“ಪ್ರತಿಯೊಂದು ಲೇಖನಗಳು ಸಾಧಾರಣವಾಗಿ ತೆರೆದುಕೊಳ್ಳುತ್ತಾ ಅಸಾಧಾರಣವಾಗಿ ಮುಗಿಯುತ್ತವೆ. ಪ್ರತಿ ಲೇಖನಗಳಲ್ಲಿ ಸಿಗುವ ವ್ಯಕ್ತಿಗಳ ಬಾಳಲ್ಲಿ ನಡೆದ ಘಟನೆಗಳನ್ನು ಓದು ಮುಗಿಸಿದಾಗ ಆ ಲೇಖನದೊಳಗಿನ ಭಾವನೆ ನಮ್ಮನ್ನು ಕಾಡದೆ ಇರುವುದಿಲ್ಲ,” ಎನ್ನುತ್ತಾರೆ ಸಂಜಯ್ ಮಂಜುನಾಥ್. ಅವರು ಅಬ್ದುಲ್ ರಶೀದ್ ಅವರ “ಮೈಸೂರ್ ಪೋಸ್ಟ್” ಕೃತಿ ಕುರಿತು ಬರೆದ ವಿಮರ್ಶೆ.
ಈ ಕೃತಿಯನ್ನು ಓದಿ ಮುಗಿಸಿದಾಗ ಅನಿಸಿದ್ದು ಅಲೆಮಾರಿ ಗೆಳೆಯನೊಬ್ಬ ನನಗೆ ಪತ್ರ ಮುಖೇನಾ ತನಗೆ ಸಿಕ್ಕ ವ್ಯಕ್ತಿಗಳ ಕತೆಗಳನ್ನ ಹೇಳಿದ್ದಾನೆಂದೆನಿಸಿತು.
ಪ್ರತಿಯೊಂದು ಲೇಖನಗಳು ಸಾಧಾರಣವಾಗಿ ತೆರೆದುಕೊಳ್ಳುತ್ತಾ ಅಸಾಧಾರಣವಾಗಿ ಮುಗಿಯುತ್ತವೆ. ಪ್ರತಿ ಲೇಖನಗಳಲ್ಲಿ ಸಿಗುವ ವ್ಯಕ್ತಿಗಳ ಬಾಳಲ್ಲಿ ನಡೆದ ಘಟನೆಗಳನ್ನು ಓದು ಮುಗಿಸಿದಾಗ ಆ ಲೇಖನದೊಳಗಿನ ಭಾವನೆ ನಮ್ಮನ್ನು ಕಾಡದೆ ಇರುವುದಿಲ್ಲ. ಪ್ರೀತಿ, ದುಃಖ, ಮುಗ್ಧತೆ, ಆಶ್ಚರ್ಯ, ವಿಷಾದ ಹೀಗೆ ಅನೇಕ ಭಾವನೆಗಳನ್ನ ಎಷ್ಟು ಸರಾಗವಾಗಿ ದಾಟಿಸುತ್ತಾರೆ ಲೇಖಕರು ಎಂದೆನಿಸಿತು.
ಇಲ್ಲಿರುವ ಅನೇಕ ವ್ಯಕ್ತಿಯ ಚಿತ್ರಣಗಳು ಮೈಸೂರು ಅರಮನೆಯೊಂದಿಗೆ ಬೆಸೆದುಕೊಂಡಿದೆ. ಮಹಾರಾಜರಿಂದ ಉಪಕೃತರಾದ ಅನೇಕ ಜನರು, ಮಹಾರಾಜರಿಗೆ ಮತ್ತು ಅರಮನೆಗೆ ಮಾಡಿದ ಕಾರ್ಯಗಳು ಅಷ್ಟೇ ವಿಶಿಷ್ಟವಾದವು. ರಾಜರ ಆಭರಣಗಳನ್ನು ಪಾಲಿಶ್ ಮಾಡುತ್ತಿದ್ದ ಅಕ್ಕಸಾಲಿಗ, ಗಡಿಯಾರದ ಅಂಗಡಿಯನ್ನು ಇಟ್ಟವರು, ಅರಮನೆ ಉದ್ಯಾನವನ್ನು ಮಾಡಿದವರು, ಸ್ಥೂಲಕಾಯರಾಗಿದ್ದ ರಾಜರಿಗಾಗಿ ಸಿಂಹಾಸನವನ್ನು ಲೋಪ ಬರದಂತೆ ಹಿಗ್ಗಿಸಿದ ಬಡಗಿ.
