ಹ.ಮ.ಪೂಜಾರಗೆ ಬೆರಗು ಸಮಗ್ರ, ಸಾಧನಾ ಪ್ರಕಾಶನಕ್ಕೆ ಉತ್ತಮ ಪ್ರಕಾಶನ ಪ್ರಶಸ್ತಿ

Date: 28-11-2024

Location: ಬೆಂಗಳೂರು


ಆಲಮೇಲ: ತಾ. ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಕಟಣೆ ಮಾಡಿದ್ದು, ‘ದಿ. ಎಂ.ಸಿ. ಮನಗೂಳಿ ದತ್ತಿ ಪ್ರಶಸ್ತಿ’ಯನ್ನು ಬೆಂಗಳೂರಿನ ಸಾಧನಾ ಪ್ರಕಾಶನಕ್ಕೆ, ‘ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ’ಯನ್ನು ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರಿಗೆ ಮತ್ತು ‘ಬೆರಗು ಮುಖಪುಟ ವಿನ್ಯಾಸ ಪ್ರಶಸ್ತಿ’ಯನ್ನು ಗದಗದ ವಾಸುದೇವ ರಾವುತ್ ಅವರಿಗೆ ನೀಡಲು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದರು.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ;
ದಿ. ಎಂ.ಸಿ. ಮನಗೂಳಿ ದತ್ತಿ ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಶಾಸಕ ಅಶೋಕ ಮನಗೂಳಿ ಅವರು ತಮ್ಮ ತಂದೆಯ ಹೆಸರಿನಲ್ಲಿ ಸ್ಥಾಪಿಸಿದ್ದಾರೆ. ಪ್ರಶಸ್ತಿಯ ಪ್ರಥಮ ಸಾಲಿನ ಪುರಸ್ಕಾರಕ್ಕೆ ಬೆಂಗಳೂರಿನ ಸಾಧನಾ ಪ್ರಕಾಶನ ಆಯ್ಕೆಯಾಗಿದೆ. ನಾಲ್ಕು ದಶಕಗಳಿಂದ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಸಾಧನಾ ಪ್ರಕಾಶನವು ಕನ್ನಡ ಪುಸ್ತಕೋದ್ಯಮದಲ್ಲಿ ನಿರಂತರ ಸೇವೆಯನ್ನು ಸಲ್ಲಿಸುತ್ತಿದೆ.

`ಬೆರಗು ಸಮಗ್ರ’ ಸಾಹಿತ್ಯ ಪ್ರಶಸ್ತಿ;
ಹಿರಿಯ ಸಾಹಿತಿ ಹ.ಮ.ಪೂಜಾರ ಅವರಿಗೆ ‘ಬೆರಗು ಸಮಗ್ರ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ, ಮಕ್ಕಳ ಸಾಹಿತ್ಯದಲ್ಲಿ ಕಳೆದ ಐದು ದಶಕಗಳಿಂದ ಅವರು ಮಾಡಿರುವ ಅಪಾರ ಸೇವೆಯನ್ನು ಗೌರವಿಸಲಾಗುತ್ತಿದೆ.

`ಮುಖಪುಟ ವಿನ್ಯಾಸ' ಪ್ರಶಸ್ತಿ;
ಗದಗದ ವಾಸುದೇವ ರಾವುತ್ ಅವರು ‘ಬೆರಗು ಮುಖಪುಟ ವಿನ್ಯಾಸ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 500ಕ್ಕೂ ಹೆಚ್ಚು ಮುಖಪುಟ ವಿನ್ಯಾಸ ಮತ್ತು 1,000ಕ್ಕೂ ಹೆಚ್ಚು ಪುಸ್ತಕ ಪುಟ ವಿನ್ಯಾಸದಲ್ಲಿ ಅವರು ನೀಡಿರುವ ಕೊಡುಗೆಗೆ ಈ ಪ್ರಶಸ್ತಿಯನ್ನು ಪ್ರೇರಿತ ಮಾಡಲಾಗಿದೆ. ಈ ಪ್ರಶಸ್ತಿ 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಸಿಂದಗಿಯಲ್ಲಿ ಡಿಸೆಂಬರ್ 24ರಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

 

MORE NEWS

ವಸುಂಧರಾ ಭೂಪತಿ ಸೇರಿದಂತೆ ಐದು ಜನರಿಗೆ ಪ್ರತಿಷ್ಠಿತ ‘ಅನುಪಮಾ ಪ್ರಶಸ್ತಿ’

28-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಐದು ವರ್ಷಗಳ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ ಪ್ರಕಟವಾಗಿದ್ದು, ಡಾ.ವಸುಂಧರಾ ಭೂಪತಿ...

ಇನ್ಫೋಸಿಸ್ ಪ್ರತಿಷ್ಠಾನ - ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ‘ಕಲಾಯಾತ್ರೆ’

28-11-2024 ಬೆಂಗಳೂರು

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಸಂಯುಕ್ತ ಆಶ್ರಯದಲ್ಲಿ ಜನಪದ ಮತ್ತು ಆದಿವಾಸಿ ಕಲೆ, ಕಲ...

ಅಮ್ಮ ಪ್ರಶಸ್ತಿಗೆ ಯೋಗ್ಯರನ್ನು ಆಯ್ಕೆ ಮಾಡುವುದು ಬಹಳ ಕಠಿಣ; ಚನ್ನಪ್ಪ ಕಟ್ಟಿ

27-11-2024 ಬೆಂಗಳೂರು

ಸೇಡಂ: '24ನೇ ವರ್ಷದ ಸಂಭ್ರಮದಲ್ಲಿ ಅಮ್ಮ ಪ್ರಶಸ್ತಿಯಿದ್ದುಮ ಮುಂದಿನ ವರ್ಷ 25 ವರ್ಷವಾಗಿ ರಜತ ಮಹೋತ್ಸವಕ್ಕೆ ಸಾಕ್ಷ...