"ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತು ಹಲವಾರು ಕಥೆ ಕಾದಂಬರಿಗಳು ಬಂದಿವೆ. ಇದು ಕೂಡ ಸ್ವಲ್ಪ ವಿಶೇಷವಾದ ಕಾದಂಬರಿಯಾಗಿದೆ," ಎನ್ನುತ್ತಾರೆ ಸೋಮನಾಥ ಗುರುಪ್ಪನವರ ಅವರು ಎಂ. ಆರ್. ದತ್ತಾತ್ರಿ ಅವರ "ದ್ವೀಪವ ಬಯಸಿ" ಕೃತಿ ಕುರಿತು ಬರೆದ ವಿಮರ್ಶೆ.
ದ್ವೀಪವ ಬಯಸಿ ಕನ್ನಡದಲ್ಲಿ ಇದೊಂದು ವಿಶೇಷವಾದ ಕಾದಂಬರಿ. ಕನ್ನಡ ಸಾಹಿತ್ಯ ಲೋಕದಲ್ಲಿ ಕಾರ್ಪೊರೇಟ್ ಜಗತ್ತು ಕುರಿತು ಹಲವಾರು ಕಥೆ ಕಾದಂಬರಿಗಳು ಬಂದಿವೆ. ಇದು ಕೂಡ ಸ್ವಲ್ಪ ವಿಶೇಷವಾದ ಕಾದಂಬರಿಯಾಗಿದೆ. ಕಂಪನಿ ಒಂದರಲ್ಲಿ ಕೆಲಸ ಮಾಡುವ ನಾಯಕ ಬೇರೆ ದೇಶಕ್ಕೆ ಹಾರುವ ಮೂಲಕ ಆರಂಭವಾಗುವ ಕಾದಂಬರಿ ಮುಂದೆ ಹಲವಾರು ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತದೆ. ಮೊದಲು ಕೆಲವು ಅಧ್ಯಾಯಗಳಲ್ಲಿ ನಾಯಕನ ಬಾಲ್ಯ, ಓದು, ಊರು, ಬದುಕು ಬಡತನ,ಅಪ್ಪ ಮತ್ತು ಅವನ ತಮ್ಮನ ನಡುವೆ ಇರುವ ಸಂಬಂಧಗಳನ್ನು ಹಾಗೂ ತಾವು ಪ್ರೀತಿಸಿದ ಹುಡುಗಿಯ ಮದುವೆ ಹೀಗೆ ಹಲವು ವಿಚಾರಗಳಿವೆ. ನಂತರದ ಮುಂದಿನ ಅಧ್ಯಯಗಳಲ್ಲಿ ನಿಧಾನವಾಗಿ ಕಾರ್ಪೊರೇಟ್ ಜಗತ್ತಿಗೆ ತೆರೆದುಕೊಳ್ಳುವ ಕಾದಂಬರಿ ಅಲ್ಲಿಯ ಸಂಪೂರ್ಣ ಚಿತ್ರವನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತಾ ಹೋಗುತ್ತದೆ. ಅಲ್ಲಿಯ ಬದುಕು,ಜಂಜಾಟ, ಸಂಕಟಗಳು, ನೌಕರರ ಒತ್ತಾಸೆಗಳು, ಅಳುಕುಗಳು ಅಲ್ಲಿಯ ರಾಜಕೀಯ, ಒಡನಾಡಿಗಳ ಸಂಬಂಧಗಳು, ಆಚರಣೆಗಳು, ಲೇ -ಆಫ್ ಅದರ ಪ್ರಭಾವ ಆಧುನಿಕ ಜಗತ್ತಲ್ಲಿ ಕೆಲಸದ ಅನಿವಾರ್ಯತೆ. ಕೆಲಸಕ್ಕಿಂತ ಬದುಕು ದೊಡ್ಡದು ಬದುಕನ್ನು ಅತ್ಯಂತ ಪ್ರೀತಿಯಿಂದ ಅನುಭವಿಸಬೇಕು ಎನ್ನುವ ಮಾತನ್ನು ಸೂಕ್ಷ್ಮವಾಗಿ ಲೇಖಕರು ಹೇಳಿದ್ದಾರೆ.
