Date: 29-05-2024
Location: ಬೆಂಗಳೂರು
"ವಿದ್ವತ್ತಿನ ವಿಚಾರದಲ್ಲಿಯೂ ಚಾಲುಕ್ಯರ ಕಾಲಕ್ಕಿಂತ ಹೆಚ್ಚು ರಾಶ್ಟ್ರಕೂಟರ ಕಾಲದಲ್ಲಿ ವ್ಯಾಪಕತೆಯನ್ನೂ ಹೆಚ್ಚು ಮಹತ್ವವನ್ನೂ ಸಂಸ್ಕೃತವು ಪಡೆದುಕೊಂಡಿತು. ಆನಂತರ ಇದು ಹಾಗೆಯೆ ಮುಂದುವರೆಯುತ್ತದೆ. ಆನಂತರ ಕನ್ನಡ ಪರಿಸರದಲ್ಲಿ ಬರುವ ಶಯಿವ-ವೀರಶಯಿವ-ಲಿಂಗಾಯತ ಪಂತದಲ್ಲಿಯೂ ಇದು ತನ್ನದೆ ಸ್ತಾನವನ್ನು ಉಳಿಸಿಕೊಂಡು ಬರುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಸಕ್ಕದದ ಉಬ್ಬರವಿಳಿತ’ ಕುರಿತು ಬರೆದಿರುವ ಲೇಖನ.
ಈ ಹಿಂದಿನ ಬರಹದಲ್ಲಿ ಸಕ್ಕದವು ಕನ್ನಡದೊಂದಿಗೆ ಬೆಳೆಸಿಕೊಂಡ ನಂಟನ್ನು ಕುರಿತು ಮಾತನಾಡಲಾಯಿತು. ಇವತ್ತು, ಆನಂತರ ಸಂಸ್ಕೃತವು ಕನ್ನಡದೊಂದಿಗಿನ ಈ ನಂಟನ್ನು ಹೇಗೆ ಉಳಿಸಿಕೊಂಡು ಬಂದಿದೆ, ಈ ದಾರಿಯಲ್ಲಿ ಆಗಿರಬಹುದಾದ ಏರು-ಇಳುವುಗಳು ಏನೇನು ಎಂಬುದನ್ನು ತುಸು ಮಾತನಾಡಬಹುದು. ಕದಂಬ ಪರ‍್ವ ಕಾಲದಲ್ಲಿಯೆ ಸಂಸ್ಕೃತ ಕನ್ನಡದ ಸಂರ‍್ಕಕ್ಕೆ ಬಂದಿದ್ದಿತು, ಕದಂಬರ ಕಾಲದಲ್ಲಿ ಸಂಸ್ಕೃತವು ದೊಡ್ಡದಾಗಿ ಕನ್ನಡದೊಂದಿಗೆ ತೆರೆದುಕೊಂಡಿತು, ಬಾದಾಮಿ ಚಾಲುಕ್ಯರ ಕಾಲದಲ್ಲಿ ಇದು ಪ್ರತಿಶ್ಟೆಯನ್ನು ಪಡೆದುಕೊಂಡು ಬೆಳೆಯಿತು. ರಾಶ್ಟ್ರಕೂಟರ ಕಾಲಕ್ಕೆ ಇದು ವಯಿದಿಕದ ಆಚೆಗೆ ಮುಕ್ಯವಾಗಿ ಕರ‍್ನಾಟಕದ ಸಂರ‍್ಬದಲ್ಲಿ ಜಯ್ನದಲ್ಲಿಯೂ ತನ್ನ ಸ್ತಾನವನ್ನು ಬದ್ರಪಡಿಸಿಕೊಂಡಿತು. ವಿದ್ವತ್ತಿನ ವಿಚಾರದಲ್ಲಿಯೂ ಚಾಲುಕ್ಯರ ಕಾಲಕ್ಕಿಂತ ಹೆಚ್ಚು ರಾಶ್ಟ್ರಕೂಟರ ಕಾಲದಲ್ಲಿ ವ್ಯಾಪಕತೆಯನ್ನೂ ಹೆಚ್ಚು ಮಹತ್ವವನ್ನೂ ಸಂಸ್ಕೃತವು ಪಡೆದುಕೊಂಡಿತು. ಆನಂತರ ಇದು ಹಾಗೆಯೆ ಮುಂದುವರೆಯುತ್ತದೆ. ಆನಂತರ ಕನ್ನಡ ಪರಿಸರದಲ್ಲಿ ಬರುವ ಶಯಿವ-ವೀರಶಯಿವ-ಲಿಂಗಾಯತ ಪಂತದಲ್ಲಿಯೂ ಇದು ತನ್ನದೆ ಸ್ತಾನವನ್ನು ಉಳಿಸಿಕೊಂಡು ಬರುತ್ತದೆ. ಈ ಪಂತದ ಹಲವಾರು ಪಟ್ಯಗಳು ಸಂಸ್ಕೃತದಲ್ಲಿ ಬರುತ್ತವೆ ಮತ್ತು ಸಂಸ್ಕೃತವು ನಿರಂತರ ಮಾದರಿಯಾಗಿ, ಮಾನ್ಯತೆಯಾಗಿ ಉಳಿದುಕೊಳ್ಳುತ್ತದೆ. ಈಗಾಗಲೆ ಹೇಳಿದಂತೆ ಸಂಸ್ಕೃತದ ಬಗೆಗೆ ವಿಬಿನ್ನ ಬಗೆಯ ವಿಚಾರಗಳು ಈ ಪಂತದಲ್ಲಿಯೂ ಮುಂದುವರೆಯುತ್ತವೆ. ಆನಂತರ ಬಹುತೇಕ ಮಯ್ಸೂರಿನ ಅರಸರವರೆಗೆ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿತು.
ಇನ್ನು, ಸಾಮಾಜಿಕವಾಗಿ ಸಂಸ್ಕೃತವು ಯಾವ ಸ್ತಾನಮಾನವನ್ನು ಪಡೆದುಕೊಂಡಿದ್ದಿತು ಎಂಬುದರ ಬಗೆಗೆ ಒಂದೆರಡು ಮಾತಾಡಬಹುದು. ಮತಪಂತಗಳ ವಿಚಾರದಲ್ಲಿ ಈಗಾಗಲೆ ಹೇಳಿದಂತೆ ಶಿಶ್ಟವಾಗಿದ್ದ ಅಂದರೆ ಸಮಾಜದ ಅರಮನೆಯಲ್ಲಿ, ಸಿರಿವಂತರಲ್ಲಿ ಮೇಲ್ರ‍್ಗದಲ್ಲಿ ಜಾಗವನ್ನು ಪಡೆದುಕೊಂಡಿದ್ದ ಮತಪಂತಗಳಲ್ಲಿ ಇದು ಜಾಗವನ್ನು ಬದ್ರಪಡಿಸಿಕೊಂಡು ಸಮಾಜದಲ್ಲಿ ನಿರಂತರ ವಿಸ್ತರಣೆಯನ್ನು ಪಡೆದುಕೊಂಡಿತು. ಸಂಸ್ಕೃತವು ಸಾಮಾನ್ಯರ ಬದುಕಿನಲ್ಲಿ ನಿರಂತರವಾಗಿ ಮುಂದುವರೆಯಿತು. ಸಾಮಾನ್ಯರ ಬದುಕಿನಲ್ಲಿ ಬರುವುದಕ್ಕೆ ಮುಕ್ಯವಾದ ಕಾರಣವೆಂದರೆ ಅದು ಸಾಮಾಜಿನ ಪ್ರತಿಶ್ಟೆ, ಸಾಮಾಜಿಕ ಮಾನ್ಯತೆ, ಮನ್ನಣೆ ಇವುಗಳನ್ನು ಪಡೆದುಕೊಂಡಿದ್ದರಿಂದ. ಸಂಸ್ಕೃತ ಬಾಶೆ ಬರುತ್ತದೆ ಎನ್ನುವುದು, ಸಂಸ್ಕೃತವನ್ನು ಬಳಸುವುದು ಒಂದು ಪ್ರತಿಶ್ಟೆ ಎಂದಾಯಿತು. ಸಂಸ್ಕೃತ ಬಳಸುವವರಿಗೆ ಸಾಮಾಜಿಕವಾಗಿ ಎತ್ತರದ ಸ್ತಾನ, ಗವುರವ ದೊರಕತೊಡಗಿದವು. ಹೀಗಾಗಿ ಸಂಸ್ಕೃತವು ಸಾಮಾಜಿಕವಾಗಿ ತೀವ್ರವಾಗಿ ವಿಸ್ತರಿಸಿಕೊಂಡಿತು. ಇದು ಹೆಚ್ಚೂ ಕಡಿಮೆ ಇಂಗ್ಲೀಶು ಕನ್ನಡದೊಳಗೆ ನಡೆದ ರೀತಿಯಲ್ಲಿಯೆ ಆಗಿದೆ. ಸಂಸ್ಕೃತ ಎಶ್ಟುಮಟ್ಟಿಗೆ ಕನ್ನಡ ಸಮಾಜದ ಒಳಗೆ ತಣ್ಣಗೆ ಹರಿದುಕೊಂಡಿತೆಂದರೆ ಕನ್ನಡದ ದಿನಜೀವನದ ಬಳಕೆಯ ಶಬ್ದಗಳೂ ಸಾಕಶ್ಟು ಸಂಸ್ಕೃತ ಪದಗಳಿಗೆ ಜಾಗವನ್ನು ಮಾಡಿಕೊಟ್ಟವು. ಕನ್ನಡದ ದಿಕ್ಕುಗಳು ಇಂದು ಪರಿಚಯವೆ ಇಲ್ಲದಶ್ಟು ಬದಲಾಗಿ, ಸಂಸ್ಕೃತದ ಪದಗಳು ಕನ್ನಡದವೆ ಎನ್ನುವಶ್ಟು ಸಹಜವಾಗಿ ಬಳಕೆಯಲ್ಲಿರುವುದನ್ನು ಕಾಣಬಹುದು. ಇಂದು ಕನ್ನಡದ ಮೂಡ, ಪಡು, ತೆಂಕು, ಬಡ ಎಂಬ ದಿಕ್ಕುಗಳ ಬದಲಿಗೆ ಪರ‍್ವ, ಪಶ್ಚಿಮ, ದಕ್ಶಿಣ, ಉತ್ತರ ಎಂಬ ಸಕ್ಕದದ ಪದಗಳು ಬಳಕೆಯಲ್ಲಿವೆ. ಅದರಂತೆಯೆ ನೆತ್ತರು, ತೊಗಲು ಎಂಬ ದೇಹದ ಅಂಗಗಳೂ ರಕ್ತ, ದರ‍್ಮ ಎಂಬ ಶಬ್ದಗಳಿಗೆ ಜಾಗ ಮಾಡಿಕೊಟ್ಟು ಹಿಂದಕ್ಕೆ ಸರಿದಿವೆ. ಇದಕ್ಕೆ ಮೂಲಬೂತವಾದ ಕಾರಣ ಅಂದು ಕನ್ನಡ ಸಮಾಜ ಸಂಸ್ಕೃತವನ್ನು ರ‍್ಯಾದೆ, ಮನ್ನಣೆ, ಪ್ರತಿಶ್ಟೆ ಎಂದು ಪರಿಗಣಿಸಿಕೊಂಡಿದ್ದೆ ಆಗಿದೆ.
