ವಾರದ ಲೇಖಕ ವಿಶೇಷದಲ್ಲಿ ಸಣ್ಣಕತೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್


ಬುಕ್ ಬ್ರಹ್ಮವಾರದ ಲೇಖಕ ಸರಣಿಯಲ್ಲಿ ಈ ವಾರ ಸಣ್ಣಕತೆಗಳ ಪಿತಾಮಹ, ಕನ್ನಡದ ಆಸ್ತಿ, ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕುರಿತ ಒಂದು ನೀಳ ನೋಟ …

ಶ್ರೀನಿವಾಸ ಎಂಬ ಕಾವ್ಯ ನಾಮದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮೂಲತಃ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ 6, 1891ರಲ್ಲಿ ಜನಿಸಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಕೂಡ ಹೌದು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲಿ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಪಡೆದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸರ್ಕಾರಿ ಕೆಲಸದ ಜೊತೆ ಜೊತೆಗೆ ಸಾಹಿತ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಅವರು ತಾವು ಕೆಲಸ ಮಾಡಿದ ಜಿಲ್ಲೆಗಳ ಪ್ರದೇಶಗಳನ್ನಾಧರಿಸಿ ಕೆಲವು ಕೃತಿಗಳನ್ನು ಕೂಡ ರಚಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ತವರು ಜಿಲ್ಲೆ ಕೋಲಾರದಲ್ಲೂ ದಿವಾನ್ ವಿಶ್ವೇಶ್ವರಯ್ಯನವರ ಆದೇಶದಂತೆ 9 ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಜತೆಗೆ ತುಮಕೂರು ಜಿಲ್ಲಾಧಿಕಾರಿಯಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಕನ್ನಡ ಹಾಗೂ ಕನ್ನಡ ಸಾಹಿತ್ಯದ ಮೇಲೆ ಎಲ್ಲಿಲ್ಲದ ಆಸಕ್ತಿ. ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೂ ಮಾಸ್ತಿಯವರು ಹಲವಾರು ಕೃತಿಗಳನ್ನು ರಚಿಸಿದ್ದರು. ಅದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಮಾಸ್ತಿಯವರು ಕನ್ನಡದ ಸೇವೆಯನ್ನು ಮಾಡಿದ್ದು ಸ್ಮರಿಸಬೇಕಾಗುತ್ತದೆ. ತಮ್ಮ ಇಡೀ ಅಧಿಕಾರಿ ಸೇವೆಯ ಜೀವನಾನುಭವದ ಪಯಣದಲ್ಲಿ ಅನೇಕ ಕಥೆಗಳು ಕಾದಂಬರಿಗಳು ಕಾವ್ಯಗಳು ನಾಟಕಗಳನ್ನು ರಚಿಸಿರುತ್ತಾರೆ.

ಇವರ ಮೊದಲ ಸಣ್ಣ ಕಥೆ ರಂಗನ ಮದುವೆ. ಹಾಗೆ ಅವರ ಕೊನೆಯ ಕೃತಿ ಮಾತುಗಾರ ರಾಮಣ್ಣ. ಮಾಸ್ತಿಯವರ ಲೇಖನಿಯಲ್ಲಿ ಸಣ್ಣಕಥೆ, ಕಾವ್ಯ, ನಾಟಕ, ಕಾದಂಬರಿ, ಜೀವನ ಚರಿತ್ರೆ, ವಿಮರ್ಶೆ, ಅನುವಾದ ಸಾಹಿತ್ಯ, ಸಂಪಾದಕೀಯ ಮುಂತಾದ ವೈವಿಧ್ಯಮಯವಾದ ಸಾಹಿತ್ಯ ಸೃಷ್ಟಿಯಾಯಿತು. ಮಾಸ್ತಿಯವರು ಟಿ.ಪಿ. ಕೈಲಾಸಂ, ಜಿ.ಪಿ.ರಾಜರತ್ನಂ, ದಾ.ರಾ.ಬೇಂದ್ರೆ, ಡಿವಿಜಿ, ಸರ್.ಎಂ.ವಿಶ್ವೇಶ್ವರಯ್ಯ ಇಂತಹ ಮಹಾನ್ ದಿಗ್ಗಜರ ಜೊತೆಗೆ ಸಾಹಿತ್ಯ ಸಂಬಂಧಗಳನ್ನು ಬೆಳೆಸಿಕೊಂಡು ಬೇಂದ್ರೆಯವರ ಜೀವನ ಎಂಬ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಮೂಲಕ ಮಾಸ್ತಿಯವರು ತಮ್ಮ ಜೀವಿತಾವಧಿಯಲ್ಲಿ ಸಾಮಾಜಿಕವಾಗಿ ಹಾಗೂ ಸಾಹಿತ್ಯಿಕವಾಗಿ ಅತ್ಯದ್ಭುತ ಮೈಲಿಗಲ್ಲನ್ನು ದಾಖಲಿಸಿದ್ದಾರೆ. “ಮಾಸ್ತಿ ಕನ್ನಡದ ಆಸ್ತಿ” ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ 6, 1986 ರಂದು ನಿಧನ ಹೊಂದಿದರು.

MORE FEATURES

ಕಾವ್ಯದ ಜೊತೆಗೆ ಅನುಸಂಧಾನ ಮಾಡುವುದು ಈ ಸಂಕಲನದ ಹೆಚ್ಚುಗಾರಿಕೆ..

03-07-2024 ಬೆಂಗಳೂರು

"ಕನ್ನಡದಲ್ಲಿ ಹೀಗೆ ಬಂದ ಅನುವಾದ ಕಾವ್ಯಕ್ಕೆ ಒಂದು ಶತಮಾನಕ್ಕೂ ಮಿಕ್ಕ ಇತಿಹಾಸ ಇದೆ. ಅದು ಪ್ರಾರಂಭವಾಗುವುದು ರಲ್ಲ...

'ಮಾಂದಳಿರ ತೊಟ್ಟಿಲು' ಎಲ್ಲರ ಓದಿನ ಸಂಗಾತಿಯಾಗಲೆಂದು ಆಶಿಸುತ್ತೇನೆ

03-07-2024 ಬೆಂಗಳೂರು

'ಸಮಕಾಲೀನ ಕವಿಗಳ ಕವಿತೆಯ ಸಾಲುಗಳನ್ನು ಓದುವಾಗ ಅಂಕಣದಲ್ಲಿ ಕಾಣಿಸುವುದು ನಾಲ್ಕು ಸಾಲುಗಳನ್ನಾದರೂ ಅವರ ಹತ್ತು ಕವಿತ...

ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಅದು 'ಪ್ರೀತಿ' ಮಾತ್ರ...

31-12-1899 ಬೆಂಗಳೂರು

"ಇಲ್ಲಿನ ಭಗ್ನ ಪ್ರೇಮದ ಕಥೆ ಬರಿಯ ಕಥೆಯಲ್ಲ ಅದೊಂದು ಜನ್ಮ ಜನ್ಮಾಂತರದ ಪ್ರೀತಿಯ ಕಥೆ, ಇಲ್ಲಿ ಕೋಲಾರದ ಕೆಜಿಎಫ್ ಇದ...