ಏನೂ ಇಲ್ಲದಿದ್ದರೂ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ


“ಸೋಲುಗಳು ನಮ್ಮೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬರುವ ಒಂದು ಸುವರ್ಣಾವಕಾಶ ಮತ್ತು ಯಾವುದೇ ಕ್ಷೇತ್ರವಿರಲಿ ಯಶಸ್ಸು ಅನ್ನುವುದು ಮೈದಾನವಲ್ಲ ಅದೊಂದು ಶಿಖರ. ಅತಿ ಎಚ್ಚರಿಕೆಯಿಂದ ಒಂದೊಂದೇ ಮೆಟ್ಟಿಲುಗಳನ್ನು ಏರಬೇಕು,” ಎನ್ನುತ್ತಾರೆ ವಾಗೀಶ್‌ ಕಟ್ಟಿ ಅವರು ತಮ್ಮ “ರೀ START” ಕೃತಿಗೆ ಬರೆದ ಮುನ್ನುಡಿ.

ಹಾಗೇ ಸುಮ್ಮನೆ ನನ್ನ ಹೆಸರು ವಾಗೀಶ ರಘೋತ್ತಮ ಕಟ್ಟಿ. ಬೆಳೆದದ್ದು, ಕಲಿತದ್ದು, ಓದಿಕೊಂಡಿದ್ದು, ನಾಟಕಗಳನ್ನು ಮಾಡಿದ್ದು ಎಲ್ಲವೂ ಗೌರಿಬಿದನೂರು. ಓದು ಮುಗಿಸಿ ಹೆಚ್ಚಿನ ಓದು ಮತ್ತು ಕಂಪ್ಯೂಟರ್ ಕಲಿಕೆಗಾಗಿ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕಾರ್ಪೊರೇಟ್ ಕಂಪನಿಯಲ್ಲಿ ಕಾಲಿಟ್ಟಮೇಲೆ, ಕೈಗೆ ಸಿಕ್ಕಿದ್ದು ಮೌಸ್, ಕೀ ಬೋರ್ಡ್, ಕಣ್ಣಿಗೆ ಕಾಣಿಸಿದ್ದು ಸಾಫ್ಟ್‌ವೇರ್ ಮಾನಿಟರ್. ಸಾಫ್ಟ್‌ವೇರ್ ಕಂಪನಿಯಿಂದ ಇಡೀ ಜಗತ್ತನ್ನು ಸುತ್ತಿ ಬಂದಿದ್ದರೂ, ಅಮೆರಿಕದಲ್ಲಿ ಒಂದಷ್ಟು ವರ್ಷ ವಾಸವಿದ್ದರೂ, COVID ನಂತರ ಕಾಡಿದ್ದು ದೀರ್ಘ ಏಕಾತಾನತೆ. ನಮಗೆ ಜೀವನ ತುಂಬಾ ಬೋರು ಹೊಡೆಸಿ, ಬದುಕು ಬರಡಾದಾಗ ಮಾತ್ರ ನಾವು ಹೊಸದೇನನ್ನಾದರೂ ಮಾಡಲು ನಮ್ಮನ್ನು ನಾವು RE-START ಮಾಡಿಕೊಂಡು ಹೊಸ ಕನಸುಗಳೊಂದಿಗೆ ಜೀವನವನ್ನು ಮತ್ತೆ ಶುರುಮಾಡುತ್ತೇವೆ.

