ಕನ್ನಡ ಒಳನುಡಿಗಳು ಎಶ್ಟು ಹಳೆಯವು?

Date: 18-10-2023

Location: ಬೆಂಗಳೂರು


''ಕನ್ನಡ ಒಳನುಡಿಗಳ ಒಡೆತವು ಮೂಲಕನ್ನಡದ ಹಂತದಲ್ಲಿಯೆ ಬೇರುಗಳನ್ನು ಹೊಂದಿರುತ್ತದೆ. ಈ ಒಳನುಡಿಗಳ ಒಡೆತ ಸಾವಿರಕ್ಕು ಮಿಕ್ಕಿನ ವರುಶಗಳ ಹಿಂದೆಯೆ ಆಗಿರುವುದು ಅದ್ಯಯನಗಳ ಮೂಲಕ ಗೊತ್ತಾಗುತ್ತದೆ. ಹಾಗಾದರೆ, ಕನ್ನಡದ ಇತಿಹಾಸ ಈಗ ಅಂದುಕೊಂಡಿರುವುದಕ್ಕಿಂತ ಇನ್ನೂ ಹಿಂದಕ್ಕೆ ಹೋಗಬಹುದು. ಕ್ಲಾಸಿಕಲ್ ಕನ್ನಡದ ಪದವಿಗಾಗಿ ಹೊಡೆದಾಡಿದ ನೆನಪು ಇನ್ನೂ ಇದೆ. ಈ ಅದ್ಯಯನಗಳು ಅದಕ್ಕೆ ಬೇಕಾದ ಸಾಕಶ್ಟು ಪೂರಕ ಅಂಶಗಳನ್ನು ಕಟ್ಟಿಕೊಡುತ್ತವೆ. ಅದ್ಯಯನಗಳು ಬೇಕು,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿ ಬರೆಯಬಾರದು' ಅಂಕಣದಲ್ಲಿ 'ಕನ್ನಡ ಒಳನುಡಿಗಳು ಎಶ್ಟು ಹಳೆಯವು?' ಪದ ಬಳಕೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಕನ್ನಡದಲ್ಲಿ ಇಂದು ಹಲವಾರು ಒಳನುಡಿಗಳು ಕಾಣಿಸುತ್ತವೆ. ಈ ಒಳನುಡಿಗಳು ಹೇಗೆ ಬೆಳೆದವು ಎಂಬುದನ್ನು ಈ ಹಿಂದಿನ ಬರಹದಲ್ಲಿ ಗಮನಿಸಲಾಯಿತು. ಈ ಒಳನುಡಿಗಳು ಎಶ್ಟು ಹಳೆಯವಾಗಿರಬಹುದು? ಎಂಬುದನ್ನು ಇಂದು ಅವಲೋಕಿಸೋಣ. ಕನ್ನಡದಲ್ಲಿ ಒಳನುಡಿಗಳ ಅದ್ಯಯನ ತುಂಬಾ ಕಡಿಮೆಯೆ. ಹಾಗಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ತಿಳುವಳಿಕೆ ಇಲ್ಲವೆನ್ನಬಹುದು. ಕನ್ನಡದಲ್ಲಿ ಇಂದು ಬಳಕೆಯಲ್ಲಿರುವ ಬಾಶಾರೂಪಗಳನ್ನು ಇಟ್ಟುಕೊಂಡು ಅದ್ಯಯನ ಮಾಡಿದಾಗ ಅವುಗಳ ಹಿಂದಿನ ರೂಪಗಳನ್ನು, ಮತ್ತು ಅಂದಾಜು ಕಾಲವನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಇಲ್ಲಿ ಅಂತದೊಂದು ಸಣ್ಣ ಪ್ರಯತ್ನ ಮಾಡಿದೆ.

ಕನ್ನಡದಲ್ಲಿ ಮೇಲೆ ಎಂಬ ಒಂದು ನೆಲೆಯನ್ನು ಹೇಳುವ ನಾಮಪದ ಬಳಕೆಯಲ್ಲಿ ಇದೆ. ಇದರ ಇತಿಹಾಸವನ್ನು ತಿಳಿಯುತ್ತಾ ಹೋದರೆ ಕನ್ನಡದ ಒಳನುಡಿಗಳ ಒಡೆದುಕೊಂಡಿರುವುದು ಸ್ಪಶ್ಟವಾಗುತ್ತ ಹೋಗುತ್ತದೆ. ಮೇಲೆ ಇದರ ಮೂಲ ರೂಪ ಮೇಲ್ ಮತ್ತು ಅದಕ್ಕೂ ಮುಂಚೆ ಮೇ ಎಂಬುದಾಗಿತ್ತು ಎಂಬುದನ್ನು ವಿದ್ವಾಂಸರು ತೋರಿಸಿದ್ದಾರೆ. ಇದರ ಬೆಳವಣಿಗೆಯನ್ನು ಕೆಳಗೆ ತೋರಿಸಿದೆ.

