‘ದ್ವೀಪ ರಾಷ್ಟ್ರಗಳಲ್ಲಿ ಹತ್ತು ದಿನಗಳು’ ಪ್ರವಾಸ ಕಥನದ ಸುತ್ತ...


ಲೇಖಕ ಎಸ್. ಸಿದ್ದೇಶ್ ಕುರ್ಕಿ ಅವರ ದ್ವೀಪ ರಾಷ್ಟ್ರಗಳಲ್ಲಿ ಹತ್ತು ದಿನ ಎಂಬ ಪ್ರವಾಸ ಕಥನದ ಬಗ್ಗೆ ಲೇಖಕಿ ವರಲಕ್ಷ್ಮಿ ಪರ್ತಜೆ ಬರೆದಿರುವ ಲೇಖನ ನಿಮ್ಮ ಓದಿಗಾಗಿ..

ಹೆಸರು - ದ್ವೀಪ ರಾಷ್ಟ್ರಗಳಲ್ಲಿ ಹತ್ತು ದಿನ (ಪ್ರವಾಸ ಕಥನ)
ಲೇಖಕರು -ಎಸ್. ಸಿದ್ದೇಶ್ ಕುರ್ಕಿ
ಪುಟಗಳು -92
ಬೆಲೆ ರೂ.65
ಶ್ರೀ ಚೂಡಾ ಪ್ರಕಾಶನ,
419/1, F131, ಮೊದಲನೇ ಮಹಡಿ, ವೀಣೆ ಶಾಮಣ್ಣ ರಸ್ತೆ
ಮೈಸೂರು 570004

100 ಮೈಲುಗಳ ಪ್ರವಾಸ ನೂರು ಪುಸ್ತಕಗಳನ್ನು ಓದಿದ ಅನುಭವ ನೀಡುವುದು ಎಂಬ ಮಾತಿದೆ.. ದೇಶ ನೋಡು ಕೋಶ ಓದು ಎಂಬಂತೆ ಓದುವುದಕ್ಕಿಂತ ಪ್ರತ್ಯಕ್ಷವಾಗಿ ನೋಡುವ ದೃಶ್ಯ ಮನಸ್ಸಿಗೆ ಸಂತೋಷ ಕೊಟ್ಟು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ... ಎಲ್ಲರೂ ಒಂದಿಲ್ಲೊಮ್ಮೆ ಪ್ರವಾಸ ಮಾಡಿರುತ್ತಾರೆ... ಪ್ರವಾಸದ ಉದ್ದಕ್ಕೂ ಅನುಭವಿಸಿದ ಘಟನೆಗಳ ನೆನಪುಗಳನ್ನು ಕೆಲವೇ ಮಂದಿ ಅಕ್ಷರಗಳಲ್ಲಿ ಹಿಡಿದಿಡುತ್ತಾರೆ .... ಅಂತವರಲ್ಲಿ ಒಬ್ಬರು ಸಿದ್ದೇಶ್ ಕುರ್ಕಿ....

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಧ್ಯಮ ವರ್ಗದವರಿಗೆ ಪ್ರವಾಸ ಬಗ್ಗೆ ಆಸಕ್ತಿ ಹೊಂದಿ ಆಸೆಯನ್ನು ಈಡೇರಿಸಿಕೊಳ್ಳುವುದು ಕಷ್ಟ ಸಾಧ್ಯ... ಹಾಗೆ ಸಿದ್ದೇಶ್ ರವರು ಚಿಕ್ಕಂದಿನಲ್ಲಿ ಪ್ರವಾಸ ಮಾಡಿದ್ದು ಕಡಿಮೆಯಾದರೂ ಕೂಡ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ ಗೆಳೆಯರೊಂದಿಗೆ ಸೇರಿ ಮಾಡಿದ ಪ್ರವಾಸದ ಅನುಭವಗಳ ಕಥನ *ದ್ವೀಪ ರಾಷ್ಟ್ರಗಳಲ್ಲಿ ಹತ್ತು ದಿನಗಳು*....