ಒಂದಷ್ಟು ಗ್ಯಾಪ್ ಆದರೂ ಓದಿಕೊಂಡಿದ್ದ ಒಂದಷ್ಟು ಪುಸ್ತಕಗಳು, ಫೇಸ್‌ಬುಕ್‌ನಲ್ಲಿ ಬರೆದ ಕೆಲವು ಬರಹಗಳು ಮತ್ತೆ ಮೂಡಿದ ರಂಗಭೂಮಿಯ ಆಸಕ್ತಿ, ನೋಡಿದ ಮತ್ತು ನಟನೆ ಮಾಡಿದ ಹಲವು ನಾಟಕಗಳು. ಮಕ್ಕಳಿಗೆ ಬರೆದು ಆಡಿಸಿದ ನಾಟಕಗಳು, ಬೀದಿ ನಾಟಕಗಳು, ಬರೆದು ನಟಿಸಿದ ಒಂದಷ್ಟು ಕಿರು ಚಿತ್ರಗಳು, ನಟನೆ ಮಾಡಿದ ಕೆಲವು ಸಿನಿಮಾಗಳು ಹಾಗೂ ಸಿನಿಮಾ ಎಂಬ ಮಾಯಾ ಪರದೆಯ ಕನಸು. ಇವೆಲ್ಲವೂ ಕೆಲವು ವರುಷಗಳಿಂದ ಟೇಬಲ್ ಟೆನಿಸ್ ಬಾಲಿನಂತೆ ಜಾಗೃತವಾಗಿ ಸದಾ ಪುಟಿದೇಳುತ್ತಿರುವ ಕನಸು, ಏನಾದರೂ ಮಾಡಬೇಕೆನ್ನುತ್ತಿರುವ ಮನಸು, ಹಂಬಲ ನನ್ನೊಳಗೇ ಈ ಲೈಫ್ ಅಲ್ಲಿ ಎಲ್ಲವನ್ನೂ RE-START ಮಾಡಿಕೊಂಡು ಹೊಸ ಉತ್ಸಾಹವನ್ನು ತುಂಬಿದೆ. ಕೆಲವು ವರುಷಗಳ ಹಿಂದಷ್ಟೇ ಕನಸು ಕಂಡು ಸಾಧ್ಯವಾಗಿಸಲು ಪ್ರಾರಂಭಿಸಿ ಹೊರಟವನಿಗೆ, ಏನೂ ಇಲ್ಲದಿದ್ದರೂ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ ಎನ್ನುವುದಾದರೆ, ಹಾಗೇ ಸುಮ್ಮನೆ ಈ ರೀತಿಯ ಕನಸುಗಳನ್ನು ಸಾಧ್ಯಮಾಡಲು ಆಗಾಗ RE-START ಮಾಡಿಕೊಳ್ಳಲು ಇಚ್ಛಿಸುವ ಎಲ್ಲರಿಗೂ ಸಾಧ್ಯವಿದೆ ಅಲ್ಲವೇ? ಸೋಲುಗಳು ನಮ್ಮೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬರುವ ಒಂದು ಸುವರ್ಣಾವಕಾಶ ಮತ್ತು ಯಾವುದೇ ಕ್ಷೇತ್ರವಿರಲಿ ಯಶಸ್ಸು ಅನ್ನುವುದು ಮೈದಾನವಲ್ಲ ಅದೊಂದು ಶಿಖರ. ಅತಿ ಎಚ್ಚರಿಕೆಯಿಂದ ಒಂದೊಂದೇ ಮೆಟ್ಟಿಲುಗಳನ್ನು ಏರಬೇಕು.

ಎಲ್ಲರ ಬದುಕಿನಲ್ಲಿಯೂ ನಡೆಯುವ ಒಂದಲ್ಲ ಒಂದುರೀತಿಯ ಸಹಜ ಗೊಂದಲಗಳು, ಸೋತವರ ಕತೆಗಳು, ಗೆದ್ದವರ ಸಾಹಸಗಳು, ಸೋತು ಗೆಲ್ಲುವ ಪ್ರವೃತ್ತಿಯ ಮತ್ತು ಸೋಲಿನಲ್ಲಿಯೂ ಕಾಣುವ ಕೋಲ್ಕಿಂಚಾಗಿ ನಾನು ಎಲ್ಲವನ್ನೂ ಈ ಲೈಫ್ ಅಲ್ಲಿ ಪಾಸಿಟಿವ್ ಆಗಿಯೇ ಸ್ವೀಕರಿಸುತ್ತೇನೆ. ಯಾರಾದರೂ ಮೋಸಮಾಡಿದರೂ, ತೆಗಳಿದರೂ ಅದರಲ್ಲಿಯ ಒಳ್ಳೆಯದನ್ನು ತಕ್ಷಣ ತೆಗೆದುಕೊಂಡು ಮುನ್ನಡೆಯುತ್ತೇನೆ. ಏಕೆಂದರೆ ಯಾರು ನಮ್ಮ ಬಗ್ಗೆ ಏನೇ ಹೊಗಳಿದರೂ, ಮೂದಲಿಸಿದರೂ, ನಮ್ಮ ಬಗ್ಗೆ ನಮಗೆ ಚೆನ್ನಾಗಿ ತಿಳಿದಿರುತ್ತದೆ ಮತ್ತು ಆ ನಮ್ಮನ್ನು ಹಾಗೇ ಸುಮ್ಮನೆ ಈ ಲೈಫ್ ಅಲ್ಲಿ ಬದಲಾಯಿಸಿಕೊಳ್ಳುವ, RE-START ಮಾಡಿಕೊಳ್ಳುವ ಶಕ್ತಿಯೂ ನಮ್ಮೊಳಗೇ ಅಡಗಿ ಕುಳಿತಿದೆ. ಜರಿದ ಜನರೆದುರು ಗಟ್ಟಿಯಾಗಿ ನಿಲ್ಲಬೇಕು ಅಂದರೆ ಬಂಡೆಯಾಗಬೇಕು, ಅದಕ್ಕೇ ಅಲ್ಲವೇ ಆ ದೇವರೂ ಬಂಡೆಯಾಗಿರೋದು. ಇಲ್ಲಿ ಯಾವ ಸಮಸ್ಯೆಯೂ . Yes, 'RE-START' ಎನ್ನುವುದೇ ಮಂತ್ರ. ತೊಂದರೆ, ಕಷ್ಟ, ಸವಾಲುಗಳೆಲ್ಲವನ್ನೂ ಎದುರಿಸುತ್ತಾ ನಮ್ಮನ್ನೇ ನಾವು RE-START ಮಾಡಿಕೊಳ್ಳುತ್ತಾ, ಸಕಾರಾತ್ಮಕವಾಗಿ ಸ್ವೀಕರಿಸುತ್ತ ಮುನ್ನಡೆದರೆ, ನಮ್ಮನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲ... ನಗುನಗುತ RE-START ಮಾಡಿಕೊಳ್ಳುತ್ತಿರಿ, ಮುನ್ನುಗ್ಗಿ, All the best!

