, ಹವಾಡಿಗರ ಕಾಲೋನಿ, ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಾಗಿರುವ ಸೈಯ್ಯದ್ ಅಬ್ದುಲ್ ರಜಾಕ್ ಅವರಿಗೆ ಐವತ್ತೈದು ವರ್ಷಗಳು. 'ನನ್ನ ಸ್ವಂತ ಊರು ದಾವಣಗೆರೆಯ ಹತ್ತಿರ ಬಂಬು ಬಜಾರ್ ಸಿಟಿ. ನಾನು ಶಾಲೆಗೆ ಹೋದವನಲ್ಲ. ಬಡತನದಿಂದಾಗಿ ಏನೂ ಓದಲಾಗಲಿಲ್ಲ. ಸಣ್ಣವನಿದ್ದಾಗಿನಿಂದ ತಾಯಿ ತಂದೆ ಕೆಲಸಕ್ಕೆ ಹೋಗುವಾಗ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಸಂತೆ, ಜಾತ್ರೆಗಳಲೆಲ್ಲ ಹಾವಾಡಿಸುವುದು, ಜಾದು(ಮ್ಯಾಜಿಕ್ ಶೋ) ಎಲ್ಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದರು. ನನ್ನ ತಂದೆ ಡೋಲು ಬಾರಿಸುವುದನ್ನು ಪಿಟೀಲು ನುಡಿಸುವುದನ್ನು ನೋಡ್ತಾ ನೋಡ್ತಾ ನಾನು ಚಿಕ್ಕ ವಯಸ್ಸಿನಿಂದಲೇ ಕಲಿತೆ. ಆಗೆಲ್ಲ ಹಾವಾಟ ಆಡಿಸಿ, ಮ್ಯಾಜಿಕ್ ಶೋ ಮಾಡಿ ಉದಾ : ಮಕ್ಕಳನ್ನು ಬುಟ್ಟಿಯಲ್ಲಿ ಹಾಕಿ ಪಾರಿವಾಳ ಮಾಡುವುದು, ತಗಡು ಡಬ್ಬಿ ತುಂಬ ಹಣ ಬರಿಸುವುದು, ಹೀಗೆಲ್ಲ ಮನರಂಜನಾತ್ಮಕ ಜಾದೂಗಳನ್ನು ಮಾಡಿ ಜನರನ್ನು ಸಂತೋಷ ಪಡಿಸುತ್ತಿದ್ದೆವು. ಆಗ ಜನರು ಖುಷಿಯಿಂದ ಕೊಡುತ್ತಿದ್ದ ಐದು ಹತ್ತು ರೂಪಾಯಿಗಳನ್ನು ಕೊಡುತ್ತಿದ್ದರು. ಬಂದ ಹಣದಿಂದ ಮಕ್ಕಳಿಗೆ ಹಾಲು, ತಿಂಡಿ ಊಟ ಕೊಡಿಸಿ ಜೀವನ ನಡೆಸಿಕೊಂಡು ಹೋಗುತ್ತಿದ್ದೆವು.'
'ನಮ್ಮ ತಂದೆ ಸೈಯದ್ ಮಲ್ಲಿಕ್ ಅವರು ಗಂಧದಗುಡಿ, ಬೇಡರ ಕಣ್ಣಪ್ಪ, ಜನನಾಯಕ, ಶಿವ ಮೆಚ್ಚಿದ ಕಣ್ಣಪ್ಪ, ಅಣ್ಣ ತಂಗಿ, ಇತ್ಯಾದಿ ಸಿನೆಮಾಗಳಿಗೆ ಹಾವುಗಳನ್ನು ಕೊಟ್ಟಿದ್ದರು. ಈಗ ಸುಮಾರು 14-15 ವರ್ಷಗಳ ಹಿಂದೆ ಕಾನೂನು ಬಂದಿದೆ. ಆಗಿನಿಂದ ಹಾವಾಡಿಗ ವೃತ್ತಿಯನ್ನು ಮಾಡುತ್ತಿಲ್ಲ. ಹಾವಾಡಿಗ ವೃತ್ತಿಯನ್ನೇ ಜೀವನೋಪಾಯವಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದ ನಮ್ಮ ಸಮುದಾಯದ ನೂರಾರು ಕುಟುಂಬಗಳಿಗೆ ಬೇರೆ ಯಾವ ಬದುಕುವ ದಾರಿ ಗೊತ್ತಿಲ್ಲದೆ ಬೀದಿಗೆ ಬರುವಂತಾಯಿತು.'
