ಪಾಪು ಒಂದು ನೆನಪು

Author : ಸಂತೋಷ್ ಬಿದರಗಡ್ಡೆ

Pages 96

₹ 200.00




Year of Publication: 2020
Published by: ಸೃಜನಶೀಲ ಸಾಹಿತ್ಯ ಬಳಗ ಹಾವೇರಿ

Synopsys

ಪಾಪು ಒಂದು ನೆನಪು ಸಂತೋಷ್ ಬಿದರಗಡ್ಡೆ ಅವರ ಕೃತಿಯಾಗಿದೆ.ಕನ್ನಡದ ಕಟ್ಟಾಳು, ಕನ್ನಡದ ಸಿಂಹಧ್ವನಿ, ಕರ್ನಾಟಕದ ಏಕೀಕರಣದ ರೂವಾರಿ, ಸ್ವಾತಂತ್ರ್ಯ ಸೇನಾನಿ, ಗೋಕಾಕ್ ಚಳವಆಯ ಮುಂದಾಳು, ಕನ್ನಡ ನಾಡಿನ ಪ್ರಥಮ ಪತ್ರಕರ್ತ, ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷ, ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತ, ನವ ಕರ್ನಾಟಕದ ನಿರ್ಮಾಪಕರು, ಗ್ರಂಥ ರಚನಾಕಾರರು, ವಿಶ್ವ ವಾಣಿಯ ಮುಖಾಂತರ ಕನ್ನಡಿಗರನ್ನು ಎಚ್ಚರಿಸಿದ, ಪ್ರಪಂಚದ ಮುಖಾಂತರ ಮನೆ ಮಾತಾಗಿದ್ದ ನಿಷ್ಟುರ ನೇರ ನಡೆ ನುಡಿಗೆ ಹೆಸರಾಗಿದ್ದ ಅಪರೂಪದ ವ್ಯಕ್ತಿತ್ವದ ದಿ ನಾಡೋಜ ಪಾಟೀಲ ಪುಟ್ಟಪ್ಪನವರ ಬಗ್ಗೆ ಸಂಪಾದಿಸಿದ ಈ ಕವನಗಳು ಕನ್ನಡ ನಾಡಿನ ಸರ್ವರಿಗೂ ನಾಡು ನುಡಿ ನೆಲ ಜಲದ ಬಗ್ಗೆ ಅಭಿಮಾನ ಮೂಡಿಸಲೆಂದು ಶುಭ ಹಾರೈಸುವೆ ಎಂದು ಶ್ರೀ ಲಿಂಗಯ್ಯ ಬಿ ಹಿರೇಮಠ ಹಾವೇರಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಂತೋಷ್ ಬಿದರಗಡ್ಡೆ
(20 May 1987)

ಸಂತೋಷ್ ಬಿದರಗಡ್ಡೆ ಪ್ರಸ್ತುತ ಐತಿಹಾಸಿಕ ತಾರಕೇಶ್ವರನ ನಾಡು, ಕುಮಾರೇಶ್ವರ ಮಹಾಸ್ವಾಮಿಗಳ ಭೂಮಿ ಹಾನಗಲ್ಲ ತಾಲೂಕಿನ ಪಂ.ಪುಟ್ಟರಾಜ ಗವಾಯಿಗಳ ಜನ್ಮಸ್ಥಳ ದೇವರ ಹೊಸಪೇಟೆಯಲ್ಲಿ  ಶಿಕ್ಷಕ ಸೇವೆಯಲ್ಲಿರುತ್ತಾರೆ.  ಪ್ರವೃತ್ತಿಯಲ್ಲಿ ಕತೆ, ಕವಿತೆ, ಲೇಖನ ಬರೆಯುವ ಯುವ ಸಾಹಿತಿಯಾಗಿದ್ದಾರೆ. ಅವರು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ  ಗ್ರಾಮದಲ್ಲಿ 1987, ಮೇ 20 ರಂದು ಜನಿಸಿದರು. ತಂದೆ ಪರಮೇಶ್ವರಪ್ಪಗೌಡ್ರು   ತಾಯಿ ಬಿ ಹೆಚ್ ದಾಕ್ಷಾಯಿಣಮ್ಮ 2005ನೇ ಇಸವಿಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ತಾಲೂಕಿನಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದ ಇವರು  ಹಾನಗಲ್ಲ ತಾಲೂಕಿನಲ್ಲಿ ಸೇವೆಗೈಯುತ್ತಿದ್ದಾರೆ. "ಬಿದರಗಡ್ಡೆ ಮಲ್ಲಿಕಾರ್ಜುನ" ಕಾವ್ಯನಾಮದಲ್ಲಿ ಆಧುನಿಕ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರೆದಿರುತ್ತಾರೆ. ಇವರ ...

READ MORE

Related Books