ಝೆನ್ ಮತ್ತು ಸೂಫಿ ತತ್ವಗಳು ಒಂದೇ ಅರಿವಿನ ಎರಡು ಕಣ್ಣುಗಳು ಎಂಬ ಮಾತಿದೆ. ಇವೆರಡಕ್ಕೂ ಕಾಲ, ದೇಶದ ಹಂಗಿಲ್ಲ.ಸೂಫಿಸಂ ಅನ್ನುವ ಅನುಭಾವದ ಹಾದಿಯಲ್ಲಿ ಹೊರಟವನು ತನ್ನ ಹೃದಯದಲ್ಲೇ ಸತ್ಯ ಮತ್ತು ದೇವರನ್ನುಕಂಡುಕೊಳ್ಳುತ್ತಾನೆ. ಆ ಸತ್ಯ ಮತ್ತು ದೇವರೇ ’ನೀನೆ ಎಂಬ ನಾನು.’
ಕರ್ನಾಟಕದ ಪರಂಪರೆಗೆ ಸೂಫಿ ಧಾರೆ ಹೊಸತಲ್ಲವಾದರೂ ಕನ್ನಡದ ಓದುಗರಿಗೆ ಇವತ್ತಿಗೂ ಇಂತಹ ಅಮೂಲ್ಯ ಸಂಪತ್ತು ಅಲಭ್ಯವೇ ಆಗಿ ಉಳಿದುಬಿಟ್ಟಿತ್ತು. ಸೂಫಿ ಪರಂಪರೆಗೆ ಸಂಬಂಧಪಟ್ಟ ಕೃತಿಗಳು ಹೆಚ್ಚಾಗಿ ಕನ್ನಡದಲ್ಲಿ ಬಂದೇ ಇಲ್ಲ. ಈ ಎಲ್ಲಾ ದೃಷ್ಟಿಯಿಂದ ಇದೊಂದು ಪ್ರಮುಖ ಕೃತಿ.
©2024 Book Brahma Private Limited.