‘ಸಿದ್ಲಿಂಗು 2’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ …

Date: 04-01-2025

Location: ಬೆಂಗಳೂರು


ಕಳೆದ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಿರ್ದೇಶಕ ವಿಜಯಪ್ರಸಾದ್‍. ಆದರೆ, ಅವರು ಅಂದುಕೊಂಡಂತೆ ಆಗಲಿಲ್ಲ. ಇದೀಗ ಪ್ರೇಮಿಗಳ ದಿನದಂದು ಸಿದ್ಲಿಂಗು 2’ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

 

12 ವರ್ಷಗಳ ಹಿಂದೆ ‘ಸಿದ್ಲಿಂಗು’ ಚಿತ್ರದ ಮೂಲಕ ನಿರ್ದೇಶಕರಾದವರು ವಿಜಯಪ್ರಸಾದ್‍. ಈಗ ಆ ಚಿತ್ರದ ಮುಂದುವರೆದ ಭಾಗದೊಂದಿಗೆ ಅವರು ವಾಪಸ್ಸಾಗುತ್ತಿದ್ದಾರೆ. ಯೋಗಿ ಇಲ್ಲೂ ಮುಂದುವರೆಯಲಿದ್ದು, ನಾಯಕಿಯಾಗಿ ಸೋನು ಕಾಣಿಸಿಕೊಂಡಿದ್ದಾರೆ. ಜೊತೆಗೆ ಆ ಚಿತ್ರದಲ್ಲಿ ಅಭಿನಯಿಸಿದ್ದ ಗಿರಿಜಾ ಲೋಕೇಶ್, ಸುಮನ್‍ ರಂಗನಾಥ್‍ ಮುಂತಾದವರು ಈ ಚಿತ್ರದಲ್ಲಿ ಮುಂದುವರೆಯಲಿದ್ದಾರೆ.

 

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ವಿಜಯಪ್ರಸಾದ್‍, ‘ಸಿದ್ಲಿಂಗು ಬೇರೆ ಅಲ್ಲ, ನಾನು ಬೇರೆ ಅಲ್ಲ. ನನ್ನೊಳಗಿದ್ದ ತುಮುಲಗಳಿಂದ ಬಿಡುಗಡೆ ಆಗಬೇಕಾಗಿತ್ತು. ಹಾಗಾಗಿ, ‘ಸಿದ್ಲಿಂಗು’ ಚಿತ್ರ ಮಾಡಿದೆ. ಆ ನಂತರ ಇನ್ನೊಂದಿಷ್ಟು ಚಿತ್ರಗಳನ್ನು ಮಾಡಿದೆ. ನನ್ನೊಳಗೆ ಇನ್ನೂ ಉಳಿದಿದ್ದ ತುಮುಲಗಳನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇನೆ. ಇದನ್ನು ಮುಂಚೆಯೇ ಮಾಡಬೇಕಿತ್ತು. ಆದರ, ಬೇರೆ ಚಿತ್ರಗಳಿಂದ ಸಾಧ್ಯವಾಗಿರಲಿಲ್ಲ. ಆರು ತಿಂಗಳ ಮಗುವಿನಿಂದ 60 ವರ್ಷದವರು ಒಟ್ಟಿಗೆ ಕುಳಿತು ನೋಡುವ ಚಿತ್ರ ಇದು’ ಎನ್ನುತ್ತಾರೆ.

ವಿಜಯಪ್ರಸಾದ್ ಹಿಂದಿನ ಚಿತ್ರಗಳಲ್ಲಿ ದ್ವಂಧ್ವಾರ್ಥ ಜಾಸ್ತಿ ಇತ್ತು. ಆದರೆ, ‘ಸಿದ್ಲಿಂಗು 2’ ಎಲ್ಲರನ್ನೂ ಕಾಡುವುದರ ಜೊತೆಗೆ ಆಪ್ತವಾಗಿರುತ್ತದೆ ಎನ್ನುತ್ತಾರೆ ಅವರು. ‘ನನ್ನ ಹಿಂದಿನ ಎರಡು ಸಿನಿಮಾಗಳಲ್ಲಿ ಇದ್ದಂತಹ ಸಂಭಾಷಣೆ ಇರುವುದಿಲ್ಲ. ಇಲ್ಲಿ ಡಬ್ಬಲ್‍ ಮೀನಿಂಗ್‍ ಬದಲು ಮೀನಿಂಗ್‍ಫುಲ್‍ ಸಂಭಾಷಣೆಗಳಿರುತ್ತವೆ’ ಎನ್ನುತ್ತಾರೆ.

 

‘ಸಿದ್ಲಿಂಗು 2’ ಚಿತ್ರವನ್ನು ಶ್ರೀಹರಿ ಮತ್ತು ರಾಜು ಶೆರಿಗಾರ್‍ ಜೊತೆಯಾಗಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಅನೂಪ ಸೀಳಿನ್‍ ಸಂಗೀತ ಮತ್ತು ಪ್ರಸನ್ನ ಗುರಳಕೆರೆ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ‘ಸಿದ್ಲಿಂಗು 2’ ಚಿತ್ರತಂಡ, ಡಬ್ಬಿಂಗ್ ಕಾರ್ಯವನ್ನೂ ಮುಗಿಸುವ ಹಂತಕ್ಕೆ ತಲುಪಿದ್ದು, ಮುಂದಿನ ವಾರದಲ್ಲಿ ನಾಯಕಿ ಸೋನುಗೌಡ ಅವರ ಮೊದಲನೋಟವನ್ನ ಅನಾವರಣಗೊಳಿಸಲು ಸಜ್ಜಾಗಿದೆ. ಇದರ ಜೊತೆಗೆ ಹಾಡಿನ ಲಿರೀಕಲ್ ವಿಡೀಯೋವನ್ನೂ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

MORE NEWS

ಅನಿತಾ ಪಿ. ತಾಕೊಡೆ ಅವರ ಸುವರ್ಣಯುಗ ಕೃತಿಗೆ ‘ವಿಕಾಸ ಪುಸ್ತಕ ಬಹುಮಾನ’ 

06-01-2025 ಬೆಂಗಳೂರು

ಮುಂಬಯಿ: ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದಿಂದ ಕೊಡಮಾಡುವ 2023-24ನೇ ಸಾಲಿನ ...

ರಾಮಾಚಾರಿ ಬರ್ತ್‌ಡೇಗೆ ಟಾಕ್ಸಿಕ್‌ನಿಂದ ವಿಶೇಷ ಕೊಡುಗೆ..! 

06-01-2025 ಬೆಂಗಳೂರು

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಂತರ ಮುಂಬೈನಲ್ಲಿ ಮುಂದುವರೆದಿದೆ....

ಗಂಡಸರ ಪಾಲಿಗೆ ಆಕೆ ರಹಸ್ಯ, ಆಕೆಯ ಹೆಸರು ಭ್ರಮರಿ…

06-01-2025 ಬೆಂಗಳೂರು

‘ಅವಳ‌ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ‌ ಮೇಲೆ ಉಳಿದೇ ಇಲ್ಲ. ...