ಅಮ್ಮ ಪ್ರಶಸ್ತಿಗೆ ಯೋಗ್ಯರನ್ನು ಆಯ್ಕೆ ಮಾಡುವುದು ಬಹಳ ಕಠಿಣ; ಚನ್ನಪ್ಪ ಕಟ್ಟಿ

Date: 27-11-2024

Location: ಬೆಂಗಳೂರು


ಸೇಡಂ: '24ನೇ ವರ್ಷದ ಸಂಭ್ರಮದಲ್ಲಿ ಅಮ್ಮ ಪ್ರಶಸ್ತಿಯಿದ್ದುಮ ಮುಂದಿನ ವರ್ಷ 25 ವರ್ಷವಾಗಿ ರಜತ ಮಹೋತ್ಸವಕ್ಕೆ ಸಾಕ್ಷಿಯಾಗಲಿದೆ. ವರ್ಷಗಳ ಸಂಖ್ಯೆಗಳ ಹೆಚ್ಚಳದ ಜೊತೆಗೆ ಸಾವಿರದ ಪ್ರಶಸ್ತಿಯಾಗಿ ಹೊರಹೊಮ್ಮಲಿ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಸವರಾಜ ಅವರು ತಿಳಿಸಿದರು.

ಪಟ್ಟಣದ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮನ್ನೂರ್ ಪ್ರತಿಷ್ಠಾನದ ವತಿಯಿಂದ ನಾಡಿನ ಖ್ಯಾತ ಸಾಹಿತಿಗಳಿಗೆ 24ನೇ ವರ್ಷದ “ಅಮ್ಮ ಪ್ರಶಸ್ತಿ” ಪ್ರದಾನ ಮಾಡಿ ಅವರು ಮಾತಾನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಅನೇಕ ಸಂದರ್ಭಗಳ ಕುರಿತು ನಾನು ಬರೆದ ಕೋವಿಡ್ ಕಥೆಗಳು ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ' ಎಂದರು. ಪ್ರಶಸ್ತಿಗೆ ನೀಡಿದ ನಗದು ಮೊತ್ತವನ್ನು ವೇದಿಕೆಗೆ ಬಳಸುವಂತೆ ಮನವಿ ಮಾಡಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, 'ಅಮ್ಮ ಪ್ರಶಸ್ತಿಗೆ ಯೋಗ್ಯರನ್ನು ಆಯ್ಕೆ ಮಾಡುವುದು ಬಹಳ ಕಠಿಣ. ಅಮ್ಮ ಪ್ರಶಸ್ತಿಗೆ ಕೃತಿ ಕಳಿಸಿಕೊಡುವುದು ಅಮ್ಮನಿಗೆ ಕೊಡುವ ಗೌರವ' ಎಂದರು.

ನಾಲವಾರದ ಸಿದ್ದತೋಟೇಂದ್ರ ಶಿವಾಚಾರ್ಯ ಮಾತನಾಡಿ ಆಶೀರ್ವಚನ ನೀಡಿದರು. ನಿವೃತ್ತ ಮೇಷ್ಟ್ರು ನಾಗಪ್ಪ ಮಾಸ್ತರ್ ಮುನ್ನೂರ ಸ್ಮರಣಾರ್ಥ ಸಂಗೀತಾ ಕಾಶಪ್ಪ ನೀಲಹಳ್ಳಿ, ಅಮೀನಾ ಬಿಲಕಲ್‌ ಅವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ ಇದ್ದರು.

