ರಾಮ ಜಾಧವರವರು ಮೂಲತ ಮರಾಠಿಯವರಾದರೂ, ಮರಾಠಿ ಮನೆಯಲ್ಲಿ ಹುಟ್ಟಿದರೂ ಕನ್ನಡ ಓಣಿಯಲ್ಲಿ ಬೆಳೆದು ಏಕೀಕರಣದ ಗಾಳಿಯನ್ನು ಉಸಿರಾಗಿಸಿಕೊಂಡು ಕನ್ನಡವನ್ನೇ ತಮ್ಮ ಬದುಕಾಗಿಸಿಕೊಂಡವರು. ಕನ್ನಡ ಕಟ್ಟುವ ಕೆಲಸದಲ್ಲಿ ಅಪ್ಪಟ ‘ಕೂಲಿ’ಯಂತೆ ಕೆಲಸ ಮಾಡಿದವರೇ ರಾಮಜಾಧವ. ಇತಿಹಾಸಕ್ಕಿಂತ ಭೂಗೋಳದ ಬಗ್ಗೆ ಒಲವಿದ್ದ ಇವರು ಇದುವೇ ನಮ್ಮ ಮೈ, ಮನಸ್ಸು, ಚರ್ಮ, ಚಕ್ಷು, ಸರ್ವಸ್ವ ಎಂದು ಹೇಳುತ್ತಿದ್ದರು. ಗಡಿನಾಡಿನಲ್ಲಿ ಕನ್ನಡ ಶಾಲೆಯನ್ನು ಕಟ್ಟಿ ಗೋಕಾಕ್ ಚಳುವಳಿಯ ಪ್ರಮುಖ ರುವಾರಿಯಾದವರು. ಇವರ ಜೀವನ ಸಾಧನೆಯ ಕುರಿತು ಲೇಖಕ .ಯಲ್ಲಪ್ಪ ಬಿ. ಹಿಮ್ಮಡಿ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.