1943ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದ ಈ ಕೃತಿ ಈಗಾಗಲೇ 125 ಭಾಷೆಗಳಿಗೆ ಅನುವಾದಗೊಂಡಿದೆ. ಇದು ಸೇಂತ್ ಎಕ್ಯೂಪರಿ ಅವರು ದೊಡ್ಡವರು ಮತ್ತು ಮಕ್ಕಳಿಗೆಂದು ಬರೆದ ಕಥೆ. ’ಎಲ್ಲಾ ದೊಡ್ಡವರೂ ಮೊದಲು ಮಕ್ಕಳಾಗಿದ್ದವರೇ ಆದರೆ ಅದನ್ನು ನೆನಪಿನಲ್ಲಿಟ್ಟುಕೊಂಡಿರುವವರು ಕೆಲವರು ಮಾತ್ರ’ ಅನ್ನೋದು ಸೇಂತ್ ಎಕ್ಯೂಪರಿಯ ಮಾತು. ಒಂಟಿತನ ಕಾಡಲು ನಾವು ಒಂಟಿಯಾಗಿರಬೇಕಿಲ್ಲ, ಇತರರ ನಡುವೆಯೂ ನಮ್ಮನ್ನು ಒಂಟಿತನ ಕಾಡುತ್ತದೆ. ದೊಡ್ಡವರು ತಮ್ಮ ಹೃದಯವಂತಿಕೆಯಿಂದ ಜಗತ್ತನ್ನು ನೋಡಲು ಸಾಧ್ಯವಾಗದೆ ಅಂಕಿಅಂಶಗಳ ಮೂಲಕ ನೋಡುವುದು ಅವರನ್ನು ಬಲವಂತದ ಒಂಟಿತನಕ್ಕೆ ದೂಡುತ್ತದೆ ಎನ್ನುತ್ತಾರೆ ಲೇಖಕರು. ಸುಖ ಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದವು ಹಾಗೂ ನಿಸ್ವಾರ್ಥತೆಯೇ ಸಂಪತ್ತು ಎಂಬ ಸಂದೇಶವನ್ನು ಕೃತಿ ಸಾರುತ್ತದೆ.
©2024 Book Brahma Private Limited.