ಬದುಕಿನಲ್ಲಿ ಏಕಾಂಗಿತನಕ್ಕಿಂತ ಮತ್ತೊಂದು ಶತ್ರು ಯಾವುದು ಇಲ್ಲ


“ನಜೀಬ್ ಅಡುಗಳು ಜೊತೆಗೆ ಹೇಗೆ ಬದುಕುತ್ತಾನೆ ಅವುಗಳ ಜೊತೆಗೆ ಹೇಗೆ ಹೊಂದಿಕೊಳ್ಳುತ್ತಾನೆ ಆಡುಗಳ ಮತ್ತು ಅವನ ನಡುವೆ ಬೆಳೆದ ಸಂಬಂಧ ಎಂತದ್ದು? ಪ್ರಾಣಿ ಮತ್ತು ಮನುಷ್ಯನ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ,” ಎನ್ನುತ್ತಾರೆ ಸೋಮನಾಥ ಪ್ರಭು ಗುರಪ್ಪನವರ. ಅವರು ಅಶೋಕ ಕುಮಾರ್‌ ಅವರ “ಆಡುಜೀವನ” ಕೃತಿ ಕುರಿತು ಬರೆದ ವಿಮರ್ಶೆ.

ಆಡು ಜೀವಿತಂ (The goat life) ಇದು ಮಲಯಾಳಂ ಕೃತಿ ಕನ್ನಡಕ್ಕೆ ಆಡುಜೀವನ ಎಂಬ ಹೆಸರಿನಡಿ ಅನುವಾದಿಸಲಾಗಿದೆ. ನಜೀಬ್ ಎಂಬ ವ್ಯಕ್ತಿಯ ನೈಜ ಜೀವನದ ಆಧಾರಿತ ಘಟನೆಗಳನ್ನು ಇಟ್ಟುಕೊಂಡು ರೂಪಗೊಂಡ ಕಾದಂಬರಿ ಇದಾಗಿದೆ. ಕಾದಂಬರಿ ಮೊದಲು ಪೊಲೀಸ್ ಠಾಣೆಯಲ್ಲಿ ಪ್ರಾರಂಭವಾಗಿ ಜೇಲಿಗೆ ತಮ್ಮನ್ನೇ ತಾವೇ ಹೋಗುವ ಇಬ್ಬರು ವ್ಯಕ್ತಿಗಳಿಂದ ಕಥೆ ಸಾಗುತ್ತದೆ ಜೇಲಿನ ಜೀವನವೇ ಸುಖ ಎನಿಸುವಷ್ಟು ಅವರು ತಮ್ಮ ಭೂತಕಾಲದ ಬದುಕನ್ನು ಅನುಭವಿಸಿರುತ್ತಾರೆ. ನಿಧಾನವಾಗಿ ಜೇಲಿನಲ್ಲಿ ಅವರ ಕಥೆಯನ್ನು ಹೇಳಲಾಗುತ್ತದೆ.

ಅಲ್ಲಿಂದ ಈ‌ ಕಾದಂಬರಿ ಆರಂಭವಾಗುತ್ತದೆ. ನಜೀಬ್ ಎಂಬ ಕೇರಳದ ವ್ಯಕ್ತಿ ತನ್ನ ಬದುಕನ್ನು ಹಸನಗೊಳಿಸಲು ಉದ್ಯೋಗಕ್ಕಾಗಿ ಅರಬ್ ದೇಶಕ್ಕೆ ಹೋದಾಗ ಅವನು ಅಚಾತುರ್ಯದಿಂದ ಒಂದು ಸುಳಿಯೊಳಗೆ ಸಿಲುಕಬೇಕಾಗುತ್ತದೆ. ಮರಭೂಮಿಯಲ್ಲಿ ಆಡುಗಳ ಸಾಕಾಣಿಕೆಗೆ ಸಿಲುಕಿ ಅರಬ್ ಬಾಬಾನ ಶೋಷಣೆಗೆ ಒಳಗಾಗಿ ತೀರಾ ದುಸ್ತರವಾದ ಬದುಕನ್ನು ಬದುಕಬೇಕಾಗಿ ಬರುತ್ತದೆ. ನಜೀಬ್ ಅಡುಗಳು ಜೊತೆಗೆ ಹೇಗೆ ಬದುಕುತ್ತಾನೆ ಅವುಗಳ ಜೊತೆಗೆ ಹೇಗೆ ಹೊಂದಿಕೊಳ್ಳುತ್ತಾನೆ ಆಡುಗಳ ಮತ್ತು ಅವನ ನಡುವೆ ಬೆಳೆದ ಸಂಬಂಧ ಎಂತದ್ದು? ಪ್ರಾಣಿ ಮತ್ತು ಮನುಷ್ಯನ ಸಂಬಂಧವನ್ನು ಅತ್ಯಂತ ಸೂಕ್ಷ್ಮವಾಗಿ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಮರುಭೂಮಿಯಲ್ಲಿನ ಕಟ್ಟುಪಾಡುಗಳು ಅಲ್ಲಿ ಬದುಕಬೇಕಾದ ಬದುಕು ಎಲ್ಲವನ್ನು ಕಾಣಬಹುದು.