'ಬೇರೆ ಯಾವ ವೃತ್ತಿಯನ್ನು ನಮ್ಮ ತಂದೆ ತಾಯಿ ನಮಗೆ ಕಲಿಸಲಿಲ್ಲ. ಹಾಗಾಗಿ ಬೇರೆ ಕೆಲಸ ಅರಿಯದ ನಾವು ಪಿಟೀಲು, ಕೊಳಲು, ಚೋಟಾ ಭೀಮ್ ಈ ತರಹದ ಸಲಕರಣೆಗಳನ್ನು ಮಾರಾಟ ಮಾಡುತ್ತ ಕಾಲ ಸಾಗಿಸುತ್ತಿದ್ದೇವೆ. ಧರ್ಮಸ್ಥಳದ ಲಕ್ಷ ದೀಪೋತ್ಸವ, ಶಿವರಾತ್ರಿ ಸಮಯದಲ್ಲಿ ಕುಕ್ಕೆ ಸುಬ್ರಮಣ್ಯ, ಶಿರಸಿ ಮಾರಮ್ಮ ಜಾತ್ರೆ, ಮೈಲಾರಲಿಂಗ, ಶಿರಸಿ, ಬಾದಾಮಿ, ಮಾರಿಕಾಂಬಾ, ಕೊಟ್ಟೂರು ಜಾತ್ರೆ, ಉಕ್ಕಡ ಜಾತ್ರೆ ಇತ್ಯಾದಿ ಕರ್ನಾಟಕದ ಯಾವುದೇ ಸ್ಥಳಗಳಲ್ಲಿ ಜಾತ್ರೆ, ಹಬ್ಬಗಳು ನಡೆದರೂ ಒಂದೆರಡು ದಿನ ಕುಟುಂಬ ಸಮೇತ ದಿನಸಿ ಎಲ್ಲ ತೆಗೆದುಕೊಂಡು ಮುಂಚಿತವಾಗಿಯೇ ಹೋಗಿ ಟೆಂಟ್ ಹಾಕಿಕೊಂಡು ಅದರಲ್ಲಿ ವಾಸವಿರುತ್ತೇವೆ. ಹೆಣ್ಣುಮಕ್ಕಳು ಯಾವುದಾದರು ಹಣ್ಣಿನ ಅಂಗಡಿಗಳಿಗೆ ಹೋಗಿ ಖಾಲಿಯಾದ ಕಟ್ಟಿಗೆಯ ಡಬ್ಬಿಗಳನ್ನು 5, 10 ರೂಪಾಯಿ ಕೊಟ್ಟು ತಂದು ಅಡುಗೆ ಮಾಡುತ್ತಾರೆ. ಅವು ಸಿಗಲಿಲ್ಲವೆಂದರೆ ಅಲ್ಲೇ ಅಕ್ಕ ಪಕ್ಕ ಮರದ ಕೆಳಗೆ ಬಿದ್ದಿರುವ ಪುಡಿ ಸೌದೆಯನ್ನು ಆಯ್ದು ತರುತ್ತಾರೆ.'
'ನಾವು ಮಾತನಾಡುವ ಭಾಷೆಗಿಂತಲೂ ಹೆಚ್ಚು ಕನ್ನಡವನ್ನು ಪ್ರೀತಿಸುತ್ತೇವೆ. ನಾವು ಕನ್ನಡ ಅಭಿಮಾನಿಗಳು. ರಾಜ್ ಕುಮಾರ್ ಕುಟುಂಬವೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ನಾವು ಅವರ ಅಭಿನಯದ ಸಿನೆಮಾಗಳನ್ನು ಹೆಚ್ಚು ನೋಡುತ್ತೇವೆ. ಲಾಕ್ ಡೌನ್ ಸಮಯದಲ್ಲಂತೂ ಬದುಕು ತುಂಬ ಶೋಚನೀಯವಾಗಿತ್ತು. ಅವರಿವರು ಕೊಟ್ಟ ದಿನಸಿ, ಊಟ, ತರಕಾರಿಗಳಿಂದ ಜೀವನ ಸಾಗಿಸಿ ಬದುಕಿದೆವು. ಪ್ರತಿ ತಿಂಗಳು ಆಸ್ಪತ್ರೆಯ ಖರ್ಚು ಸಹ ಹೆಚ್ಚಾಗುತ್ತಿದೆ. ಇನ್ನು ಪಿಟೀಲನ್ನು ನಾನೆ ಕೂತು ಮನೆಯಲ್ಲಿ ತಯಾರು ಮಾಡುತ್ತೇನೆ. ಅದಕ್ಕೆ ಬೇಕಾಗುವ ಸಾಮಗ್ರಿಗಳಾದ ಮರ, ಕಡ್ಡಿಗಳನ್ನು, ಹಾಸನಕ್ಕೆ ಮಗನನ್ನು ಕಳಿಸಿ ತರಿಸುತ್ತೇನೆ. ಉಳಿದಂತೆ ಸ್ಕೂಟರ್ ಕೇಬಲ್ ಇಲ್ಲೇ ಗ್ಯಾರೇಜುಗಳಲ್ಲಿ ಕೊಂಡುಕೊಳ್ಳುತ್ತೇನೆ. ಇವುಗಳನ್ನು ಸಿದ್ಧ ಮಾಡುವುದು ಒಂಥರಾ ಸವಾಲಾದರೆ, ಸಿದ್ಧವಾದ ಪಿಟೀಲನ್ನು ಮಾರುವುದು ಕೂಡ ಸಾಹಸವೇ. ತುಂಬ ಜನರು ಸುಮ್ಮನೆ ನೋಡಿಕೊಂಡು ಹೋಗಿಬಿಡುತ್ತಾರೆ... ಯಾರಾದರೂ ಮಕ್ಕಳು ಹಠ ಮಾಡಿದರೆ ಮಾತ್ರ ಕೊಡಿಸುತ್ತಾರೆ. ನುಡಿಸೋಕೆ ಬರಲ್ಲ ಹಾಗೆ, ಹೀಗೆ ಹೇಳುತ್ತಾರೆ. ಮನಸ್ಸಿಟ್ಟು ಮಾಡಿದರೆ ಯಾವುದೂ ಅಸಾಧ್ಯ ಅಲ್ಲ ಒಂದೇ ಸಲ ಯಾವುದೂ ಬರುವುದಿಲ್ಲ. ನುಡಿಸುತ್ತ ಬೆರಳುಗಳನ್ನು ಬದಲಾವಣೆ ಮಾಡಿದರೆ ಯಾವುದೊ ಒಂದು ಸ್ವರವಂತೂ ಬರುತ್ತದೆ. ಹಾಗೆ ಸತತವಾಗಿ ಅಭ್ಯಾಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎನ್ನುತ್ತಾರೆ. ಇತ್ತೀಚೆಗೆ ನಮ್ಮ ಸಮುದಾಯದ ಎಷ್ಟೋ ಮಂದಿ ವಿದೇಶಗಳಿಗೆ ಹೋಗಿ ಅಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಾವು ಕಲಿತಿರುವ ವಿದ್ಯೆಯನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದೆ ನೂರಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ'. ಒಂದೊಂದು ದಿನ ಬಿಸಿಲು, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ಬೆಳಗಿನಿಂದ ಸಂಜೆವರೆಗೂ ನೂರಾರು ಹಾಡುಗಳನ್ನು ನುಡಿಸುತ್ತ ಕೂತರು ಒಂದು ರೂಪಾಯಿ ಕೂಡ ವ್ಯಾಪಾರ ಆಗುವುದಿಲ್ಲ. ಎಲ್ಲಾ ಸಿನೆಮಾ ಹಾಡುಗಳು, ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳು, ಹಳೇ ಹಾಡುಗಳನ್ನು ನುಡಿಸುತ್ತೇನೆ. ಅದರಲ್ಲಿ ಹೆಚ್ಚು ಇಷ್ಟ ಡಾ. ರಾಜ್ ಕುಮಾರ್, ಅಪ್ಪು ನಟಿಸಿದ ಸಿನೆಮಾಗಳು. ಇತ್ತೀಚೆಗೆ ಬಿಪಿ ಶುಗರ್ ಬಂದಿದೆ. ತಿಂಗಳಿಗೆ ಮಾತ್ರೆಗೆ ಅಂತಲೇ 1500/- ರೂಪಾಯಿ ಎತ್ತಿಡಬೇಕು ಎಂದು ತಮ್ಮ ಮನದಾಳದ ನೋವನ್ನು ಹೇಳಿಕೊಂಡರು.
‘ಪುರಾತನ ಕಾಲದಿಂದಲೂ ಬಂದಿರುವ ಈ ಮನರಂಜನಾತ್ಮಕ ಕಲೆಗಳು ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ ಅದನ್ನೇ ನಂಬಿಕೊಂಡು ಹೊಟ್ಟೆ ಹೊರೆಯುತ್ತಾ ಬದುಕುತ್ತಿದ್ದವರ ಪಾಡು ಕೇಳುವವರಾರು...? ಇವರಲ್ಲಿ ಕಲೆಯಿದೆ ಪ್ರತಿಭೆಯಿದೆ ಆದರೆ ಅದನ್ನು ಆಸ್ವಾದಿಸುವವರಿಲ್ಲ. ಕೊನೇಪಕ್ಷ ಸಿನಿಮಾ ಧಾರಾವಾಹಿಗಳಲ್ಲಿ ಇವರ ಕಲೆಗೆ ಸಂಬಂಧಿಸಿದಂತಹ ಸಣ್ಣಪುಟ್ಟ ಪಾತ್ರಗಳು ಸಿಕ್ಕರೆ ಇಂಥವರ ಜೀವನಕ್ಕೆ ಒಂದಿಷ್ಟು ನೆಮ್ಮದಿ ಸಿಕ್ಕೀತು. ಹಾಗೂ ನಾವುನೀವು ಮಕ್ಕಳಿಗೆ ವಿದೇಶಿ ಆಟಿಕೆಗಳ ಬದಲು ಇಂಥವರು ತಯಾರಿಸಿದ ಕೊಳಲು ಪಿಟೀಲಿನಂತಹ ದೇಶೀ ಆಟಿಕೆಗಳನ್ನು ಕೊಳ್ಳಬೇಕು. ಈ ಮೂಲಕ ಇವರ ಕಲೆಯನ್ನು ಪ್ರೋತ್ಸಾಹಿಸಬಹುದು. ಅದರಿಂದ ಇವರ ಜೀವನಕ್ಕೂ ಒಂದಿಷ್ಟು ಆಸರೆಯಾಗುತ್ತದೆ.
ಧನ್ಯವಾದಗಳೊಂದಿಗೆ,
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.