*ಮೇ+-ಅಲ್>ಮೇಲ್>ಮೇಲೆ

‘ಮೇ’ ಎಂಬ ನೆಲೆವಾಚಿ ನಾಮಪದಕ್ಕೆ -ಅಲ್ ಎಂಬ ನೆಲೆಸೂಚಕ ಪ್ರತ್ಯಯ ಇಲ್ಲವೆ ಸಪ್ತಮಿ ವಿಬಕ್ತಿ ಪ್ರತ್ಯಯ ಸೇರಿ ಮೇಲ್ ಎಂಬ ರೂಪವು ಸಿದ್ದಿಸಿದೆ. ಈ ರೂಪವು ಹಳಗನ್ನಡದಲ್ಲಿ ವ್ಯಾಪಕವಾಗಿ ಬಳಕೆಯಾಗಿದೆ. ಇದು ಮುಂದೆ ವ್ಯಂಜನಕೊನೆ ಪದಗಳು ಸ್ವರಕೊನೆಗಳಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಮೇಲೆ ಎಂದು ಬೆಳೆದಿದೆ. ಈ ರೂಪಕ್ಕೆ ಬಳಕೆ ಕನ್ನಡಗಳಲ್ಲಿ ಬಿನ್ನ ರೂಪ ಇರುವುದು ಕಂಡುಬರುತ್ತದೆ. ಅದೆಂದರೆ, ಮ್ಯಾಲೆ, ಮ್ಯಾಲ ಮೊ. ಇವುಗಳ ರಚನೆಯನ್ನು ಇಲ್ಲಿ ಗಮನಿಸಬಹುದು.

*ಮೇ+-ಆಲ್>ಮ್ಯಾಲ/ಮ್ಯಾಲೆ

ಇಲ್ಲಿ ‘ಮೇ’ ಪದದಲ್ಲಿ ಕೊನೆಯಲ್ಲಿ ಇರುವ ‘ಏ’ ದ್ವನಿಯು ಮುಂದಿನ ಪ್ರತ್ಯಯದ ಮೊದಲಲ್ಲಿ ಇರುವ ‘ಆ’ ದ್ವನಿಯೊಂದಿಗೆ ಬೆರೆಯುವಾಗ ಸಂದಿಯಾಗಿ ‘ಆ್ಯ’ ಎಂಬ ದ್ವನಿಯು ಬಂದಿದೆ. ಹೀಗಾಗಿ ಮ್ಯಾಲ ಮತ್ತು ಮ್ಯಾಲೆ ಎಂಬ ರೂಪಗಳು ಬೆಳೆದಿವೆ.

ಮೇಲ್, ಮೇಲ್, ಮ್ಯಾಲ, ಮ್ಯಾಲೆ ಇವುಗಳಿಗೆ ಸಂವಾದಿಯಾದ ಇನ್ನೆರಡು ರೂಪಗಳು ಕನ್ನಡದಲ್ಲಿ ಇರುವುದು ಕಾಣಿಸುತ್ತದೆ. ಅವುಗಳೆಂದರೆ, ಮ್ಯಾಕ ಮತ್ತು ಮ್ಯಾಗ. ಈ ಎರಡೂ ರೂಪಗಳ ರಚನೆ ಮತ್ತು ಬೆಳವಣಿಗೆಯನ್ನು ಇಲ್ಲಿ ಕೆಳಗೆ ತೋರಿಸಿದೆ.