ಇದು ಇತಿಹಾಸದ ಉದ್ದಕ್ಕೂ ವಿಬಿನ್ನವಾಗಿ ಬೆಳೆಯುತ್ತ ಬಂದಿದೆ. ಆದುನಿಕಪರ‍್ವ ಕಾಲದಲ್ಲಿ ಅಂದರೆ ಬ್ರಿಟೀಶರ ಕಾಲದಲ್ಲಿ ಸಂಸ್ಕೃತ ಮತ್ತೊಮ್ಮೆ ಕನ್ನಡದೊಳಗಿನ ತನ್ನ ಸ್ತಾನವನ್ನು ಇನ್ನಶ್ಟು ವಿಸ್ತರಿಸಿಕೊಳ್ಳುತ್ತದೆ. ಬ್ರಿಟೀಶರ ಕಾಲದಲ್ಲಿ ಬೆಳೆದ ವಿದ್ವತ್ತಿನ ಬಾಗವಾಗಿ ಸಂಸ್ಕೃತವನ್ನು ಕಡ್ಡಾಯವಾಗಿ ನೋಡುವ ಕ್ರಮವೊಂದು ಬೆಳೆಯಿತು. ಇದಕ್ಕೆ ಮುಕ್ಯವಾದ ಒಂದು ಕಾರಣವೆಂದರೆ ಬ್ರಿಟೀಶರು ಬಾರತಕ್ಕೆ ಬಂದಾಗ ಸಂಸ್ಕೃತವನ್ನು ನೋಡಿದ ರೀತಿ ಮತ್ತು ಅದು ಬಾರತೀಯ ವಿದ್ವಾಂಸರನ್ನು ಪ್ರಬಾವಿಸಿದ ರೀತಿ. ಈ ಕಾಲದಲ್ಲಿ ಆದ ಬೆಳವಣಿಗೆಗಳು ಸಾಮಾನ್ಯರವರೆಗೆ ಹರಿದುಬಂದು ಸಂಸ್ಕೃತವನ್ನು ಅತಿಯಾಗಿ ಆವಾಹಿಸಿಕೊಳ್ಳುವ ಪರಿಪಾಟ ಬೆಳೆಯಿತು. ಇದಕ್ಕೆ ಪೂರಕವಾಗಿ ಒಂದು ವಿಚಾರವನ್ನು ಮಾತಾಡಬಹುದು. ಈ ಹಿಂದಿನ ಬರಹದಲ್ಲಿ ನೋಡಿದಂತೆ ಹಳಗನ್ನಡದಲ್ಲಿ ಸಂಸ್ಕುçತದ ಪ್ರಬಾವ ಸಾಕಶ್ಟು ಇದ್ದಿತು. ಆದರೆ, ಅದರ ಜೊತೆಜೊತೆಯಲ್ಲಿಯೆ ಕನ್ನಡದ ಗತ್ತು ಕೂಡ ಇದ್ದಿತು. ಪಂಪನಂತ ಸಂಸ್ಕೃತಬೂಯಿಶ್ಟ ಕಾವ್ಯ ಬರೆದ ಮತ್ತು ಸಂಸ್ಕೃತದ ತನ್ನ ಅರಿವನ್ನು ಅಬಿಮಾನವಾಗಿ ಉಬಯ ಬಾಶಾ ವಿಶಾರದ ಎಂದು ಹೇಳಿಕೊಳ್ಳುತ್ತಿದ್ದ ಕವಿಗಳೂ ಕನ್ನಡದ ರಚನೆಯನ್ನು, ಸಾಮಾಜಿಕತೆಯನ್ನೂ ಒಟ್ಟೊಟ್ಟಿಗೆ ಬಳಸಿರುವುದನ್ನು ಕಾಣಬಹುದು. 