ಕೊಪ್ಪಳ ಜಿಲ್ಲೆಯ ವಾಸ್ತು-ಶಿಲ್ಪ-ಸಂಸ್ಕೃತಿ

Author : ಗೀತಾ ಪಾಟೀಲ್

₹ 170.00




Published by: ರೇಣುಕಾ ಪ್ರಕಾಶನ
Address: ನೆಲ ಮಹಡಿ, ಬೇಲೂರು ರಸ್ತೆ, ಮಾಚೇನಹಳ್ಳಿ ಗ್ರಾಮ ಪಂಚಾಯತಿ\nಗುಡ್ಡೇನಹಳ್ಳಿ ಕೊಪ್ಪಲು, ಹಾಸನ 573 201
Phone: 9483987782

Synopsys

ಲೇಖಕಿ ಗೀತಾ ಪಾಟೀಲ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಕೊಪ್ಪಳ ಜಿಲ್ಲೆಯ ವಾಸ್ತು-ಶಿಲ್ಪ-ಸಂಸ್ಕೃತಿʼ. ತಿರುಳುಗನ್ನಡ ನಾಡು ಎಂದೇ ಹೆಸರಾದ ಕೊಪ್ಪಳ ಜಿಲ್ಲಾ ಪ್ರದೇಶ ಭೌಗೋಳಿಕವಾಗಿ ನದಿ, ಬೆಟ್ಟಗಳಿಂದ ಕೂಡಿದ್ದು ಸಮೃದ್ಧ ಇತಿಹಾಸವನ್ನು ಹೊಂದಿದೆ. ಇಲ್ಲಿ ಆಳಿದ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಕುಮ್ಮಟ, ವಿಜಯನಗರ ಮುಂತಾದ ಅರಸು ಮನೆತನಗಳು ತಮ್ಮ ಕಾಲಾವಧಿಯಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಿ ಇತಿಹಾಸವನ್ನು ಶ್ರೀಮಂತಗೊಳಿಸಿದವರು. ಹೀಗೆ ಕೊಪ್ಪಳ ಪ್ರದೇಶದ ಸ್ಮಾರಕ ಹಾಗೂ ಶಿಲ್ಪಗಳ ಕುರಿತು ನಾನು ಅಧ್ಯಯನ ನಡೆಸಿ ರಚಿಸಿದ ಲೇಖನಗಳನ್ನು ಗೀತಾ ಪಾಟೀಲ ಅವರು ಸಂಕಲಿಸಿ ಪ್ರಸ್ತುತ ಪುಸ್ತಕವನ್ನು ಹೊರತಂದಿದ್ದಾರೆ.

About the Author

ಗೀತಾ ಪಾಟೀಲ್
(01 June 1990)

ಯುವ ಬರಹಗಾರ್ತಿ ಡಾ.ಗೀತಾ ಪಾಟೀಲ ಅವರು ಜನಿಸಿದ್ದು 1990 ಜೂನ್‌ 1ರಂದು. ಕೊಪ್ಪಳ ಜಿಲ್ಲೆ ಕನಕಗಿರಿಯವರಾದ ಗೀತಾ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿ.ವಿ.ಯಿಂದ ಇತಿಹಾಸ ಮತ್ತು ಪುರಾತತ್ತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕೊಪ್ಪಳದಲ್ಲಿ ಇತಿಹಾಸ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಬಂದೂಕು ವೀರಗಲ್ಲುಗಳು ಇವರ ಚೊಚ್ಚಲ ಕೃತಿ. ...

READ MORE

Related Books