ನನ್ನ ವೈಯಕ್ತಿಕ ಬದುಕಿಗು ಕವಿತೆಗೂ ಸಂಬಂಧವಿಲ್ಲ; ಮಧುರಾ ಮೂರ್ತಿ

Date: 16-12-2024

Location: ಬೆಂಗಳೂರು


ಬೆಂಗಳೂರು: ಮಾತಿನ ಮನೆ ಆಶ್ರಯದಲ್ಲಿ ಮಧುರಾ ಮೂರ್ತಿ ಅವರ ಸಂಪಾದಕತ್ವದ ‘ನೀರ ಮೇಲಣ ನೆರಳು’ ಕವನ ಸಂಕಲನ ಲೋಕಾರ್ಪಣಾ ಸಮಾರಂಭವು 2024 ಡಿ. 15 ಭಾನುವಾರದಂದು ಚಾಮರಾಜಪೇಟೆಯಲ್ಲಿ ನೆಡೆಯಿತು.

ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಕವಿ, ಚಿಂತಕ, ಪ್ರಮುಖ ವಾಗ್ಮಿ ಹಾಗೂ ಮ್ಯಾನೇಜ್ಮೆಂಟ್ ಗುರು ಸತ್ಯೇಶ್ ಎನ್ ಬೆಳ್ಳೂರ್‌ ಅವರು, "ಯಾವುದೇ ಒಂದು ಸಾಹಿತ್ಯ ಪ್ರಕಾರವಾಗಿ ಎಲ್ಲಾ ಕಾಲದಲ್ಲೂ ಕೂಡ ನಿಲ್ಲಬೇಕು ಅಂದರೆ ಆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಪ್ರಬುದ್ಧವಾಗಿ ನೆಲೆ ನಿಲ್ಲಬೇಕಾದದ್ದು ಕಾವ್ಯ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಲ್ಲಿ ಕವಿತೆಗಳನ್ನು ಓದಿ ಆರ್ಥೈಸಿಕೊಂಡು ಆಸ್ವಾಧನೆ ಮಾಡಬೇಕು ಎನ್ನೋ ಒಂದು ತುಡಿತ ಕಡಿಮೆಯಾಗಿದೆ,’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಪರಿಸರ ವಿಜ್ಞಾನ ಲೇಖಕರು, ಪ್ರಾಧ್ಯಾಪಕರು ಆದ ಗುರುರಾಜ್ ಎಸ್ ದಾವಣಗೆರೆ ಅವರು ಮಾತನಾಡಿ ಕೃತಿ ಪರಿಚಯವನ್ನು ಮಾಡಿಕೊಟ್ಟರು.

ನನ್ನ ವೈಯಕ್ತಿಕ ಬದುಕಿಗು ಕವಿತೆಗು ಸಂಬಂಧವೇ ಇಲ್ಲಾ, ಯಾವುದೇ ಕವಿತೆ ರಚಿಸುವಾಗ ಆ ಸಂದರ್ಭದ ಒಳಹೊಕ್ಕು, ಆ ಸಂದರ್ಭದಲ್ಲಿ ನಾನಿದ್ದೇನೆ ಎಂದು ಕಲ್ಪಿಸಿಕೊಂಡು ಬರೆಯುತ್ತೇನೆ ಎಂದು ’ನೀರ ಮೇಲಣ ನೆರಳು’ ಕವನ ಸಂಕಲನದ ಸಂಪಾದಕಿ ಮಧುರಾ ಮೂರ್ತಿ ಅವರು ಸಭೆಯಲ್ಲಿ ಹೇಳಿದರು. ಹಾಗೂ ನುಡಿ ತೋರಣದ ವತಿಯಿಂದ ಮಧುರಾ ಮೂರ್ತಿಯವರಿಗೆ ಗೌರವ ಸಮರ್ಪಣೆ ನೆಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ಕಥೆ ಕಾದಂಬರಿಕಾರರಾದ ಕಂನಾಡಿಗಾ ನಾರಾಯಣ, ಅವರು ಯುವ ಜನರಲ್ಲಿ ಸಾಹಿತ್ಯ ಆಸಕ್ತಿಯ ಕೊರತೆಯ ಕುರಿತು ತಮ್ಮ ಅಭಿಪ್ರಾಯ ತಿಳಿಸಿ, ಒಂದು ಭಾಷೆಯನ್ನು ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾ ಅಧ್ಯಕ್ಷೀಯ ನುಡಿಗಳನ್ನಾಡಿದರು.

ರಾಸು ವೇಂಕಟೇಶ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು , ಕಾರ್ಯಕ್ರಮದ ನಿರೂಪಣೆಯನ್ನು ರಂಜಿತಾ ಅವರು ನೆರವೇರಿಸಿ ಕೊಟ್ಟರು.

MORE NEWS

‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಎಂಟು ಕವನ ಸಂಕಲನಗಳಿಗೆ

18-12-2024 ಬೆಂಗಳೂರು

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 21 ಭಾಷೆಯ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಆ ಪೈಕಿ ಎಂಟು ಕವ...

ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣಗೆ ಪ್ರತಿಷ್ಠಿತ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’

18-12-2024 ಬೆಂಗಳೂರು

ನವದೆಹಲಿ: 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣ ಅವರು ಆಯ್ಕೆಯ...

'ಕಾವ್ಯ ಕರ‍್ನಾಟಕ' ಕವನ ಪ್ರಾಯೋಗಿಕ ವಿಮರ್ಶೆ ಆನ್ಲಯಿನ್ ಉಪನ್ಯಾಸ ಸರಣಿ

17-12-2024 ಬೆಂಗಳೂರು

ರಾಯಚೂರು: ಪ್ರಾಯೋಗಿಕ ವಿಮರ‍್ಶೆ ಎನ್ನುವುದನ್ನು ನಿರ‍್ದಿಶ್ಟ ಸಿದ್ದಾಂತವನ್ನ ಅನ್ವಯಿಸದೆ, ಸಾಹಿತ್ಯದ ರಚನೆ, ಶ...