ಒಂದು ಕತೆಯ ಪುಸ್ತಕ ಬರೆಯಬೇಕೆಂದುಕೊಂಡು ಸ್ನೇಹಿತರ ಬಳಿ ಮಾತನಾಡುತ್ತಿದ್ದೆ. ಜಮೀಲ್ ಸಾರ್ ಮೂರು ತಿಂಗಳ ಹಿಂದೆ ಒಂದು ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ನನಗೆ ಮೋಟಿವೇಷನ್ ಬಗ್ಗೆ ಪುಸ್ತಕ ಬರೆಯಿರಿ ಅದನ್ನು ನಾನು ಪಬ್ಲಿಶ್ ಮಾಡುತ್ತೇನೆ ಎಂದರು. ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ಹಾಗೆ. So, ಇಂದು ಈ "RE-START' ಪುಸ್ತಕ ನಿಮ್ಮ ಕೈಲಿದೆ ಎಂದರೆ ಅದಕ್ಕೆ ಮೂಲ ಕಾರಣವೇ ಸಾವಣ್ಣ ದ ಜಮೀಲ್ ಸಾರ್, ನಾನು ನನ್ನ ತೃಪ್ತಿಗೆಂದು 'ವಿಶ್ವವಾಣಿ' ಪತ್ರಿಕೆಗೆ ಮತ್ತು 'ಕನ್ನಡ ಮಾಣಿಕ್ಯ' ಪತ್ರಿಕೆಗೆ ಬರೆಯುತ್ತಿದ್ದುದನ್ನು ಗಮನಿಸಿ, ಜಮೀಲ್ ಅವರೇ ನನಗೆ ಫೋನ್ ಮಾಡಿ ನನ್ನಂತ ಒಬ್ಬ ಹೊಸ ಬರಹಗಾರನಿಗೆ ಒಂದು ಅವಕಾಶ ಮಾಡಿಕೊಟ್ಟಿರುವುದು ದೊಡ್ಡ ಸಂಗತಿ ಮತ್ತು ಹೊಸಬರನ್ನು ಪರಿಚಯಿಸುವ ಬಹು ದೊಡ್ಡ ಪ್ರಕಾಶನ ಸಂಸ್ಥೆಯಾದ ಸಾವಣ್ಣ ಅವರ ಧೈರ್ಯ, ಸಾಹಸ ಮತ್ತು ನಂಬಿಕೆಗೆ ನನ್ನ ಕೃತಜ್ಞತೆಗಳು.

