"ಸರಳ ಸುಂದರ. ಆಪ್ತವಾಗುವ ರಸವತ್ತಾದ ನಿರೂಪಣ ಶೈಲಿ. ಒಂದೇ ಗುಕ್ಕಿಗೇ ಓದಿಸಿಕೊಂಡು ಹೋಗುವ ಪುಸ್ತಕ," ಎನ್ನುತ್ತಾರೆ ಸುಷ್ಮಿತಾ ನೇರಳಕಟ್ಟೆ. ಅವರು ಎಚ್. ಪ್ರೇಮಾನಂದ ಕಾಮತ್ ಅವರ "ಕ್ರಿಕೆಟಾಯಣ" ಕೃತಿ ಕುರಿತು ಬರೆದ ವಿಮರ್ಶೆ.
ನಾನು ಚಿಕ್ಕಂದಿನಲ್ಲಿ ಕ್ರಿಕೆಟ್ ಅನ್ನು ನೋಡಿ ತಿಳಿದಿದ್ದಕ್ಕಿಂತ ಓದಿ ತಿಳಿದಿದ್ದದ್ದೇ ಹೆಚ್ಚು. ಮನೆಯಲ್ಲಿ ಅಮ್ಮಂದಿರ ಧಾರವಾಹಿಯ ನಡುವೆ ಕ್ರಿಕೆಟ್ ನುಸುಳುವ ಧೈರ್ಯವೇ ಮಾಡುತ್ತಿರಲಿಲ್ಲ. ಆಗೆಲ್ಲ ನನಗೆ ಕ್ರಿಕೆಟ್ ಮಾಹಿತಿಯನ್ನು ಒದಗಿಸುತ್ತಿದ್ದದ್ದೇ ಅಣ್ಣನ ಅಂಗಡಿಗೆ ಬರುತ್ತಿದ್ದ ಉದಯವಾಣಿ ದಿನಪತ್ರಿಕೆ. ಕ್ರಿಕೆಟ್ ಸುದ್ದಿಯನ್ನು ಅಕ್ಷರ ಬಿಡದೇ ಓದುತ್ತಿದ್ದೇ. ಅದರ ಕ್ಯಾಚಿ ಹೆಡ್ಡಿಂಗ್ ಓದಿ ವ್ಹಾ ವ್ಹಾ ಅನ್ನುತ್ತಿದ್ದೆ. ಹುಡುಗಿಯರಿಗೆ ಕ್ರಿಕೆಟ್ ಪ್ರೀತಿ ಕಡಿಮೆ ಎನ್ನುವವರ ಮಧ್ಯೆ ಅಪವಾದದಂತಿದ್ದ ನನ್ನ ಕ್ರಿಕೆಟ್ ಆಸಕ್ತಿಗೆ ನೀರೆರೆದಿದ್ದು ಉದಯವಾಣಿಯ ಕ್ರೀಡಾಪುಟ. ಆ ಕ್ರೀಡಾಪುಟಗಳ ಹಿಂದಿದ್ದ ಒಂದು ಕೈ ಎಚ್. ಪ್ರೇಮಾನಂದ ಕಾಮತ್.
ಮುಂದೊಂದು ದಿನ ಅವರ ಸಹೋದ್ಯೋಗಿಯಾಗಿ ಕೆಲಸ ಮಾಡುವ ಭಾಗ್ಯ ನನಗೆ ಸಿಗುತ್ತೆ ಅಂತ ನಾನು ಅಂದುಕೊಂಡೆ ಇರಲಿಲ್ಲ. ಕಾಮತ್ ಸರ್ ಪುಸ್ತಕ ಪ್ರಕಟಿಸುತ್ತಾರೆ ಎಂದು ತಿಳಿದಾಗಿನಿಂದ ಅದನ್ನು ಓದಲು ಕಾತರದಿಂದ ಕಾಯುತ್ತಿದ್ದೇ. ಕೊನೆಗೂ ಪುಸ್ತಕ ಕೈ ಸೇರಿತು. ತಡ ಮಾಡದೇ ಓದಲು ಪ್ರಾರಂಭಿಸಿಯೇ ಬಿಟ್ಟೆ. ಅವರ ಬರವಣಿಗೆಯ ಬಗ್ಗೆ ಎರಡನೇ ಮಾತೇ ಇಲ್ಲ. ಸರಳ ಸುಂದರ. ಆಪ್ತವಾಗುವ ರಸವತ್ತಾದ ನಿರೂಪಣ ಶೈಲಿ. ಒಂದೇ ಗುಕ್ಕಿಗೇ ಓದಿಸಿಕೊಂಡು ಹೋಗುವ ಪುಸ್ತಕ ಕ್ರಿಕೆಟಾಯಣ. ಕ್ರಿಕೆಟ್ ಪ್ರೇಮಿಗಳಲ್ಲದವರಿಗೂ ಹಿಡಿಸುತ್ತದೆ.
ಸ್ನೇಹ ಜೀವಿ ಕಾಮತ್ ಸರ್ ಬಗ್ಗೆ ಇನ್ನೊಂದು ಮಾತು ಹೇಳಲೇಬೇಕು. ತಾವು ಬರೆಯುವುದಲ್ಲದೇ ಕ್ರೀಡೆಯಲ್ಲಿ ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಿ ಅವರಿಂದ ಬರೆಸುವುದರಲ್ಲು ಅವರು ಮುಂದೆ. ನಾನು ಅಲ್ವ ಸ್ವಲ್ಪ ಕ್ರೀಡಾ ಬರಹಗಳನ್ನು ಬರೆದಿದ್ದೀನಿ ಅಂದರೆ ಅದಕ್ಕೆ ಅವರು ನೀಡಿದ ಪ್ರೋತ್ಸಾಹವೇ ಕಾರಣ. ಪ್ರತಿ ಬಾರಿ ನಾನು ಬರೆದ ಲೇಖನ ಅವರ ಮುಂದೆ ಹಿಡಿದಾಗ ಅದನ್ನು ಓದಿ, ತಿದ್ದುವ, ಬದಲಾವಣೆಗಳನ್ನು ಸೂಚಿಸಿ ಲೇಖನವನ್ನು ಇನ್ನಷ್ಟು ಚಂದಗೊಳಿಸುವ ಅವರ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ.
“ಇಲ್ಲಿ ಜೀವ ಮತ್ತು ದೇವ ಭಿನ್ನವಲ್ಲ. ಇಲ್ಲಿ ಜೀವ ಮತ್ತು ದೇವ ಇಬ್ಬರೂ ಸೇರಿ ಆದ ಬಯಲಿನ ಚಿತ್ರಣವನ್ನು ನೀಡುತ್ತದೆ...
"ಮೂವತ್ತು ಕವಿತೆಗಳ ಗುಚ್ಛವಿರುವ ಮೊದಲ ಭಾಗದಲ್ಲಿ ಹಿಂದೆ ಬಿದ್ದ ನೆರಳು, ಮುತ್ತುಗದೆಲೆಯ ಮೇಲಿನ ಬೆಲ್ಲ, ಪಂಜರದ ಗಿ...
"ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ...
©2025 Book Brahma Private Limited.