ಇನ್ನೂ, ಹೆದ್ದಾರಿಯ ಇಂಜಿನಿಯರ್ ಅವರನ್ನು ಮಾತನಾಡಿಸಲು ಹೋಗಿ ಕುವೆಂಪು ಅವರ ಒಡನಾಡಿಯಾಗಿದ್ದ ಅವರ ತಂದೆಯ ಜೊತೆ ಕಳೆದ ಕ್ಷಣಗಳು, ಕೊಡಗಿನ ಅರಮನೆ ನಮ್ಮ ವಂಶಕ್ಕೆ ಸೇರಿದ್ದು ಮತ್ತು ಸಾವಿರಾರು ಕೋಟಿ ಸಾಲ ಮರುಪಾವತಿ ಆಗಬೇಕೆಂದು ವಿಚಿತ್ರವಾಗಿ ಮಾತನಾಡುವ ಹಿಟ್ಟಿನ ಗಿರಣಿಯ ಮಾಲೀಕರು, ಇಂಗ್ಲಿಷ್ ಕಲಿಯಲು ಹೋಗಿ ಅಚಾನಕ್ಕಾಗಿ ಕುವೆಂಪುರವರಿಂದ ಕನ್ನಡ ಪ್ರೊಫೆಸರ್ ರವರ ಜೀವನ ಚಿತ್ರಣ, ಕಡಲ ಚಿಪ್ಪುಗಳಿಂದಲೇ ಅನೇಕ ಕಲಾ ಸೃಷ್ಟಿಗಳನ್ನು ಮಾಡಿದವರ ಗೋಳಿನ ಚಿತ್ರಣ, ಹಲ್ಲುಪುಡಿ ಮಾರುವವ, ನಾಯಿ ಜೊತೆ ವಾಸಿಸುವವ.. ಹೀಗೆ ವಿಚಿತ್ರ ವ್ಯಕ್ತಿಗಳ ವೈವಿಧ್ಯತೆಯ ಜೀವನವಲ್ಲದೆ ಸಾಹಿತಿ ಚದುರಂಗ ಅವರ ವಂಶಸ್ಥರ ಕಥನ, ಸಾಹಿತಿ ಮಹಾದೇವರೊಂದಿಗೆ ಮನಸ್ಸಿನಲ್ಲಿಯೇ ನಡೆಸಿದ ಸಂವಾದ, ನೆಚ್ಚಿನ ತೇಜಸ್ವಿಯವರ ಕುರಿತ ಚಿತ್ರಣ ಎಲ್ಲವೂ ಅನನ್ಯವಾದಂತವು.
ಇದು ನನ್ನ ಅಬ್ದುಲ್ ರಶೀಲ್ ರವರ ಮೊದಲ ಓದು ಮತ್ತು ಈ ಓದು ಅವರ ಇನ್ನಿತರ ಕೃತಿಗಳನ್ನು ಓದಲೇಬೇಕೆಂದೆನಿಸುವಂತೆ ಮಾಡಿದೆ.
“ಪ್ರತಿಯೊಬ್ಬನಲ್ಲೂ ಶಿವ ಇದ್ದಾನೆ ಅವನನ್ನು ಜಾಗೃತ ಗೊಳಿಸಬೇಕೆಂಬುದೇ ಕಾದಂಬರಿಯ ಮೂಲ ಉದ್ದೇಶ. ಸತ್ಕರ್ಮಗಳಿಂದ ದೈ...
“ನಾಯಕನ ಪರಿಸ್ಥಿತಿ 'ಕಾಂತಾರ' ಚಲನಚಿತ್ರವನ್ನು ನೋಡಿ, ಈಗ ಅದರ ಚಿತ್ರೀಕರಣ ನಡೆದ ಜಾಗಕ್ಕೆ ಹೋಗಿ ನೋಡಿದ...
“ಹೆಣ್ಣುತನವನ್ನು ಗಂಡುತನದ ದ್ವಂದ್ವವಾಗಿ ನೋಡಲಾಗುತ್ತದೆ. ಆದರೆ ನಿಜವಾದ ಭೇದಗಳಿವೆಯೇ ಎಂಬುದಕ್ಕೆ ಆಧ್ಯಾತ್ಮಿಕವಾ...
©2025 Book Brahma Private Limited.