ಲೇಖಕಿ ಪಾತಿಮಾ ರಲಿಯಾ ಅವರ ಬರಹ ಓದುತ್ತಾ ಹೋದಂತೆ ಸುತ್ತಲಿನ ಜಗತ್ತಿನ ನಾವು ನೋಡಿರುವ ಅದರೆ ಗ್ರಹಿಸಿರದ ವಿಳಾಸವಿಲ್ಲದ ಮೇರು ವ್ಯಕ್ತಿತ್ವಗಳು ನಮಗೆ ಕಾಣಿಸಲು ಶುರು ಆಗುತ್ತದೆ. ನಮ್ಮ ನೋಟದ ಗ್ರಹಿಕೆಯ ಮಿತಿಗಳಿಗೆ ಅಡರಿರುವ ಪೊರೆಯ ಮಬ್ಬುಗಳನ್ನ ನಾವು ಬಿಡಿಸಿಕೊಂಡು ಹೊಸ ದೃಷ್ಟಿ ಪಡೆಯಬೇಕು ಎನ್ನಿಸಿ ಬದುಕು ಅಪ್ತವಾಗಿಸುತ್ತದೆ ಎಂಬುದು ಬರಹಗಾರ ಸತ್ಯನಾರಾಯಣ ಜಿ.ಟಿ ಅವರ ಮಾತು. ಲೇಖಕಿ ಫಾತಿಮಾ ರಲಿಯಾ ಅವರ ಕಡಲು ನೋಡಲು ಹೋದವಳು ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..
"ಶಿವನನ್ನು ನಂಬುವಷ್ಟೆ ಗಾಢವಾಗಿ ಊರಿನ ಮಸೀದಿಯನ್ನೂ ನಂಬುವ ಆಕೆ ಅಲ್ಲಿನ ಗುರುಗಳು ಕುಡಿಯಬೇಡ ಅಂದರೆ ಮಾತ್ರ ಕೆಂಡಾಮಂಡಲ ಆಗುತ್ತಾಳೆ, ಜಗದ ಎಲಾ ದೇವರಿಗೂ, ದರ್ಗಾಗಳಿಗು, ಅವನಿಗೆ ತನ್ನ ಮದುವೆ ಮಾಡಿಕೊಟ್ಟ ಅಪ್ಪನಿಗೂ, ಹೆಂಡತಿಯ ಬಾಳಿಸಲಾಗದ ತನ್ನ ಮಗನಿಗೂ, ಓಡಿ ಹೋದ ಸೊಸೆಗೂ, ಓಡಿಸಿಕೊಂಡು ಹೋದ ಘಟ್ಟದಾಯೆ ಮರ್ಲ ಸಾಬಿಗೂ, ಅವಳು ಬಿಟ್ಟು ಹೋದ ಮಗುವಿಗೂ ವಾಚಮಗೋಚರ ಬಯ್ಯುತ್ತಾಳೆ, ಅವಳ ಒಡಲ ಕಿಚ್ಚು ತಣಿದ ಮೇಲೆ ಅಥವಾ ತಾನಾಗಿಯೇ ತಣಿಸಿದ ಮೇಲೆ ಅವಳು ಶಾಂತಮೂರ್ತಿ. ಕರುಣಾಮಯಿ ಅಮ್ಮ: ಆ ಮಗುವಿಗೂ ಜಗತ್ತಿಗೂ"
ಲೇಖಕಿ ಪಾತಿಮಾ ರಲಿಯಾ ಅವರ ಬರಹ ಓದುತ್ತಾ ಹೋದಂತೆ ಸುತ್ತಲಿನ ಜಗತ್ತಿನ ನಾವು ನೋಡಿರುವ ಅದರೆ ಗ್ರಹಿಸಿರದ ವಿಳಾಸವಿಲ್ಲದ ಮೇರು ವ್ಯಕ್ತಿತ್ವಗಳು ನಮಗೆ ಕಾಣಿಸಲು ಶುರು ಆಗುತ್ತದೆ. ನಮ್ಮ ನೋಟದ ಗ್ರಹಿಕೆಯ ಮಿತಿಗಳಿಗೆ ಅಡರಿರುವ ಪೊರೆಯ ಮಬ್ಬುಗಳನ್ನ ನಾವು ಬಿಡಿಸಿಕೊಂಡು ಹೊಸ ದೃಷ್ಟಿ ಪಡೆಯಬೇಕು ಎನ್ನಿಸಿ ಬದುಕು ಅಪ್ತವಾಗಿಸುತ್ತದೆ.
