''67 ಕನ್ನಡ ಪುಸ್ತಕಗಳ ಲೋಕಾರ್ಪಣೆ ಕನ್ನಡ ಸಾಹಿತ್ಯದ ಅಸ್ಮಿತೆಯಾಗಿದೆ'': ದೊಡ್ಡರಂಗೇಗೌಡ


ಬೆಂಗಳೂರಿನ ಸಪ್ನ ಬುಕ್‌ ಹೌಸ್‌ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ `67 ಕನ್ನಡ ಪುಸ್ತಕಗಳ ಲೋಕಾರ್ಪಣೆ' ಕಾರ್ಯಕ್ರಮವು ನಗರದ ಕುಮಾರ ಪಾರ್ಕ್ ಪೂರ್ವದ ಗಾಂಧಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ದೊಡ್ಡರಂಗೇಗೌಡ, '' 67 ಕನ್ನಡ ಸಾಹಿತಿಗಳ ಕೃತಿ ಬಿಡುಗಡೆ ಕನ್ನಡ ಸೃಜನಶೀಲತೆಗೆ ಹಾಗೂ ಕನ್ನಡ ಪರಂಪರೆಯ ಮುಂದುವರಿಕೆಯ ಪ್ರಾರಂಭದ ಸೂಚನೆಯಾಗಿದ್ದು, ಇದು ಕನ್ನಡ ಸಾಹಿತ್ಯದ ಅಸ್ಮಿತೆಯಾಗಿದೆ,” ಎಂದು ಹೇಳಿದರು.

ಕೃತಿ ಪರಿಚಯ ಮಾಡಿದ ಸಾಹಿತಿ ಪ್ರೊ.ಮಲ್ಲೆಪುರಂ ಜಿ.ವೆಂಕಟೇಶ ಮಾತಾನಾಡಿ, ಕೃತಿಗಳು ವಿಸ್ತಾರವಾಗಿದ್ದರೆ ಓದುಗರಲ್ಲಿ ಓದುವಿಕೆಯ ಆಸಕ್ತಿ ಹೆಚ್ಚುತ್ತದೆ. ಒಂದು ಕೃತಿ ತನ್ನಲೇ ವಿಸ್ತಾರತೆಯನ್ನು ಹೊಂದಿದ್ದರೆ ಹೊರ ಜಗತ್ತಿಗೆ ತಲುಪಲು ಬಹಳ ಸುಲಭ ಸಾಧ್ಯವಾಗುತ್ತದೆ,” ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದಾನಾಥ ಮಹಾಸ್ವಾಮೀಜಿ, ಇನ್‌ಫೋಸಿಸ್‌ ಅಧ್ಯಕ್ಷೆ ಲೇಖಕಿ ಸುಧಾ ಮೂರ್ತಿ, ಸ್ವಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ, ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ದೊಡ್ಡರಂಗೇಗೌಡ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಿ.ಎನ್. ರಂಗನಾಥರಾವ್, ಪಿ.ಎಸ್. ಶಂಕರ್, ಸಿ.ಎನ್. ರಾಮಚಂದ್ರನ್, ಬಿ.ಆರ್. ಲಕ್ಷ್ಮಣರಾವ್, ಪ್ರೊ.ಜಿ. ಅಬ್ದುಲ್ ಬಷೀರ್, ಸಂಪಟೂರು ವಿಶ್ವನಾಥ್, ಚಂದ್ರಕಾಂತ ಪೋಕಳೆ, ಕುಂ. ವೀರಭದ್ರಪ್ಪ, ಎಂ.ಎಸ್. ನರಸಿಂಹಮೂರ್ತಿ, ರಾ.ನಂ. ಚಂದ್ರಶೇಖರ, ಡಿ.ವಿ. ಗುರುಪ್ರಸಾದ್, ಟಿ.ಆರ್. ಅನಂತರಾಮು, ರಾಘವೇಂದ್ರ ಪಾಟೀಲ, ರಂಗರಾಜು ನಾಗವಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪೋಟೋ ಗ್ಯಾಲರಿ:

MORE FEATURES

ಕಾವ್ಯದ ಜೊತೆಗೆ ಅನುಸಂಧಾನ ಮಾಡುವುದು ಈ ಸಂಕಲನದ ಹೆಚ್ಚುಗಾರಿಕೆ..

03-07-2024 ಬೆಂಗಳೂರು

"ಕನ್ನಡದಲ್ಲಿ ಹೀಗೆ ಬಂದ ಅನುವಾದ ಕಾವ್ಯಕ್ಕೆ ಒಂದು ಶತಮಾನಕ್ಕೂ ಮಿಕ್ಕ ಇತಿಹಾಸ ಇದೆ. ಅದು ಪ್ರಾರಂಭವಾಗುವುದು ರಲ್ಲ...

'ಮಾಂದಳಿರ ತೊಟ್ಟಿಲು' ಎಲ್ಲರ ಓದಿನ ಸಂಗಾತಿಯಾಗಲೆಂದು ಆಶಿಸುತ್ತೇನೆ

03-07-2024 ಬೆಂಗಳೂರು

'ಸಮಕಾಲೀನ ಕವಿಗಳ ಕವಿತೆಯ ಸಾಲುಗಳನ್ನು ಓದುವಾಗ ಅಂಕಣದಲ್ಲಿ ಕಾಣಿಸುವುದು ನಾಲ್ಕು ಸಾಲುಗಳನ್ನಾದರೂ ಅವರ ಹತ್ತು ಕವಿತ...

ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಅದು 'ಪ್ರೀತಿ' ಮಾತ್ರ...

31-12-1899 ಬೆಂಗಳೂರು

"ಇಲ್ಲಿನ ಭಗ್ನ ಪ್ರೇಮದ ಕಥೆ ಬರಿಯ ಕಥೆಯಲ್ಲ ಅದೊಂದು ಜನ್ಮ ಜನ್ಮಾಂತರದ ಪ್ರೀತಿಯ ಕಥೆ, ಇಲ್ಲಿ ಕೋಲಾರದ ಕೆಜಿಎಫ್ ಇದ...