Date: 14-12-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯು ಡಿ.14 ಮತ್ತು 15ರಂದು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಯುತ್ತಿದ್ದು, ಈ ಉತ್ಸವದ ಮೊದಲನೇ ದಿನವಾದ ಡಿ. 14 ಶನಿವಾರದಂದು ಬಹಳಷ್ಟು ಗೋಷ್ಠಿಗಳು ಸಾಹಿತ್ಯಾಸಕ್ತರನ್ನು ಸೆಳೆಯಿತು.
ಅದರಲ್ಲಿ ಮುಖ್ಯವಾಗಿ ಕನ್ನಡ ಸಾಹಿತ್ಯದ ಕುರಿತು "ರೆಡ್ ಕೋಚ್" ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 'Spectrum of classical Literature in Karnataka' ವಿಚಾರದ ಕುರಿತು ಹಂಪನಾ ಅವರೊಂದಿಗೆ ಆಶಾ ದೇವಿ ಅವರು ಸಂವಾದ ನಡೆಸಿದರು.
"ನಾವು ಬೇರೆ ಭಾಷೆಗಳಿಂದ ಸಾಹಿವನ್ನು ಬರಮಾಡಿಕೊಲ್ಲುವ ನಿಟ್ಟಿನಲ್ಲಿ ಬಹಳಷ್ಟು ಕೆಲಸವನ್ನು ಮಾಡುತ್ತೇವೆ. ಆದರೆ ನಮ್ಮ ಕನ್ನಡವನ್ನು ಇತರರಿಗೆ ಪರಿಚಯ ಮಾಡಿಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ. ಕನ್ನಡ ಸಾಹಿತ್ಯ ಬಂದು ದೊಡ್ಡ ವಲಯವನ್ನು ಹೊಂದಿದೆ. ಕನ್ನಡ ಭಾಷೆಯನ್ನು ಮೊದಲು ಮಾತನಾಡಲು ಮಾತ್ರ ಬಳಕೆ ಮಾಡಲಾಗುತ್ತಿದ್ದು, ಯಾವಾಗ ಸಾಹಿತ್ಯಕ್ಕೆ ತನ್ನ ಮೊದಲ ಲಗ್ಗೆಯನ್ನು ಇಟ್ಟಿತೋ ಆಗ ಬಹಳಷ್ಟು ಪದಗಳನ್ನು ಸಂಸ್ಕೃತ ಮತ್ತು ಪ್ರಕೃತದಿಂದ ತರಲಾಯಿತು," ಎಂದು ಕನ್ನಡ ಸಾಹಿತ್ಯದ ಉಗಮ ಬಗ್ಗೆ ಮಾತನಾಡಿದರು.
"ಕನ್ನಡ ಲೇಖಕರಾಗಲಿ, ಕವಿಗಳಾಗಲಿ ಬೇರೊಂದು ಭಾಷೆಯಿಂದ ಅನುವಾದವನ್ನು ಮಾಡಿದರು ಕೂಡ ಅಲ್ಲಿ ಅವರ ತನವನ್ನು ಒಗ್ಗೂಡಿಸಿ, ವಿಭಿನ್ನವಾದ ಸಾಹಿತ್ಯವನ್ನು ಹೊರತರುತ್ತಾರೆ. ಇದು ಕನ್ನಡ ಸಾಹಿತ್ಯಕ್ಕಿರುವ ಮಹತ್ವ," ಎಂದರು.
ಕರ್ನಾಟಕದ ಸಾಹಿತ್ಯದ ಬಗೆಗಿನ ಈ ಸಂಚಿಕೆಗೆ ವಿಶ್ವದದಡ್ಯಾತ ಪ್ರತಿಕ್ರಿಯೆ ಲಭಿಸಿದ ಬಗ್ಗೆ ಆಶಾದೇವಿಯವರು ಕೇಳಿದ ಪ್ರಶ್ನೆಗೆ ಗೆ ಉತ್ತರಿಸಿದ ಹಂಪನಾ, "ವಿಶ್ವದ ಹಲವಾರು ಸಾಹಿತಿಗಳು ಕನ್ನಡ ಸಾಹಿತ್ಯ ಹಾಗೂ ದಕ್ಷಿಣ ಭಾರತದ ಸಾಹಿತ್ಯವನ್ನು ತಿಳಿಯುವ ಕುತೂಹಲವನ್ನು ತಿಳಿಸಿದರು. ಕನ್ನಡ ಸಾಹಿತ್ಯವು ಬಹಳಷ್ಟು ಆಳವಾದ ಇತಿಹಾಸವನ್ನು ಒಳಗೊಂಡಿದೆ." ಎಂದರು.
ಮೊದಲ ಬಾರಿಗೆ ಮಹಾಭಾರತವನ್ನು ಬರೆದ ಹೆಗ್ಗಳಿಕೆಗೆ ಕನ್ನಡ ಭಾಷೆ ಪತ್ರವಾಗಿದೆ. ಈ ರೀತಿಯಾಗಿ ಬಹಳಷ್ಟು ಕೊಡುಗೆಗಳನ್ನು ಕ್ಲಾಸಿಕ್ ಸಾಹಿತ್ಯಕ್ಕೆ ಕನ್ನಡ ನೀಡಿದೆ.
ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಡಾ.ನಾ ಡಿಸೋಜ ಅವರು ಇಂದು...
ಬೆಂಗಳೂರು: ನ್ಯಾಯ ಸ್ಪಂದನ ಬೆಂಗಳೂರು ಹಾಗೂ ಓದು ಗೆಳೆಯರ ಬಳಗ, ಬಾಗಲಕೋಟೆ ಇವರ ಸಹಯೋಗದಲ್ಲಿ ಅನಿಲ್ ಗುನ್ನಾಪುರ ಅ...
ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್. ಆದರೆ, ಅವರು ...
©2025 Book Brahma Private Limited.