7-8-9-10ನೆ ಶತಮಾನಗಳಲ್ಲಿ ಆದ ಸಂಸ್ಕೃತದ ಏರುಮುಕದ ಸಾಮಾಜಿಕ ಬೆಳವಣಿಗೆಗೆ 10-11ನೆ ಶತಮಾನದಿಂದ ಒಂದು ಬಿಗುವು ಒದಗಿತು. ಅಂದರೆ, ಶಿವಪಂತಗಳು ಮೊದಲಾಗಿ ವಿವಿದ ಪಂತಗಳ ಬೆಳವಣಿಗೆಯ ಬರದಲ್ಲಿ ಜಯ್ನ ಪಂತವು ಕುಸಿಯುವ ಕಾಲದಲ್ಲಿ ಅದು ಸಂಸ್ಕೃತವನ್ನು ಬಿಟ್ಟು ಕನ್ನಡವನ್ನು ಅತಿಯಾಗಿ ಆವಾಹಿಸಿಕೊಂಡಿತು. ಶಿವಪಂತಗಳು ಆನಂತರ ಬಾಗವತ, ವಯಿದಿಕ ಮೊದಲಾದ ಪಂತಗಳೂ ಕನ್ನಡವನ್ನು ಬಹುವಾಗಿ ಎತ್ತಿ ಹಿಡಿದವು. ಇದರಿಂದ ಕನ್ನಡ ಸಮಾಜದಲ್ಲಿನ ಸಂಸ್ಕೃತದ ಏರುಬೆಳವಣಿಗೆಗೆ ತಡೆ ಒದಗಿತು. ಆದರೆ, ಬೆಳವಣಿಗೆಯ ವೇಗ ಕಡಿಮೆಯಾಗಿದ್ದಿತೆ ಹೊರತು ಅದು ಕನ್ನಡ ಸಮಾಜದಲ್ಲಿ ಮನ್ನಣೆಯನ್ನು ಹಾಗೆಯೆ ಉಳಿಸಿಕೊಂಡಿದ್ದಿತು. ಹೀಗಾಗಿ ಆನಂತರದ ಕಾಲದಲ್ಲಿ ನಿರಂತರವಾಗಿ ಸಂಸ್ಕೃತದಲ್ಲಿ ಶಾಸನಗಳು, ಸಾಹಿತ್ಯ, ಶಾಸ್ತ್ರ ಮೊದಲಾದವು ಬರುತ್ತಲೆ ಇದ್ದವು. ಇದು ಬ್ರಿಟೀಶರ ಕಾಲದಲ್ಲಿ ಮತ್ತೊಂದು ಏರುಗತಿಯನ್ನು ಪಡೆದುಕೊಂಡಿತು. ಈಗಾಗಲೆ ಸಾಮಾಜಿಕ ಮತ್ತು ವಿದ್ವತ್ತಿನ ವಲಯಗಳಲ್ಲಿ ಸಂಸ್ಕೃತ ಹೊಂದಿದ್ದ ಸ್ತಾನಮಾನಗಳು ಇನ್ನು ವೇಗವಾಗಿ ಬೆಳೆಯತೊಡಗಿದವು. ಇದನ್ನು ಎರಡು ಎತ್ತುಗೆಗಳಿಂದ ಅರಿತುಕೊಳ್ಳಬಹುದು.
ಆದುನಿಕ ಕಾಲದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಬಹುತೇಕ ಸಂಸ್ಕೃತವೆ ಮೂಲ ಎನ್ನುವಂತೆ ಆಯಿತು. ನಡುಗಾಲದುದ್ದಕ್ಕೂ ಕನ್ನಡದ ಹೊಸಪದಗಳು ನಿರಂತರ ಹುಟ್ಟತ್ತಲೆ ಇದ್ದವು. ಆದರೆ, ಬ್ರಿಟೀಶರ ಕಾಲದಲ್ಲಿ, ಹಾಗೆಯೆ ಸ್ವತಂತ್ರ ಬಾರತದಲ್ಲಿ ಕನ್ನಡದಲ್ಲಿ ಕನ್ನಡದಿಂದ ಹೊಸಪದಗಳನ್ನು ವಿದ್ವಾಂಸರು ಹುಟ್ಟಿಸಿದ್ದು ತುಂಬ ಕಡಿಮೆ. ಇನ್ನೊಂದು ಮುಕ್ಯವಾದ ವಿಚಾರವನ್ನು ಮಾತಿಗೆ ತೆಗೆದುಕೊಳ್ಳಬಹುದು. ಪಂಪ ಮೊದಲಾದವರ ಬರಹದಲ್ಲಿ ಕಬ್ಬ, ಕಬ್ಬಿಗ ಮೊದಲಾದ ಪದಗಳು ಸಹಜವಾಗಿ ಬಳಕೆಯಲ್ಲಿದ್ದವು. ಕನ್ನಡ ಸಮಾಜದಲ್ಲಿ ಬಕುತ, ಮುಕುತಿ ಮೊದಲಾದ ಪದಗಳು ಸಹಜವಾಗಿ ಬಳಕೆಯಲ್ಲಿವೆ. ಇವು ಮೊದಲಿನಿಂದಲೂ ಬಳಕೆಯಲ್ಲಿದ್ದರೂ ಆದುನಿಕ ಕಾಲದ ಶಿಶ್ಟಕನ್ನಡ ಈ ರೂಪಗಳಿಗೆ ರ‍್ಯಾದೆಯನ್ನು ಕೊಡುವುದಿಲ್ಲ, ಮಾತ್ರವಲ್ಲದೆ ಜಾಗವನ್ನೂ ಕೊಡುವುದಿಲ್ಲ. ಹಾಗಾಗಿ ಈ ರೂಪಗಳ ಬಳಕೆ ಶಿಶ್ಟಕನ್ನಡದಲ್ಲಿ ಇಲ್ಲವೆಇಲ್ಲ. ಒಂದೊಮ್ಮೆ ಬರಹದ ಕನ್ನಡದಲ್ಲಿ ಬಳಕೆಯನ್ನು ಹೊಂದಿದ್ದ ಈ ತದ್ಬವ ರೂಪಗಳು ಇಂದು ತಮ್ಮ ಸ್ತಾನವನ್ನು ಕಳೆದುಕೊಂಡು ಕುಸಿದವು. ಇದರ ಬದಲಾಗಿ ಈಗ ಕಾವ್ಯ, ಕವಿ ಮತ್ತು ಬಕ್ತ, ಮುಕ್ತಿ ಎಂಬ ತತ್ಸಮ ಪದರೂಪಗಳು ಸಹಜ ಚಲಾವಣೆಯನ್ನು ಪಡೆದುಕೊಂಡವು. ಇದು ಆದುನಿಕಪರ‍್ವ ಕಾಲದಲ್ಲಿ ಕನ್ನಡ ಸಮಾಜವು ತೀವ್ರವಾಗಿ ಸಂಸ್ಕೃತವನ್ನು ಆವಾಹಿಸಿಕೊಂಡದ್ದರ ಪರಿಣಾಮ. ಹೀಗೆ ಸಂಸ್ಕುçತವು ತನ್ನ ಜಾಗವನ್ನ ವಿಪರೀತವಾಗಿ ವಿಸ್ತರಿಸಿಕೊಂಡಿತು.
ಆನಂತರ, ಸ್ವತಂತ್ರ ಬಾರತದಲ್ಲಿ ಕಳೆದ ಕೆಲವು ದಶಕಗಳಲ್ಲಿ ಸಂಸ್ಕುçತದ ವಿರುದ್ದವಾದ ಆಲೋಚನೆಗಳು ಹೆಚ್ಚು ಬೆಳೆಯತೊಡಗಿವೆ. ಇತ್ತೀಚಿನ ವರುಶಗಳಲ್ಲಿ ಸಂಸ್ಕುçತದ ವಿರುದ್ದ ಚಳುವಳಿಯ ತರದಲ್ಲಿ ಮಾತುಕತೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದರ ವ್ಯಾಪಕತೆ ಬಲುದೊಡ್ಡದು.
ಈ ಅಂಕಣದ ಹಿಂದಿನ ಬರೆಹಗಳು:
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.