ಸ್ವದೇಶದಲ್ಲಿ ಮಾಡುವ ಪ್ರವಾಸಗಳಿಗೆ ಬೇಕಾಗುವ ತಯಾರಿಗಳ ಜೊತೆಗೆ, ವಿದೇಶಕ್ಕೆ ಹೋಗಲು ಬೇರೆ ಇತರೇ ತಯಾರಿಗಳು ಬೇಕು.... ಸ್ವಂತ ಅನುಭವಕ್ಕೆ ಬೇಕಾಗಿ, ಪ್ರವಾಸಿ ಸಂಸ್ಥೆಗಳ ಮೂಲಕ ವ್ಯವಸ್ಥೆಗಳನ್ನು ಮಾಡದೆ ಇಂಟರ್ನೆಟ್ ಮೂಲಕ ವಿವರಗಳನ್ನು ತಿಳಿದುಕೊಂಡು ವೀಸಾ,ಟಿಕೆಟ್, ವಿಮೆ ಮುಂತಾದ ತಯಾರಿಗಳನ್ನು ಮಾಡಿಕೊಂಡು ನಿಗದಿತ ದಿನದಂದು ಚೆನ್ನೈಯಿಂದ ಹೊರಟರು.... ಸಸ್ಯಹಾರಿಗಳಾದ್ದರಿಂದ, ಕೆಲವು ಕಡೆ ಮಾಂಸಾಹಾರವೇ ಇದ್ದುದರಿಂದ ಸ್ವಲ್ಪ ಆಹಾರಗಳನ್ನು ಕೂಡ ಜೊತೆಯಲ್ಲಿ ಓಯ್ದಿದ್ದರು....

ಸಾವಿರಾರು ಮೈಲು ದೂರದ ಪ್ರವಾಸದಲ್ಲಿ ಭಾಷೆ, ಆಹಾರ,ಹವಾಮಾನ ಮುಂತಾದವುಗಳಲ್ಲಿ ವ್ಯತ್ಯಾಸವಿದ್ದರೂ, ಲೇಖಕರು ಮತ್ತು ಅವರ ಸ್ನೇಹಿತರು ವಿಮಾನವೇರುವ ಸಮಯದಲ್ಲಿ ನಡೆಸಿದ ತಪಾಸಣೆಯಲ್ಲಿ ಸಣ್ಣಪುಟ್ಟ ತೊಂದರೆ ಅನುಭವಿಸಿದ್ದು ಬಿಟ್ಟರೆ ಬೇರೆಲ್ಲೂ ತೊಂದರೆ ಅನುಭವಿಸಿದ ಉಲ್ಲೇಖಗಳಿಲ್ಲ...

ಆರಂಭಿಸಿದ್ದು ಚೆನ್ನೈನಿಂದ ಕ್ರಮವಾಗಿ ಮಲೇಶಿಯಾ, ಸಿಂಗಪುರ್, ಬ್ಯಾಂಕಾಕ್ ಗಳನ್ನು ಸಂದರ್ಶಿಸಿದರು... ಪ್ರತಿಯೊಂದು ಕಡೆಯಲ್ಲೂ ಹೋಟೆಲ್ ನವರ ಸಹಾಯದಿಂದ ಆ ಊರಿನ ಪ್ರಸಿದ್ಧ ಸ್ಥಳಗಳನ್ನೆಲ್ಲ ತಿಳಿದುಕೊಂಡು ಭೇಟಿ ನೀಡಿದರು.... ನೋಡಿದ ಸ್ಥಳಕ್ಕೆ ಸಂಬಂಧಪಟ್ಟ ಭೌಗೋಳಿಕ ಐತಿಹಾಸಿಕ ವಿವರಗಳು ಮತ್ತು ವೈಶಿಷ್ಟಗಳನ್ನುಸ್ವಲ್ಪ ಮಟ್ಟಿಗೆ ವಿವರವಾಗಿ ತಿಳಿಸಿದ್ದಾರೆ...

