ಸಾದತ್ ಹಸನ್ ಮಾಂಟೊ ಒಬ್ಬ ಮಹಾನ್ ಉರ್ದು ಕತೆಗಾರ. ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ, ತಾನು ಕಂಡ ಕೋಮುಗಲಭೆಗಳ ಕ್ರೌರ್ಯದಿಂದ ತತ್ತರಿಸಿ ಹೋಗಿದ್ದ. ಕೆಲದಿನಗಳ ಹಿಂದೆಯಷ್ಟೆ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಮೃಗಗಳಾಗಿ ಬದಲಾದದ್ದು ಮಾಂಟೋನಲ್ಲಿ ಆಘಾತ ಹುಟ್ಟಿಸಿತು. ಭಾರತ, ಪಾಕಿಸ್ತಾನ ವಿಭಜನೆಯಾದಾಗ ಈ ಎರಡು ದೇಶಗಳಲ್ಲಿ ನನ್ನ ದೇಶ ಯಾವುದು ಎಂದು ಗುರುತಿಸಲು ನನ್ನಿಂದ ಸಾಧ್ಯವಾಗಿಲ್ಲ ಅಂದಿದ್ದಾನೆ ಮಾಂಟೊ.
ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ನಲ್ಲಿ ನೆಲೆಸಿದ ಮಾಂಟೋ ಅಲ್ಲಿ ಏಳು ವರ್ಷಗಳಕಾಲ ಬದುಕಿದ್ದ. ಆತ ಸಾಯುವಾಗ ಅವನಿಗೆ 43 ವರ್ಷ ತುಂಬಿರಲಿಲ್ಲ, ಆದರೆ ಅಷ್ಟರಲ್ಲಾಗಲೆ ಮಾಂಟೊ 250ಕ್ಕೂ ಹೆಚ್ಚಿನ ಸಣ್ಣಕತೆಗಳನ್ನು (22 ಕಥಾಸಂಕಲನಗಳು), 7 ರೇಡಿಯೋ ನಾಟಕ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಬದುಕಿನಲ್ಲಿ ತಾನು ಕಂಡಿದ್ದ ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನವನ್ನು ಕತೆಗಳಲ್ಲಿ ಹೇಳಿದ್ದ. ಈ ಅದ್ಬುತ ಕತೆಗಾರನ ಆಯ್ದಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಸಾಹಿತಿ ಜೆ. ಬಾಲಕೃಷ್ಣ.
©2024 Book Brahma Private Limited.