*ಮೇ+-ಆಕ>ಮ್ಯಾಕ/ಮ್ಯಾಕೆ
*ಮೇ+-ಆಲ್>ಮ್ಯಾಗ/ಮ್ಯಾಗೆ

ಇವುಗಳ ರಚನೆಯಲ್ಲಿಯೂ ಈ ಮೇಲೆ ವಿವರಿಸಿದಂತೆ ಸಂದಿಯಾಗಿರುವುದು ಕಾಣಿಸುತ್ತದೆ. ಈಗ ಈ ಸಂದಿ ಪ್ರಕ್ರಿಯೆ ಎಶ್ಟು ಹಿಂದೆ ಆಗಿರಬಹುದು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಮೇಲ್ ಎಂಬ ರೂಪವು ನಮಗೆ ಅತಿ ಹಳೆಯ ಶಾಸನಗಳಲ್ಲಿ ಏಳೆಂಟನೆಯ ಶತಮಾನದಲ್ಲಿಯೆ ಬಳಕೆಯಾಗಿದೆ. ಅಂದರೆ, ಈ ಮೇಲ್ ರೂಪದ ರಚನೆಯಾಗಿರುವುದು ಅದಕ್ಕಿಂತ ಹಿಂದೆ ಎಂಬುದು ಸ್ಪಶ್ಟವಾಗುತ್ತದೆ. ಹಾಗಾದರೆ, ಇನ್ನುಳಿದ ರೂಪಗಳಾದ ಮ್ಯಾಕ, ಮ್ಯಾಗ ಇವು ಕೂಡ ಇದರ ಸಮಾನಾಂತರ ಕಾಲದಲ್ಲಿಯೆ ಆಗಿರಬಹುದೆ ಎಂಬುದನ್ನು ಯೋಚಿಸಬೇಕು. ಕಂಡಿತವಾಗಿಯೂ ಇವು ಒಟ್ಟೊಟ್ಟಿಗೆ ಬೆಳೆದಿರಬೇಕು. ಈ ರೀತಿಯ ರೂಪಗಳ ಬೆಳವಣಿಗೆ ಆಡುಗನ್ನಡಗಳಲ್ಲಿ ಕಂಡುಬಂದರೆ ಅದು ಆ ಬಾಶೆಯ ಒಡೆತವೆ ಆಗಿರುತ್ತದೆ. ಮೇಲೆ ಎಂಬ ರೂಪ ಆಡುಗನ್ನಡಗಳಲ್ಲಿ ಎಲ್ಲಾದರೂ ಬಳಕೆಯಲ್ಲಿದೆಯೆ ಎಂಬುದು ತಿಳಿಯದು. ಆದರೆ, ಮ್ಯಾಲೆ ಎಂಬ ರೂಪ ಬಳಕೆಯಲ್ಲಿರುವುದು ಸ್ಪಶ್ಟ. ಹಾಗಾದರೆ ಈ ರೂಪಗಳಲ್ಲಿ ಒಂದು, ಮೇಲೆ ಎನ್ನುವುದು ಮತ್ತು ಅದಕ್ಕಿಂತ ಮುಂಚೆ ಮೇಲ್ ಎಂಬುದು ಬರಹದಲ್ಲಿ ಬಳಕೆಯಾಗುತ್ತದೆ. ಮ್ಯಾಲೆ ಎಂಬುದು ಬರಹದಲ್ಲಿ ಬಳಕೆ ಆಗದೆ ಇರುವುದಕ್ಕೆ ಬರಹದ ಕನ್ನಡದಲ್ಲಿ ಆ್ಯ ದ್ವನಿಗೆ ಲಿಪಿ ಇಲ್ಲದಿರುವುದೆ ಕಾರಣ. ಅಯ್ದಾರನೆಯ ಶತಮಾನದ ವೇಳೆಗೆ ಈ ರೂಪಗಳು ಬೆಳೆದಿದ್ದವು ಎನ್ನುವುದಾದರೆ ಅಶ್ಟು ಹಿಂದೆಯೆ ಈ ಬಿನ್ನ ರೂಪಗಳು ಬೆಳೆದಿರುವುದು ಸಾದ್ಯ. ಹಾಗಾದರೆ, ಕನ್ನಡದ ಒಡೆತಗಳು ಮೂರ‍್ನಾಲ್ಕು ಇಲ್ಲವೆ ನಾಲ್ಕಯ್ದನೆಯ ಶತಮಾನಗಳ ವೇಳೆಗೆ ಆಗಿದ್ದವು ಎನ್ನುವುದಕ್ಕೆ ಇವು ಆದಾರಗಳಾಗುತ್ತವೆ. ಇದು ನಿಕರವಾಗಿ ಇದೆ ಕಾಲದಲ್ಲಿ ಆಗಿದ್ದವೆ ಎಂಬುದಕ್ಕೆ ಇನ್ನೂ ಹೆಚ್ಚಿನ ಆದಾರಗಳನ್ನು ನೋಡಬಹುದು.

ಮೇ ಇದರ ಮೇಲೆ -ಅಲ್ ಎಂಬ ನೆಲೆಯನ್ನು ಸೂಚಿಸುವ ಸಪ್ತಮಿ ವಿಬಕ್ತಿ ಪ್ರತ್ಯಯ ಸೇರಿದೆ ಎಂದು ಹೇಳಿದೆ. ಹಾಗಾದರೆ, ಮ್ಯಾಕ, ಮ್ಯಾಗ ಎಂಬ ರೂಪಗಳಲ್ಲಿ ಸೇರಿರುವ -ಆಕ ಮತ್ತು -ಆಗ ಇವು ಯಾವ ರೂಪಗಳು ಎಂಬ ಪ್ರಶ್ನೆ ಬರಬಹುದು. ಈ ರೂಪಗಳೂ ಕೂಡ ನೆಲೆಯನ್ನು ಹೇಳುವ ರೂಪಗಳು. -ಆಕ ಮತ್ತು -ಆಗ ಇವೆರಡೂ ಒಂದೆ ಮೂಲದಿಂದ ಬೆಳೆದ ರೂಪಗಳು. ಹಾಗೆಯೆ, -ಅಲ್ ಮತ್ತು -ಆಲ್ ಎಂಬ ರೂಪಗಳು ಒಂದು ಮೂಲದವು. -ಅಲ್ ಮತ್ತು -ಆಲ್ ರೂಪಗಳು ಹಳಗನ್ನಡದಲ್ಲಿ ಮತ್ತು ಹೊಸಗನ್ನಡದಲ್ಲಿ ಇದರಿಂದ ಬೆಳೆದ -ಅಲ್ಲಿ ರೂಪ ಸಪ್ತಮಿಗೆ ಬಳಕೆಯಲ್ಲಿದೆ. -ಆಕ ಮತ್ತು -ಆಗ ಇವು ಕೂಡ ಸಪ್ತಮಿಗೆ ಬಳಕೆಯಲ್ಲಿವೆ. ಬಳಕೆ ಕನ್ನಡಗಳಲ್ಲಿ ಹೆಚ್ಚಿನ ಕಡೆ ಈ ರೂಪಗಳು ಬಳಕೆಯಲ್ಲಿವೆ.

ಈಗ ಈ -ಆಗ ಎಂಬ ಸಪ್ತಮಿ ರೂಪದ ಬಗೆಗೆ ತುಸು ಮಾತಾಡೋಣ. ಈ ರೂಪದ ಚರಿತ್ರೆಯನ್ನು ಬೇರೊಂದು ಸಲ ಪ್ರತ್ಯೇಕವಾಗಿ ಬರೆಯಬಹುದು. ಆದರೆ ಇಲ್ಲಿ ಸ್ತೂಲವಾಗಿ ಈ ರೂಪದ ಬೆಳವಣಿಗೆಯನ್ನು ಗಮನಿಸೋಣ. ಈ ರೂಪದ ಬಗೆಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಯಾಕಿದೆಯೆಂದರೆ ಇದುವರೆಗೆ ಮಾತನಾಡುತ್ತಿರುವ ಕನ್ನಡದ ಒಳನುಡಿಗಳ ಒಡೆತದ ಕಾಲವನ್ನು ಅಂದಾಜಿಸುವುದಕ್ಕೆ ಇದು ಹೆಚ್ಚು ಸಹಾಯವಾಗುತ್ತದೆ.

*ಅಕನ್ ಎಂಬುದು ಮೂಲ ಪದ. ಇದು ಕನ್ನಡದಲ್ಲಿ ಬಳಕೆಯಾಗಿರುವುದಕ್ಕೆ ಬಹುತೇಕ ಎಲ್ಲಿಯೂ ಆದಾರಗಳು ಇಲ್ಲ. ಇದರಿಂದ ಬೆಳೆದ ರೂಪಗಳು ಹಳಗನ್ನಡದಲ್ಲಿ ಒಂದೆರಡು ಕಡೆ ಸಮಾಸರೂಪಗಳಲ್ಲಿ ಮಾತ್ರ ಉಳಿದುಕೊಂಡಿವೆ. ಈ ರೂಪ ಕರ‍್ನಾಟಕ ಎಂಬ ರೂಪದಲ್ಲಿ ಇದೆ. ‘ಕರ‍್ಣಾಟಕನ್’ ಪದದ ರಚನೆ ಹೀಗಿದೆ, ಕರ‍್ಣಾಟ+ಅಕನ್. ಇದರ ಅರ‍್ತ ‘ಕರ‍್ಣಾಟ’ದ ಮನೆ ಎಂಬುದಾಗಿದೆ. ಈ ಪದದ ರಚನೆ ಆಗಿರುವುದು ಕಂಡಿತವಾಗಿಯೂ ತುಂಬಾ ಹಿಂದೆಯೆ. ಕರ‍್ಣಾಟ ಎಂಬ ರೂಪದ ಜೊತೆಜೊತೆಗೆ ಕರ‍್ಣಾಟಕ ಎಂಬ ರೂಪವೂ ಆಗಲೆ ಬಳಕೆಯಾಗಿರುವುದು ಕಾಣಿಸುತ್ತದೆ. ಅಕ ಇದರ ಬೆಳೆದ ರೂಪವಾದ -ಆಗ ಇದು ಒಳಗನ್(ಒಳಗಂ), ಕೆಳಗನ್(ಕೆಳಗಂ) ಮೊದಲಾದ ರೂಪಗಳಲ್ಲಿ ಪ್ರತ್ಯಯವಾಗಿ ಬಳಕೆಯಾಗಿದೆ. ಕವಿರಾಜಮಾರ‍್ಗದ ಹೆಸರಾದ ಪದ್ಯಗಳಲ್ಲಿ ಒಂದಾದ ಇದರೊಳಗಂ ಕಿಸುವೊಳಲಾ ಎಂಬ ಸಾಲಿನಲ್ಲಿ ಒಳಗಂ ಎಂಬ ರೂಪ ಬಳಕೆಯಾಗಿದೆ. ಇದೆಲ್ಲವನ್ನು ಗಮನಿಸಿದಾಗ ನಾಲ್ಕಯ್ದನೆಯ ಶತಮಾನದ ವೇಳೆಗೆ ಅಗನ್ ಎಂಬ ರೂಪವು ಒಳ, ಕೆಳ ಎಂಬ ರೂಪಗಳಿಗೆ ಸೇರಿ ಒಳಗಂ, ಕೆಳಗಂ ಎಂಬ ರೂಪಗಳು ಬೆಳೆದಿವೆ. ಈ ರೂಪಗಳು ಏಳೆಂಟನೆಯ ಶತಮಾನದಲ್ಲಿ ಬಳಕೆಯಾಗಿವೆ. ಈ ವಿವರಣೆಯು ಈ ಮೇಲೆ ಮಾತಾಡಿದ ಮ್ಯಾಕ, ಮ್ಯಾಗ ರೂಪಗಳು ಒಳಗೆ, ಕೆಳಗೆ ರೂಪಗಳ ಜೊತೆಜೊತೆಗೆ ಬೆಳೆದಿರಬಹುದು ಎನ್ನುವುದಕ್ಕೆ ಆದಾರವಾಗುತ್ತದೆ. ಹಾಗಾದರೆ, ಮ್ಯಾಲೆ ಮತ್ತು ಮ್ಯಾಕ/ಮ್ಯಾಗ ಎಂಬ ರೂಪಗಳು ಒಟ್ಟೊಟ್ಟಿಗೆ ಬೆಳೆದಿವೆ.

ಸಾಮಾನ್ಯವಾಗಿ ಮ್ಯಾಲೆ ಮತ್ತು ಮ್ಯಾಗ ರೂಪಗಳು ವಿವಿದ ಒಳನುಡಿಗಳಲ್ಲಿ ಬಳಕೆಯಾಗುತ್ತವೆ. ಈ ರೂಪಗಳು ಕಳೆದ ಸಾವಿರದ ಅಯ್ದು ನೂರು ವರುಶಗಳ ಹಿಂದೆಯೆ ಒಡೆದುಕೊಂಡಿವೆ. ಇದರಂತೆ ಇನ್ನೂ ಹಲವಾರು ರೂಪಗಳು ಹೀಗೆ ಒಡೆದುಕೊಂಡಿರುವುದು ಕಾಣಿಸುತ್ತದೆ. ಇಂತ ರೂಪಗಳು, ಅವುಗಳ ಬೆಳವಣಿಗೆ ಇವುಗಳನ್ನು ಅದ್ಯಯನ ಮಾಡಿದಾಗ ಕನ್ನಡದ ಒಳನುಡಿಗಳು ಕಮ್ಮಿ ಎಂದರೂ ಸಾವಿರ ವರುಶಕ್ಕಿಂತ ಹಿಂದೆ ಎಂಬುದು ಗೊತ್ತಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:

ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...