ವಸುಂಧರಾ ಭೂಪತಿ ಸೇರಿದಂತೆ ಐದು ಜನರಿಗೆ ಪ್ರತಿಷ್ಠಿತ ‘ಅನುಪಮಾ ಪ್ರಶಸ್ತಿ’

Date: 28-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಐದು ವರ್ಷಗಳ ಪ್ರತಿಷ್ಠಿತ ಅನುಪಮಾ ಪ್ರಶಸ್ತಿ ಪ್ರಕಟವಾಗಿದ್ದು, ಡಾ.ವಸುಂಧರಾ ಭೂಪತಿ ಸೇರಿದಂತೆ ಐದು ಜನ ಲೇಖಕಿಯರಿಗೆ ಈ ಪ್ರಶಸ್ತಿ ಸಂದಿದೆ.

ಲೇಖಕಿಯರ ಸಂಘದಿಂದ ಅನುಕ್ರಮವಾಗಿ 2020, 2021, 2022, 2023 ಹಾಗು 2024ನೇ ಸಾಲಿಗೆ ಹಿರಿಯ ಲೇಖಕಿಯರಾದ ಡಾ. ವಿಜಯಾ ಸುಬ್ಬರಾಜ್, ಡಾ.ವಸುಂಧರಾ ಭೂಪತಿ, ಡಾ. ಸಬೀಹ ಭೂಮಿಗೌಡ, ಡಾ. ಕೆ.ಆರ್. ಸಂಧ್ಯಾರೆಡ್ಡಿ ಹಾಗೂ ಡಾ. ಲತಾಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸಿದ್ಧ ಲೇಖಕಿಯಾದ ಡಾ. ಅನುಪಮಾ ನಿರಂಜನ ಅವರ ಹೆಸರಿನ ದತ್ತಿ ಪ್ರಶಸ್ತಿ ಇದಾಗಿದ್ದು, ಸಾಹಿತ್ಯದಲ್ಲಿ ಲೇಖಕಿಯರ ಒಟ್ಟು ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯ ಮೊತ್ತ ಹತ್ತು ಸಾವಿರ ರು. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಡಿಸೆಂಬರ್ 8 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

ಆಯ್ಕೆ ಸಮಿತಿಯಲ್ಲಿ ಹಿರಿಯ ವಿಮರ್ಶಕರಾದ ಡಾ. ಭೈರಮಂಗಲ ರಾಮೇಗೌಡ, ಡಾ. ಎಂ.ಎಸ್. ಆಶಾದೇವಿ ಹಾಗೂ ಚಂದ್ರಿಕಾ ಪುರಾಣಿಕ್ ಅವರು ಇದ್ದರು.

 

MORE NEWS

ಹ.ಮ.ಪೂಜಾರಗೆ ಬೆರಗು ಸಮಗ್ರ, ಸಾಧನಾ ಪ್ರಕಾಶನಕ್ಕೆ ಉತ್ತಮ ಪ್ರಕಾಶನ ಪ್ರಶಸ್ತಿ

28-11-2024 ಬೆಂಗಳೂರು

ಆಲಮೇಲ: ತಾ. ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಕಟಣೆ ಮಾಡಿದ್ದು, ‘ದ...

ಇನ್ಫೋಸಿಸ್ ಪ್ರತಿಷ್ಠಾನ - ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ‘ಕಲಾಯಾತ್ರೆ’

28-11-2024 ಬೆಂಗಳೂರು

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಸಂಯುಕ್ತ ಆಶ್ರಯದಲ್ಲಿ ಜನಪದ ಮತ್ತು ಆದಿವಾಸಿ ಕಲೆ, ಕಲ...

ಅಮ್ಮ ಪ್ರಶಸ್ತಿಗೆ ಯೋಗ್ಯರನ್ನು ಆಯ್ಕೆ ಮಾಡುವುದು ಬಹಳ ಕಠಿಣ; ಚನ್ನಪ್ಪ ಕಟ್ಟಿ

27-11-2024 ಬೆಂಗಳೂರು

ಸೇಡಂ: '24ನೇ ವರ್ಷದ ಸಂಭ್ರಮದಲ್ಲಿ ಅಮ್ಮ ಪ್ರಶಸ್ತಿಯಿದ್ದುಮ ಮುಂದಿನ ವರ್ಷ 25 ವರ್ಷವಾಗಿ ರಜತ ಮಹೋತ್ಸವಕ್ಕೆ ಸಾಕ್ಷ...