ಆನೆಲದ್ದಿ ಮತ್ತು ಕ್ರಿಸ್ ಒಫಿಲಿ

Date: 14-09-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಲಂಡನ್  ಮೂಲದ ಪೋಸ್ಟ್ ಕೊಲೋನಿಯಲ್ ಆರ್ಟ್ ಕಲಾವಿದ ಕ್ರಿಸ್ ಒಫಿಲಿ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಕ್ರಿಸ್ ಒಫಿಲಿ  
ಜನನ: 10 ಅಕ್ಟೋಬರ್, 1968
ಶಿಕ್ಷಣ: ಚೆಲ್ಸಿ ಸ್ಕೂಲ್ ಆಫ್ ಆರ್ಟ್, ರಾಯಲ್ ಕಾಲೇಜ್ ಆಫ್ ಆರ್ಟ್ಸ್, ನ್ಯೂಯಾರ್ಕ್
ವಾಸ: ಪೋರ್ಟ್ ಆಫ್ ಸ್ಪೇನ್ ಟ್ರಿನಿಡಾಡ್, ನ್ಯೂಯಾರ್ಕ್, ಲಂಡನ್
ಕವಲು: ಪೋಸ್ಟ್ ಕೊಲೋನಿಯಲ್ ಆರ್ಟ್
ವ್ಯವಸಾಯ:  ಪೇಂಟಿಂಗ್

ಕ್ರಿಸ್ ಒಫಿಲಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಪ್ರಖರ ಬಣ್ಣಗಳ ಅಲಂಕಾರಿಕ ಕುಸುರಿ ಇರುವ ಕಲಾಕೃತಿಗಳನ್ನು ಆಧುನಿಕ ಕಲಾಜಗತ್ತು ಅದರಾಚೆಗೆ ಅಲ್ಲಿ ಏನೂ ಇಲ್ಲ ಎಂಬ ಕಾರಣಕ್ಕೆ ತಿರಸ್ಕರಿಸುವುದೇ ಹೆಚ್ಚು. ಆದರೆ ತನ್ನ ಆಫ್ರಿಕನ್ ಮೂಲದ ಅಲಂಕಾರಿಕ ಬುಡಕಟ್ಟು ಕಲೆಯ ಡೆಕೊರೇಟಿವ್ ಅಂಗಳನ್ನೇ ಮುಂದಿರಿಸಿಕೊಂಡು ಸಂಕೀರ್ಣವಾದ ರಾಜಕೀಯ-ಸಾಮಾಜಿಕ ಅನುಭವಗಳನ್ನು ಕಟ್ಟಿಕೊಡುವ ಕ್ರಿಸ್ ಒಫಿಲಿ ಅವರ ಕಲಾಕೃತಿಗಳಲ್ಲಿ ಧಾರ್ಮಿಕ, ಸಮಾಜೋ ರಾಜಕೀಯ ಕಾಮೆಂಟರಿಗಳಿರುತ್ತವೆ. ಜಿಗಿಮಿಗಿ ಪುಡಿ (ಗ್ಲಿಟ್ಟರ್), ಪಿನ್, ಅಂಟು, ಹರಿದ ಚಿತ್ರಗಳ ಕೊಲ್ಯಾಜ್… ಹೀಗೆ ಅಸಾಂಪ್ರದಾಯಿಕ ವಸ್ತುಗಳನ್ನು ತನ್ನ ಪೇಂಟಿಂಗಿನಲ್ಲಿ ಬಳಸುತ್ತಾ ಬಂದ ಕ್ರಿಸ್ ಒಫಿಲಿ ಜಗತ್ತಿನಾದ್ಯಂತ ಸುದ್ದಿ ಆದದ್ದು, 1997ರಲ್ಲಿ ತನ್ನ ಹೋಲಿ ವರ್ಜಿನ್ ಮೇರಿ ಕಲಾಕೃತಿ ರಚಿಸಿದಾಗ. ಸಾಚಿ ಆಯೋಜಿಸಿದ್ದ, ಬ್ರಿಟನ್ನಿನ ಪ್ರಸಿದ್ಧ YBA ಚಳುವಳಿಯ ಪ್ರಮುಖ ಹೆಸರುಗಳು ಪಾಲ್ಗೊಂಡಿದ್ದ ಕಲಾ ಪ್ರದರ್ಶನವೊಂದರಲ್ಲಿ ಮೊದಲು ಪ್ರದರ್ಶಿತಗೊಂಡ ಈ ಕಲಾಕೃತಿಯಲ್ಲಿ ಕ್ರಿಸ್ ಒಫಿಲಿ ಆನೆಲದ್ದಿ ಬಳಸಿದ್ದರು! ಈ ಕಲಾಕೃತಿ ಎಬ್ಬಿಸಿದ ವಿವಾದ ಅವರನ್ನು ಜಗತ್ತಿನಾದ್ಯಂತ ಪರಿಚಿತಗೊಳಿಸಿತು.

