Date: 28-11-2024
Location: ಬೆಂಗಳೂರು
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಸಂಯುಕ್ತ ಆಶ್ರಯದಲ್ಲಿ ಜನಪದ ಮತ್ತು ಆದಿವಾಸಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2025ರ ಜನವರಿ 24ರಿಂದ 26ರವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ‘ಕಲಾಯಾತ್ರೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗಿದ್ದು, 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಿರಿಯ ವಿಭಾಗ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಿರಿಯ ವಿಭಾಗ, ಹಾಗೂ ಅಧ್ಯಾಪಕರು ಮತ್ತು ಸಾರ್ವಜನಿಕರಿಗೆ ಸಾಮಾನ್ಯ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಗಳು ಜನಪದ ಮತ್ತು ಆದಿವಾಸಿ ನೃತ್ಯ, ವಾದ್ಯ ಮತ್ತು ಹಾಡುಗಾರಿಕೆ ಯಂತೆ ವಿವಿಧ ಪ್ರಕಾರಗಳಲ್ಲಿ ನಡೆಯಲಿದ್ದು, ವಿಜೇತರಿಗೆ ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹75 ಸಾವಿರ, ಮತ್ತು ತೃತೀಯ ಬಹುಮಾನ ₹50 ಸಾವಿರ ನೀಡಲಾಗುತ್ತದೆ.ಆಸಕ್ತ ಕಲಾವಿದರು ತಮ್ಮ ಕಲಾ ಪ್ರದರ್ಶನದ ವಿಡಿಯೋ ಮತ್ತು ವಿವರಗಳನ್ನು 2024ರ ಡಿಸೆಂಬರ್ 10ರೊಳಗೆ ರೇಸ್ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನಕ್ಕೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ 98456 25899 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಐದು ವರ್ಷಗಳ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ ಪ್ರಕಟವಾಗಿದ್ದು, ಡಾ.ವಸುಂಧರಾ ಭೂಪತಿ...
ಆಲಮೇಲ: ತಾ. ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಕಟಣೆ ಮಾಡಿದ್ದು, ‘ದ...
ಸೇಡಂ: '24ನೇ ವರ್ಷದ ಸಂಭ್ರಮದಲ್ಲಿ ಅಮ್ಮ ಪ್ರಶಸ್ತಿಯಿದ್ದುಮ ಮುಂದಿನ ವರ್ಷ 25 ವರ್ಷವಾಗಿ ರಜತ ಮಹೋತ್ಸವಕ್ಕೆ ಸಾಕ್ಷ...
©2024 Book Brahma Private Limited.