ಉದಾ : ಕೌಲಾಲಂಪುರದಲ್ಲಿರುವ ಲಿಟಲ್ ಇಂಡಿಯಾದಲ್ಲಿ ತೋರುವ ಭಾರತೀಯ ಸಂಸ್ಕೃತಿ, ದೊರಕುವ ಭಾರತೀಯ ಆಹಾರ, ರಾಜರ ವಿವಿಧ ಆಯುಧ ಮುಂತಾದವುಗಳ ವಿವರ... ಅದೇ ಊರಲ್ಲಿರುವ ರಾಮಾಯಣ ಗುಹೆಯಲ್ಲಿರುವ ಸ್ತಬ್ಧ ಚಿತ್ರಗಳ ವರ್ಣನೆ, ಜೊತೆಗೆ ಪ್ರವೇಶಶುಲ್ಕ ಎಲ್ಲವನ್ನೂ ತಿಳಿಸಿಕೊಟ್ಟಿದ್ದಾರೆ... ಸಿಂಗಾಪೂರ್ ಪ್ರವಾಸಿಗಳನ್ನು ಆಕರ್ಷಿಸುವ ಮಾಯನಗರ... ಅದು ಹೇಗಿತ್ತು... ಹೇಗೆ ಹಂತ ಹಂತವಾಗಿ ಅಭಿವೃದ್ಧಿಯನ್ನು ಸಾಧಿಸಿತ್ತು ಎಂದು ಸವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ...

ಸಂದರ್ಶಿಸಿದ ಪ್ರತಿ ಸ್ಥಳದಲ್ಲಿಯೂ ಹೋಟೆಲ್ ಮುಂತಾದವುಗಳ ದರ, ಆಹಾರದ ದರ, ಪ್ರವೇಶ ಶುಲ್ಕಗಳು ಮುಂತಾದವುಗಳನ್ನು ಅಲ್ಲಿಯದರ ಮತ್ತು ಭಾರತೀಯ ಮೌಲ್ಯವನ್ನು ತಿಳಿಸಿದ್ದಾರೆ... ಹಾಗಾಗಿ ಒಂದು ಪ್ರವಾಸಕ್ಕೆ ಎಷ್ಟು ಮೊಬಲಗು ಬೇಕಾಗಬಹುದು ಎಂಬುದನ್ನು ಅಂದಾಜಿಸಬಹುದು... ಈಗಿನ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು, ದುಬಾರಿ ಪ್ರವಾಸಿ ಸಂಸ್ಥೆಗಳನ್ನು ಅವಲಂಬಿಸದೆ ಪ್ರವಾಸವನ್ನು ಹೇಗೆ ಮಾಡಬಹುದು ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ... ಕಣ್ಣಿಗೆ ಕಟ್ಟುವಂತಾ ವರ್ಣನೆಗಳಿಲ್ಲದಿದ್ದರೂ ಆ ದೇಶಗಳನ್ನು ಪ್ರವಾಸ ಮಾಡುವುದಿದ್ದರೆ ಈ ಪುಸ್ತಕವನ್ನು ಉತ್ತಮ ಕೈಪಿಡಿಯಾಗಿ ಉಪಯೋಗಿಸಬಹುದು... ನಾನು ಗಮನಿಸಿದ ಒಂದು ಲೋಪ ಏನೆಂದರೆ ಪುಸ್ತಕದಲ್ಲಿ ಪೂರಕ ಛಾಯಾಚಿತ್ರಗಳಿದ್ದರೂ ಅವೆಲ್ಲವೂ ಕಪ್ಪು ಬಿಳುಪಿನಲ್ಲಿ ಇದ್ದ ಕಾರಣಬಣ್ಣದ ಚಿತ್ರಗಳು ಬೀರುವ ಪರಿಣಾಮ ಉಂಟಾಗಲಿಲ್ಲ ಎನಿಸಿತು.... ಕಣ್ಣಿಗೆ ಕಟ್ಟುವಂತ ವರ್ಣನೆಗಳು ಇಲ್ಲವಾದ ಕಾರಣ ಪ್ರವಾಸದ ಬಗ್ಗೆ ಒಂದು ವರದಿಯಂತೆ ಅನ್ನಿಸಿತು....ಉಳಿದಂತೆ ಒಂದು ಉತ್ತಮ ಕೈಪಿಡಿ....

-ವರಲಕ್ಷ್ಮಿ ಪರ್ತಜೆ....

MORE FEATURES

ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ

07-01-2025 ಬೆಂಗಳೂರು

"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...

ಇತಿಹಾಸ ಸಂಶೋಧನೆಗಳ ಕ್ಷೇತ್ರದಲ್ಲಿ ನಾನು ನಿರಕ್ಷರಿ

07-01-2025 ಬೆಂಗಳೂರು

“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...

ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು

07-01-2025 ಬೆಂಗಳೂರು

“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...