1999ರಲ್ಲಿ ಈ ಕಲಾಕೃತಿ ಅಮೆರಿಕದಲ್ಲಿ ಪ್ರದರ್ಶನಗೊಂಡಾಗ, ಅದು ಆ ಬಳಿಕ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಮೇಯರ್ ಗಿಲಿಯಾನಿ, ಅಲ್ಲಿನ ಚರ್ಚ್‌ನ ವ್ಯಗ್ರತೆಗೆ ಕಾರಣ ಆಗಿತ್ತು. ಆಗ ಅದಕ್ಕೆ ಪ್ರತಿಕಿರಿಯಿಸಿದ್ದ ಕ್ರಿಸ್ ಒಫಿಲಿ, ತಾನು ಇಂಗ್ಲಂಡಿನಲ್ಲಿ ವರ್ಣತಾರತಮ್ಯದ ಇಂತಹ ವ್ಯಗ್ರತೆಯೊಂದಿಗೇ ಬೆಳೆದುಬಂದವನು ಎಂದಿದ್ದರು. ಬ್ರಿಟಿಶ್ ರಾಯಲ್ ಅಕಾಡೆಮಿ ಈ ಕಲಾವಿದನಿಗೆ ತನ್ನ ಗೌರವ ಸದಸ್ಯತ್ವ ನೀಡಿದಾಗ, “ಅದರಲ್ಲೇನು ನನಗೆ ಅಲ್ಲಿ ಕಾರು ಪಾರ್ಕಿಂಗ್ ಜಾಗ ರಿಸರ್ವ್ ಆಗ್ತದಾ? ಅದೂ ಇಲ್ಲದಿದ್ದರೆ ಅದನ್ನು ತಗೊಂಡು ನಾನೇನು ಮಾಡಲಿ ಎಂದರ್ಥ ಬರುವ ಮಾತನಾಡಿದ್ದರು. ಕರಿಯರ ಅನುಭವಗಳು, ಜನಾಂಗೀಯ ಹಿಂಸೆ, ಪೊಲೀಸ್ ಹಿಂಸೆಯಂತಹ ಅನುಭವಗಳ ಜೊತೆಗೆ ಬಿಳಿಯರ ಸುಪ್ರಿಮೆಸಿಯ ಕೃತ್ಯಗಳು-ಸಿಂಬಲ್‌ಗಳನ್ನು, ವಲಸೆಯ ಸಂಕಟಗಳನ್ನು ಅವರು ತನ್ನ ಕಲಾಕೃತಿಗಳಲ್ಲಿ ಆಗಾಗ ವ್ಯಕ್ತಪಡಿಸಿದ್ದಾರೆ. ಪಾಶ್ಚಾತ್ಯ ಮತ್ತು ನೈಜೀರಿಯನ್ ಸಾಂಪ್ರದಾಯಿಕ ಕಲೆಗಳ ಸಂಗಮ, ಅವರ ಕಲಾಕೃತಿಗಳು. 

ಇಂಗ್ಲಂಡೀನ ಮ್ಯಾಂಚೆಸ್ಟರಿನಲ್ಲಿ ನೈಜೀರಿಯಾದಿಂದ ವಲಸೆ ಬಂದು ಬಿಸ್ಕಿಟ್ ಕಾರ್ಖಾನೆಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ತಂದೆ ತಾಯಿಯರ ನಾಲ್ವರು ಮಕ್ಕಳಲ್ಲಿ ಮೂರನೆಯವರು ಕ್ರಿಸ್ ಒಫಿಲಿ. ಅವರಿಗೆ 11 ವರ್ಷ ಆದಾಗ, ಅವರ ತಂದೆ ಕುಟುಂಬವನ್ನು ತೊರೆದು ನೈಜೀರಿಯಾಕ್ಕೆ ವಾಪಸಾಗುತ್ತಾರೆ. ಅನಂತರ ತಾಯಿಯ ಆರೈಕೆಯಲ್ಲೇ ಬೆಳೆದವರು ಅವರು. ಶಾಲೆಗೆ ಮರಗೆಲಸ ಕಲಿಯಲೆಂದು ಹೋಗಿ, ಅಲ್ಲಿ ತನಗೆ ಕಲೆಯಲ್ಲಿ ಆಸಕ್ತಿ ಇರುವುದನ್ನು ಕಂಡುಕೊಂಡು ಕಲಾಭ್ಯಾಸಕ್ಕೆ ತೊಡಗಿದ ಕ್ರಿಸ್ ಒಫಿಲಿ ರಾಯಲ್ ಕಾಲೇಜಿನ ಕಲಾ ಸ್ನಾತಕರು. 