ಅಮ್ಮ ಪ್ರಶಸ್ತಿ ಪುರಸ್ಕೃತರು: ವಿದ್ಯಾರಶ್ಮಿ ಪೆಲತ್ತಡ್ಕ(ಕೆರೆ ದಡ), ಪ್ರಭಾವತಿ ದೇಸಾಯಿ (ಸೆರಗಿಗಂಟಿದ ಕಂಪು), ವೀರೇಂದ್ರ ರಾವಿಹಾಳ (ಡಂಕಲ್ ಪೇಟೆ), ಪೂರ್ಣಿಮಾ ಮಾಳಗಿಮನಿ (ಮ್ಯಾಜಿಕ್ ಸೌಟು), ದ್ವಾರನಕುಂಟೆ ಪಾತಣ್ಣ (ರಾಣಿ ಅಹಿಲ್ಯಾಬಾಯಿ ಹೋಳ್ಳರ್), ಗುರುಪ್ರಸಾದ ಕಂಟಲಗೆರೆ (ಅಟ್ರಾಸಿಟಿ), ಪರ್ವಿನ್ ಸುಲ್ತಾನಾ (ಶರಣರ ನಾಡಿನ ಸೂಫಿ ಮಾರ್ಗ), ಪ್ರಕಾಶ ಭಟ್ (ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ), ಡಾ.ಎಚ್.ಎಸ್ ಸತ್ಯನಾರಾಯಣ (ಬಿದರ ತಡಿಕೆ), ಮಂಜುನಾಥ ಚಾಂದ್ (ಪ್ರಿಯಾ ಮೀರಾ) ಅವರಿಗೆ ಅಮ್ಮ ಪ್ರಶಸ್ತಿ ಫಲಕ, ₹2500 ನಗದು ಪುರಸ್ಕಾರ, ತೊಗರಿ ಬೆಳೆ ನೀಡಿ ಸತ್ಕರಿಸಲಾಯಿತು. ಶಿವಾನಂದ ತಗಡೂರ ಅವರ 'ಕೋವಿಡ್ ಕಥೆಗಳು' ಕೃತಿಗೆ ಅಮ್ಮ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾಮಂಡಳಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಪ್ರಶಸ್ತಿ ಆಯ್ಕೆ ಸಮಿತಿ ಮೌಲ್ಯಮಾಪಕ ಮಹಾಂತೇಶ ನವಲಕರ್, ಸಂಚಾಲಕಿ ರತ್ನಕಲಾ ಮಹಿಪಾಲ ರೆಡ್ಡಿ ಮನ್ನೂರ್‌ ಸೇರಿದಂತೆ, ಸಾಹಿತಿಗಳು, ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಪ್ರಭಾಕರ ಜೋಶಿ ಸ್ವಾಗತಿಸಿದರು. ಪ್ರತಿಷ್ಠಾನ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ, ವಂದಿಸಿದರು.

 

MORE NEWS

ವಸುಂಧರಾ ಭೂಪತಿ ಸೇರಿದಂತೆ ಐದು ಜನರಿಗೆ ಪ್ರತಿಷ್ಠಿತ ‘ಅನುಪಮಾ ಪ್ರಶಸ್ತಿ’

28-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಐದು ವರ್ಷಗಳ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ ಪ್ರಕಟವಾಗಿದ್ದು, ಡಾ.ವಸುಂಧರಾ ಭೂಪತಿ...

ಹ.ಮ.ಪೂಜಾರಗೆ ಬೆರಗು ಸಮಗ್ರ, ಸಾಧನಾ ಪ್ರಕಾಶನಕ್ಕೆ ಉತ್ತಮ ಪ್ರಕಾಶನ ಪ್ರಶಸ್ತಿ

28-11-2024 ಬೆಂಗಳೂರು

ಆಲಮೇಲ: ತಾ. ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಕಟಣೆ ಮಾಡಿದ್ದು, ‘ದ...

ಇನ್ಫೋಸಿಸ್ ಪ್ರತಿಷ್ಠಾನ - ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ‘ಕಲಾಯಾತ್ರೆ’

28-11-2024 ಬೆಂಗಳೂರು

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಸಂಯುಕ್ತ ಆಶ್ರಯದಲ್ಲಿ ಜನಪದ ಮತ್ತು ಆದಿವಾಸಿ ಕಲೆ, ಕಲ...