ಪ್ರೊ. ಎಸ್.ಎಸ್. ಭೂಸನೂರಮಠ ರವರು ಕನ್ನಡ ಸಾಹಿತ್ಯಲೋಕದ ಮಹಾನ್ ಸಾಹಿತಿ. ಇವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯ ಮಾನವ’ ಮುಂತಾದ ಕೃತಿಗಳು ಕನ್ನಡದ ಶ್ರೇಷ್ಠ ಸಾಹಿತ್ಯಿಕ ಕೊಡುಗೆಗಳಾಗಿವೆ. ಸಂಸ್ಕೃತ ಸಂಸ್ಕೃತಿಗಳ ಸಂಗಮವಾದ ಇವರು ಎಲೆ ಮರೆಯ ಫಲದಂತೆ ಇದ್ದವರು. ಎತ್ತರಕ್ಕೆ ಬೆಳೆದಷ್ಟು ಬಾಗುವುದನ್ನು ಕಲಿತರೇ ವಿನಾಃ ಬೀಗುವುದನ್ನಲ್ಲ. ಇದೇ ಇವರ ವ್ಯಕ್ತಿತ್ವದ ವಿಶೇಷತೆಯಾಗಿದೆ. ಪ್ರಾಚೀನ ಭಾರತದ ಗುರು ಪರಂಪರೆಯ ಶ್ರೇಷ್ಠ ಮೌಲ್ಯಗಳಿಗೆ ಮಾದರಿಯಾಗಿದ್ದ ಇವರು ಸಾಹಿತ್ಯ ಸಂಶೋಧಕರಾಗಿ, ಸೃಜನಶೀಲ ಸಾಹಿತಿಯಾಗಿ ಪ್ರಸಿದ್ಧಿಯಾದವರು. ಭವ್ಯ ಮಾನವ ಎಂಬ ತಮ್ಮ ಅಪರೂಪದ ಕೃತಿಯ ಹೊರತಾಗಿ ಹಲವು ಸಂಪುಟಗಳಲ್ಲಿ ವಚನ ಸಾಹಿತ್ಯಗಳನ್ನು, ಸಿದ್ಧರ ಜೀವನ ಚರಿತ್ರೆಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ್ದರು. ಇವರ ಬದುಕನ್ನು , ಜೀವನ ಸಾಧನೆಯನ್ನು ಮಲ್ಲಿಕಾರ್ಜುನ ಕುಂಬಾರರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.