ಸಾಹಿತ್ಯ ನಾಟಕ ಸಿನಿಮಾ ಇತರೆ ಪ್ರಕಾರಗಳು ಹುಟ್ಟಿಸಬೇಕಾದ್ದು ಇದನ್ನೇ ತಾನೆ. ಅರಿವಿನ ವಿಕಾಸವನ್ನು ಮಾಡುತ್ತಾ ಮನುಷ್ಯತ್ವದ ಎಲ್ಲೆಗಳನ್ನ ಪ್ರೀತೀ ಸ್ನೇಹ ಬಂಧಗಳ ಮೂಲಕ ವಿಸ್ತರಿಸುವುದು. ಪಾತಿಮಾ ರವರ ಲಲಿತ ಪ್ರಬಂಧದ ಕಟ್ಟು "ಕಡಲು ನೋಡಲು ಹೋದವಳು" ಅಹರ್ನಿಶಿ ಪ್ರಕಾಶನದಿಂದ ಮೊನ್ನೆಯಷ್ಟೇ ಪ್ರಕಟವಾಗಿದೆ. ಕರಾವಳಿ ಮೂಲದ ಹಿನ್ನೆಲೆ ಇರುವ ನಾನು ಕಡಲ ಬಳಿ ಹೋದ ನಮ್ಮ ಪಾತಿಮಾ ಮೀನು ಮೋಳಿ ಏಡಿ ತಂದಿರಬಹುದೆ ಎಂದು ಅವರ ಬುಟ್ಟಿ ಇಣುಕಿದರೆ ಅಲ್ಲಿ ಇವೆಲ್ಲವುಗಳ ಜತೆ ಕಡಲ ಮೌನ, ಮಾತು, ನೆರೆ, ಉಸುಕು, ಅಲೆಯ ರಬಸ ಜತೆ ಕಡಲ ತಡಿಯ ಜನರ ಪ್ರೀತಿಯ ಧ್ಯಾನವನ್ನೆ ಹೊತ್ತು ತಂದಿದ್ದಾರೆ. ಈ ಕಾರಣಕ್ಕೆ ರಾತ್ರಿ ೯ಗಂಟೆ ಓದಲು ಆರಂಭಿಸಿ ನಿದ್ದೆಯ ವಿರಾಮ ನಡುವೆ ಮತ್ತೆ ಬೆಳ್ಳಂ ಬೆಳಗ್ಗೆ ಕಡಲು ಇಳಿದು ಈಗ 7 ರ ಹೊತ್ತಿಗೆ ನೂರು ಪುಟ ಎದೆಗೆ ಇಳಿಸಿ ಬರೆಯಲು ಕುಳಿತಿರುವೆ.
ಪಾತಿಮಾ ಕಳೆದ ನಿನ್ನೆಗಳನ್ನ ಭಾವನೆಗಳ ಬೆಚ್ಚನೆ ಅನುಭೂತಿ ಜತೆ ಎದುರು ಇಟ್ಟಿದ್ದಾರೆ. ಕಳೆದು ಹೋದ ಹಸು ಕೆಂಪಿ ಹುಡುಕುತ್ತಾ ಹೊರಡುವ ಹುಡುಕಾಟದಲ್ಲೆ ಕಳೆದು ಹೋದ ಆಪ್ತ ನಂಬಿಕೆಯನ್ನು ಹುಡುಕುವ ಪಾತಿಮಾ ತನ್ನದಲ್ಲದ ತಪ್ಪಿಗೆ ಪ್ರೀತಿ ಪಾತ್ರ ಪುಟಾಣಿ ನೆರೆ ಮನೆಯ ಮಗುವಿನ ಕಣ್ಣಲೇ ಅನುಮಾನಕೆ ಗುರಿಯಾಗುವ ವರ್ತಮಾನ ತಂದಿರುವ ಸವಾಲುಗಳನ್ನ ಪುಸ್ತಕ ಆರಂಭದಲ್ಲೆ ತೆರೆದಿದ್ದಾರೆ.
ಮುಂದಿನದು ರತ್ನಕ್ಕನ, ಮಣಿಕಂಠ ನಂಬಿದ ಪಕೀರಮ್ಮ, ಬೇಬಿಅಣ್ಣ, ಜೀನ್ಸ್ ಪ್ಯಾಂಟ್ ಅಕ್ಕ, ಮಂಡಕ್ಕಿ ಅಜ್ಜಿ, ಸಾವುಗಳ ಸುತ್ತಲ ಪಯಣ, ಅಸ್ಪತ್ರೆ ಅನುಭವ, ಅಮ್ಮನ ಕ್ಯಾನ್ಸರ್, ಈ ನದುವೆ ಬರುವ ಐಸ್ ತಿಮ್ಮಪ್ಪ ಅಣ್ಣ, ಮೌನಿ ಮುಖೇಶ, ಗೀತಕ್ಕ ಚಾಂದಜ್ಜಿ ಬದುಕು ಬವಣೆ.
ಇಡೀ ಲಲಿತಾ ಪ್ರಬಂಧಗಳು ಬಹಳವಾಗಿ ಕಾಡಲು ಪಾತಿಮಾ ಬಳಸುವ ಭಾಷೆ. ಕಥನ ಶೈಲಿ. ತಾನು ಭೇಟಿಯಾದ ವ್ಯಕ್ತಿಯ ಜೀವನವನ್ನ ತನ್ನ ಅನುಬವದ ಕಥನ ಜತೆ ಹೆಣೆಯುತ್ತಲ್ಲೆ ಸಮಷ್ಟಿ ಪ್ರಜ್ಞೆಯಲ್ಲಿ ಪ್ರೀತಿಯನ್ನು, ಸಾವನ್ನು, ಬದುಕಿನ ಕಷ್ಟವನ್ನು, ಮನುಷ್ಯತ್ವದ ನೆಲೆಯಲ್ಲಿ ಹೆಣೆದು ನಮ್ಮ ಎದೆಗೆ ಇಳಿಸಿವೆ.
ಇಷ್ಟು ಹೇಳಬೇಕಾದ ಈ ಕ್ಷಣದ ಮಾತು
ಓದಲೇಬೇಕಾದ ಪುಸ್ತಕ
ಕಡಲು ನೋಡಲು ಹೋದವಳು ಇಷ್ಟವಾದಳು
Thank you
ಪಾತಿಮಾ ರಲಿಯಾ.
ಆಹಿರ್ನಿಶಿ Humchadakatte Akshatha
ಪ್ರತಿಗಳಿಗೆ-+91 94491 74662
"ಇತ್ತೀಚೆಗೆ ಅವರ ‘ಗೀತಾಂತರಂಗ’ ಕೃತಿ ಸಿಕ್ಕಿತು. ಇದು ಅವರ ಸಂಶೋಧನಾ ಕೃತಿ. ಅವರು ಇದನ್ನು ಬರೆದಿದ್...
"ಇತಿಹಾಸವನ್ನು ಮುರಿದು ಕಟ್ಟುವುದರ ಜತೆಗೆ ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸುತ್ತಾ ಸತ್ಯವನ್ನು ನಾವು ದಾಖಲಿಸಬೇಕ...
"ಕವಿತೆ ಬಗ್ಗೆ ಹಿಂದಿನಿಂದ ಇವತ್ತಿನವರೆಗೆ ವಿದ್ವಾಂಸರು ಹತ್ತಾರು ನುಡಿಗಳನ್ನು ಹೇಳುತ್ತಲೆ ಬಂದಿದ್ದಾರೆ. ಅಂದರೆ ತ...
©2024 Book Brahma Private Limited.