ತಾಡಾಸನ ಮತ್ತು ಸಿದ್ಧಾಸನ

Date: 28-05-2024

Location: ಬೆಂಗಳೂರು


"ತಾಡಾಸನ ಸಮತೋಲನ ಶಕ್ತಿ ಕಾಪಾಡಲು ನೆರವುವಾಗುತ್ತದೆ ಹಾಗೂ ರಕ್ತಸಂಚಾರ ಹೆಚ್ಚಿಸುತ್ತದೆ. ಸಿದ್ಧಾಸನವು ಬೆನ್ನು ಹುರಿಯನ್ನು ನೇರ ಮತ್ತು ಸದೃಢಗೊಳಿಸುತ್ತದೆ," ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ತಾಡಾಸನ

ತಾಡಾಸನವನ್ನು "ಪರ್ವತದ "ಭಂಗಿ ಎಂದು ಕೂಡ ಕರೆಯಲಾಗುತ್ತದೆ. ಇದು ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಮತ್ತು ದೇಹವು ಬೇರೆ ಯೋಗಾಸನಗಳಿಗೆ ತಯಾರಾಗಲು ಇದು ನೆರವಾಗುವುದು. ನಿಂತುಕೊಂಡು ಮಾಡುವಂತಹ ಎಲ್ಲಾ ರೀತಿ ಆಸನಗಳಿಗೆ ಇದು ಮೂಲ ಎಂದು ಕರೆಯಲಾಗುತ್ತದೆ.

ತಾಡಾಸನ ಮಾಡುವ ವಿಧಾನ:
ಮೊದಲು ಕಾಲಿನ ಮೇಲೆ ನೇರವಾಗಿ ನಿಲ್ಲಿ, ನಂತರ ಪಾದಗಳು ಜೊತೆಯಾಗಿರಲಿ. ಹಿಂಗಾಲು ಸ್ವಲ್ಪ ದೂರವಾಗಿರಲಿ. ಕೈಗಳನ್ನು ನೇರವಾಗಿ ದೇಹದ ಎರಡು ಬದಿಯಲ್ಲಿ ಇಡಬೇಕು ನಂತರ ತೊಡೆಯ ಸ್ನಾಯುಗಳನ್ನು ಬಿಗಿಯಾಗಿಸಿ. ಮೊಣಕಾಲುಗಳನ್ನು ಸ್ವಲ್ಪ ಎತ್ತಿ. ಆದರೆ ಇದು ಹೊಟ್ಟೆಯ ಕೆಳಭಾಗಕ್ಕೆ ಹೆಚ್ಚು ಭಾರ ಹಾಕಬಾರದು ಎಂದು ನೆನಪಿಡಬೇಕು, ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಚಿತ್ರದಲ್ಲಿರುವಂತೆ, ನಂತರ ಎರಡು ಕಾಲಿನ ಬೆರಳುಗಳ ಮೇಲೆ ದೇಹದ ಭಾಗವನ್ನು ಬ್ಯಾಲೆನ್ಸ್ ಮಾಡಬೇಕು, ದೃಷ್ಟಿ ನೇರವಾಗಿರಬೇಕು ಉಸಿರಾಟದ ಕ್ರಿಯೆ ಸಹಜವಾಗಿರಬೇಕು 20 ಸೆಂಕೆಡ್ಗಳ ಕಾಲ ಈ ಭಂಗಿಯಲ್ಲಿ ಇದ್ದು ನಂತರ ಸಮಸ್ಥಿತಿಗೆ ಬನ್ನಿ. ಚಿತ್ರದಲ್ಲಿರುವಂತೆ.

ತಾಡಾಸನದ ಪ್ರಯೋಜನಗಳು:
1) ಈ ಆಸನವು ಪಾದಗಳನ್ನು ಬಲಪಡಿಸುತ್ತದೆ.
2) ಈ ಆಸನವು ಬೆನ್ನು ನೋವಿಗೆ ನೆರವುವಾಗುತ್ತದೆ.
3) ಈ ಆಸನವು ಸಮತೋಲನ ಶಕ್ತಿ ಕಾಪಾಡಲು ನೆರವುವಾಗುತ್ತದೆ.
4) ಈ ಆಸನವು ಸುಲಭವಾಗಿ ಉಸಿರಾಡಲು ನೆರವಾಗುವುದು.
5) ಈ ಆಸನವು ರಕ್ತಸಂಚಾರ ಹೆಚ್ಚಿಸುತ್ತದೆ.
6) ಈ ಆಸನವು ಮನಸ್ಥಿತಿಯನ್ನು ಸುಧಾರಿಸುವುದು.