ಇದರಲ್ಲಿನ ಲೇಖನಗಳನ್ನೆಲ್ಲ ಓದಿ ವ್ಯಾಕರಣ ಶುದ್ದೀಕರಿಸಲು ಸಹಾಯಮಾಡಿದ ಸಹೋದರಿ ಶ್ರೀಮತಿ ಮಂಜುಳ ಅರುಣ್, ಕನ್ನಡ ಮಾಣಿಕ್ಯ ಮತ್ತು ವಿಶ್ವವಾಣಿಯಲ್ಲಿ ಬರೆಯಲು ಅವಕಾಶ ನೀಡಿದ ಸಂಪಾದಕ ಮಿತ್ರರಿಗೂ, ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಮುಖಪುಟ ರಚಿಸಿದ ಪ್ರದೀಪ್ ಬತ್ತೇರಿ, ಒಳಪುಟ ವಿನ್ಯಾಸಗೊಳಿಸಿದ ವಿಜಯ ವಿಕ್ರಮ್ ಅಡಿಗ, ಪುಸ್ತಕದ ಕರಡು ಪ್ರತಿಯನ್ನು ತಿದ್ದಿದ ನಿವೇದಿತಾ ಹಾಗೂ ಮುದ್ರಿಸಿದ ಸುನೀಲ್‌ರವರಿಗೂ, ನನ್ನ ಲೇಖನಗಳನ್ನೆಲ್ಲ ಓದಿ ನಾನೂ ಬರೆಯಬಲ್ಲೆ ಎನ್ನುವ ವಿಶ್ವಾಸ ಮೂಡಿಸಿ ಪ್ರೋತ್ಸಾಹಿಸುತ್ತಿರುವ ಎಲ್ಲಾ ಸ್ನೇಹಿತರಿಗೂ, ಫೇಸ್‌ಬುಕ್ ಮಿತ್ರರಿಗೂ ನಾನು ಚಿರಋಣಿ.

ಈಗ ನಿಮ್ಮ ಕೈಲಿ ಈ 'RE-START' ಪುಸ್ತಕ. ಓದಿ ಇಷ್ಟವಾದರೆ ಏನು ಇಷ್ಟವಾಯಿತೆಂದೂ ಅಥವಾ ಇಷ್ಟವಾಗದಿದ್ದರೂ ಏಕೆ ಎಂದು ಫೋನ್ ಮಾಡಿ ತಿಳಿಸುವಿರೆಂದು ಹಾಗೇ ಸುಮ್ಮನೆ ನಂಬಿರುವೆ. ಸೋಲು ಪ್ರಕೃತಿಯ ನಿಯಮ, ಹೋರಾಟ ನಮ್ಮ ಕರ್ತವ್ಯ. ಬದುಕಿನಲ್ಲಿ RE-START ಮಾಡಿಕೊಳ್ಳುತ್ತಾ ಹೋರಾಡಲು ಹೊರಟ ಅದಮ್ಯ ಚೇತನಗಳು ಯಶಸ್ಸು ಕಾಣಲೆಂದು ನನ್ನ ಮನದಾಳದ ಆಸೆ, ಹಾರೈಕೆ. ಹಾಗೇ ಸುಮ್ಮನೆ ಈ ಲೈಫ್ ಅಲ್ಲಿ ಒಳ್ಳೆಯದಾಗಲಿ.

 

MORE FEATURES

ಭಾರತ ಕತೆಯಲ್ಲಿ ನಿರ್ಣಾಯಕವಾಗಿ ಕಾಣಿಸುವುದು ಕುರುಕ್ಷೇತ್ರದ ಆ ಹದಿನೆಂಟು ದಿನಗಳು

10-04-2025 ಬೆಂಗಳೂರು

“ನಮಗೆಲ್ಲಾ ಗೊತ್ತೇ ಇರುವ ಕತೆಯನ್ನು ಅಕ್ಷರದ ಮೇಲೆ ಅಕ್ಷರವಿಟ್ಟು ಪೋಣಿಸಿದ ಈ ಕೃತಿ ನಮ್ಮನ್ನು ಹೊಸಹೊಳಹುಗಳತ್ತ ಹ...

ಆ ಕ್ರೀಡಾಪುಟಗಳ ಹಿಂದಿದ್ದ ಒಂದು ಕೈ ಎಚ್. ಪ್ರೇಮಾನಂದ ಕಾಮತ್

10-04-2025 ಬೆಂಗಳೂರು

"ಸರಳ ಸುಂದರ. ಆಪ್ತವಾಗುವ ರಸವತ್ತಾದ ನಿರೂಪಣ ಶೈಲಿ. ಒಂದೇ ಗುಕ್ಕಿಗೇ ಓದಿಸಿಕೊಂಡು ಹೋಗುವ ಪುಸ್ತಕ," ಎನ್ನುತ...

ನೆಗೆಟಿವ್ ಎನರ್ಜಿ ಇರುವ ಸ್ಥಳವೇ ಹಾಂಟೆಡ್

09-04-2025 ಬೆಂಗಳೂರು

"ದೆವ್ವ-ದೇವ-‌ದೈವ ಎಂಬ ಶಕ್ತಿ ಕಣ್ಣಿಗೆ ಕಾಣಿಸುವುದಿಲ್ಲ. ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತದೆ..ಅಲ್ಲವೇ?...