ಅಷ್ಟಲ್ಲದೆ ಕಾದಂಬರಿಯಲ್ಲಿ ಒಬ್ಬ ಯುವಕನ ಮೂಲಕ ಮತ್ತು ಫೋಟೋಗ್ರಾಫಿಯ ಮೂಲಕ ಬುದ್ಧನ ಹುಡುಕಾಟ ಅವನ ಆದರ್ಶವನ್ನು ಹೇಳಲು ಪ್ರಯತ್ನಿಸಿದ್ದಾರೆ.ಯುದ್ಧದ ಅಂತಿಮ ಉದ್ದೇಶ ಸೋಲು ಗೆಲುವು ಅಲ್ಲ ಅದುವೇ ಸರ್ವನಾಶ. ಪುಸ್ತಕದಲ್ಲಿ ವಲಸಿಗರ ಸಮಸ್ಯೆಯನ್ನು ಅವರು ಬದುಕು ಕಟ್ಟಿಕೊಳ್ಳುವ ರೀತಿಯನ್ನು ಅವರು ಹೋರಾಟವನ್ನು ನೋಡಬಹುದು. ಮತ್ತೆ ನಾಯಕ ಮತ್ತು ನಾಯಕಿ ನಡುವೆ ಇರುವ ಒಂದು ಮಿಲನದ ಸನ್ನಿವೇಶವನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ. ಅದು ಓದುವರಿಗೆ ತುಂಬಾ ಖುಷಿಯನ್ನು ನೀಡುತ್ತದೆ. ಕೊನೆಗೆ ನಾಯಕ ಮರಳಿ ಸ್ವದೇಶಕ್ಕೆ ಬರುವ ಮೂಲಕ ಕಾದಂಬರಿ ಅಂತಿಮಗೊಳ್ಳುತ್ತದೆ. ರೆಕ್ಕೆ ಬೇರು ಎಂಬ ಸಾಲು ನೆನಪಿಗೆ ಬರುತ್ತದೆ. ಬೇರು ನಮ್ಮ ದೇಶ. ನಮ್ಮ ಆಸಕ್ತಿ ಶಕ್ತಿಯನ್ನು ಆಧಾರವಾಗಿಸಿಕೊಂಡು ರೆಕ್ಕೆಯಾಗಿ ಎಲ್ಲಾ ಕಡೆ ಹಾರಬೇಕು ಬದುಕನ್ನು ಅನುಭವಿಸಬೇಕು ಆದರೆ ಬೇರನ್ನು ಎಂದಿಗೂ ನಿರ್ಲಕ್ಷಿಸಬಾರದು ಯಾಕೆಂದರೆ ಕೊನೆಗೆ ಎಲ್ಲರೂ ಸೇರುವುದು ಮಣ್ಣನ್ನೇ.ಬದುಕು ಅತ್ಯಂತ ಮುಖ್ಯವಾದದ್ದು ಎಂಬ ಅದ್ಭುತ ವಿಚಾರವನ್ನು ಸೊಗಸಾಗಿ ಚೊಕ್ಕಾಗಿ ಕಾದಂಬರಿ ಮೂಲಕ ಹೇಳಿದ ದತ್ತಾತ್ರಿಯವರಿಗೆ ಅಭಿನಂದನೆಗಳು.
"ಬೇಲಿಯಾಚಿನ ಪಿಸುಮಾತು ಕೃತಿಯನ್ನು ಪ್ರಕಟಿಸುವ ಮುಂಚೆ ಮೊದಲ ಓದುಗನಾಗುವ ಭಾಗ್ಯವನ್ನು ಕಲ್ಪಿಸಿಕೊಟ್ಟಿದ್ದು ನನ್ನ ...
"ಹಳ್ಳಿಯ ಸರ್ವೆ ಸಾಮಾನ್ಯ ಸಮಸ್ಯೆಗಳಾದ ಮನೆ ಯಜಮಾನನ ಕುಡಿತ, ವೇಶ್ಯಾವಾಟಿಕೆ, ಜಾತಿ ವ್ಯವಸ್ಥೆ, ಶಿಕ್ಷಣದಿಂದ ವಂಚಿ...
"ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿರುವ ಚಿರಂಜೀವಿಯವರು ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಬರಹಗಾರರು...
©2025 Book Brahma Private Limited.