ಮಾರುಕಟ್ಟೆಯಲ್ಲಿ ಯಶಸ್ಸು ಪಡೆದ ಬಳಿಕ ಮಾತು ಕಡಿಮೆ ಮಾಡಿ ಮಾಧ್ಯಮಗಳಿಂದ ದೂರ ಉಳಿದಿರುವ ಕ್ರಿಸ್ ಒಫಿಲಿ,  ಈವತ್ತಿಗೂ ಆನೆ ಲದ್ದಿ ಬಳಸಿದ ಕಲಾವಿದ ಎಂದೇ ಪ್ರಸಿದ್ಧರು. ಅವರು ಲಂಡನ್, ನ್ಯೂಯಾರ್ಕ್ ಮತ್ತು ಟ್ರಿನಿಡಾಡ್‌ಗಳಲ್ಲಿ ಸ್ಟುಡಿಯೊ ಹೊಂದಿದ್ದು, 2000ನೇ ಇಸವಿಯಲ್ಲಿ ಟ್ರಿನಿಡಾಡಿಗೆ ವಾಸ ಬದಲಿಸಿರುವ ಅವರು, ಗಾಯಕಿ- ಕವಯಿತ್ರಿ ರೊಬಾ ಎಕ್-ಎಸ್ಸಾವಿ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪ್ರತಿಷ್ಠಿತ ಟರ್ನರ್ ಪ್ರಶಸ್ತಿ ಗಳಿಸಿದ ಮೊದಲ ಕರಿಯ ಕಲಾವಿದ ಅವರು.

ನೀವು ರಾಜಕೀಯ ಕಲಾವಿದರೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ: “I wouldn’t say even that I’m a broadly political person, but on occasion I have felt that I have no choice but to paint something with a strong moral stance. they are (my paintings) my attempts to hit the bullseye of things that were going on.” (ದಿ ಗಾರ್ಡಿಯನ್ ನ ಟಿಂ ಆಡಮ್ಸ್ ಅವರಿಗೆ 2017 ಎಪ್ರಿಲ್ ತಿಂಗಳಲ್ಲಿ ನೀಡಿದ ಸಂದರ್ಶನದಲ್ಲಿ) 

ಕ್ರಿಸ್ ಒಫಿಲಿ  ಅವರ ಕಲಾಕೃತಿಗಳ ಬಗ್ಗೆ ಕ್ಯುರೇಟರ್ ಮಿನ್ನಾ ಮೂರ್ ಎಡ್ ಅವರ ಮಾತುಗಳು:

ಕ್ರಿಸ್ ಒಫಿಲಿ  ಅವರ ಕುರಿತ ಬಿಬಿಸಿ ಡಾಕ್ಯುಮೆಂಟರಿ ದಿ ಕೇಜ್ಡ್ ಬರ್ಡ್ಸ್ ಸಾಂಗ್ :

ಚಿತ್ರ ಶೀರ್ಷಿಕೆಗಳು: 

ಕ್ರಿಸ್ ಒಫಿಲಿ ಅವರ Afro Lunar Lovers (2003)

ಕ್ರಿಸ್ ಒಫಿಲಿ ಅವರ Afrodizzia (2nd version) (1996)

ಕ್ರಿಸ್ ಒಫಿಲಿ ಅವರ Balotelli (Sweet Cocktail) 4, (2014)

ಕ್ರಿಸ್ ಒಫಿಲಿ ಅವರ Double Captain Shit and the Legend of the Black Stars (1997)

ಕ್ರಿಸ್ ಒಫಿಲಿ ಅವರ Iscariot Blues (2006)

ಕ್ರಿಸ್ ಒಫಿಲಿ ಅವರ No woman No Cry (1998)

ಕ್ರಿಸ್ ಒಫಿಲಿ ಅವರ The Caged Bird's Song (2014 – 2017)

ಕ್ರಿಸ್ ಒಫಿಲಿ ಅವರ the holy virgin Mary (1999)

ಕ್ರಿಸ್ ಒಫಿಲಿ ಅವರ Untitled (1998)

ಕ್ರಿಸ್ ಒಫಿಲಿ ಅವರ Untitled (1995-2005)

ಈ ಅಂಕಣದ ಹಿಂದಿನ ಬರೆಹಗಳು:
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...