ನೀರಿನ ಪ್ರಾಮುಖ್ಯತೆಯನ್ನು ಓದಿಯೆ ನಾವು ತಿಳಿದುಕೊಳ್ಳಬೇಕಾಗಿದೆ ಅಷ್ಟು ಅಗಾಧವಾಗಿ ಇಲ್ಲಿ ಮೂಡಿದೆ. ಬದುಕಿನಲ್ಲಿ ಏಕಾಂಗಿತನಕ್ಕಿಂತ ಮತ್ತೊಂದು ಶತ್ರು ಯಾವುದು ಇಲ್ಲ. ಎಂಬುದನ್ನು ಹಲವಾರು ಬಾರಿ ಇಲ್ಲಿ ಕಾಣಬಹುದು. ಪರಸ್ಪರ ಮಾತು, ಪ್ರೀತಿ, ಸ್ನೇಹ ,ಒಡನಾಟಗಳಿಂದ ಮಾತ್ರ ನಾವು ಬದುಕಲು ಸಾಧ್ಯ. ಏಕಾಂಗಿತನ ನಮ್ಮನ್ನು ನಿಧಾನವಾಗಿ ಸುಡುತ್ತದೆ ಎಂಬುದನ್ನು ತಿಳಿಯಬಹುದು. ಇಲ್ಲಿ ಮರುಭೂಮಿಯ ಕಠೋರತೆಯನ್ನು ವರ್ಣಿಸುತ್ತ ಅದರ ಜೊತೆಜೊತೆಗೆ ಅಲ್ಲಿಯ ಜೀವ ಸಂಕುಲಗಳ ಬಗ್ಗೆ ಅಲ್ಲಿಯ ಪರಿಸರದ ಬಗ್ಗೆ ಹೇಳಲಾಗಿದೆ. ವಲಸೆತನ ಅದರ ಒದ್ದಾಟ ತೊಳಲಾಟವನ್ನು ಇಲ್ಲಿ ಕಾಣಬಹುದು. ಇರುವ ಬದುಕನ್ನು ಆದಷ್ಟು ಪ್ರೀತಿಯಿಂದ ಬದುಕಬೇಕು ಮತ್ತು ಎಲ್ಲವನ್ನು ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಈ ಕಾದಂಬರಿ ಹೇಳಿಕೊಡುತ್ತದೆ. ಅನುವಾದವು ಕೂಡ ಅತ್ಯಂತ ಸೊಗಸಾಗಿ ಮೂಡಿದೆ. ಎಂದಿನಂತೆ ನೀವು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಓದಲು ಆಗದಿದ್ದವರು ಆಡುಜೀವಿತಂ ಎಂಬ ಹೆಸರಿನಲ್ಲಿ ಪೃಥ್ವಿರಾಜ ಸುಕುಮಾರ್ ರವರು ಸಿನಿಮಾ ಮಾಡಿದ್ದಾರೆ ಅದನ್ನು ಕೂಡ ವೀಕ್ಷಿಸಬಹುದು.

MORE FEATURES

ಕೊನೆಗೆ ಎಲ್ಲರೂ ಸೇರುವುದು ಮಣ್ಣನ್ನೇ

16-04-2025 ಬೆಂಗಳೂರು

"ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತ...

ಇವು ಕಥೆಗಳೋ ಆತ್ಮ ಚರಿತ್ರೆಯ ಪುಟಗಳೋ

16-04-2025 ಬೆಂಗಳೂರು

"ಇಲ್ಲಿ ಬಳಸುವ ಭಾಷೆಯಲ್ಲಿ ಕೂಡಾ ಈ ಪ್ರಾಂತ್ಯದ ಸೊಗಡು ದಟ್ಟವಾಗಿ ಓದುಗರಿಗೆ ತಗಲುತ್ತದೆ. ಹೆಂಗಸರ ಬೀದಿ ಜಗಳಗಳ ಭಾ...

ಹಳೆಯದನ್ನು ಬಿಡದವರು; ಹೊಸದನ್ನು ಹೊದ್ದವರು

16-04-2025 ಬೆಂಗಳೂರು

"ಹಿತ ಎನ್ನುವ ಪದದಲ್ಲಿ ಒಂದು ನೆಮ್ಮದಿಯ ಅನುಭವವಿದೆ. ಚಳಿಗಾಲದಲ್ಲಿ ಕಂಬಳಿ ಸಿಕ್ಕರೆ ಬೆಚ್ಚನೆಯ ಹಿತದ ಅನುಭವವಾಗುತ...