 

 

 

 

 

 

 

 

 

 

ಸಿದ್ಧಾಸನ

ಸಿದ್ದಿ ಎಂದರೆ ಅತಿಮಾನುಷ ಶಕ್ತಿ ಎಂದರ್ಥ. ಸಾಧಕರು, ತಪಸ್ವಿಗಳು ತಮ್ಮ ತಪಸ್ಸಿನಿಂದ ಈ ಸಿದ್ದಿಗಳನ್ನು ಪಡೆಯುತ್ತಾರೆ. ಸಿದ್ದಿಗಳಲ್ಲಿ ಅಷ್ಟ ಅಂದರೆ ಎಂಟು ಸಿದ್ಧಿಗಳು ಎಂದರ್ಥ.

ಸಿದ್ಧಾಸನ ಮಾಡುವ ವಿಧಾನ:
ಮೊದಲು ದಂಡಾಸನದಲ್ಲಿ ನೇರವಾಗಿ ಕುಳಿತುಕೊಂಡು ಕಾಲುಗಳನ್ನು ಮುಂದೆ ಚಾಚಬೇಕು. ಚಾಚಿರುವ ಕಾಲುಗಳನ್ನು ಮಡಿಸಿ ಹಿಂದಕ್ಕೆ ತೊಡೆಯ ಕಡೆ ತೆಗೆದುಕೊಳ್ಳಿ. ಎಡಗಾಲನ್ನು ಹಿಂದೆ ತೆಗೆದುಕೊಂಡು ಎಡ ಹಿಮ್ಮಡಿಯು ಮೇಲೆ ಬರುವ ರೀತಿಯಲ್ಲಿ ಇಟ್ಟುಕೊಳ್ಳಿ. ಬಲಗಾಲನ್ನು ಒಳಗೆ ತೆಗೆದುಕೊಂಡು ಬಲಗಾಲಿನ ಹಿಮ್ಮಡಿ ಮೇಲೆ ಬರುವ ರೀತಿಯಲ್ಲಿ ಇಟ್ಟುಕೊಳ್ಳಿ, ನಂತರ ಉಸಿರಾಟದ ಕ್ರಿಯೆಯು ಸಹಜವಾಗಿರಬೇಕು, ಈ ಆಸನದಲ್ಲಿ 20 ಸೆಂಕೆಡ್ಗಳ ಕಾಲ ಇದ್ದು ( ಚಿತ್ರದಲ್ಲಿರುವಂತೆ) ನಂತರ ದಂಡಾಸನ ಸ್ಥಿತಿಗೆ ಬನ್ನಿ.

ಸಿದ್ಧಾಸನದ ಪ್ರಯೋಜನಗಳು:
1) ಸಿದ್ಧಾಸನ ಧ್ಯಾನಕ್ಕೆ ಸೂಕ್ತವಾದ ಆಸನವಾಗಿದೆ.
2) ಈ ಆಸನ ಸುಪ್ತಾವಸ್ಥೆಯಲ್ಲಿರುವ ಅಂತರ್‌ಶಕ್ತಿಯನ್ನು ಜಾಗೃತಿಗೊಳಿಸುವುದು. ಮನಃಶಾಂತಿ ನೀಡುವುದು ಹಾಗೂ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ.
3) ಈ ಆಸನವು ಪದ್ಮಾಸನ ಕಷ್ಟವಾಗುವವರಿಗೆ ಸಿದ್ದಾಸನ ಒಳ್ಳೆಯ ಯೋಗವಾಗಿದೆ.
4) ಈ ಆಸನವು ಬೆನ್ನು ಹುರಿಯನ್ನು ನೇರ ಮತ್ತು ಸದೃಢಗೊಳಿಸುತ್ತದೆ.

MORE NEWS

ಶಶಿಧರ ತೋಡಕರ: ಸಾಮಾಜಿಕ ಋಣ ಸಂದಾಯದ ಎರಡು ಮಾದರಿಗಳು

17-10-2024 ಬೆಂಗಳೂರು

"ಕಳೆದ ಎರಡು ವರ್ಷಗಳ ಹಿಂದೆ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಕುರಿತ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿ...

ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

16-10-2024 ಬೆಂಗಳೂರು

"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕ...

ಮಗು ಮತ್ತು ಬಾಶಾಗಳಿಕೆ 

11-10-2024 ಬೆಂಗಳೂರು

"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನ...