Date: 27-07-2024
Location: ಬೆಂಗಳೂರು
"ಕನ್ನಡ ಮತ್ತು ತಮಿಳು ಬಾಶೆಗಳು ಪರಸ್ಪರ ಬಿನ್ನವಾಗುವ ಪ್ರಕ್ರಿಯೆಯಲ್ಲಿ ಪರಸ್ಪರ ದೂರ ಇರುವ ಎರಡೂ ಬಾಶೆಯ ಒಳನುಡಿಗಳಿಗಿಂತ ಹತ್ತಿರದಲ್ಲಿರುವ ಒಳನುಡಿಗಳು ಹಲವು ಸಮಾನ ಅಂಶಗಳನ್ನು ಹಾಗೆಯೆ ಉಳಿಸಿಕೊಂಡು ಬೆಳೆದಿರಬಹುದು. ಅಂದರೆ ಕನ್ಯಾಕುಮಾರಿ ತಮಿಳು, ಮದುರೆ ತಮಿಳು ಮತ್ತು ಕಲಬುರಗಿ ಕನ್ನಡ, ಸೊಲ್ಲಾಪುರ ಕನ್ನಡ ಇವು ಪರಸ್ಪರ ಸಮಾನ ಅಂಶಗಳನ್ನು ಉಳಿಸಿಕೊಳ್ಳದೆ ಬಿನ್ನ ಪರಿಸರದಲ್ಲಿ ಬಿನ್ನವಾಗಿ ಬೆಳೆದಿರಬಹುದು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕನ್ನಡ ಮತ್ತು ತಮಿಳು ಸಹಸಂಬಂದ’ ಕುರಿತು ಬರೆದಿರುವ ಲೇಖನ.
ಕನ್ನಡ ಮತ್ತು ತಮಿಳು ಬಾಶೆಗಳು ಪರಸ್ಪರ ಒಂದು ಕುಲದ ಒಂದು ಕೊಲ್ಲಿಗೆ ಸೇರಿದವು. ಹಾಗಾಗಿ ಅವುಗಳ ನಡುವಿನ ಸಂಬಂದಗಳು ಪರಸ್ಪರ ಪ್ರಬಾವವೆ ಎಂದು ಗುರುತಿಸುವುದು ಕಶ್ಟವಾಗಬಹುದು. ಆದರೆ, ಕನ್ನಡದ ವಿವಿದ ಒಳನುಡಿಗಳನ್ನು ಒಟ್ಟಿಗೆ ಇಟ್ಟುಕೊಂಡು ಇಂದಿನ ತಮಿಳುನಾಡಿನಲ್ಲಿ ಮತ್ತು ಇಡಿಯಾದ ನೀಲಗಿರಿ ಬೆಟ್ಟದಲ್ಲಿ, ತಮಿಳುನಾಡಿಗೆ ಹೊಂದಿಕೊಂಡಿರುವ ಚಾಮರಾಜನಗರ, ಕೋಲಾರ ಮೊದಲಾದ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಕನ್ನಡದ ಒಳನುಡಿಗಳಲ್ಲಿ ತಮಿಳು ಬಾಶೆಯ ದ್ವನಿ, ಪದಕೋಶ ಹೆಚ್ಚು ನಿಚ್ಚಳವಾಗಿ ಕಂಡುಬರುತ್ತದೆ. ಹೀಗಿರುವ ವಾಸ್ತವವನ್ನು ಇಲ್ಲವೆ ವಾಸ್ತವಗಳನ್ನು ಸಾಮಾನ್ಯವಾಗಿ ವಿದ್ವಾಂಸರು ತಮಿಳಿನ ಪ್ರಬಾವ ಎಂದು ಹೇಳುವುದುಂಟು. ಆದರೆ, ಹಾಗೆ ಹೇಳುವುದಕ್ಕೆ ಅದ್ಯಯನಗಳು ಇಲ್ಲ. ಅದು ಬರಿಯ ಸಾಮಾನ್ಯ ಅವಲೋಕನ ಮಾತ್ರವಾಗಿದೆ. ಬಾಶೆ ಎನ್ನುವುದೊಂದು ಸಾತತ್ಯದ ಹಾಗೆ ಒಡೆದುಕೊಳ್ಳುತ್ತಿರುತ್ತದೆ. ರಾಜಕೀಯದ ಗಡಿಗಳ ಹಾಗೆ ಇಲ್ಲಿಗೆ ಹೀಗೆ ಬಾಶೆಗಳು ಒಡೆದುಕೊಳ್ಳುತ್ತವೆ ಎಂದು ಹೇಳುವುದು ಕಶ್ಟ. ಸಾವಿರಾರು ವರುಶಗಳ ಹಿಂದೆಯೆ ಕನ್ನಡ ಮತ್ತು ತಮಿಳು ಎಂಬ ಎರಡು ಬಾಶೆಗಳು ಒಡೆದುಕೊಂಡಿದ್ದರೂ ಮೂಲದ ಅಂಶಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಮತ್ತು ಇತರೇತರ ಕಾರಣಗಳಿಂದಾಗಿ ತಮಿಳಿನ ಸಂಪರ‍್ಕದಲ್ಲಿ ಇರುವ ಕನ್ನಡ ಮತ್ತು ಕನ್ನಡದ ಹತ್ತಿರವಿರುವ ತಮಿಳು ಪರಸ್ಪರ ಹಲವು ಸಮಾನ ಅಂಶಗಳನ್ನು ಹಾಗೆಯೆ ಉಳಿಸಿಕೊಂಡಿರಬಹುದು. ಇಲ್ಲವೆ, ಈ ಎರಡೂ ಬಾಶೆಗಳು ಪರಸ್ಪರ ಬೆಳೆದು ಆನಂತರ ಮತ್ತೆ ಪರಸ್ಪರ ಸಂಪರ‍್ಕದಲ್ಲಿ ಕನ್ನಡವು ತಮಿಳಿನ ಮೇಲೆ ಮತ್ತು ತಮಿಳು ಕನ್ನಡದ ಮೇಲೆ ಪ್ರಬಾವ ಬೀರಿರುವ ಸಾದ್ಯತೆಯೂ ಇದೆ. ಆದರೆ, ಹೀಗೆ ಹೇಳುವುದಕ್ಕೆ ಹೆಚ್ಚು ಅದ್ಯಯನಗಳು ಬೇಕು. ಈ ಹಿಂದೆ ತೆಲುಗಿನ ಜೊತೆಗಿನ ಸಂಬಂದವನ್ನು ಕುರಿತು ಮಾತನಾಡುವಾಗ ಅಲ್ಲಿ, ಕನ್ನಡ ಮತ್ತು ತೆಲುಗು ಮೂಲದಿಂದ ಉಳಿಸಿಕೊಂಡ ಸಮಾನ ಅಂಶಗಳಿಗಿಂತ ಆನಂತರ ಪರಸ್ಪರ ಪ್ರಬಾವ ಬೀರಿವೆ ಎಂಬುದನ್ನು ಸ್ಪಶ್ಟವಾಗಿ ಹೇಳುವುದಕ್ಕೆ ಸಾದ್ಯವಿದೆ ಎಂಬುದನ್ನು ನೋಡಿದೆವು.
ಕನ್ನಡ ಮತ್ತು ತಮಿಳು ಬಾಶೆಗಳು ಪರಸ್ಪರ ಬಿನ್ನವಾಗುವ ಪ್ರಕ್ರಿಯೆಯಲ್ಲಿ ಪರಸ್ಪರ ದೂರ ಇರುವ ಎರಡೂ ಬಾಶೆಯ ಒಳನುಡಿಗಳಿಗಿಂತ ಹತ್ತಿರದಲ್ಲಿರುವ ಒಳನುಡಿಗಳು ಹಲವು ಸಮಾನ ಅಂಶಗಳನ್ನು ಹಾಗೆಯೆ ಉಳಿಸಿಕೊಂಡು ಬೆಳೆದಿರಬಹುದು. ಅಂದರೆ ಕನ್ಯಾಕುಮಾರಿ ತಮಿಳು, ಮದುರೆ ತಮಿಳು ಮತ್ತು ಕಲಬುರಗಿ ಕನ್ನಡ, ಸೊಲ್ಲಾಪುರ ಕನ್ನಡ ಇವು ಪರಸ್ಪರ ಸಮಾನ ಅಂಶಗಳನ್ನು ಉಳಿಸಿಕೊಳ್ಳದೆ ಬಿನ್ನ ಪರಿಸರದಲ್ಲಿ ಬಿನ್ನವಾಗಿ ಬೆಳೆದಿರಬಹುದು. ಆದರೆ, ಪರಸ್ಪರ ಹತ್ತಿರ ಇರುವ ನೀಲಗಿರಿ ಮತ್ತು ಸುತ್ತಲಿನ ಪರಿಸರಗಳಲ್ಲಿ ಬಳಕೆಯಲ್ಲಿರುವ ಕನ್ನಡ ಮತ್ತು ತಮಿಳು ಇವು ಮೂಲದ ಅಂಶಗಳನ್ನು ಇನ್ನೂ ಬಹುಕಾಲ ಹಾಗೆಯೆ ಉಳಿಸಿಕೊಂಡಿರಬಹುದು. ಇದಕ್ಕೆ ಪರಸ್ಪರ ಹತ್ತಿರದ ಸಂಬಂದವು ಕಾರಣವಾಗಿರಬೇಕು. ಇದನ್ನು ಕೋಲಾರದ ಕನ್ನಡ ಮತ್ತು ನೀಲಗಿರಿಯ ಕನ್ನಡಗಳನ್ನು ಕಲಬುರಗಿ, ಬೆಳಗಾವಿಯ ಕನ್ನಡಗಳೊಂದಿಗೆ ಹೋಲಿಸಿ ನೋಡಿದಾಗ ಗೊತ್ತಾಗುತ್ತದೆ. ಹಾಗೆಯೆ, ನೀಲಗಿರಿಯ ತಮಿಳು, ಚಾಮರಾಜನಗರದ ತಮಿಳು ಇವುಗಳನ್ನು ಕನ್ಯಾಕುಮಾರಿ ತಮಿಳು ಮತ್ತು ಮದುರೆ ತಮಿಳುಗಳೊಂದಿಗೆ ಹೋಲಿಸಿ ನೋಡಿದಾಗಲೂ ಗೊತ್ತಾಗುತ್ತದೆ. ನೀಲಗಿರಿಯ ಕನ್ನಡ ಮತ್ತು ಚಾಮರಾಜನಗರದ ತಮಿಳು ಪರಸ್ಪರ ಹಲವು ಅಂಶಗಳನ್ನು ಹಂಚಿಕೊಂಡಿರಬಹುದು.
ಆದರೆ, ಕನ್ನಡ ಮತ್ತು ತಮಿಳು ಪರಸ್ಪರ ವಿಬಿನ್ನವಾಗಿ ಬೆಳೆದು ಸ್ವತಂತ್ರ ಲಕ್ಶಣಗಳನ್ನು ಪಡೆದುಕೊಂಡ ನಂತರ ಮತ್ತೆ ಪರಸ್ಪರ ಪ್ರಬಾವ ಬೀರಿರುವ ಸಾದ್ಯತೆಯೂ ಕಂಡಿತ ಇದೆ. ಆದರೆ, ಈ ಎರಡೂ ನೆಲೆಗಳನ್ನು ಅದ್ಯಯನಗಳ ಮೂಲಕ ಗುರುತಿಸಲು ಮಾತ್ರ ಸಾದ್ಯ. ಕನ್ನಡ ಮತ್ತು ತಮಿಳು ಈ ಎರಡೂ ಬಾಶೆಗಳ ನಡುವೆ ಹಲವು ಬಾಶಾಬಗೆಗಳು ಕೊಂಡಿಯ ಹಾಗೆ ಇರುವುದನ್ನು ಕಾಣಬಹುದು. ಇಂದಿನ ಕರ‍್ನಾಟಕದೊಳಗೆ ಸಂಕೇತಿ, ಅರುವು, ಅರುವುಮು ಮೊದಲಾಗಿ ಇನ್ನೂ ಹಲವು ತಮಿಳಿನ ಬಗೆಗಳು ಇಲ್ಲವೆ ತಮಿಳಿಗೆ ತೀರಾ ಹತ್ತಿರದ ಬಾಶಾಬಗೆಗಳು ಬಳಕೆಯಲ್ಲಿವೆ. ಹಾಗೆಯೆ ಇಂದಿನ ತಮಿಳುನಾಡಿನಲ್ಲಿ ಬಡಗ, ಹಲವು ಬಗೆಯ ನಾಯ್ಕ ಬಾಶಾಬಗೆಗಳು, ಅದರಂತೆಯೆ ಹಲವು ಬಗೆಯ ಕುರುಬ ಬಗೆಗಳೂ ಬಳಕೆಯಲ್ಲಿವೆ. ಈ ಬಾಶಾಬಗೆಗಳನ್ನು ಆಳವಾದ ಅದ್ಯಯನಕ್ಕೆ ಒಳಪಡಿಸಿದಾಗ ಸಾಕಶ್ಟು ಅಂಶಗಳು ನಮಗೆ ತಿಳಿಯಬಹುದು. ನೀಲಗಿರಿಯಿಂದ ಚಾಮರಾಜನಗರದವರೆಗೆ ಇನ್ನೂ ತುಸು ಆಚೀಚೆ ಬಳಕೆಯಲ್ಲಿರುವ ಕನ್ನಡ ಮತ್ತು ತಮಿಳು ಬಾಶೆಗಳು ಪರಸ್ಪರ ಒಂದೆ ತಾನವನ್ನು ಪಡೆದುಕೊಂಡಿರುವುದನ್ನು ಕಾಣಬಹುದು. ಮುಕ್ಯವಾಗಿ ನೀಲಗಿರಿ, ಚಾಮರಾಜನಗರ, ಕೋಲಾರ, ಕ್ರಿಶ್ಣಗಿರಿ, ಚಿತ್ತೂರು ಪರಿಸರಗಳಲ್ಲಿ ಬಳಕೆಯಲ್ಲಿರುವ ಈ ಎರಡು ಬಾಶೆಗಳ ಬಗೆಗಳನ್ನು ಹೀಗೆ ಗಮನಿಸಬಹುದು.
ಇಂದಿನ ಕರ‍್ನಾಟಕದ ಪರಿಸರದಲ್ಲಿ ಬಳಕೆಯಲ್ಲಿರುವ ತಮಿಳಿನ ಒಳನುಡಿಗಳ ಬಗೆಗೆ ಒಂದೆರಡು ಮಾತುಗಳನ್ನು ಆಡಬಹುದು. ಇವುಗಳಲ್ಲಿ ಸಂಕೇತಿ ಒಂದು. ಇದು ಬಹುತೇಕ ಇಂದಿನ ಕರ‍್ನಾಟಕದಲ್ಲಿ ಮಾತ್ರ ಕಂಡುಬರುವ ತಮಿಳಿನ ಒಳನುಡಿಯಾಗಿದೆ. ಹಾಸನ, ಮಯ್ಸೂರು ಮೊದಲಾದ ಬಾಗಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದರಂತೆಯೆ ದೊಡ್ಡ ಸಂಕೆಯ ಮಾತುಗರನ್ನು ಹೊಂದಿರುವ ಇನ್ನೊಂದು ಒಳನುಡಿ ಅರುವುಮು. ಕೋಲಾರ, ಚಿಕ್ಕಬಳ್ಳಾಪುರ ಒಳಗೊಂಡು ಸುತ್ತಲಿನ ಪರಿಸರದಲ್ಲಿ ಇದು ಬಳಕೆಯಲ್ಲಿದೆ. ಇವೆರಡನ್ನು ತಮಿಳಿನಿಂದ ಬಹುದೂರ ಸರಿದ ಬಾಶಾಬಗೆಗಳೆಂದು ಪರಿಗಣಿಸಬಹುದು. ಇವುಗಳಲ್ಲದೆ ಇನ್ನೂ ಹಲವು ಒಳನುಡಿಗಳನ್ನೂ ನೋಡಬಹುದು.
ಈ ಅಂಕಣದ ಹಿಂದಿನ ಬರೆಹಗಳು:
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.